ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರ್ಕಾರದ ಇ ಬುಕ್ ಯೋಜನೆ ವಿರುದ್ಧ ಪ್ರಕಾಶಕರು ಕಿಡಿಕಾರಿದ್ದೇಕೆ?

|
Google Oneindia Kannada News

ಮುದ್ರಿತ ಪುಸ್ತಕಗಳಿಗೆ ಸಿಗಲಿರುವ ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಅನುದಾನವನ್ನು ಈ ಬಾರಿ ಇ ಬುಕ್ಸ್ ಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನೀಡಲು ಮುಂದಾಗಿರುವುದು ಪ್ರಕಾಶಕರ ಕೆಣ್ಣು ಕೆಂಪಾಗಲು ಕಾರಣವಾಗಿದೆ. ಡಿಜಿಟಲೀಕರಣ ಮತ್ತು ಇ- ಬುಕ್‌ಗಾಗಿ ಬೆಂಗಳೂರಿನ ಪ್ರತಿ ವಲಯಕ್ಕೆ ತಲಾ 2 ಕೋಟಿ ರು ಮೀಸಲಿಡಲು ತೀರ್ಮಾನಿಸಲಾಗಿದ್ದು, ಬೆಂಗಳೂರಿನ 5 ವಲಯಗಳಿಗೆ 10 ಕೋಟಿ ರು ಅನುದಾನ ಸಿಗಲಿದೆ. ಆದರೆ, ಮುದ್ರಿತ ಪುಸ್ತಕಕ್ಕೆ ಕಡಿಮೆ ಅನುದಾನ ಸಿಗಲಿದೆ.

ಕನ್ನಡಕ್ಕೆ ಇ-ಬುಕ್ಸ್ ಏಕೆ ಬೇಕು?: ಮೈಲ್ಯಾಂಗ್ ಸಿಇಒ ಅಭಿಪ್ರಾಯಕನ್ನಡಕ್ಕೆ ಇ-ಬುಕ್ಸ್ ಏಕೆ ಬೇಕು?: ಮೈಲ್ಯಾಂಗ್ ಸಿಇಒ ಅಭಿಪ್ರಾಯ

ಇ ಪುಸ್ತಕ ಪ್ರಕಟಣೆಗೆ ಕರ್ನಾಟಕದ ಪುಸ್ತಕ ಪ್ರಕಾಶಕರ ವಲಯದಿಂದ ಭಾರಿ ಪ್ರತಿರೋಧ ಎದುರಾಗಿದೆ. ಇತ್ತೀಚೆಗೆ ಸಭೆ ಸೇರಿದ್ದ ಹಿರಿಯ-ಕಿರಿಯ ಪ್ರಕಾಶಕರು ಪುಸ್ತಕೋದ್ಯಮದ ಇತಿ ಮಿತಿ, ಬದಲಾವಣೆ ಸಾಧ್ಯತೆ, ಇ ಬುಕ್ಸ್ ಯೋಜನೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಇಷ್ಟಕ್ಕೂ ಇ ಬುಕ್ ಯೋಜನೆಗೆ ಪ್ರಕಾಶಕರು ಹೆದರಿದ್ದಾರೆಯೇ? ಅಥವಾ ಯೋಜನೆಗೆ ಸಿಗುತ್ತಿರುವ ಅನುದಾನ ತಾರತಮ್ಯಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆಯೇ? ಇ ಬುಕ್ ಓದಲು ಕನ್ನಡಿಗರು ಇನ್ನೂ ಸಿದ್ಧರಿಲ್ಲ ಎನ್ನಲು ಕಾರಣವೇನು? ಪುಸ್ತಕ ಪ್ರಕಾಶನದಲ್ಲಿ ಯಾವುದೇ ಬದಲಾವಣೆ ಸಾಧ್ಯತೆ ಇಲ್ಲವೇ? ಎಂಬೆಲ್ಲ ಪ್ರಶ್ನೆಗಳು ಮೂಡುತ್ತವೆ.

ಇ ಬುಕ್ಸ್ ಗೆ ಹೆಚ್ಚಿನ ಮೊತ್ತದ ಅನುದಾನ

ಇ ಬುಕ್ಸ್ ಗೆ ಹೆಚ್ಚಿನ ಮೊತ್ತದ ಅನುದಾನ

ಮುದ್ರಿತ ಪುಸ್ತಕಗಳಿಗೆ ಸಿಗಲಿರುವ ಅನುದಾನಕ್ಕಿಂತ ಹೆಚ್ಚಿನ ಮೊತ್ತದ ಅನುದಾನವನ್ನು ಈ ಬಾರಿ ಇ ಬುಕ್ಸ್ ಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನೀಡಲು ಮುಂದಾಗಿರುವುದು, ಅದರಲ್ಲೂ ಯಾವುದೇ ಟೆಂಡರ್ ಇಲ್ಲದೇ ಅಕ್ರಮವಾಗಿ ಮಿಂಟ್ ಎಂಬ ಸಂಸ್ಥೆಯೊಂದಕ್ಕೆ ಯೋಜನೆ ನೀಡಿರುವುದು ಪ್ರಕಾಶಕರ ಕೆಣ್ಣು ಕೆಂಪಾಗಲು ಕಾರಣವಾಗಿದೆ.

ಬಡವಿದ್ಯಾರ್ಥಿಗಳಿಗೆ 1 ಲಕ್ಷ ಉಚಿತ ನೋಟ್ ಬುಕ್ ವಿತರಣೆ: ಸುರೇಶ್ ಕುಮಾರ್ಬಡವಿದ್ಯಾರ್ಥಿಗಳಿಗೆ 1 ಲಕ್ಷ ಉಚಿತ ನೋಟ್ ಬುಕ್ ವಿತರಣೆ: ಸುರೇಶ್ ಕುಮಾರ್

ಪ್ರತಿ ವಲಯಕ್ಕೆ ತಲಾ 2 ಕೋಟಿ ರು ಮೀಸಲು

ಪ್ರತಿ ವಲಯಕ್ಕೆ ತಲಾ 2 ಕೋಟಿ ರು ಮೀಸಲು

ಡಿಜಿಟಲೀಕರಣ ಮತ್ತು ಇ- ಬುಕ್‌ಗಾಗಿ ಬೆಂಗಳೂರಿನ ಪ್ರತಿ ವಲಯಕ್ಕೆ ತಲಾ 2 ಕೋಟಿ ರು ಮೀಸಲಿಡಲು ತೀರ್ಮಾನಿಸಲಾಗಿದ್ದು, ಬೆಂಗಳೂರಿನ 5 ವಲಯಗಳಿಗೆ 10 ಕೋಟಿ ರು ಅನುದಾನ ಸಿಗಲಿದೆ. ಆದರೆ, ಮುದ್ರಿತ ಪುಸ್ತಕಕ್ಕೆ ಕಡಿಮೆ ಅನುದಾನ ಸಿಗಲಿದೆ.

ಈ ಮುಂಚೆ ಮುದ್ರಿತ ಪುಸ್ತಕಗಳ ಖರೀದಿಗೆ ಶೇ 60ರಷ್ಟು ಹಣ ನೀಡಲಾಗುತ್ತಿತ್ತು. ಈಗ ಶೇ 15ಕ್ಕೆ ಇಳಿಸಲಾಗಿದೆ. ಇ-ಬುಕ್‌ಗಳ ತಯಾರಿಕೆಗಾಗಿ ಶೇ 35 ರಷ್ಟೂ ಅನುದಾನ ನೀಡಲಾಗುತ್ತಿದೆ ಈ ವ್ಯತ್ಯಾಸ ಏಕೆ ಎಂದು ಪ್ರಕಾಶಕರು ಪ್ರಶ್ನಿಸಿದ್ದಾರೆ.

ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌

ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌

''ಇಂದಲ್ಲ, ನಾಳೆ ಡಿಜಿಟಲೀಕರಣ ವ್ಯವಸ್ಥೆಗೆ ತೆರೆದುಕೊಳ್ಳಲೇಬೇಕು. ಎಲ್ಲ ಪುಸ್ತಕಗಳನ್ನು ಡಿಜಿಟಲೀಕರಣ ಮಾಡುವುದಿಲ್ಲ. ಕೆಲವು ಕಡೆಗಳಲ್ಲಿ ಪುಸ್ತಕ ಶೇಖರಣೆ, ದಾಸ್ತಾನು ಸಮಸ್ಯೆ ಆಗುತ್ತಿದೆ. ಕಣಜ, ಕುವೆಂಪು ಭಾಷಾ ಭಾರತಿ, ಪುಸ್ತಕ ಪ್ರಾಧಿಕಾರ, ಗ್ರಂಥಾಲಯ ಇಲಾಖೆ... ಹೀಗೆ ಹಲವು ಇಲಾಖೆಗಳ ಸಮನ್ವಯದೊಂದಿಗೆ ಡಿಜಿಟಲೀಕರಣ ಕಾರ್ಯ ನಡೆಯಲಿದೆ. ಲೇಖಕರು, ಪ್ರಕಾಶಕರ ಹಿತಕ್ಕೆ ಧಕ್ಕೆಯಾಗುವುದಿಲ್ಲ'' ಎಂದು ಶಿಕ್ಷಣ ಸಚಿವ ಎಸ್‌.ಸುರೇಶ್‌ ಕುಮಾರ್‌ ಭರವಸೆ ನೀಡಿದ್ದಾರೆ.

ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಪ್ರತಿಕ್ರಿಯೆ

ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಪ್ರತಿಕ್ರಿಯೆ

ಅನುದಾನದ ಪ್ರಶ್ನೆ ಅಷ್ಟೇ ಅಲ್ಲ, ಪುಸ್ತಕ ಖರೀದಿ, ಲೇಖಕರ ರಾಯಲ್ಟಿಗೆ ನಿಯಮಗಳಿವೆ. ಇ ಬುಕ್ಸ್ ಯಾವುದೇ ನಿಯಮಗಳಿಲ್ಲ. 10 ಕೋಟಿ ರು ತೆಗೆದಿಟ್ಟಿದ್ದಾರೆ. 2014ರಿಂದ ಪ್ರಕಾಶಕರಿಗೆ ಹಳೆ ಬಾಕಿ ಬಂದಿಲ್ಲ, ಹುಡುಕಿದರೆ 12 ಇ ಬುಕ್ಸ್ ಗಳಿಲ್ಲ. ಸಕ್ಸಸ್ ಆಗಿಲ್ಲ. ಪ್ರಕಾಶಕರು ಸಿದ್ಧರಿಲ್ಲ. ಪ್ರಕಾಶಕರು, ಲೇಖಕರು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು, ಓದುಗರ ಸಮೀಕ್ಷೆಯೂ ಬೇಕು, ಇದು ವಂಚನೆಯ ಪರಮಾವಧಿ, ಮಿಂಟ್ ಸಂಸ್ಥೆ ಹಳೆ ಪುಸ್ತಕಗಳನ್ನು ಪೂರೈಕೆ ಮಾಡುತ್ತಿದ್ದಾರೆ. ಹಳೆ ಡೈರೆಕ್ಟರ್ ಗಳು ಸೇರಿ, ತಮಗೆ ಬೇಕಾದ ಏಜೆಂಟ್ ಗೆ ಕೊಡುತ್ತಿದ್ದಾರೆ ಎಂದಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಹೇಳಿದರು.

ನಾವು ಇ ಬುಕ್ಸ್ ವಿರೋಧಿಗಳಲ್ಲ

ನಾವು ಇ ಬುಕ್ಸ್ ವಿರೋಧಿಗಳಲ್ಲ

ಹಾರ್ಡ್ ಕಾಪಿ ಖರೀದಿಗೆ ಲೆಕ್ಕ ಸಿಗುತ್ತೆ, ಇ ಬುಕ್ ಖರೀದಿಗೆ ಲೆಕ್ಕ ಸಿಗಲ್ಲ, ಸಾರ್ವಜನಿಕ ಸದುದ್ದೇಶದ ಯೋಜನೆಯಲ್ಲ, ಸಿಬ್ಬಂದಿ ಇಲ್ಲ, ಗ್ರಂಥಾಲಯದ ಸಿಬ್ಬಂದಿಗೆ ತರಬೇತಿ ಇಲ್ಲ. ಅನೇಕ ಗ್ರಂಥಾಲಯ ಸಿಬ್ಬಂದಿಗೆ ಕಂಪ್ಯೂಟರ್ ಅಕ್ಷರ ಜ್ಞಾನವಿಲ್ಲ.

ಇ ಬುಕ್ಸ್ ವಿರೋಧಿಗಳಲ್ಲ, ಸೂಕ್ತ ತರಬೇತಿ, ಸರಿಯಾದ ವಾತಾವರಣ, ನಿಯಮಗಳು, ಯಾರಿಗೆ ಎಷ್ಟು ಎಂಬುದನ್ನು ರೂಪಿಸಿದರೆ ನಾವು ಬದಲಾವಣೆಗೆ ನಾವು ಸಿದ್ಧವಿದ್ದೇವೆ. ಈಗ ಲೇಖಕರೂ ಸಿದ್ಧರಿಲ್ಲ ಎಂದು ಪ್ರಕಾಶಕರ ಸಂಘದ ಅಧ್ಯಕ್ಷ ಪ್ರಕಾಶ್‌ ಪ್ರತಿಕ್ರಿಯೆ ನೀಡಿದ್ದಾರೆ.

ನಮ್ಮ ಆಶಯವೇನು

ನಮ್ಮ ಆಶಯವೇನು

ಒಟ್ಟಿನಲ್ಲಿ ಕನ್ನಡ ಓದುಗರ ಸಂಖ್ಯೆ ಹೆಚ್ಚಾಗಬೇಕು, ಬದಲಾವಣೆ ಪ್ರಕಾಶಕರು, ಓದುಗರು, ಲೇಖಕರು ಅದಕ್ಕಿಂತ ಹೆಚ್ಚಾಗಿ ಸರ್ಕಾರ ಹಾಗೂ ಇಲಾಖೆಗಳು ಒಗ್ಗಿಕೊಳ್ಳಬೇಕು. ಬುಕ್ ಮಾರಾಟವಾಗದೆ ಕಷ್ಟಪಡುವವರು ಇದ್ದಾರೆ, ಪುಸ್ತಕ ಮಾರಾಟದಿಂದ ಲಾಭ ಗಳಿಸಿದವರು ಇದ್ದಾರೆ. ಡಿಜಿಟಲ್ ಮಾಧ್ಯಮದ ಬದಲಾವಣೆಗೆ ಇವತ್ತಲ್ಲ ನಾಳೆ ರೆಡಿಯಾಗಬೇಕು, ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿ, ವರದಿ ತಯಾರಿಸಬೇಕು, ನಂತರ ಅನುಷ್ಠಾನಗೊಳಿಸಬೇಕು ಎಂಬ ಪರಿಜ್ಞಾನ ಇಲಾಖೆಗೆ ಹೊಳೆಯದಿರುವುದು ವಿಪರ್ಯಾಸ.

English summary
Kannnada Book Publishers fear e-Book scheme by Government body Kannada Library department has broken all rules and regulations. Moreover industry and readers are not prepared for this development.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X