ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಘೋಷಿತ ಆಸ್ತಿ ಎಷ್ಟು?
ಭಾರತೀಯ ಜನತಾ ಪಕ್ಷ(ಬಿಜೆಪಿ)ದ ರಾಜ್ಯಾಧ್ಯಕ್ಷ, ಶಿಕಾರಿಪುರದ ಶಾಸಕ ಬಿ.ಎಸ್ ಯಡಿಯೂರಪ್ಪ 4ನೇ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. 2013 ಹಾಗೂ 2018ರ ಚುನಾವಣೆ ಸಂದರ್ಭಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರ ಆಸ್ತಿ ಪ್ರಮಾಣದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ. ಕಳೆದ ಚುನಾವಣೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್ ಆಧಾರದ ಮೇಲೆ ಆಸ್ತಿ ವಿವರಗಳನ್ನು ಇಲ್ಲಿ ನೀಡಲಾಗಿದೆ. "ನನಗೆ ನನ್ನ ಮಕ್ಕಳಿಗೆ ಸ್ವಿಸ್ ಬ್ಯಾಂಕಿನಲ್ಲಿ ಖಾತೆ ಇಲ್ಲ" ಎಂದು ವಿಶೇಷವಾಗಿ ಘೋಷಿಸಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಜನಿಸಿ, ಶಿವಮೊಗ್ಗದ ಶಿಕಾರಿಪುರದಿಂದ ರಾಷ್ಟ್ರ ರಾಜಕೀಯಕ್ಕೆ ಜಿಗಿದು ನಂತರ ಕರುನಾಡಿಗೆ ಮರಳಿ ಮತ್ತೊಮ್ಮೆ ಕರ್ನಾಟಕದಲ್ಲಿ ಕಮಲ ಅರಳುವಂತೆ ಮಾಡಿದವರುಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದ ಯಡಿಯೂರಪ್ಪ ದಿಢೀರ್ ನಾಯಕರಾದವರಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು. ಡಿ ನೋಟಿಫಿಕೇಷನ್, ಸ್ವಜನಪಕ್ಷಪಾತ, ಭೂ ಹಗರಣಗಳ ಜೊತೆ ಯಡಿಯೂರಪ್ಪ ಅವರ ಸಿಡುಕು ಕಂಡರೆ ಜನ ಮುಖ ಬೇರೆಡೆ ತಿರುಗಿಸುತ್ತಾರೆ ಎಂಬ ದೂರಿದೆ
ಅತಿ ಹೆಚ್ಚು ಬಾರಿ ಸಿಎಂ, ಅಲ್ಪಾವಧಿ ಸಿಎಂ ಯಡಿಯೂರಪ್ಪ ಸಾಧನೆ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ಘೋಷಿತ ಆಸ್ತಿ 7 ಕೋಟಿ ರು ನಷ್ಟಿದೆ. 2013ರಲ್ಲಿ ಅವರ ಆಸ್ತಿ 5.96 ಕೋಟಿ ರು ಹಾಗೂ 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ 6.97 ಕೋಟಿ ರು ಎಂದು ಅಫಿಡವಿಟ್ ಸಲ್ಲಿಸಿದ್ದರು. 2018ರ ಘೋಷಿತ ಪ್ರಮಾಣ ಪತ್ರದ ವಿವರಗಳನ್ನು ನೋಡಿದ್ದಾಗ ಅವರ ಬಳಿ 4.85 ಕೋಟಿ ರೂ. ಸ್ಥಿರಾಸ್ತಿ, 71.30 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.

ಶಿಕಾರಿಪುರದಲ್ಲಿ ಎರಡು ಮನೆಗಳಿವೆ
ಮನೆ ಹಾಗೂ ನಿವೇಶನ, ಸ್ಥಿರಾಸ್ತಿ ಮನೆ ಹಾಗೂ ನಿವೇಶನಗಳು: ಶಿಕಾರಿಪುರದಲ್ಲಿ ಎರಡು ಮನೆಗಳಿವೆ. ಒಂದು ಮನೆ ಹೆಂಡತಿ ಮನೆ ಕಡೆಯಿಂದ ಬಂದದ್ದು, 2004ರಲ್ಲಿ ಶಿಕಾರಿಪುರದಲ್ಲಿ ಮತ್ತೊಂದು ಮನೆ ಖರೀದಿ.
* ಬೆಂಗಳೂರಿನ ಆರ್ ಎಂವಿ ಬಡಾವಣೆಯಲ್ಲಿ ನಿವಾಸವಿದೆ.
* ಬೆಂಗಳೂರಿನಲ್ಲಿ 65 X 85 ಬಿಡಿಎ ನಿವೇಶನ.
* ತಿರುಮಲಾಪುರದಲ್ಲಿ 5.02 ಎಕರೆ ಕೃಷಿ ಭೂಮಿ.
* ಚನ್ನಹಳ್ಳಿ 4.10 ಎಕರೆ ಕೃಷಿ ಭೂಮಿ.
* ಶಿರಾಳಕೊಪ್ಪದಲ್ಲಿ ಕೈಗಾರಿಕಾ ಉದ್ದೇಶದಿಂದ 9.12 ಎಕರೆ ಭೂಮಿ ಖರೀದಿ.

ಹಲವು ಬ್ಯಾಂಕ್ ಗಳಲ್ಲಿ ಠೇವಣಿ
ಬ್ಯಾಂಕ್ ಠೇವಣಿ, ಷೇರುಗಳು
* ಶಿಕಾರಿಪುರದ ಕೆನರಾ ಬ್ಯಾಂಕ್ ನಲ್ಲಿ 2,19,636 ರು ಹಣ.
* ಶಿವ ಸಹಕಾರಿ ಬ್ಯಾಂಕ್ ನಲ್ಲಿ 20 ಸಾವಿರ ಠೇವಣಿ.
* ಅಪೆಕ್ಸ್ ಬ್ಯಾಂಕ್ ವಿಧಾನಸೌಧ ಶಾಖೆಯಲ್ಲಿ 17 ಲಕ್ಷ 25ಸಾವಿರ 131 ರುಪಾಯಿಗಳು
* ಸಾಫ್ಟ್ ವೇರ್ ಟೆಕ್ ಗ್ರೂಪ್ ನಲ್ಲಿ 100 ಷೇರುಗಳು
* ಜೆನಿತ್ ಇನ್ಫೋಟೆಕ್ ನಲ್ಲಿ 50 ಷೇರುಗಳು
* ಖೇತಾನ್ ಲಿಮಿಟೆಡ್ ನಲ್ಲಿ 70 ಷೇರುಗಳು
* ಶಿಕಾರಿಪುರ ಅರ್ಬನ್ ಬ್ಯಾಂಕ್ 100 ಷೇರುಗಳು
BS Yeddyurappa Journey: ಟೊರಿನೋ ಫ್ಯಾಕ್ಟರಿಯ ಸಾಲದಿಂದ ಸಿಟ್ಟಿನ ದಿನಗಳ ತನಕ

ಚಿನ್ನ ಬೆಳ್ಳಿ, ವಿಮೆ ಹಣ, ಇತ್ಯಾದಿ
ಚಿನ್ನ ಬೆಳ್ಳಿ, ವಿಮೆ ಹಣ, ಇತ್ಯಾದಿ :ವಿಮೆ ಹಣ, ಚಿನ್ನ ಬೆಳ್ಳಿ ಇತ್ಯಾದಿ: * ಎಲ್ ಐಸಿ 1.72 ಲಕ್ಷ ರು. * ಬಿಎಸ್ ಎನ್ ಎಲ್ ನಿಂದ ಪಿಂಚಣಿ ಹಣ * 10 ಲಕ್ಷ ರು ಮೌಲ್ಯದ ಗೃಹೋಪಯೋಗಿ ವಸ್ತುಗಳು * 76 ಕೆಜಿ ಬೆಳ್ಳಿ, 2ಕೆಜಿ 976ಗ್ರಾಂ ಬಂಗಾರ. * ಒಂದು ಕಾಂಟೆಸ್ಸಾ ಕಾರು, ಒಂದು ಸ್ಕಾರ್ಪಿಯೋ ಕಾರು(ನಂತರ ಬ್ಯಾಂಕ್ ಸಾಲಕ್ಕೆ ಮಾರಿದ್ದಾರೆ)
ವ್ಯಕ್ತಿಚಿತ್ರ: "ಶಿಸ್ತಿನ ಸಿಪಾಯಿ" ಯಡಿಯೂರಪ್ಪ ರಾಜಕೀಯ ಬದುಕಿನ ಚಿತ್ರಣ

ಆಸ್ತಿ ಪ್ರಮಾಣದಲ್ಲಿ ಹೆಚ್ಚಿನ ಏರಿಕೆ ಇಲ್ಲ
2008ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ವೇಳೆ ಚುನಾವಣಾ ಆಯೋಗಕ್ಕೆ ಆಸ್ತಿ ಒಟ್ಟು ಮೌಲ್ಯ 1.82 ಕೋಟಿ ರು ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ನಂತರ ಲೋಕಾಯುಕ್ತರಿಗೆ ಸಲ್ಲಿಸಿದ ವಾರ್ಷಿಕ ವಿವರಗಳಲ್ಲಿ ಆಸ್ತಿ ಮೌಲ್ಯ 5.38 ಕೋಟಿ ರು ಎಂದು ಬಹಿರಂಗಪಡಿಸಿದ್ದರು.
ಸುಮಾರು 1.09 ಕೋಟಿ ರೂ. ಮೌಲ್ಯದ ಚಿನ್ನಾಭರಣ ಇವೆ. ಬೆಂಗಳೂರು ಹೊರವಲಯದಲ್ಲಿ 24.15 ಕೋಟಿ ರೂ. ಮೌಲ್ಯದ ಕೃಷಿಯೇತರ ಭೂಮಿ, ಶಿಕಾರಿಪುರ, ಬೆಂಗಳೂರಲ್ಲಿ ವಸತಿ ಹಾಗೂ 3.83 ಕೋಟಿ ಮೌಲ್ಯದ ಕಟ್ಟಡಗಳಿವೆ. 2013ಕ್ಕೆ ಹೋಲಿಸಿದರೆ ಯಡಿಯೂರಪ್ಪ ಅವರ ಆಸ್ತಿ ಪ್ರಮಾಣದಲ್ಲಿ ಹೆಚ್ಚಿನ ಏರಿಕೆ ಕಂಡು ಬಂದಿಲ್ಲ.
ಸೈಕಲ್ ಓಡಿಸಿ ಒದೆ ತಿಂದಿದ್ದ ಮಗಳು ಅರುಣಾದೇವಿ ಕಂಡಂತೆ ಅಪ್ಪ, ಯಡಿಯೂರಪ್ಪ