ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತ್ತೆ ಮಗಳು ಬೇಕೇನಾ, ಅಕ್ಕನ ಮಗಳೇ ಓಕೆನಾ?: ಕರ್ನಾಟಕದಲ್ಲಿ ಇಂಥದ್ದೂ ಒಂದು ಲೆಕ್ಕಾನಾ!?

|
Google Oneindia Kannada News

ಬೆಂಗಳೂರು, ಮೇ 8: ಇದು ಕಲಿಗಾಲ ಸ್ವಾಮಿ. ನಮ್ಮ ಹುಡುಗಿಗೆ ಒಳ್ಳೆಯ ಹುಡುಗ ಬೇಕು. ನಮ್ಮ ಹುಡುಗನಿಗೆ ಒಳ್ಳೆಯ ಹುಡುಗೀನ ನೋಡಬೇಕು. ಅಯ್ಯೋ ಹೆತ್ತವರ ಚಿಂತೆ ಒಂದಾ ಎರಡಾ. ಅದಕ್ಕೆ ಅಲ್ವಾ ದೊಡ್ಡೋರು ಹೇಳೋದು ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಅಂತಾ. ಕರ್ನಾಟಕದಲ್ಲಿ ಈಗ ಅಂಥದ್ದೇ ಡಿಫರೆಂಟ್ ಲೆಕ್ಕಾಚಾರ ಹಾಕಲಾಗುತ್ತಿದೆ.

ಅಲ್ಲಿ ಇಲ್ಲಿ ಹೆಣ್ಣು ಹುಡುಗೋದು ಯಾಕೆ, ಹಿಂದೂ ಮುಂದು ಗೊತ್ತಿಲ್ಲದ ಹುಡುಗನಿಗೆ ಮಗಳನ್ನು ಕೊಡೋದು ಯಾಕೆ. ನಮ್ಮ ಅಕ್ಕನ ಮಗಳೇ ಇದ್ದಾಳೆ, ನಮ್ಮ ಅಣ್ಣನ ಮಗನೇ ಇದ್ದಾನಲ್ಲ ಅಂತಾ ಪೋಷಕರು ಲೆಕ್ಕಾಚಾರ ಹಾಕುತ್ತಿದ್ದಾರೆ. ರಕ್ತಸಂಬಂಧಿಗಳಲ್ಲೇ ಮದುವೆ ಆಗುವುದರಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ.

ಸಂಗಾತಿ ಸಿಕ್ರೆ ಲೈಫ್ ಜಿಂಗಾಲಾಲಾ; ಮದುವೆಯಾದ್ರೆ ಕಂಪನಿಯೇ ಹೆಚ್ಚಿಸುತ್ತೆ ಸಂಬಳ!ಸಂಗಾತಿ ಸಿಕ್ರೆ ಲೈಫ್ ಜಿಂಗಾಲಾಲಾ; ಮದುವೆಯಾದ್ರೆ ಕಂಪನಿಯೇ ಹೆಚ್ಚಿಸುತ್ತೆ ಸಂಬಳ!

ರಾಜ್ಯದಲ್ಲಿ 15 ರಿಂದ 49 ವಯೋಮಾನದ ಮಹಿಳೆಯರಲ್ಲಿ ಅತಿಹೆಚ್ಚು ಜನರು ರಕ್ತ ಸಂಬಂಧಿಕರಲ್ಲಿಯೇ ಮದುವೆ ಆಗುತ್ತಾರಂತೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ -5ರ ಅಂಕಿ-ಅಂಶಗಳು ಹೀಗೆ ಹೇಳುತ್ತಿವೆ. ಕರ್ನಾಟಕದಲ್ಲಿ ರಕ್ತ ಸಂಬಂಧಿಕರಲ್ಲಿ ಮದುವೆಗಳು ಹೆಚ್ಚಾಗುತ್ತಿರುವುದು ಏಕೆ?, ಅತಿಹೆಚ್ಚು ರಕ್ತಸಂಬಂಧಿಗಳಲ್ಲೇ ಮದುವೆಗಳನ್ನು ಆಗುತ್ತಿರುವುದರಲ್ಲಿ ಯಾವ ರಾಜ್ಯ ಅಗ್ರಸ್ಥಾನದಲ್ಲಿದೆ. ಕರ್ನಾಟಕವು ಈ ಪಟ್ಟಿಯಲ್ಲಿ ಎಷ್ಟನೇ ಸ್ಥಾನದಲ್ಲಿದೆ?, ರಕ್ತಸಂಬಂಧಿಗಳನ್ನು ಮದುವೆ ಆಗುವುದರಿಂದ ಏನೆಲ್ಲಾ ಪರಿಣಾಮಗಳು ಆಗುತ್ತವೆ ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ರಕ್ತ ಸಂಬಂಧಿಗಳನ್ನು ಮದುವೆಯಾಗುವವರ ಸಂಖ್ಯೆ ಶೇ.27

ರಕ್ತ ಸಂಬಂಧಿಗಳನ್ನು ಮದುವೆಯಾಗುವವರ ಸಂಖ್ಯೆ ಶೇ.27

ಕರ್ನಾಟಕದಲ್ಲಿ ಸುಮಾರು ಶೇ.27ರಷ್ಟು ಮಹಿಳೆಯರು ಸೋದರ ಸಂಬಂಧಿ, ಚಿಕ್ಕಪ್ಪ ಮತ್ತು ಸೋದರ ಮಾವಂದಿರಂತಹ ನಿಕಟ ಸಂಬಂಧಿಗಳೊಂದಿಗೆ ಮದುವೆ ಆಗುತ್ತಾರಂತೆ. ಕರ್ನಾಟಕದಲ್ಲಿ ಆ ರಕ್ತಸಂಬಂಧದ ವಿವಾಹಗಳ ಶೇಕಡಾವಾರು ಪ್ರಮಾಣವೂ ಹೀಗಿದೆ. ಶೇ.9.6ರಷ್ಟು ಮಹಿಳೆಯರು ತಂದೆಯ ಕಡೆಯಿಂದ ಮೊದಲ ಸೋದರಸಂಬಂಧಿಯನ್ನು ವಿವಾಹವಾಗಿದ್ದಾರೆ ಎಂದು ತೋರಿಸುತ್ತದೆ. ಶೇ.13.90ರಷ್ಟು ಮಹಿಳೆಯರು ತಾಯಿಯ ಕಡೆಯಿಂದ ಮೊದಲ ಸೋದರಸಂಬಂಧಿಯನ್ನು ಮದುವೆಯಾಗಿದ್ದಾರೆ. ಶೇ.0.5ರಷ್ಟು ಮಹಿಳೆಯರು ಎರಡನೇ ಸೋದರಸಂಬಂಧಿ, ಶೇ.0.2ರಷ್ಟು ಮಹಿಳೆಯರು ಚಿಕ್ಕಪ್ಪನಿಗೆ ಸಂಬಂಧಿಸಿದ ಸೋದರ ಸಂಬಂಧಿ ಹಾಗೂ ಶೇ.2.5ರಷ್ಟು ಮಹಿಳೆಯರು ಇತರ ರಕ್ತ ಸಂಬಂಧಿಗಳಿಗೆ ಹಾಗೂ ಶೇ.0.1ರಷ್ಟು ಮಹಿಳೆಯರು ಸೋದರ ಮಾವನನ್ನು ವಿವಾಹವಾಗಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿರುತ್ತದೆ.

ರಕ್ತ ಸಂಬಂಧಿಗಳ ಮದುವೆ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳ ಪಟ್ಟಿ

ರಕ್ತ ಸಂಬಂಧಿಗಳ ಮದುವೆ ಪ್ರಮಾಣ ಹೆಚ್ಚಾಗಿರುವ ರಾಜ್ಯಗಳ ಪಟ್ಟಿ

ರಕ್ತ ಸಂಬಂಧಿಗಳನ್ನೇ ಹೆಚ್ಚಾಗಿ ಮದುವೆ ಆಗುವವರ ಸಂಖ್ಯೆಯು ತಮಿಳುನಾಡಿನಲ್ಲಿ ಹೆಚ್ಚಾಗಿದ್ದು, ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಒಟ್ಟಾರೆ ಭಾರತದಲ್ಲಿ ರಕ್ತಸಂಬಂಧಿಗಳನ್ನೇ ಮದುವೆ ಆಗುವವರ ಪ್ರಮಾಣ ಶೇ.11ರಷ್ಟಿದೆ. ಯಾವ ರಾಜ್ಯದಲ್ಲಿ ಎಷ್ಟು ಪ್ರಮಾಣದಲ್ಲಿ ಜನರು ತಮ್ಮ ರಕ್ತಸಂಬಂಧಿಗಳನ್ನೇ ಮದುವೆಯಾಗುತ್ತಾರೆ ಎಂಬುದರ ಪಟ್ಟಿಯನ್ನು ಇಲ್ಲಿ ನೋಡಿರಿ.

ರಾಜ್ಯ ಶೇಕಡಾವಾರು ಪ್ರಮಾಣ

ತಮಿಳುನಾಡು 28

ಕರ್ನಾಟಕ 27

ಆಂಧ್ರ ಪ್ರದೇಶ 26

ಪುದುಚೇರಿ 19

ತೆಲಂಗಾಣ 18

ಲಡಾಖ್ 16

ಮಹಾರಾಷ್ಟ್ರ 15

ಒಡಿಶಾ 13

ಜಮ್ಮುಕಾಶ್ಮೀರ 12

ಉತ್ತರ ಪ್ರದೇಶ 10

ಅನುವಂಶಿಕ ವಿವಾಹಗಳಿಂದ ಮಕ್ಕಳಲ್ಲಿ ಅಸ್ವಸ್ಥತೆ ಸಮಸ್ಯೆ

ಅನುವಂಶಿಕ ವಿವಾಹಗಳಿಂದ ಮಕ್ಕಳಲ್ಲಿ ಅಸ್ವಸ್ಥತೆ ಸಮಸ್ಯೆ

ಸಾಮಾನ್ಯವಾಗಿ ತೀರಾ ಹತ್ತಿರದ ಸಂಬಂಧಿಗಳನ್ನು ಮದುವೆ ಆಗುವುದರಿಂದ ಜನಿಸುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಆನುವಂಶಿಕ ಅಸ್ವಸ್ಥತೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಪೋಷಕರ ರಕ್ತಸಂಬಂಧದ ಮದುವೆಗಳಿಂದ ಅಂತಹ ದಂಪತಿಗಳಿಗೆ ಜನಿಸಿದ ಮಕ್ಕಳಲ್ಲಿ ಹಿಂಜರಿತ ಹಾಗೂ ಅಸ್ವಸ್ಥತೆಗಳ ಅಪಾಯವನ್ನು ಹೆಚ್ಚಾಗಿರುತ್ತದೆ.

ಹೆಚ್ಚಿನ ರೋಗಿಗಳ ಪೋಷಕರ ಹಿನ್ನೆಲೆಯೇ ಅನುವಂಶಿಕ ಮದುವೆ

ಹೆಚ್ಚಿನ ರೋಗಿಗಳ ಪೋಷಕರ ಹಿನ್ನೆಲೆಯೇ ಅನುವಂಶಿಕ ಮದುವೆ

"ನಾವು ನೋಡುತ್ತಿರುವ ಹೆಚ್ಚಿನ ರೋಗಿಗಳ ಪೋಷಕರ ವಿವಾಹಗಳು ಚಿಕ್ಕಪ್ಪ, ಸೊಸೆ ಅಥವಾ ಮೊದಲ ಸೋದರಸಂಬಂಧಿ ವಿವಾಹದ ಹಿನ್ನೆಲೆಯನ್ನು ಹೊಂದಿರುತ್ತವೆ. ಇದು ಖಂಡಿತವಾಗಿಯೂ ಅಪಾಯಕಾರಿ ಆಗಿರುತ್ತದೆ. ಸಾಮಾನ್ಯವಾಗಿ ಜನ್ಮ ದೋಷಗಳು ಮತ್ತು ಆನುವಂಶಿಕ ಸಮಸ್ಯೆಗಳ ಮಕ್ಕಳಲ್ಲಿ ಹೆಚ್ಚಿನವು ನೈಸರ್ಗಿಕ ಹಿಂಜರಿತವನ್ನು ಹೊಂದಿರುತ್ತವೆ," ಎಂದು ಬೆಂಗಳೂರಿನ ಸೆಂಟರ್ ಫಾರ್ ಹ್ಯೂಮನ್ ಜೆನೆಟಿಕ್ಸ್ (CHG) ಯ ಕನ್ಸಲ್ಟೆಂಟ್ ಕ್ಲಿನಿಕಲ್ ಜೆನೆಟಿಸ್ಟ್ ಡಾ. ಕೃತಿ ವರ್ಷಿಣಿ ಹೇಳಿದ್ದಾರೆ.

"ಥಲಸ್ಸೆಮಿಯಾ ಅತ್ಯಂತ ಸಾಮಾನ್ಯವಾದ ಅಸ್ವಸ್ಥತೆ ಆಗಿದೆ. ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಬರುತ್ತದೆ. ಇದು ರಿಸೆಸಿವ್ ಡಿಸಾರ್ಡರ್ ಆಗಿದ್ದು, ಇಬ್ಬರೂ ಪೋಷಕರು ಒಂದೇ ರೀತಿಯ ರೂಪಾಂತರಿತ ಆಲೀಲ್‌ಗಳಲ್ಲಿ ಒಂದೇ ರೀತಿಯ ಜೀನ್‌ನ ಅನ್ನು ಪಾಸ್ ಮಾಡುವುದರಿಂದ ಮಗುವಿನಲ್ಲಿ ಅದರ ಪ್ರಮಾಣ ಎರಡರಷ್ಟಾಗುತ್ತದೆ. ನಾಲ್ಕರಲ್ಲಿ ಒಂದು ಪ್ರರಕರಣಗಳು ಹೀಗೆ ಆಗುವ ಸಾಧ್ಯತೆಗಳಿರುತ್ತವೆ.

ಸಾಮಾನ್ಯವಾಗಿ ಅನುವಂಶಿಕ ಅಸ್ವಸ್ಥತೆಗೆ ಕಾರಣ?

ಸಾಮಾನ್ಯವಾಗಿ ಅನುವಂಶಿಕ ಅಸ್ವಸ್ಥತೆಗೆ ಕಾರಣ?

"ಸುಮಾರು ಶೇ.5ರಷ್ಟು ರಕ್ತಸಂಬಂಧಿಯ ದಂಪತಿಗಳಲ್ಲಿ ಸಾಮಾನ್ಯವಾಗಿ ಪೂರ್ವಜರ ಕಾರಣದಿಂದಾಗಿ ತಾಯಿ ಮತ್ತು ತಂದೆಯ ಮೂಲಕ ಸಾಮಾನ್ಯ ಜೀನ್ ಚಾಲನೆಯಲ್ಲಿದ್ದರೆ, ಮಗು ಆಟೋಸೋಮಲ್ ರಿಸೆಸಿವ್ ಆಗಿರುವ ಆನುವಂಶಿಕ ಅಸ್ವಸ್ಥತೆಯನ್ನು ಅನುಭವಿಸುತ್ತದೆ," ಎಂದು ಬೆಂಗಳೂರು ಫೀಟಲ್ ಮೆಡಿಸಿನ್ ಸೆಂಟರ್‌ನ ಸಿಎಚ್‌ಜಿಯ ಸಹ ನಿರ್ದೇಶಕಿ ಮತ್ತು ಸಂದರ್ಶಕ ಸಲಹೆಗಾರ ಜೆನೆಟಿಸ್ಟ್ ಡಾ ಮೀನಾಕ್ಷಿ ಭಟ್ ಹೇಳಿದ್ದಾರೆ.

ನಾವು ಶೇ.2-3ರಷ್ಟು ವಿದ್ಯಾವಂತರು ತಮ್ಮ ಮದುವೆಗೂ ಮೊದಲು ರಕ್ತಸಂಬಂಧದಲ್ಲಿಯೇ ಮದುವೆಯಾದರೆ ಏನು ಮಾಡುವುದು ಎಂಬುದರ ಬಗ್ಗೆ ನಮ್ಮನ್ನು ಸಂಪರ್ಕಿಸಿದ್ದರು. ಅಂಥ ದಂಪತಿ ಬೇರೆ ಸಂಬಂಧವನ್ನು ನೋಡುವುದಕ್ಕೆ ಸಾಧ್ಯವೇ ಎಂಬುದನ್ನು ಪರಾಮರ್ಶೆ ಮಾಡುವಂತೆ ನಾವು ಸಲಹೆ ನೀಡುತ್ತೇವೆ. ಏಕೆಂದರೆ ವಿದೇಶಗಳಲ್ಲಿ ಅಂತಹ ದಂಪತಿಯ ಮಕ್ಕಳಲ್ಲಿ ಅಸ್ವಸ್ಥತೆಯನ್ನು ಹೆಚ್ಚಾಗಿ ಪರೀಕ್ಷೆಗೆ ಒಳಪಡಿಸಲಾಗಿರುತ್ತದೆ," ಎಂದು ಅವರು ಹೇಳಿದ್ದಾರೆ.

English summary
Karnataka has the 2nd highest percentage of women aged 15-49 who have consanguineous marriages, shows the National Family Health Survey-5. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X