ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Highlights: ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯಿದೆ-2021ವಿಧೇಯಕ

|
Google Oneindia Kannada News

ಬೆಳಗಾವಿಯ ಚಳಿಗಾಲದ ವಿಧಾನಸಭೆ ಅಧಿವೇಶನದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ-2021 ಅನ್ನು ಮಂಗಳವಾರ ಮಂಡಿಸಿದ್ದಾರೆ. ಮತಾಂತರದ ಮೇಲೆ ನಿಷೇಧ ಹೇರುವ ಕಾಯಿದೆ ಬಗ್ಗೆ ಚರ್ಚೆಗೆ ವಿಪಕ್ಷಗಳು ಆಗ್ರಹಿಸಿದ್ದು, ಬಿರುಸಿನ ಚರ್ಚೆ ನಿರೀಕ್ಷೆಯಿದೆ.

ಆದರೆ, ಮಸೂದೆ ಮಂಡನೆ ಮಾಡುವ ವೇಳೆ ಗೌಪ್ಯತೆ ಕಾಯ್ದುಕೊಂಡಿದ್ದು, ವಿಧೇಯಕದ ಪ್ರತಿಯನ್ನು ನೀಡದೆ ತರಾತುರಿಯಲ್ಲಿ ವಿಧೇಯಕ ಮಂಡನೆ ಮಾಡಿದ್ದನ್ನು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿ, ಇದು ಸಂವಿಧಾನದ 21ನೇ ವಿಧಿಗೆ ಮಸೂದೆ ವಿರುದ್ಧವಾಗಿದೆ ಎಂದಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಡಿ ಕೆ ಶಿವಕುಮಾರ್‌ ತಮಗೆ ದೊರೆತ ಮಸೂದೆಯ ಪ್ರತಿಯನ್ನು ಹರಿದುಹಾಕಿದ ಬೆನ್ನಲ್ಲೇ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ಮಾಡಿದ ಘಟನೆಗೆ ಸದನ ಸಾಕ್ಷಿಯಾಗಿದೆ. ಧಾರ್ಮಿಕ ಸ್ವಾತಂತ್ರ್ಯ ಮತ್ತು ಸಂರಕ್ಷಣೆ ಕಾಯಿದೆಯ ರೂಪು ರೇಷೆಗಳು, ಉದ್ದೇಶ, ತಿದ್ದುಪಡಿ ಏನಾಗಿದೆ ಎಲ್ಲದರ ವಿವರ ಮುಂದಿದೆ....

ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ 2021

ಉದ್ದೇಶ: ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣೆಗಾಗಿ ಮತ್ತು ತಪ್ಪು ನಿರೂಪಣೆ, ಅನುಚಿತ ಪ್ರಭಾವ, ಒತ್ತಾಯ, ಆಮಿಷದ ಮೂಲಕ ಅಥವಾ ಯಾವುದೇ ವಂಚನೆಯ ವಿಧಾನಗಳ ಮೂಲಕ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಕಾನೂನು ಬಾಹಿರ ಮತಾಂತರ ಮಾಡುವುದನ್ನು ನಿಷೇಧಿಸುವುದಕ್ಕೆ ಉಪಬಂಧ ಕಲ್ಪಿಸಲು ಈ ವಿಧೇಯಕ ಜಾರಿಗೆ ತರಲಾಗುತ್ತಿದೆ.

* ಬಲವಂತ ವಂಚನೆ ಒತ್ತಾಯ ಹಾಗೂ ಆಮಿಷದ ಮೂಲಕ ಹಾಗೂ ಮದುವೆಯ ಭರವಸೆ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧ.

Karnataka Protection of Right to Freedom of Religion Bill, 2021 Silent Features

* ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಸೇರಿದವರು, ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದರೆ ಅಂತಹವರಿಗೆ ಕನಿಷ್ಠ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ, ₹ 50,000 ದಂಡ.

* ಇತರೆ ವರ್ಗದವರನ್ನು ಮತಾಂತರ ಮಾಡಿದರೆ ಕನಿಷ್ಠ 3ರಿಂದ 5 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 25,000 ದಂಡ.

* ಸಾಮೂಹಿಕ ಮತಾಂತರ ಮಾಡಿದ ವ್ಯಕ್ತಿಗೆ 3ರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ₹ 1 ಲಕ್ಷ ದಂಡ.

* ಮತಾಂತರಗೊಂಡ ವ್ಯಕ್ತಿ ತನ್ನ ಹಿಂದಿನ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಮತಾಂತರವೆಂದು ಪರಗಣಿಸುವುದಿಲ್ಲ.

* ಸಾಮೂಹಿಕ ಮತಾಂತರ ಮಾಡಿದ ವ್ಯಕ್ತಿಗೆ 3ರಿಂದ 10 ವರ್ಷಗಳವರೆಗೆ ವಿಸ್ತರಿಸಬಹುದಾದ ಅವಧಿಯ ಜೈಲುಶಿಕ್ಷೆಯಿಂದ, ಇವೆರಡರಲ್ಲಿ ಯಾವುದಾದರ ಒಂದು ಬಗೆಯ ಕಾರಾವಾಸದಿಂದ ದಂಡಿತರಾಗುವರು, ಹಾಗೂ ಅಂತಹವರಿಗೆ ₹ 1 ಲಕ್ಷ ಜುಲ್ಮಾನೆ.

ಮತಾಂತರಕ್ಕೆ 60 ದಿನ ಮೊದಲೇ ಅರ್ಜಿ ಸಲ್ಲಿಸಬೇಕು: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆಮತಾಂತರಕ್ಕೆ 60 ದಿನ ಮೊದಲೇ ಅರ್ಜಿ ಸಲ್ಲಿಸಬೇಕು: ವಿಧೇಯಕದ ಪ್ರಮುಖ ಅಂಶಗಳು ಇಲ್ಲಿವೆ

* ಮತಾಂತರಕ್ಕೆ ಬಲಿಯಾದವರಿಗೆ ಆಪಾದಿತನಿಂದ ಸಂದಾಯವಾಗುವಂತೆ ಗರಿಷ್ಠ 5 ಲಕ್ಷ ರೂಪಾಯಿಯವರೆಗೆ ವಿಸ್ತರಿಸಬಹುದಾದ ಯುಕ್ತ ಪರಿಹಾರವನ್ನು ನ್ಯಾಯಾಲಯ ಮಂಜೂರು ಮಾಡತಕ್ಕದ್ದು ಅದು ಜುಲ್ಮಾನೆಗೆ ಹೆಚ್ಚುವರಿಯಾಗಿರತಕ್ಕದ್ದು.

* ಅಪರಾಧ ಪುನರಾವರ್ತನೆಯಾದರೆ ಐದು ವರ್ಷ ಸೆರೆವಾಸ ಹಾಗೂ ಎರಡು ಲಕ್ಷ ದಂಡ ವಸೂಲಿ.

* ಕಾನೂನು ಬಾಹಿರ ಮತಾಂತರ ಅಥವಾ ವಿಪರ್ಯಯದ ಏಕ ಮಾತ್ರ ಉದ್ದೇಶಕ್ಕಾಗಿ ನಡೆದ ವಿವಾಹ ಅಸಿಂಧುವಾಗಲಿದೆ.

* ಮತಾಂತರಗೊಂಡ ವ್ಯಕ್ತಿಯ ಪೋಷಕರು ಒಡಹುಟ್ಟಿದವರು, ಸಹವರ್ತಿಗಳು ಹಾಗೂ ಸಹೋದ್ಯೋಗಿಗಳು ವ್ಯಕ್ತಿ ಮತಾಂತರಗೊಂಡ ಬಗ್ಗೆ ದೂರು ನೀಡಿದರೆ ಎಫ್‌ಐಆರ್‌ ದಾಖಲಿಸಲು ಅವಕಾಶ.

* ಜಾಮೀನು ರಹಿತ, ಸಂಜ್ಞೇಯ ಅಪರಾಧವಾಗಲಿರುವ ಮತಾಂತರ.

Karnataka Protection of Right to Freedom of Religion Bill, 2021 Silent Features

ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ವಿವರ ನೀಡಬೇಕು:
ಯಾವುದೇ ವ್ಯಕ್ತಿ ಧರ್ಮ ಬದಲಿಸುವುದಾದರೆ ಜಿಲ್ಲಾಧಿಕಾರಿಗಳಿಗೆ 30 ದಿನ ಮೊದಲು ನಮೂನೆ 1ರಲ್ಲಿ ಹಾಗೂ ಮತಾಂತರ ಮಾಡುವ ವ್ಯಕ್ತಿ ನಮೂನೆ 2ರಲ್ಲಿ ಅರ್ಜಿ ಸಲ್ಲಿಸಬೇಕು. 30 ದಿನಗಳ ಒಳಗಾಗಿ ಇದಕ್ಕೆ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಮೂಲಕ ವಿಚಾರಣೆ ನಡೆಸಬೇಕು. ವಿಚಾರಣೆ ವೇಳೆ ತಪ್ಪು ನಡೆದಿದ್ದರೆ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಪೊಲೀಸ್‌ ಇಲಾಖೆಗೆ ಸೂಚಿಸಲು ಅವಕಾಶವಿದೆ.

ಮತಾಂತರಗೊಂಡ ವ್ಯಕ್ತಿ ಮತಾಂತಗರ ದಿನದಿಂದ ಹಿಡಿದು ಮೂಲ ಧರ್ಮ ಮತಾಂತರಗೊಂಡ ಧರ್ಮ ಇತ್ಯಾದಿ ವಿವರಗಳನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಮತಾಂತರಗೊಂಡ ವ್ಯಕ್ತಿ ತನ್ನ ಗುರುತು ಸ್ಥಾಪಿಸಲು ಮತ್ತು ಘೋಷಣೆಯ ಅಂಶ ಸ್ವೀಊಕರಿಸಲು ಘೋಷಣೆ ಕಳಿಸಿರುವ/ಸಲ್ಲಿಸಿದ ದಿನದಿಂದ ಇಪ್ಪತ್ತು ದಿನಗಳ ಒಳಗಾಗಿ ಜಿಲ್ಲಾ ದಂಡಾಧಿಕಾರಿ ಎದುರು ಹಾಜರಾಗಬೇಕು.

ಬಲವಂತದ ಮತಾಂತರ ನಡೆದಿಲ್ಲ ಎಂಬುದನ್ನು ಸಾಬೀತು ಮಾಡುವ ಹೊಣೆ ಮತಾಂತರ ಮಾಡುವ ಮತ್ತು ಮತಾಂತರಕ್ಕೆ ನೆರವು ನೀಡಿದ ವ್ಯಕ್ತಿಗೆ ಸೇರಿದ್ದು.

ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದರ ಅಡಿ ದೊರೆಯಲಿದೆ.

ರಾಜ್ಯ ಸರ್ಕಾರವು ಅಧಿಕೃತ ರಾಜ್ಯಪತ್ರದಲ್ಲಿ ಅಧಿಸೂಚನೆ ಮೂಲಕ ನಮೂನೆಗಳಲ್ಲಿ ನಿರ್ದಿಷ್ಟಪಡಿಸಿದ ಯಾವುದೇ ನಮೂದುಗಳನ್ನು ಸೇರಿಸಬಹುದು, ವ್ಯತ್ಯಾಸಗೊಳಿಸಬಹುದು ಅಥವಾ ಬಿಟ್ಟುಬಿಡಬಹುದು.

English summary
Karnataka Protection of Right to Freedom of Religion Bill, 2021 Silent Features, Highlights in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X