ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವರಾತ್ರಿಯ ಮಹೋತ್ಸವ: ಕರುನಾಡಿನಲ್ಲಿ ಸಂಭ್ರಮದ ದಿನ

By ದಿವ್ಯಶ್ರೀ. ವಿ, ಬೆಂಗಳೂರು
|
Google Oneindia Kannada News

ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದಾದ ಹಬ್ಬ ಅಂದರೆ ಅದು ಮಹಾಶಿವರಾತ್ರಿ. ಮಾರ್ಚ್ ತಿಂಗಳ 11ರಲ್ಲಿ 2020 ರ ಶಿವರಾತ್ರಿ ಹಬ್ಬದ ಸೊಬಗು ಎಲ್ಲೆಲ್ಲೂ ಇರುತ್ತದೆ. ಶಿವರಾತ್ರಿ ಅಂದರೆ ಅದರದ್ದೇ ಆದ ವಿಶೇಷತೆ ಇರುತ್ತದೆ. ಶಿವರಾತ್ರಿಯ ದಿನ ರಾತ್ರಿ ಪೂಜೆಯೇ ವಿಶೇಷ. ಸಾಮಾನ್ಯವಾಗಿ ಎಲ್ಲ ಹಬ್ಬಗಳಲ್ಲಿಯೂ ದೇವರಿಗೆ ಹಗಲು ಪೂಜೆ ನಡೆಯುತ್ತದೆ.

ಆದರೆ ಶಿವರಾತ್ರಿ ಮಾತ್ರ ರಾತ್ರಿಯ ಹೊತ್ತು ಪೂಜೆ, ಭಜನೆ ನಡೆಸುವ ವಿಶೇಷ ಆಚರಣೆ. ರಾತ್ರಿ ಎಂದರೆ ಕತ್ತಲು, ಕತ್ತಲು ಎಂದರೆ ಅಜ್ಞಾನ. ಅಜ್ಞಾನವನ್ನು ಕಳೆದು ಸುಜ್ಞಾನ ಬೆಳಗಿಸು ಎಂದು ಆ ಶಿವನನ್ನು ಬೇಡುವ ಶುಭ ದಿನವೇ ಶಿವರಾತ್ರಿ. ಅಲ್ಲದೆ ಶಿವನು ಪಾರ್ವತಿ ದೇವಿಯನ್ನು ವಿವಾಹವಾದ ದಿನವನ್ನು ಶಿವರಾತ್ರಿ ಹಬ್ಬವನ್ನಾಗಿ ಆಚರಿಸುತ್ತಾರೆ. ಶಿವರಾತ್ರಿ ದಿನದಲ್ಲಿ ಎಲ್ಲೆಡೆ ಜಾಗರಣೆಯ ಸಂಬ್ರಮ, ಅಂದು ಎಲ್ಲಾ ದೇವಾಲಯಗಳಲ್ಲಿ ಇಡೀ ರಾತ್ರಿ ಶಿವನ ಭಜನೆಯಿಂದ ಕೂಡಿರುತ್ತದೆ. ಅನೇಕ ಶಿವನ ಭಕ್ತರು ತನ್ನ ಈಶ್ವರನಿಗೋಸ್ಕರ ಉಪವಾಸ ವ್ರತವನ್ನು ಮಾಡುತ್ತಾರೆ.

ಶಿವರಾತ್ರಿ ಅಂದರೆ ಕೇವಲ ಪೂಜೆ ಭಜನೆ ಉಪವಾಸ ಅಷ್ಟೇ ಅಲ್ಲದೆ ಅನೇಕ ಊರಿನಲ್ಲಿ ಜಾತ್ರಾ ಮಹೋತ್ಸವೂ ಇರುತ್ತದೆ. ತಂಬಿಟ್ಟು ಈ ಹಬ್ಬದ ಪ್ರಮುಖ ತಿನಿಸು. ಮಾಘ ಮಾಸದ ಸಮಯದಲ್ಲಿ ಶಿವ ಪಾರ್ವತಿ ಜೊತೆಯಲ್ಲಿ ಭೂಮಿಗೆ ಬಂದು. ಭೂಮಿಯಲ್ಲಿ ಸಂಚರಿಸುತ್ತ ಎಲ್ಲ ಸ್ಥಾವರ ಜಂಗಮ ಲಿಂಗಗಳಲ್ಲಿ ಸಂಕ್ರಮಣಗೊಳ್ಳುತ್ತಾನೆ. ಆ ಸಮಯದಲ್ಲಿ ಅಂದ್ರೆ ಶಿವರಾತ್ರಿ ರಾತ್ರಿ ತನ್ನನ್ನು ಯಾರು ಪೂಜಿಸುವರೋ ಅವರ ಪಾಪಗಳು ಪರಿಹಾರವಾಗುತ್ತವೆ ಎಂದು ಸ್ವತಃ ಶಿವನೇ ತಿಳಿಸಿದ್ದಾನೆ ಎಂಬುದರ ಬಗ್ಗೆ ಶಾಸ್ತ್ರೋಕ್ತಿಯೂ ಇದೆ. ಇದಕ್ಕಾಗಿ ಅನೇಕರು ಜಾಗರಣೆ ಮಾಡುತ್ತಾರೆ. ಮಹಾ ಶಿವರಾತ್ರಿಯಂದು ಬಿಲ್ವಪತ್ರೆಯನ್ನು ಶಿವಲಿಂಗದ ಮೇಲಿಟ್ಟು ಪೂಜಿಸಿದರೆ, ಯಾಗ ಮಾಡಿದ ಫಲ ದೊರೆಯುತ್ತದೆ ಎಂದು ಹಿರಿಯರು ಹೇಳುತ್ತಾರೆ.

Karnataka celebrates Maha Shivaratri on March 11

ನಮ್ಮ ಕರ್ನಾಟಕದ ಪ್ರಮುಖ ಶಿವನ ದೇವಾಲಯಗಳು:
ಶ್ರೀ ಕ್ಷೇತ್ರ ಧರ್ಮಸ್ಥಳ
ಕೋಟಿಲಿಂಗೇಶ್ವರ
ಮುರುಡೇಶ್ವರ
ಗೋಕರ್ಣ
ನಂಜನಗೂಡು

ಈ ದೇವಾಲಯಗಳಿಗೆ ಅದರದೇ ಆದ ಇತಿಹಾಸ ಮತ್ತು ವೈಶಿಷ್ಟ ಇದೆ. ಬರೀ ನಮ್ಮ ದೇಶದಲ್ಲಿ ಅಷ್ಟೇ ಅಲ್ಲದೆ ಇಡೀ ಜಗತ್ತೇ ಶಿವರಾತ್ರಿ ಯನ್ನು ಆಚರಿಸುತ್ತಾರೆ ಶಿವನ ದೇವಾಲಯಗಳು ಭಾರತದಲ್ಲಿ ಅಷ್ಟೇ ಅಲ್ಲ ಪ್ರಪಂಚದ ಅನೇಕ ದೇಶದಲ್ಲಿ ಪ್ರಮುಖ ದೇವಾಲಯಗಳು ಇದೆ. ಈ ಶಿವರಾತ್ರಿ ದಿನದಿಂದ ಚಳಿಗಾಲವು ಮುಗಿದು ಬೇಸಿಗೆಗಾಲ ಆರಂಭಗೊಳ್ಳುವುದು. ಈ ದಿನದಲ್ಲಿ ಸೂರ್ಯನ ಶಾಖ ಹೆಚ್ಚಾಗಿರುತ್ತದೆ ಮತ್ತು ಚಂದ್ರನ ಪ್ರಕಾಶವೂ ಕ್ಷೀಣಿಸಿರುತ್ತದೆ. ಈ ವ್ಯತ್ಯಯದ ಸಮಯದಲ್ಲಿ ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆ ಗಳಾಗುತ್ತವೆ. ಈ ಕಾಲ ವ್ಯತ್ಯಾಸದ ಸಮಯ ದಲ್ಲಿ ನಮ್ಮಲ್ಲಿ ಉಸಿರಾಟದ ತೊಂದರೆ ಬರುವುದು ಸಾಮಾನ್ಯ.

ಶಿವರಾತ್ರಿಯಂದು ಪರಶಿವನಿಗೆ ನೀರಿನ ಅಭಿಷೇಕ ಮತ್ತು ಬಿಲ್ವ ಪತ್ರೆಯ ಪೂಜೆ ನಡೆಯುತ್ತದೆ. ಬಿಲ್ವಪತ್ರೆಯಲ್ಲಿ ಉಸಿರಾಟದ ತೊಂದರೆ ನಿವಾರಿಸುವ ಗುಣವಿದೆ. ಬಿಲ್ವವನ್ನು ಲಿಂಗದ ಮೇಲೆ ಹಾಕುವಾಗ ಅದರ ವಾಸನೆ ನಮ್ಮ ದೇಹದ ಒಳಗೆ ಹೋಗುವುದು ನಮ್ಮ ಉಸಿರಾಟದ ತೊಂದರೆ ಕಡಿಮೆಯಾಗುವುದು ಇದೆಲ್ಲವೂ ವೈಜ್ಞಾನಿಕ.

ಕೈಲಾಸವಾಸಿ ಶಿವನಿಗೆ ಪ್ರಿಯವಾದ ದಿನದಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹ ನೀಡುವುದಾಗಿ ಸ್ವತಃ ಶಿವನೇ ಪಾರ್ವತಿಯಲ್ಲಿ ಅರುಹಿದ್ದಾನೆ ಎನ್ನುತ್ತದೆ ಶಿವಪುರಾಣ ಅದರಿಂದ ಎಲ್ಲ ಭಕ್ತರು ಪರಮೇಶ್ವರನನ್ನು ಪ್ರಾರ್ಥಿಸಿ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ವಿನಂತಿಸುತ್ತೇನೆ. ಎಲ್ಲರಿಗೂ ಮಹಾಶಿರಾತ್ರಿಯ ಶುಭಾಶಯಗಳು.

English summary
Karnataka celebrates Maha Shivaratri on March 11. Maha Shivaratri literally means the night of Shiva and is celebrated every year on the 13th night/14th day of the Maagha month of the Hindu calendar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X