ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೆನಾಡ ಮಡಿಲಲ್ಲಿ ಮಕ್ಕಳ ಸೆಳೆಯುತ್ತಿದೆ ಈ "ರೈಲು ಶಾಲೆ"

By ಉಡುಪಿ ಪ್ರತಿನಿಧಿ
|
Google Oneindia Kannada News

ಪಶ್ಚಿಮ ಘಟ್ಟದ ತಪ್ಪಲಿನ ಜನರಿಗೆ ಹೇಳಿಕೇಳಿ ರೈಲ್ವೆ ಪ್ರಯಾಣ ತುಂಬಾ ಅಪರೂಪ. ಆದರೆ ಈ ಮಕ್ಕಳು ದಿನವೂ ರೈಲಿನಲ್ಲಿ ಕುಳಿತು ಆಟ ಆಡ್ತಾ ಪಾಠ ಕೇಳ್ತಾರೆ. ರೈಲು ಪ್ರಯಾಣದಲ್ಲಿ ಪಾಠ ಕೇಳುವ ಸೌಭಾಗ್ಯ ಯಾರಿಗುಂಟು ಹೇಳಿ?! ಈ ಅಪರೂಪದ ಅವಕಾಶ ಪಡೆದವರು ನಕ್ಸಲ್ ಪೀಡಿತ ಈದು ಗ್ರಾಮದ ಮುಳಿಕಾರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳು.

ಇನ್ನೇನು ಮುಚ್ಚೇಹೋಯ್ತು ಅಂತಿದ್ದ ಶಾಲೆಗೆ ಮರುಜೀವ ಕೊಟ್ಟಿದ್ದು ಕರಾವಳಿ ಭಾಗದ ಯುವ ತರುಣರ ತಂಡ. ಈ ತಂಡದ ಹೆಸರೇ ಮೇಕ್ ಸಮ್ ಒನ್ ಸ್ಮೈಲ್. ಈ ತಂಡದ ದೆಸೆಯಿಂದ ಇಂದು ಸರ್ಕಾರಿ ಶಾಲೆಯೊಂದು ಎಲ್ಲರ ಗಮನ ಸೆಳೆಯುತ್ತಿದೆ. ಇಲ್ಲಿನ ಮಕ್ಕಳು ನಗುನಗುತ್ತಾ ಪಾಠ ಕಲಿಯುತ್ತಿದ್ದಾರೆ.

 ಥೇಟು ರೈಲಿನಂತೇ ಕಾಣುವ ಶಾಲೆ

ಥೇಟು ರೈಲಿನಂತೇ ಕಾಣುವ ಶಾಲೆ

ಥೇಟು ರೈಲನ್ನು ಹೋಲುವ ಈ ಶಾಲೆ ಮಕ್ಕಳನ್ನು‌ ಆಕರ್ಷಿಸುತ್ತಿದೆ. ಮಕ್ಕಳು ನಲಿಯುತ್ತಾ, ಆಡುತ್ತಾ ಅಕ್ಷರ ಕಲಿಯುತ್ತಿದ್ದಾರೆ. ಹೆಂಚಿನ ಹೊದಿಕೆಯಿರುವ ಈ ಶಾಲೆಯನ್ನು ನೋಡಿದರೆ ದೂರದ ಬೆಟ್ಟದ ತಪ್ಪಲಲ್ಲಿ ಹಾದು ಹೋಗುವ ರೈಲನ್ನು ಕಂಡಂತೆ ಭಾಸವಾಗುತ್ತದೆ. ಮಕ್ಕಳೂ ಖುಷಿಖುಷಿಯಿಂದ ಶಾಲೆಗೆ ಬರುತ್ತಿದ್ದಾರೆ. ಈ ಒಂದು ಹೊಸ ಪರಿಕಲ್ಪನೆ ಮಕ್ಕಳಲ್ಲಿ ಶಾಲೆ ಬಗ್ಗೆ ಸಂತೋಷವನ್ನೂ ಮೂಡಿಸಿದೆ.

ಚಿತ್ರದುರ್ಗದಲ್ಲಿ ಬ್ರಿಟಿಷರ ಕಾಲದ ಈ ಶಾಲೆಗೆ ಮರುಜೀವ ಬಂತುಚಿತ್ರದುರ್ಗದಲ್ಲಿ ಬ್ರಿಟಿಷರ ಕಾಲದ ಈ ಶಾಲೆಗೆ ಮರುಜೀವ ಬಂತು

 ಶಾಲೆಗೆ ಹೊಸ ನೋಟ ನೀಡಿದ ತಂಡ

ಶಾಲೆಗೆ ಹೊಸ ನೋಟ ನೀಡಿದ ತಂಡ

ಈ ಶಾಲೆ ಈ ರೀತಿ ಹೊಸ ಲುಕ್ ಪಡೆಯಲು ಕಾರಣಕರ್ತರಾದವರು ಉಡುಪಿ ಮಂಗಳೂರು ಭಾಗದ ಯುವಕರ ತಂಡ. 80 ಮಂದಿ ಸಮಾನ ಮನಸ್ಕರು ಸೇರಿ ತಂಡ ಕಟ್ಟಿದ್ದಾರೆ. ಶಾಲೆ- ಅನಾಥಾಶ್ರಮಗಳಿಗೆ ನೆರವಾಗುವುದು ಈ ತಂಡದ ಉದ್ದೇಶ. ಬಡ ಮಕ್ಕಳಿಗೆ ಹೊಸ ಬಟ್ಟೆ ಕೊಡುವುದು, ಊಟ ಬಡಿಸುವುದು, ಶಾಲೆಗೆ ನೀರಿನ ವ್ಯವಸ್ಥೆ, ಫ್ಯಾನಿನ ವ್ಯವಸ್ಥೆ, ಯೂನಿಫಾರ್ಮ್ ನೀಡುವುದು, ಆವರಣ ಗೋಡೆ ಕಟ್ಟುವುದು ಹೀಗೆ ನಾನಾ ಬಗೆಯ ಸೇವಾಕಾರ್ಯ ನಡೆಸುತ್ತಿದೆ ಈ ತಂಡ.

 ಸಂಚಲನ ಮೂಡಿಸಿದ ಪುಟ್ಟ ಕೆಲಸ

ಸಂಚಲನ ಮೂಡಿಸಿದ ಪುಟ್ಟ ಕೆಲಸ

ರಾಜ್ಯದ ಮೊದಲ ನಕ್ಸಲ್ ಎನ್ ಕೌಂಟರ್ ನಡೆದ ಕಾರ್ಕಳದ ಈದು ಗ್ರಾಮದ ಈ ಶಾಲೆಯಲ್ಲಿ ಈ ತಂಡ ನಡೆಸಿದ ಕಾರ್ಯ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. ಮಕ್ಕಳು, ಪೋಷಕರು ಶಾಲೆ ಕಂಡು ಸಂತಸಗೊಂಡಿದ್ದಾರೆ. ಯಾರಿಗೂ ಬೇಡದೆ, ನಕ್ಸಲರ ಆಶ್ರಯ ತಾಣವಾಗಿದ್ದ ಗ್ರಾಮದಲ್ಲಿ ಈ ಒಂದು ಪುಟ್ಟ ಕೆಲಸ ಹೊಸ ಸಂಚಲನ ಮೂಡಿಸಿದೆ.

ಎರಡೇ ವರ್ಷದಲ್ಲಿ ಕೋಲಾರದ ಈ ಶಾಲೆಯ ಚಿತ್ರಣವನ್ನೇ ಬದಲಿಸಿದ ಶಿಕ್ಷಕರುಎರಡೇ ವರ್ಷದಲ್ಲಿ ಕೋಲಾರದ ಈ ಶಾಲೆಯ ಚಿತ್ರಣವನ್ನೇ ಬದಲಿಸಿದ ಶಿಕ್ಷಕರು

"ಮೇಕ್ ಸಮ್ ಒನ್ ಹ್ಯಾಪಿ" ಪರಿಕಲ್ಪನೆ

ಎಲ್ಲರಲ್ಲೂ ನಗು, ಸಂತಸ ಮೂಡಿಸಬೇಕು, ಅಗತ್ಯವಿದ್ದವರಿಗೆ ನೆರವಾಗಬೇಕು ಎನ್ನುವ ಉದ್ದೇಶದಿಂದ ಕೆಲಸ ಮಾಡುತ್ತಿರುವ ತಂಡ ಮೇಕ್ ಸಮ್ ಒನ್ ಹ್ಯಾಪಿ. ಇದೇ ನಿಟ್ಟಿನಲ್ಲಿ ಶಿಥಿಲಗೊಂಡಿದ್ದ, ಹಳತಾದಂತೆ ಕಾಣುತ್ತಿದ್ದ ಶಾಲೆಗೆ ಈ ತಂಡ ಚಲಿಸುವ ರೈಲಿನಂತೆ ಬಣ್ಣ ಬಳಿದಿದೆ. ಶಾಲೆಯ ಬಣ್ಣ ಬದಲಾದ ನಂತರ ಇಲ್ಲಿಗೆ ಬರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಮುಂದಿನ ವರ್ಷ ಇನ್ನೂ ಹತ್ತು ಮಕ್ಕಳು ಈ ಶಾಲೆಗೆ ಸೇರಲಿದ್ದಾರೆ. ಮುಚ್ಚೇ ಹೋಗಬೇಕಾಗಿದ್ದ ಶಾಲೆಗೆ ಈ ಹೊಸ ಬಣ್ಣ ಮರುಜೀವವನ್ನೇ ನೀಡಿದಂತಾಗಿದೆ.

ಬಿಸಾಡಿದ್ದ ರೈಲು ಬೋಗಿಗಳೀಗ ಮೈಸೂರಿನ ಈ ಮಕ್ಕಳ ಸುಂದರ ಪಾಠ ಶಾಲೆಬಿಸಾಡಿದ್ದ ರೈಲು ಬೋಗಿಗಳೀಗ ಮೈಸೂರಿನ ಈ ಮಕ್ಕಳ ಸುಂದರ ಪಾಠ ಶಾಲೆ

English summary
Make some one smile youth group modifie karkala's idu village government school. This group painted whole school with the concept of train
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X