ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವಾಸ-ಅವಿಶ್ವಾಸ ಮತ: ರಾಜ್ಯದ ಇತಿಹಾಸದಲ್ಲಿ ಎಷ್ಟೆಷ್ಟು ದಿನ ಚರ್ಚೆ ನಡೆದಿತ್ತು?

|
Google Oneindia Kannada News

ಬೆಂಗಳೂರು, ಜುಲೈ 18: ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಇಂದು (ಜುಲೈ 18) ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವುದಾಗಿ ತಿಳಿಸಿದ್ದರು. ಆದರೆ, ಕ್ರಿಯಾಲೋಪದ ಚರ್ಚೆಗೆ ಮುಂದಾಗಿದ್ದರಿಂದ ಇನ್ನೂ ವಿಶ್ವಾಸಮತ ಯಾಚನೆ ನಡೆದಿಲ್ಲ.

ವಿಪ್ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟನೆಯ ಅಗತ್ಯದ ಬಗ್ಗೆ ಚರ್ಚೆ ನಡೆದರೆ ಮಧ್ಯಾಹ್ನದ ಕಲಾಪ ಶಾಸಕರ ಅಪಹರಣದ ವಿಷಯ ಚರ್ಚೆಗೆ ಬಂದಿತು. ಈ ಗದ್ದಲದಲ್ಲಿ ವಿಶ್ವಾಸಮತ ಯಾಚನೆಗ ಸಂಗತಿ ಹಿನ್ನೆಲೆಗೆ ಸರಿದಿತು. ಈ ಕುರಿತ ಚರ್ಚೆ ಇನ್ನೂ ಮುಂದುವರಿಯುವ ಸೂಚನೆಗಳು ಕಾಣಿಸುತ್ತಿವೆ.

ಸದನದಲ್ಲೇ ಶ್ರೀರಾಮುಲು 'ಆಪರೇಷನ್‌'ಗೆ ಕೈ ಹಾಕಿದ ಡಿಕೆಶಿ!ಸದನದಲ್ಲೇ ಶ್ರೀರಾಮುಲು 'ಆಪರೇಷನ್‌'ಗೆ ಕೈ ಹಾಕಿದ ಡಿಕೆಶಿ!

ರಾಜ್ಯದ ಇತಿಹಾಸದಲ್ಲಿ ಇದುವರೆಗೂ ಏಳು ಬಾರಿ ವಿಶ್ವಾಸಮತ ಯಾಚನೆ ಸಂದರ್ಭಗಳು ನಡೆದಿವೆ. ಹಾಗೆಯೇ, 12 ಬಾರಿ ಅವಿಶ್ವಾಸ ಮತ ನಿರ್ಣಯ ಮಂಡನೆಯಾಗಿದೆ. ಈ ಸಂದರ್ಭದಲ್ಲಿ ಎಷ್ಟೆಷ್ಟು ದಿನ ಚರ್ಚೆಗಳು ನಡೆದಿವೆ ಎನ್ನುವುದು ಕುತೂಹಲಕಾರಿ.

ಮುಖ್ಯಮಂತ್ರಿಗಳೇ ಸ್ವತಃ ವಿಶ್ವಾಸಮತ ಯಾಚನೆಗೆ ಮುಂದಾದ ಸಂದರ್ಭದಲ್ಲಿ ಏಳು ಬಾರಿಯೂ ಒಂದೇ ದಿನದಲ್ಲಿ ಚರ್ಚೆ ಮುಗಿದುಹೋಗಿವೆ. ವಿಶ್ವಾಸಮತ ಯಾಚನೆಯ ಪ್ರಸಂಗಗಳಲ್ಲಿ ವಿಶ್ವಾಸಮತ ಗೆದ್ದಿರುವ ಮತ್ತು ಸೋತಿರುವ ದಿನಗಳಲ್ಲಿ ಚರ್ಚೆ ಮತ್ತೊಂದು ದಿನಕ್ಕೆ ಎಳೆದ ಉದಾಹರಣೆ ಇಲ್ಲ. ಆದರೆ, ಅವಿಶ್ವಾಸ ಗೊತ್ತುವಳಿ ಮಂಡನೆ ಮಾಡಿದ ಸಂದರ್ಭದಲ್ಲಿ ನಾಲ್ಕು ದಿನದವರೆಗೂ ಚರ್ಚೆ ನಡೆದ ನಿದರ್ಶನಗಳಿವೆ.

ವಿಶ್ವಾಸಮತ ಯಾಚಿಸಿದ್ದ ಬಂಗಾರಪ್ಪ

ವಿಶ್ವಾಸಮತ ಯಾಚಿಸಿದ್ದ ಬಂಗಾರಪ್ಪ

ರಾಜ್ಯದಲ್ಲಿ ಮೊದಲ ವಿಶ್ವಾಸಮತ ಯಾಚನೆ ನಡೆದಿದ್ದು 9ನೇ ವಿಧಾನಸಭೆಯಲ್ಲಿ. 1990ರ ಅಕ್ಟೋಬರ್ 25ರಂದು ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ವಿಶ್ವಾಸಮತ ಯಾಚನೆ ಮಾಡಿದ್ದರು. 10ನೇ ವಿಧಾನಸಭೆಯಲ್ಲಿ 1998ರ ಜನವರಿ 27ರಂದು ಜೆಎಚ್ ಪಟೇಲ್ ಅವರು ವಿಶ್ವಾಸಮತ ಯಾಚನೆ ಮಾಡಿದ್ದರು.

ಮೈತ್ರಿ ಸರ್ಕಾರದ ವಿಶ್ವಾಸಮತ

ಮೈತ್ರಿ ಸರ್ಕಾರದ ವಿಶ್ವಾಸಮತ

12ನೇ ವಿಧಾನಸಭೆಯಲ್ಲಿ ಎರಡು ಬಾರಿ ವಿಶ್ವಾಸಮತ ಯಾಚನೆಯ ಸಂದರ್ಭ ಬಂದೊದಗಿತ್ತು. 2006ರ ಫೆಬ್ರವರಿ 2ರಂದು ಮತ್ತು 2007ರ ನವೆಂಬರ್ 19ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ಧರಂ ಸಿಂಗ್ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದುಕೊಂಡಿದ್ದ ಜೆಡಿಎಸ್, ಎಚ್ ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಸರ್ಕಾರ ರಚಿಸಿದಾಗ ವಿಶ್ವಾಸಮತ ಯಾಚನೆ ನಡೆಸಿ ಗೆದ್ದಿದ್ದರು. ಬಳಿಕ 2007ರಲ್ಲಿ ಬಿಜೆಪಿಯ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸಿ ಸೋಲು ಅನುಭವಿಸಿದ್ದರು.

ಶಾಸಕ ಶ್ರೀಮಂತ ಪಾಟೀಲ್‌ ನಾಪತ್ತೆ ಬಗ್ಗೆ ಕಾವೇರಿದ ಚರ್ಚೆ, ಡಿಕೆಶಿ ಗರಂಶಾಸಕ ಶ್ರೀಮಂತ ಪಾಟೀಲ್‌ ನಾಪತ್ತೆ ಬಗ್ಗೆ ಕಾವೇರಿದ ಚರ್ಚೆ, ಡಿಕೆಶಿ ಗರಂ

ಯಡಿಯೂರಪ್ಪ ವಿಶ್ವಾಸಮತ

ಯಡಿಯೂರಪ್ಪ ವಿಶ್ವಾಸಮತ

13ನೇ ವಿಧಾನಸಭೆಯಲ್ಲಿ ಮೂರು ಬಾರಿ ವಿಶ್ವಾಸಮತ ಯಾಚಿಸಲಾಗಿತ್ತು. 2008ರ ಜೂನ್ 5ರಂದು, 2010ರ ಅಕ್ಟೋಬರ್ 11ರಂದು ಮತ್ತು 2010ರ ಅಕ್ಟೋಬರ್ 14ರಂದು ವಿಶ್ವಾಸಮತ ಯಾಚನೆ ನಡೆದಿತ್ತು. ಆಗ ಬಿಎಸ್ ಯಡಿಯೂರಪ್ಪ ಅವರು ವಿಶ್ವಾಸಮತ ಯಾಚಿಸಿದ್ದರು. ಈ ಎಲ್ಲ ವಿಶ್ವಾಸಮತ ಯಾಚನೆಯ ಚರ್ಚೆಗಳು ಒಂದು ದಿನಕ್ಕೇ ಮುಗಿದು ಹೋಗಿದ್ದವು.

ಬಿಡಿ ಜತ್ತಿ ಸರ್ಕಾರದ ವಿರುದ್ಧ ಅವಿಶ್ವಾಸ

ಬಿಡಿ ಜತ್ತಿ ಸರ್ಕಾರದ ವಿರುದ್ಧ ಅವಿಶ್ವಾಸ

ಆದರೆ, ವಿರೋಧಪಕ್ಷಗಳು ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ ಸಂದರ್ಭದಲ್ಲಿ ಒಂದು ದಿನಕ್ಕೇ ಚರ್ಚೆಗಳು ಮುಗಿದುಹೋದ ನಿದರ್ಶನಗಳು ತೀರಾ ಕಡಿಮೆ. ಮೂರು ಬಾರಿ ಮಾತ್ರ ಮೊದಲ ದಿನವೇ ಚರ್ಚೆ ಮುಗಿದಿದೆ.

1961ರ ಮಾರ್ಚ್ 3ರಂದು ಎರಡನೆಯ ವಿಧಾನಸಭೆಯಲ್ಲಿ ಮೊದಲ ಬಾರಿಗೆ ಬಿಡಿ ಜತ್ತಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. ಆಗ ನಾಲ್ಕು ದಿನ ಚರ್ಚೆ ನಡೆದಿತ್ತು. ಮೂರನೇ ವಿಧಾನಸಭೆಯಲ್ಲಿ ನಾಲ್ಕು ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು.

ಯಡಿಯೂರಪ್ಪ ಆಸೆಗೆ ಎಳ್ಳುನೀರು ಬಿಡಲಿದೆಯೇ ಸಿದ್ದರಾಮಯ್ಯ ವಾದ?ಯಡಿಯೂರಪ್ಪ ಆಸೆಗೆ ಎಳ್ಳುನೀರು ಬಿಡಲಿದೆಯೇ ಸಿದ್ದರಾಮಯ್ಯ ವಾದ?

4 ಬಾರಿ ಅವಿಶ್ವಾಸ ನಿರ್ಣಯ ಎದುರಿಸಿದ್ದ ನಿಜಲಿಂಗಪ್ಪ

4 ಬಾರಿ ಅವಿಶ್ವಾಸ ನಿರ್ಣಯ ಎದುರಿಸಿದ್ದ ನಿಜಲಿಂಗಪ್ಪ

1962ರ ಸೆಪ್ಟೆಂಬರ್ 21ರಂದು ಎರಡು ದಿನ ಚರ್ಚೆ ನಡೆದಿತ್ತು. ಎಸ್. ನಿಜಲಿಂಗಪ್ಪ ನೇತೃತ್ವದ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿತ್ತು. 1963ರ ಅ.5ರಂದು ಅವಿಶ್ವಾಸ ನಿರ್ಣಯ ಮಂಡನೆಯಾದಾಗ ಮೂರು ದಿನ, 1965ರ ಜ. 18ರಂದು ನಾಲ್ಕು ಮತ್ತು 1966ರ ನ. 24ರ ಅವಿಶ್ವಾಸ ನಿರ್ಣಯದಲ್ಲಿ ಒಂದು ದಿನ ಚರ್ಚೆ ನಡೆದಿದ್ದವು. ಈ ವೇಳೆಯೂ ಎಸ್. ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದರು.

3 ಬಾರಿ ಅವಿಶ್ವಾಸ ಎದುರಿಸಿದ ವೀರೇಂದ್ರ ಪಾಟೀಲ್

3 ಬಾರಿ ಅವಿಶ್ವಾಸ ಎದುರಿಸಿದ ವೀರೇಂದ್ರ ಪಾಟೀಲ್

ನಾಲ್ಕನೆಯ ವಿಧಾನಸಭೆಯಲ್ಲಿ 1967ರ ಡಿ. 18ರಂದು ಎರಡು ದಿನ ಮತ್ತು 1969ರ ಜ. 21ರಂದು ಎರಡು ದಿನ ಚರ್ಚೆಗಳು ನಡೆದಿದ್ದವು. ವೀರೇಂದ್ರ ಪಾಟೀಲ್ ಅವರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು.

9ನೇ ವಿಧಾನಸಭೆಯಲ್ಲಿ 1991ರ ಆಗಸ್ಟ್ 27ರಲ್ಲಿ ನಾಲ್ಕು ಮತ್ತು 1994ರ ಜ. 5ರಂದು ಒಂದು ದಿನ ಚರ್ಚೆಗಳು ನಡೆದಿದ್ದವು. 1991ರಲ್ಲಿ ವೀರೇಂದ್ರ ಪಾಟೀಲ್ ಸಿಎಂ ಆಗಿದ್ದರೆ, 1994ರಲ್ಲಿ ಎಂ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾಗಿದ್ದರು.

ದೇವೇಗೌಡ, ಜೆಎಚ್ ಪಟೇಲ್

ದೇವೇಗೌಡ, ಜೆಎಚ್ ಪಟೇಲ್

10ನೇ ವಿಧಾನಸಭೆಯಲ್ಲಿಯೂ ಎರಡು ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. 1995ರ ಆಗಸ್ಟ್ 7ರಂದು ಮೂರು ದಿನ, 1996ರ ಆಗಸ್ಟ್ 27ರಂದು ಒಂದು ದಿನ ಚರ್ಚೆ ನಡೆದಿತ್ತು. 1995ರಲ್ಲಿ ಎಚ್ ಡಿ ದೇವೇಗೌಡರ ಸರ್ಕಾರವಿತ್ತು. 1996ರಲ್ಲಿ ಜೆಎಚ್ ಪಟೇಲ್ ಮುಖ್ಯಮಂತ್ರಿಯಾಗಿದ್ದರು.

ಸಿದ್ದರಾಮಯ್ಯ ವಿರುದ್ಧ ಅವಿಶ್ವಾಸ ನಿರ್ಣಯ

ಸಿದ್ದರಾಮಯ್ಯ ವಿರುದ್ಧ ಅವಿಶ್ವಾಸ ನಿರ್ಣಯ

14ನೇ ವಿಧಾನಸಭೆಯಲ್ಲಿ 2015ರ ಜುಲೈ 13ರಂದು ಅವಿಶ್ವಾಸ ನಿರ್ಣಯ ಮಂಡನೆಯಾದಾಗ ಎರಡು ದಿನ ಆ ಕುರಿತು ಚರ್ಚೆ ನಡೆದಿತ್ತು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಜೆಡಿಎಸ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆಗ ಸಿದ್ದರಾಮಯ್ಯ ಅವರು ವಿಶ್ವಾಸಮತ ಗೆದ್ದಿದ್ದರು. ಮತಕ್ಕೆ ಹಾಕುವ ಮುನ್ನವೇ ಜೆಡಿಎಸ್ ಶಾಸಕರು ಸಭಾತ್ಯಾಗ ಮಾಡಿದ್ದರು.

English summary
Karnataka political crisis: Karnataka witnessed floor tests in Seven times in its history. 12 times no-confidence motion incidents took place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X