ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಕರ್ನಾಟಕ ಸಿಂಗಮ್' ಅಣ್ಣಾಮಲೈ ಬದುಕಿನ ಸಿಂಹಾವಲೋಕನ

|
Google Oneindia Kannada News

Recommended Video

ಅಣ್ಣಾಮಲೈ ರಾಜೀನಾಮೆ ಸಲ್ಲಿಸುತ್ತಿರೋದು ಯಾಕೆ ಗೊತ್ತಾ..? | Oneindia Kannada

ಕರ್ನಾಟಕದ ಸಿಂಗಮ್, ದಕ್ಷ ಐಪಿಎಸ್​ಅಧಿಕಾರಿ, ಸೂಪರ್​ಕಾಪ್, ಯುವಜನತೆಗೆ ಆದರ್ಶ ವ್ಯಕ್ತಿ ಎಂದು ಕರೆಸಿಕೊಂಡಿರುವ ಅಣ್ಣಾಮಲೈ ಅವರು ಮಂಗಳವಾರ(ಮೇ28) ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಐಜಿ-ಡಿಜಿಪಿಗೆ ರಾಜೀನಾಮೆ ಸಲ್ಲಿಸಿದ್ದು, ಅಲ್ಲಿಂದ ರಾಜೀನಾಮೆ ಪತ್ರ ರಾಜ್ಯ ಗೃಹ ಕಾರ್ಯದರ್ಶಿ ಕೈ ಸೇರಲಿದೆ. ನಂತರ ಯುಪಿಎಸ್​ಸಿಗೆ ರಾಜೀನಾಮೆ ಪತ್ರ ರವಾನೆಯಾಗಲಿದೆ.

'ಮಲೇಷಿಯಾದಿಂದ ರಾತ್ರೋರಾತ್ರಿ ವಿಮಾನ ಹತ್ತಿ ಬಂದು ಯುಪಿಎಸ್ಸಿ ಪರೀಕ್ಷೆ ಬರೆದಿದ್ದೆ. ಇದೇ ಜೀವನ ಅಲ್ಲ, ಇನ್ನೂ ಬೇರೆ ಜೀವನ ಇದೆ. ಎಷ್ಟು ದಿನ ಕೊಲೆ, ಸುಲಿಗೆ ಹಾಗೂ ದರೋಡೆ ಬಗ್ಗೆ ಕೆಲಸ ಮಾಡಲಿ? ಸದ್ಯ ಯಾವ ರಾಜಕೀಯಕ್ಕೂ ಸೇರುವುದಿಲ್ಲ. ಆರು ತಿಂಗಳು ಏನು ಮಾಡುವುದಿಲ್ಲ. ವಿಶ್ರಾಂತಿ ಮಾಡುತ್ತೇನೆ.

ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ರಾಜೀನಾಮೆ

ಊರಿಗೆ ಹೋಗುತ್ತೇನೆ, ಕಳೆದ ವರ್ಷ ಕೈಲಾಸ ಮಾನಸ ಸರೋವರ ಯಾತ್ರೆ ನೆನಪಿನಲ್ಲಿದೆ ಮತ್ತೆ ಹಿಮಾಲಯಕ್ಕೆ ಟ್ರೆಕ್ಕಿಂಗ್ ಹೋಗುತ್ತೇನೆ. ಕುಟುಂಬಕ್ಕೆ ಸಮಯವನ್ನು ಮೀಸಲು ಇಡುತ್ತೇನೆ. ಮಗ ಓದುತ್ತಿದ್ದಾನೆ. ಅವನ ಜತೆ ಇರುತ್ತೇನೆ. 33 ರಿಂದ 34ನೇ ವಯಸ್ಸಿಗೆ ಯಾರು ಈ ನಿರ್ಧಾರ ತೆಗೆದುಕೊಳ್ಳಲ್ಲ. ನಾನು ತೆಗೆದುಕೊಂಡಿದ್ದೇನೆ‌. ನನಗೆ ಬೇರೆ ಜೀವನ ಇದೆ ಎಂದು ಹೇಳಿಕೊಂಡಿದ್ದಾರೆ.

ಅಣ್ಣಾಮಲೈ ಎಂದರೆ ಹಾಗೆ ಖಡಕ್ ನಿರ್ಧಾರ, ತಮ್ಮ ಮಾನವೀಯ ನಡೆಗಳ ಮೂಲಕ ಮನೆ ಮಾತಾದವರು, ಕರ್ನಾಟಕದ ಗಡಿ ಮೀರಿ ಎಲ್ಲೆಡೆ ಅವರ ಕೀರ್ತಿ ಹಬ್ಬಲು ಕಾರಣ ಅವರ ಕಾರ್ಯ ದಕ್ಷತೆ, ಕ್ಷಮತೆ ಹಾಗೂ ಸರಳ ಸ್ವಭಾವ.

ಕರೂರು ಮೂಲದ ಅಣ್ಣಾಮಲೈ

ಕರೂರು ಮೂಲದ ಅಣ್ಣಾಮಲೈ

ತಮಿಳುನಾಡಿನ ಕರೂರು ಜಿಲ್ಲೆಯವರಾದ ಅಣ್ಣಾಮಲೈ ಅವರು ಮೆಕಾನಿಕಲ್​ ಇಂಜಿನಿಯರಿಂಗ್​ ಪದವಿ, ಐಐಎಂ ಲಕ್ನೋದಿಂದ ಎಂಬಿಎ ಪಡೆದಿದ್ದಾರೆ. ಸಮಾಜದ ಅಸಮಾನತೆಗಳ ವಿರುದ್ಧ ಪ್ರತಿಭಟನೆ ರೂಪವಾಗಿ ಐಪಿಎಸ್​ ಮಾಡಲು ಹೊರಟರು.

2011ರ ಐಪಿಎಸ್​​ ಬ್ಯಾಚ್​ನವರಾದ ಅಣ್ಣಾಮಲೈ 2013ರಲ್ಲಿ ಕಾರ್ಕಳದ ಎಎಸ್​​ಪಿ ಆಗಿ ನೇಮಕಗೊಂಡರು. ನಂತರ ಚಿಕ್ಕಮಗಳೂರು ಎಸ್​ಪಿ, ಬೆಂಗಳೂರು ದಕ್ಷಿಣ ಡಿಸಿಪಿಯಾದರು. ಭ್ರಷ್ಟಾಚಾರ ಮುಕ್ತ ಅಧಿಕಾರಿ ಎನಿಸಿಕೊಂಡಿದ್ದಾರೆ.

ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ? ಅಣ್ಣಾಮಲೈ ಜನರಿಗೆ ಬರೆದ ಭಾವನಾತ್ಮಕ ಪತ್ರದಲ್ಲಿ ಏನಿದೆ?

ಚಿಕ್ಕಮಗಳೂರು ಎಸ್ಪಿಯಾಗಿದ್ದಾಗಿನ ಘಟನೆ

ಚಿಕ್ಕಮಗಳೂರು ಎಸ್ಪಿಯಾಗಿದ್ದಾಗಿನ ಘಟನೆ

ದಕ್ಷ ಜಿಲ್ಲಾ ವರಿಷ್ಟಾಧಿಕಾರಿಯವರಾದ ಅಣ್ಣಾಮಲೈಯವರು ಬಣಕಲ್ ನ ಖಾಸಗಿ ಕಾರ್ಯಕ್ರಮವೊಂದಕ್ಕೆ ಬಂದ ಸಂದರ್ಭದಲ್ಲಿ ಜನರ ಆ ಉತ್ಸಾಹ, ಅಭಿಮಾನ ಎಸ್ಪಿ ಅಣ್ಣಾಮಲೈಯವರ ಪ್ರಮಾಣಿಕತೆ ಮತ್ತು ವೃತಿನಿಷ್ಟೆಗೆ ಹಿಡಿದ ಕೈಗನ್ನಡಿ ಎನಿಸಿತು. ಬಣಕಲ್ ಠಾಣೆಯಲ್ಲಿ ಅಣ್ಣಾಮಲೈಯವರನ್ನು ಕಾಣಲು ಬಂದ ಸಾರ್ವಜನಿಕರಿಗೆ ಅವರು ತಾಳ್ಮೆಯಿಂದ, ಸಮರ್ಪಕ ಉತ್ತರ ನೀಡುತ್ತಿದ ರೀತಿ ಪೋಲಿಸ್ ಇಲಾಖೆಯ ಮೇಲೆ ಭರವಸೆ ಮೂಡಿಸುವಂತಿತು. ಬಣಕಲ್ ಶಾಲೆಯ ಬಾಲಕನೊಬ್ಬ ಅಣ್ಣಾಮಲೈಯವರು ಬಣಕಲ್ ಗೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಬರುತ್ತಾರೆ ಎಂಬ ವಿಷಯ ತಿಳಿದು ಅವರನ್ನು ನೋಡುವ ಸಲುವಾಗಿಯೇ ಮನೆಯಲ್ಲಿ ಹಠ ಮಾಡಿ ಶಾಲೆಗೆ ರಜಾ ಹಾಕಿ ಬೆಳಿಗ್ಗೆಯಿಂದಲ್ಲೆ ಕಾದು ಕುಳಿತ್ತಿದ್ದ. ಕಾರ್ಯಕ್ರಮದಲ್ಲಿ ಜನಜಂಗುಳಿಯಲ್ಲಿ ಅಣ್ಣಾಮಲೈಯವರನ್ನು ಮಾತನಾಡಿಸಲು ಸಾಧ್ಯವಾಗದೇ ಚಡಪಡಿಸುತ್ತಿದ್ದ ಆ ಬಾಲಕನನ್ನು ನಮ್ಮಪತ್ರಿಕಾ ಮಿತ್ರ ಬಳಗ ಗಮನಿಸಿ ಬಣಕಲ್ ಠಾಣೆಯ ಪತ್ರಿಕಾಗೋಷ್ಟಿಯಲ್ಲಿ ಆ ಬಾಲಕನನ್ನು ಅಣ್ಣಾಮಲೈಯವರನ್ನು ಬೇಟಿ ಮಾಡಿಸಿದೆವು. ಬಾಲಕನ ವಿಚಾರ ತಿಳಿದ ಎಸ್ಪಿ ಅಣ್ಣಾಮಲೈ ಸಂತಸದಿಂದಲ್ಲೆ ಬಾಲಕನೊಡನೆ ಮಾತನಾಡಿ ಕುಶಲ ವಿಚಾರಿಸಿದರು. ಬಾಲಕನೂ ಕೂಡ ಖುಷಿಯಿಂದಲೆ ಅಣ್ಣಾಮಲೈಯವರೊಡನೆ ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದ. ಒಬ್ಬ ಪುಟ್ಟ ಬಾಲಕನಿಗೂ ಕೂಡ ಸ್ಪೂರ್ತಿಯಾಗಬಲ್ಲ ಅಣ್ಣಾಮಲೈಯವರ ಪ್ರಾಮಾಣಿಕತೆ ವೃತಿನಿಷ್ಟೆ ಮತ್ತು ಸರಳತೆಯ ದರ್ಶನ ಪತ್ರಕರ್ತ ಮಿತ್ರರು ಪಡೆಯುವಂತಾಯಿತು.
-ನಂದೀಶ್ ಬಂಕೇನಹಳ್ಳಿ, ಚಿಕ್ಕಮಗಳೂರು

ಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನಬೆಂಗಳೂರು ದಕ್ಷಿಣ ನೂತನ ಡೆಪ್ಯೂಟಿ ಕಮಿಷನರ್, ಐಪಿಎಸ್, ಕೆ ಅಣ್ಣಾಮಲೈ ಸಂದರ್ಶನ

ವಿಡಿಯೋ ಮೂಲಕವೇ ರೌಡಿಗಳ ಬೆವರಿಳಿಸಿದ್ದರು

ವಿಡಿಯೋ ಮೂಲಕವೇ ರೌಡಿಗಳ ಬೆವರಿಳಿಸಿದ್ದರು

2016ರ ಜುಲೈನಲ್ಲಿ ಉಡುಪಿಯಿಂದ ಚಿಕ್ಕಮಗಳೂರು ಜಿಲ್ಲಾ ಎಸ್ಪಿಯಾಗಿ ಅಣ್ಣಾಮಲೈ ವರ್ಗವಾದರು. ನಂತರ ನಡೆದ ಘಟನೆಯೊಂದರಲ್ಲಿ ಇಲ್ಲಿನ ಮರಳು ಮಾಫಿಯಾದವರು ಊರ ಜನರೊಂದಿಗೆ ಸೇರಿ ರಸ್ತೆಯನ್ನು ಬ್ಲಾಕ್ ಮಾಡಿ ಪೊಲೀಸರನ್ನೇ ಕೂಡಿಹಾಕಿದ್ದರು. ಆಗ ಸ್ಥಳಕ್ಕೆ ಬಂದ ಅಣ್ಣಾಮಲೈ ಬಹಿರಂಗವಾಗಿ ಅಪರಾಧಿಗಳ ವಿರುದ್ಧ ಗುಡುಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತ್ತು. ಈ ವಿಡಿಯೋ ನೋಡಿಯೇ ಅರ್ಧ ಕ್ರಿಮಿನಲ್ ಗಳು ಅವತ್ತು ಪತರಗುಟ್ಟಿದ್ದರು.

ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ ಹತ್ತಿಕ್ಕಿದ್ದರು

ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ ಹತ್ತಿಕ್ಕಿದ್ದರು

ಬಂಟ್ವಾಳದಲ್ಲಿ ಎಸ್.ಡಿ.ಪಿ.ಐನ ಅಶ್ರಫ್ ಕೊಲೆಯಾದ ಸಂದರ್ಭ ಉಂಟಾದ ಗಲಭೆಯನ್ನು ಹತೋಟಿಗೆ ತರಲು ಸರಕಾರ ಇದೇ ಅಣ್ಣಾಮಲೈರನ್ನು ದಕ್ಷಿಣ ಕನ್ನಡಕ್ಕೆ ಕರೆಸಿಕೊಂಡಿತು. ಹಾಗೆ ಬಂಟ್ವಾಳಕ್ಕೆ ಬಂದ ಅಣ್ಣಾಮಲೈ ರಾತ್ರಿ ಹಗಲು ರಸ್ತೆಯಲ್ಲೇ ಬೀಡುಬಿಟ್ಟು ಗಲಾಟೆ ಹತೋಟಿಗೆ ತಂದು ಜನಮೆಚ್ಚುಗೆ ಗಳಿಸಿದರು. ನಿರಂತರ ಗಲಭೆಗಳು ದಕ್ಷಿಣ ಕನ್ನಡ ಭಾಗದಲ್ಲಿ ನಡೆಯುತ್ತಿದ್ದಾಗ ಅಣ್ಣಾಮಲೈರನ್ನು ಜಿಲ್ಲೆಯ ಎಸ್ಪಿಯನ್ನಾಗಿ ನೇಮಿಸಬೇಕು ಎಂಬ ಬೇಡಿಕೆಯೂ ಜನರಿಂದ ಬಂದಿತ್ತು

ಜನಾನುರಾಗಿ ಪೊಲೀಸ್ ಅಧಿಕಾರಿ ಅಣ್ಣಾಮಲೈ

ಜನಾನುರಾಗಿ ಪೊಲೀಸ್ ಅಧಿಕಾರಿ ಅಣ್ಣಾಮಲೈ

ತಬ್ಬಲಿಯಾಗಲಿದ್ದ ಚಿಕ್ಕಮಗಳೂರಿನ ಯುವತಿಯ ವಿದ್ಯಾಭ್ಯಾಸ ಮತ್ತು ಇತರ ಖರ್ಚುಗಳನ್ನು ಭರಿಸುವ ಅಭಯ ನೀಡಿ ತಮ್ಮ ಮಾನವೀಯ ಮುಖವನ್ನು ತೆರೆದಿಟ್ಟಿದ್ದರು. ರಾತ್ರಿ ಸಾರ್ವಜನಿಕರೊಬ್ಬರ ವಾಹನ ಕೆಟ್ಟು ನಿಂತಾಗ ಆ ದಾರಿಯಲ್ಲಿ ಸಾಗುತ್ತಿದ್ದ ಅಣ್ಣಾಮಲೈ ಅವರು ಖುದ್ದು ಟೂಲ್ ಕಿಟ್ ಹಿಡಿದು ವಾಹನ ರಿಪೇರಿ ಮಾಡಿಕೊಟ್ಟು, ಸಾರ್ವಜನಿಕರ ಭದ್ರತೆ ಆರಕ್ಷಕರು ಬದ್ಧ ಎಂದು ತೋರಿಸಿಕೊಟ್ಟರು. ಈ ರೀತಿ ಅನೇಕ ಸನ್ನಿವೇಶಗಳಲ್ಲಿ ಖಾಕಿಯಾಚೆಗಿನ ತಮ್ಮ ವ್ಯಕ್ತಿತ್ವದಿಂದ ಜನರಿಗೆ ಹತ್ತಿರವಾಗಿದ್ದರು.

ಡಿಸೆಂಬರ್ 3ರಂದು ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಆಚರಣೆ ನಡೆದಾಗ ಅಹಿತಕರ ಘಟನೆಗಳಾಗದಂತೆ ಅಣ್ಣಾಮಲೈ ತಡೆದಿದ್ದರು. ಜಿಲ್ಲೆಯಲ್ಲಿ ಅಕ್ಷರಶಃ ಪೊಲೀಸ್ ಸರ್ಪಗಾವಲು ಹಾಕಿ ಯಾವುದೇ ಗಲಭೆ, ಗಲಾಟೆಗಳಾಗದಂತೆ ಎಚ್ಚರಿಕೆ ವಹಿಸಿದ್ದರು.

English summary
Karnataka IPS officer Annamalai, popularly known as 'Singham' of Karnataka police. Hailing from Karur in Tamil Nadu, Annamalai began his career as ASP of Karkala sub-division in 2013, before becoming SP of Udupi and Chikkamagaluru districts.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X