ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಪರಿಚಯ

|
Google Oneindia Kannada News

ಮೂರು ಸಮುದ್ರಗಳಿಂದ ಕೂಡಿರುವ ಭಾರತದ ಕಟ್ಟ ಕಡೆಯ ಪ್ರದೇಶ ಕನ್ಯಾಕುಮಾರಿ. ಇಲ್ಲಿನ ಸೂರ್ಯೋದಯ ಮತ್ತು ಸೂರ್ಯಾಸ್ತಮಾನದ ಅದ್ಭುತ ದೃಶ್ಯ ಸವಿಯಲು ಎಲ್ಲಾ ಜಾತಿ, ಧರ್ಮದವರು ಬಂದು ಸೇರುತ್ತಾರೆ.

ಹಳೆಯ ತಿರುವಾಂಕೂರು ರಾಜ್ಯದ ದಕ್ಷಿಣದಲ್ಲಿರುವ ಚಿಕ್ಕ ಹಳ್ಳಿ ಇದು. ಮಹಾವಿಷ್ಣು, ಪರುಶರಾಮನಿಗೂ ಈ ಪುಣ್ಯ ಕ್ಷೇತ್ರಕ್ಕೂ ಅಪಾರವಾದ ನಂಟಿದೆ. ಈಗ ಕನ್ಯಾಕುಮಾರಿ ತಮಿಳುನಾಡು ರಾಜ್ಯದ ಒಂದು ಲೋಕಸಭಾ ಕ್ಷೇತ್ರವಾಗಿದೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ : ಯಾರ ಬಾಯಿಗೆ ಕುಂದಾ ಕರದಂಟು?ಬೆಳಗಾವಿ ಲೋಕಸಭಾ ಕ್ಷೇತ್ರದ ಪರಿಚಯ : ಯಾರ ಬಾಯಿಗೆ ಕುಂದಾ ಕರದಂಟು?

ಪೂರ್ವಕ್ಕೆ ಬಂಗಾಳಕೊಲ್ಲಿ, ಪಶ್ಚಿಮಕ್ಕೆ ಹಿಂದೂ ಮಹಾಸಾಗರ, ಉತ್ತರಕ್ಕೆ ಅರೇಬಿಯಾ ಸಮುದ್ರ ಇಲ್ಲಿನ ಪ್ರಮುಖ ಆಕರ್ಷಣೆ. ಮಹಾತ್ಮ ಗಾಂಧೀಜಿಯವರ ಅಸ್ಥಿಯನ್ನು ಇಲ್ಲಿ ಸಿಂಚನ ಮಾಡಲಾಗಿದ್ದು, ಅದರ ನೆನೆಪಿಗಾಗಿ ಗಾಂಧಿ ಮಂಟಪ ನಿರ್ಮಾಣ ಮಾಡಲಾಗಿದೆ.

Kanyakumari lok sabha constituency profile

ಕನ್ಯಾಕುಮಾರಿಯಿಂದ ಸುಮಾರು ಅರ್ಧ ಕಿ.ಮೀ. ಸಮುದ್ರದ ಮಧ್ಯೆ ಮೂರು ಸಮುದ್ರಗಳ ಸಂಗಮ ಸ್ಥಳದಲ್ಲಿ ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ ಇದೆ. ಸುತ್ತಲೂ ಸಮುದ್ರದಿಂದ ಆವೃತವಾಗಿರುವ ಈ ಜಾಗ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ.

ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು? ಬೆಂಗಳೂರು ಉತ್ತರ ಕ್ಷೇತ್ರಕ್ಕೆ ಉತ್ತರಾಧಿಕಾರಿ ಯಾರು?

ರಾಜಕೀಯವಾಗಿ ಬಿಜೆಪಿ ವಶದಲ್ಲಿರುವ ಲೋಕಸಭಾ ಕ್ಷೇತ್ರವಿದು. ಹಾಲಿ ಸಂಸದರು ಪೊನ್ ರಾಧಾಕೃಷ್ಣನ್. 2008 ರಲ್ಲಿ ಕನ್ಯಾಕುಮಾರಿ, ತಿರುಚೆಂಡೂರ್ ವಿಧಾನಸಭಾ ಕ್ಷೇತ್ರಗಳನ್ನು ಸೇರಿಸಿ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರವನ್ನು ರಚನೆ ಮಾಡಲಾಯಿತು.

Kanyakumari lok sabha constituency profile

ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದಲ್ಲಿ 18,70,374 ಜನಸಂಖ್ಯೆ ಇದೆ. ಇವರಲ್ಲಿ ಶೇ17.67ರಷ್ಟು ಜನರು ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿದ್ದಾರೆ. ಶೇ 82.33ರಷ್ಟು ಜನರು ನಗರ ಪ್ರದೇಶದಲ್ಲಿದ್ದಾರೆ. ಶೇ3.97ರಷ್ಟು ಎಸ್‌ಸಿ, ಶೇ 0.39ರಷ್ಟು ಎಸ್‌ಸಿ ಸಮುದಾಯದವರು ಇದ್ದಾರೆ. ಶೇ 51ರಷ್ಟು ಹಿಂದೂಗಳು, ಶೇ 44ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಉಳಿದಂತೆ ಮುಸ್ಲಿಂ, ಬೌದ್ಧರು, ಸಿಖ್ ಇತರ ಸಮುದಾಯದವರು ಇದ್ದಾರೆ.

ರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯ ರಾಯಚೂರು ಲೋಕಸಭಾ ಕ್ಷೇತ್ರದ ಪರಿಚಯ

ತಮಿಳು ಮತ್ತು ಇಂಗ್ಲಿಷ್‌ ಅನ್ನು ಪ್ರಮುಖವಾಗಿ ಮಾತನಾಡಲಾಗುತ್ತದೆ. ಪ್ರತಿಷ್ಠಿತ ವಿದ್ಯಾಸಂಸ್ಥೆಗಳು ಕ್ಷೇತ್ರದಲ್ಲಿವೆ. ರಬ್ಬರ್ ಬೇಸಾಯ, ಮರಗಳ ಪೀಠೋಪಕರ, ಹಣ್ಣುಗಳನ್ನು ಬೆಳೆಯುವುದು ಜನರ ಉದ್ಯೋಗ. ಸಣ್ಣ ಪ್ರಮಾಣದ ಕಬ್ಬಿಣ ಮತ್ತು ರಾಸಾಯನಿಕಗಳ ಉತ್ಪಾದನಾ ಕಾರ್ಖನೆಗಳನ್ನು ಇಲ್ಲಿ ಕಾಣಬಹುದಾಗಿದೆ.

ಈ ಕ್ಷೇತ್ರ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. 2014ರ ಚುನಾವಣೆ ಬಳಿಕ ಬಿಜೆಪಿ ವಶಕ್ಕೆ ಬಂದಿದೆ. ಸಂಸದರಾಗಿ ಪೊನ್ ರಾಧಾಕೃಷ್ಣನ್ ಸಕ್ರಿಯರಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿ ಹಣಕಾಸು ಮತ್ತು ಬಂದರು ಖಾತೆ ರಾಜ್ಯ ಸಚಿವರಾಗಿದ್ದಾರೆ.

Kanyakumari lok sabha constituency profile

ಕ್ಷೇತ್ರದ ಒಟ್ಟು ಮತದಾರರು 14,67,796. ಇವರಲ್ಲಿ 7,43,378 ಪುರುಷರು, 7,24,418 ಮಹಿಳೆಯರಿದ್ದಾರೆ. 2014ರ ಲೋಕಸಭಾ ಚುನಾವಣೆಯಲ್ಲಿ 9,90,742 ಜನರು ಮತದಾನ ಮಾಡಿದ್ದರು. ಶೇ 68ರಷ್ಟು ಮತದಾನವಾಗಿತ್ತು.

Kanyakumari lok sabha constituency profile

ಚಿಕ್ಕೋಡಿಯಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು, ಸಮಸ್ಯೆಗಳು ನೂರಾರು ಚಿಕ್ಕೋಡಿಯಲ್ಲಿ ಪ್ರತ್ಯೇಕ ಜಿಲ್ಲೆಯ ಕೂಗು, ಸಮಸ್ಯೆಗಳು ನೂರಾರು

ಹಿಂದೆ ಎನ್‌ಡಿಎ ಸರ್ಕಾರದಲ್ಲಿ ಅವರು ರಾಜ್ಯ ರಸ್ತೆ ಮತ್ತು ಹೆದ್ದಾರಿ ಇಲಾಖೆಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಯುವಜನ ಸೇವೆ, ವಸತಿ ಖಾತೆಯ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.

English summary
Kanyakumari Lok Sabha constituency profile. This is the one of the 39 Lok Sabha constituencies in Tamil Nadu. It was formed in 2008.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X