ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು

|
Google Oneindia Kannada News

ಬೆಂಗಳೂರು, ಮೇ 23 : ಲೋಕಸಭಾ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿದೆ. ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಕೇವಲ 1 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರುಲೋಕಸಭೆ ಚುನಾವಣೆ ಫಲಿತಾಂಶ 2019: ಗೆದ್ದವರು, ಸೋತವರು

ಗುರುವಾರ 2019ರ ಲೋಕಸಭಾ ಚುನಾವಣೆ ಮತ ಎಣಿಕೆ ನಡೆಯಿತು. ಕರ್ನಾಟಕದಲ್ಲಿ ಬಿಜೆಪಿ 27 ಕ್ಷೇತ್ರ, ಕಾಂಗ್ರೆಸ್ 21 ಕ್ಷೇತ್ರ ಮತ್ತು ಜೆಡಿಎಸ್ 7 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಜೆಡಿಎಸ್ ಮತ್ತು ಕಾಂಗ್ರೆಸ್ 1 ಕ್ಷೇತ್ರಗಳಲ್ಲಿ ಜಯಗಳಿಸಿವೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದರು.

Karnataka Lok Sabha Election Results 2019 : Full List of Winners & Party Wise Results

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ಬಿಜೆಪಿ ಹೆಚ್ಚು ಸ್ಥಾನಗಳಿಸದಂತೆ ತಂತ್ರ ರೂಪಿಸಿದ್ದವು. ಆದರೆ, ಈ ತಂತ್ರ ಫಲ ನೀಡಿಲ್ಲ. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾಗಿದೆ.

ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು ಇಲ್ಲಿದೆ ಮಾಹಿತಿ

ಲೋಕಸಭೆ ಚುನಾವಣೆ 2019 ಕರ್ನಾಟಕ: ಗೆದ್ದವರು, ಸೋತವರು
ಕ್ರ. ಸಂ ಕ್ಷೇತ್ರ ಗೆದ್ದವರು ಸೋತವರು
1 ಕೋಲಾರ ಸಿ.ಮನಿಸ್ವಾಮಿ (ಬಿಜೆಪಿ) ಕೆ.ಎಚ್.ಮುನಿಯಪ್ಪ (ಮೈತ್ರಿಕೂಟ)
2 ದ. ಕನ್ನಡ ನಳೀನ್ ಕುಮಾರ್ ಕಟೀಲ್ (ಬಿಜೆಪಿ) ಮಿಥುನ್ ರೈ (ಮೈತ್ರಿಕೂಟ)
3 ಬಳ್ಳಾರಿ ವೈ.ದೇವೇಂದ್ರಪ್ಪ (ಬಿಜೆಪಿ) ವಿ.ಎಸ್.ಉಗ್ರಪ್ಪ (ಮೈತ್ರಿಕೂಟ)
4 ಉ.ಕನ್ನಡ ಅನಂತ್ ಕುಮಾರ್ ಹೆಗಡೆ (ಬಿಜೆಪಿ) ಆನಂದ್ ಆಸ್ನೋಟಿಕರ್ (ಮೈತ್ರಿಕೂಟ)
5 ಶಿವಮೊಗ್ಗ ಬಿ.ವೈ.ರಾಘವೇಂದ್ರ (ಬಿಜೆಪಿ) ಮಧು ಬಂಗಾರಪ್ಪ (ಮೈತ್ರಿಕೂಟ)
6 ಬೆಂಗಳೂರು ದಕ್ಷಿಣ ತೇಜಸ್ವಿ ಸೂರ್ಯ (ಬಿಜೆಪಿ) ಬಿ.ಕೆ.ಹರಿಪ್ರಸಾದ್ (ಮೈತ್ರಿಕೂಟ)
7 ವಿಜಯಪುರ ರಮೇಶ್ ಜಿಗಜಿಣಗಿ (ಬಿಜೆಪಿ) ಸುನೀತಾ ದೇವಾನಂದ ಚೌವ್ಹಾಣ್ (ಮೈತ್ರಿಕೂಟ)
8 ಧಾರವಾಡ ಪ್ರಹ್ಲಾದ್ ಜೋಶಿ (ಬಿಜೆಪಿ) ವಿನಯ್ ಕುಲಕರ್ಣಿ (ಮೈತ್ರಿಕೂಟ)
9 ಕೊಪ್ಪಳ ಕರಡಿ ಸಂಗಣ್ಣ (ಬಿಜೆಪಿ) ರಾಘವೇಂದ್ರ ಹಿಟ್ನಾಳ್ (ಮೈತ್ರಿಕೂಟ)
10 ಚಿತ್ರದುರ್ಗ ಎ.ನಾರಾಯಣಸ್ವಾಮಿ (ಬಿಜೆಪಿ) ಬಿ.ಎನ್.ಚಂದ್ರಪ್ಪ (ಮೈತ್ರಿಕೂಟ)
11 ಚಿಕ್ಕೋಡಿ ಅಣ್ಣಾ ಸಾಹೇಬ್ ಜೊಲ್ಲೆ (ಬಿಜೆಪಿ) ಪ್ರಕಾಶ್ ಹುಕ್ಕೇರಿ (ಮೈತ್ರಿಕೂಟ)
12 ಬೆಂಗಳೂರು ಉತ್ತರ ಸದಾನಂದ ಗೌಡ (ಬಿಜೆಪಿ) ಕೃಷ್ಣ ಬೈರೇಗೌಡ (ಮೈತ್ರಿಕೂಟ)
13 ಮೈಸೂರು-ಕೊಡಗು ಪ್ರತಾಪ್ ಸಿಂಹ (ಬಿಜೆಪಿ) ಸಿ.ಎಚ್.ವಿಜಯಶಂಕರ್ (ಮೈತ್ರಿಕೂಟ)
14 ಬಾಗಲಕೋಟೆ ಪಿ.ಸಿ.ಗದ್ದಿಗೌಡರ್ (ಬಿಜೆಪಿ) ವೀಣಾ ಕಾಶಪ್ಪನವರ್ (ಮೈತ್ರಿಕೂಟ)
15 ತುಮಕೂರು ಜಿ.ಎಸ್.ಬಸವರಾಜು (ಬಿಜೆಪಿ) ಎಚ್.ಡಿ.ದೇವೇಗೌಡ (ಮೈತ್ರಿಕೂಟ)
16 ಉಡುಪಿ-ಚಿಕ್ಕಮಗಳೂರು ಶೋಭಾ ಕರಂದ್ಲಾಜೆ (ಬಿಜೆಪಿ) ಪ್ರಮೋದ್ ಮಧ್ವರಾಜ್ (ಮೈತ್ರಿಕೂಟ)
17 ಬೆಳಗಾವಿ ಸುರೇಶ್ ಅಂಗಡಿ (ಬಿಜೆಪಿ) ಡಾ.ವಿ.ಎಸ್‌. ಸಾಧುನವರ(ಕಾಂಗ್ರೆಸ್)
18 ಚಿಕ್ಕಬಳ್ಳಾಪುರ ಬಿ.ಎನ್.ಬಚ್ಚೇಗೌಡ (ಬಿಜೆಪಿ) ವೀರಪ್ಪ ಮೊಯ್ಲಿ (ಮೈತ್ರಿಕೂಟ)
19 ಗುಲ್ಬರ್ಗ ಡಾ.ಉಮೇಶ್ ಜಾಧವ್ (ಬಿಜೆಪಿ) ಮಲ್ಲಿಕಾರ್ಜುನ ಖರ್ಗೆ (ಮೈತ್ರಿಕೂಟ)
20 ಬೀದರ್ ಭಗವಂತ ಖೂಬಾ (ಬಿಜೆಪಿ) ಈಶ್ವರ ಖಂಡ್ರೆ (ಮೈತ್ರಿಕೂಟ)
21 ಹಾವೇರಿ ಶಿವಕುಮಾರ ಉದಾಸಿ (ಬಿಜೆಪಿ) ಡಿ.ಆರ್.ಪಾಟೀಲ (ಮೈತ್ರಿಕೂಟ)
22 ಬೆಂಗಳೂರು ಕೇಂದ್ರ ಪಿ.ಸಿ.ಮೋಹನ್ (ಬಿಜೆಪಿ) ರಿಜ್ವಾನ್ ಅರ್ಷದ್ (ಮೈತ್ರಿಕೂಟ)
23 ಚಾಮರಾಜನಗರ ವಿ.ಶ್ರೀನಿವಾಸ ಪ್ರಸಾದ್ (ಬಿಜೆಪಿ) ಧ್ರುವ ನಾರಾಯಣ (ಮೈತ್ರಿಕೂಟ)
24 ದಾವಣಗೆರೆ ಜಿ.ಎಂ.ಸಿದ್ದೇಶ್ವರ (ಬಿಜೆಪಿ) ಎಚ್.ಬಿ.ಮಂಜಪ್ಪ (ಮೈತ್ರಿಕೂಟ)
25 ರಾಯಚೂರು ರಾಜಾ ಅಮರೇಶ ನಾಯಕ್ (ಬಿಜೆಪಿ) ಬಿ.ವಿನಾಯಕ್ (ಮೈತ್ರಿಕೂಟ)
26 ಬೆಂಗಳೂರು ಗ್ರಾಮಾಂತರ ಡಿ.ಕೆ.ಸುರೇಶ್ (ಮೈತ್ರಿಕೂಟ) ಅಶ್ವಥ್ ನಾರಾಯಣ್ (ಬಿಜೆಪಿ)
27 ಮಂಡ್ಯ ಸುಮಲತಾ (ಪಕ್ಷೇತರ) ನಿಖಿಲ್ (ಮೈತ್ರಿಕೂಟ)
28 ಹಾಸನ ಪ್ರಜ್ವಲ್ ರೇವಣ್ಣ (ಮೈತ್ರಿಕೂಟ) ಎ.ಮಂಜು (ಬಿಜೆಪಿ)
English summary
Karnataka Lok Sabha Election Result 2019. Check the Complete list of all winning candidates from BJP, Congress and JD(S) in Karnataka. Also Find Constituency and party wise results here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X