ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದ ನೂತನ ಕ್ಯಾಬಿನೆಟ್ ಸಚಿವರ ಸಂಬಳವೆಷ್ಟು? ಭತ್ಯೆ ಎಷ್ಟು?

|
Google Oneindia Kannada News

ಬೆಂಗಳೂರು, ಫೆಬ್ರವರಿ 06: ಬಿ. ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಬಿಜೆಪಿಗೆ ವಲಸೆ ಬಂದು ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದ 10 ಮಂದಿ ಶಾಸಕರಿಗೆ ಇಂದು(ಫೆ.6) ಸಚಿವರಾಗುವ ಯೋಗ ಒಲಿದು ಬಂದಿದೆ. ರಾಜ್ಯಪಾಲ ವಜುಭಾಯಿವಾಲ ಬೋಧಿಸಿದ ಪ್ರತಿಜ್ಞಾ ವಿಧಿಯಂತೆ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಈ ನಡುವೆ ನೂತನ ಕ್ಯಾಬಿನೆಟ್ ಸಚಿವರಿಗೆ ತಿಂಗಳಿಗೆ ಎಷ್ಟು ಸಂಬಳ ಸಿಗಬಹುದು? ಯಾವ ಯಾವ ಭತ್ಯೆ ಸಿಗಬಹುದು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಕಾಯ್ದೆ ಪ್ರಕಾರ ಕ್ಯಾಬಿನೆಟ್ ದರ್ಜೆ, ರಾಜ್ಯ ಸಚಿವರು, ಶಾಸಕರು, ಸ್ಪೀಕರ್ ಅವರಿಗೆ ಎಷ್ಟು ವೇತನ ಸಿಗಲಿದೆ ಎಂಬ ವಿವರ ಇಲ್ಲಿದೆ....

ಇಲ್ಲಿದೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 'ನೂತನ ಸಚಿವರ ಇತಿಹಾಸ'!ಇಲ್ಲಿದೆ ಸಿಎಂ ಯಡಿಯೂರಪ್ಪ ಸಂಪುಟ ಸೇರಿದ 'ನೂತನ ಸಚಿವರ ಇತಿಹಾಸ'!

ಕರ್ನಾಟಕ ಶಾಸಕರ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ತಿದ್ದುಪಡಿ ವಿಧೇಯಕ 2015ಕ್ಕೆ ತಿದ್ದುಪಡಿಯಾಗುತ್ತಿದ್ದಂತೆ ಕರ್ನಾಟಕದ ಜನಪ್ರತಿನಿಧಿಗಳ ಸಂಬಳ, ಭತ್ಯೆಯಲ್ಲಿ ಸುಮಾರು 75% ಏರಿಕೆ ಕಂಡು ಬಂದಿತ್ತು. ಮುಖ್ಯಮಂತ್ರಿ, ಸಚಿವರು, ಶಾಸಕರು, ಸಭಾಪತಿ, ವಿರೋಧ ಪಕ್ಷದ ನಾಯಕರ ವೇತನ ಹೆಚ್ಚಳವಾಗಿದೆ. ಮುಖ್ಯಮಂತ್ರಿಗಳ ಸಂಬಳ 30 ರಿಂದ 50 ಸಾವಿರಕ್ಕೆ ಏರಿಕೆಯಾಗಿತ್ತು. 2017 ಇಲ್ಲಿ ತನಕ ಇದೇ ಸ್ತರದಲ್ಲಿ ಸಂಬಳ ಭತ್ಯೆ ಸಂದಾಯವಾಗುತ್ತಿದೆ. ಈ ವಿಧೇಯಕಕ್ಕೆ 1956ರಿಂದ ಹಲವು ಬಾರಿ ತಿದ್ದುಪಡಿಯಾಗಿದೆ.

2005ರಲ್ಲಿ ಶಾಸಕರ ಮೂಲ ವೇತನ 8 ಸಾವಿರ ರೂ

2005ರಲ್ಲಿ ಶಾಸಕರ ಮೂಲ ವೇತನ 8 ಸಾವಿರ ರೂ

2011ರಲ್ಲಿ ಕರ್ನಾಟಕ ಶಾಸಕರ ವೇತನ, ನಿವೃತ್ತಿ ವೇತನ ಮತ್ತು ಭತ್ಯೆಗಳ ಕಾಯ್ದೆ-1956ಗೆ ತಿದ್ದುಪಡಿ ತಂದು ವೇತನ, ಸೌಲಭ್ಯಗಳನ್ನು ಹೆಚ್ಚಿಸಿಕೊಳ್ಳಲಾಗಿತ್ತು. 2014 ಮೇ ತಿಂಗಳಿನಲ್ಲಿ ಎಲ್ಲಾ ಪಕ್ಷದ ಶಾಸಕರ ಗುಂಪು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರಿಗೆ ವೇತನ ಹೆಚ್ಚಳ ಮಾಡುವಂತೆ ಮನವಿ ಸಲ್ಲಿಸಿದ್ದರು. ಇದಾದ ಬಳಿಕ ವಿಧಾನಸಭೆಯಲ್ಲಿ ವಿಧೇಯಕ ತಿದ್ದಪಡಿ ಮಂಡನೆಯಾಗಿ ಒಕ್ಕೊರಲ ಅನುಮೋದನೆ ಸಿಕ್ಕಿತ್ತು.

2005ರಲ್ಲಿ ಶಾಸಕರ ಮೂಲ ವೇತನ 8 ಸಾವಿರ ರೂ. ಇತ್ತು. 2009ರಲ್ಲಿ ಇದನ್ನು 10 ಸಾವಿರಕ್ಕೆ ಹೆಚ್ಚಿಸಲಾಗಿತ್ತು. ನಂತರ 2011ರಲ್ಲಿ 20ಸಾವಿರಕ್ಕೆ ಏರಿಸಲಾಗಿತ್ತು. ಮೂರು ವರ್ಷಗಳ ನಂತರ ಈ ಮೂಲ ವೇತನ 25 ಸಾವಿರಕ್ಕೆ ಹೆಚ್ಚಳವಾಗಿತ್ತು. ಈ ಬಾರಿಯ ಬಜೆಟ್ ಪೂರ್ವ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಿದ ಮುಖ್ಯಮಂತ್ರಿಗಳು ವೇತನ ಹೆಚ್ಚಳಕ್ಕೆ ಅಸ್ತು ಎಂದಿದ್ದರು.

ಮುಖ್ಯಮಂತ್ರಿಗಳ ವೇತನ 50 ಸಾವಿರ ರುಪಾಯಿ

ಮುಖ್ಯಮಂತ್ರಿಗಳ ವೇತನ 50 ಸಾವಿರ ರುಪಾಯಿ

ಮುಖ್ಯಮಂತ್ರಿಗಳ ವೇತನ 30 ಸಾವಿರದಿಂದ 50 ಸಾವಿರಕ್ಕೆ ಏರಿಕೆಯಾಗಿದೆ. ಇದು ಕೇವಲ ಮಾಸಿಕ ವೇತನ ಮಾತ್ರ ಭತ್ಯೆಗಳು ಪ್ರತ್ಯೇಕವಾಗಿದೆ.
* ಆತಿಥ್ಯ ಭತ್ಯೆ 1.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
* ಮನೆ ಬಾಡಿಗೆ 40 ರಿಂದ 80 ಸಾವಿರಕ್ಕೆ ಹೆಚ್ಚಳ
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‌ಗೆ ಏರಿಕೆ

ಸಿಗದ ಸಚಿವ ಸ್ಥಾನ, ಒಳಗೊಳಗೆ ಅತೃಪ್ತಿ: ಮುಂದೆ ಮಂತ್ರಿ ಆಗ್ತೀನಿ ಎಂದ ಎಂಟಿಬಿಸಿಗದ ಸಚಿವ ಸ್ಥಾನ, ಒಳಗೊಳಗೆ ಅತೃಪ್ತಿ: ಮುಂದೆ ಮಂತ್ರಿ ಆಗ್ತೀನಿ ಎಂದ ಎಂಟಿಬಿ

ಸಂಪುಟ ದರ್ಜೆ ಸಚಿವರ ವೇತನ

ಸಂಪುಟ ದರ್ಜೆ ಸಚಿವರ ವೇತನ

ಸಂಪುಟ ದರ್ಜೆ ಸಚಿವರ ವೇತನ 25 ರಿಂದ 40 ಸಾವಿರಕ್ಕೆ ಏರಿಕೆಯಾಗಿದೆ.
ಉಳಿದಂತೆ
* ಆತಿಥ್ಯ ಭತ್ಯೆ 1.50 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
* ಮನೆ ಬಾಡಿಗೆ 40 ರಿಂದ 80 ಸಾವಿರಕ್ಕೆ ಹೆಚ್ಚಳ
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‌ಗೆ ಏರಿಕೆ

ರಾಜ್ಯ ಸಚಿವರ ವೇತನವೂ ಏರಿಕೆ

ರಾಜ್ಯ ಸಚಿವರ ವೇತನವೂ ಏರಿಕೆ

ಸಂಪುಟ ದರ್ಜೆ ಸಚಿವರ ಜೊತೆ ರಾಜ್ಯ ಸಚಿವರ ವೇತನವೂ ಏರಿಕೆ ಯಾಗಿತ್ತು. ಸಚಿವರ ಮಾಸಿಕ ವೇತನ 15 ರಿಂದ 35 ಸಾವಿರಕ್ಕೆ ಹೆಚ್ಚಳವಾಗಿತ್ತು.
ಉಳಿದಂತೆ
* ಆತಿಥ್ಯ ಭತ್ಯೆ 80 ಸಾವಿರದಿಂದ 2 ಲಕ್ಷಕ್ಕೆ ಏರಿಕೆ
* ಮನೆ ಬಾಡಿಗೆ 40 ರಿಂದ 80 ಸಾವಿರಕ್ಕೆ ಏರಿಕೆ
* ಮನೆ ನಿರ್ವಹಣೆಗೆ 10 ಸಾವಿರದಿಂದ 20 ಸಾವಿರ ರೂ.
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್ ಗೆ ಏರಿಕೆ

ಸಂಪುಟ ವಿಸ್ತರಣೆ ಹೈಲೇಟ್ಸ್, 8 ಮಂದಿಗೆ ಮೊದಲ ಅನುಭವ!ಸಂಪುಟ ವಿಸ್ತರಣೆ ಹೈಲೇಟ್ಸ್, 8 ಮಂದಿಗೆ ಮೊದಲ ಅನುಭವ!

ಶಾಸಕರ ಸಂಬಳ ಎಷ್ಟು?

ಶಾಸಕರ ಸಂಬಳ ಎಷ್ಟು?

ಶಾಸಕರ ಸಂಬಳ 20 ಸಾವಿರದಿಂದ 25 ಸಾವಿರಕ್ಕೆ ಏರಿಕೆಯಾಗಿದೆ. ಉಳಿದಂತೆ
* ಕ್ಷೇತ್ರದ ಪ್ರಯಾಣ ಭತ್ಯೆ 25 ಸಾವಿರದಿಂದ 40 ಸಾವಿರಕ್ಕೆ ಏರಿಕೆ
* ದೂರವಾಣಿ ವೆಚ್ಚ 15 ಸಾವಿರದಿಂದ 20 ಸಾವಿರಕ್ಕೆ ಏರಿಕೆ
* ಕ್ಷೇತ್ರ ಭತ್ಯೆ 15 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಳ
* ಪ್ರಯಾಣ ಭತ್ಯೆ ಪ್ರತಿ ಕಿ.ಮೀ 20 ರೂ.ನಿಂದ 25 ರೂ.ಗೆ ಹೆಚ್ಚಳ
* ಹೊರ ರಾಜ್ಯ ಭತ್ಯೆ 1,500 ರೂ ನಿಂದ 2 ಸಾವಿರಕ್ಕೆ ಏರಿಕೆ [ಒಟ್ಟು ಶಾಸಕರಿಗೆ ಮಾಸಿಕ 1.25 ಲಕ್ಷ ರೂ.ದೊರೆಯಲಿದೆ]

ವಿರೋಧ ಪಕ್ಷದ ನಾಯಕರ ವೇತನ

ವಿರೋಧ ಪಕ್ಷದ ನಾಯಕರ ವೇತನ

ವಿರೋಧ ಪಕ್ಷದ ನಾಯಕರ ವೇತನವೂ ಹೆಚ್ಚಳವಾಗಿದೆ.
* ವೇತನ 20 ಸಾವಿರದಿಂದ 40 ಸಾವಿರಕ್ಕೆ ಏರಿಕೆ
* ಆತಿಥ್ಯ ಭತ್ಯೆ 1 ಲಕ್ಷದಿಂದ 2 ಲಕ್ಷಕ್ಕೆ ಏರಿಕೆ
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್‌ಗೆ ಏರಿಕೆ

ಸಭಾಧ್ಯಕ್ಷರು ಮತ್ತು ಉಪ ಸಭಾಪತಿಗಳ ವೇತನ

ಸಭಾಧ್ಯಕ್ಷರು ಮತ್ತು ಉಪ ಸಭಾಪತಿಗಳ ವೇತನ

ಸಭಾಧ್ಯಕ್ಷರು ಮತ್ತು ಉಪ ಸಭಾಪತಿಗಳ ವೇತನ 20 ರಿಂದ 40 ಸಾವಿರಕ್ಕೆ ಹೆಚ್ಚಳವಾಗಿದೆ.
ಉಳಿದಂತೆ
* ಆತಿಥ್ಯ ಭತ್ಯೆ 2 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ
* ಮನೆ ಬಾಡಿಗೆ 40 ಸಾವಿರದಿಂದ 80 ಸಾವಿರಕ್ಕೆ ಹೆಚ್ಚಳ
* ಮನೆ ನಿರ್ವಹಣೆಗೆ 10 ಸಾವಿರದಿಂದ 20 ಸಾವಿರಕ್ಕೆ ಏರಿಕೆ
* ವಾಹನ ಭತ್ಯೆ 750 ಲೀಟರ್‌ನಿಂದ 1000 ಲೀಟರ್ ಗೆ ಏರಿಕೆ

English summary
Karnataka CM BS Yediyurappa inducted 10 MLAs as into his cabinet. Here are the Salary details as per the Karnataka Legislature Salaries, Pensions bill 2015 data.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X