• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕರಾಳ ದಿನಾಚರಣೆಗೆ ಮುಂದಾದ ಮರಾಠಿಗರಿಗೆ ಕನ್ನಡಿಗನ ಖಡಕ್ ಪ್ರಶ್ನೆಗಳು

By ಶಿವಾನಂದ ಗುಂಡಾನವರ
|

ಬಲಾಢ್ಯ ಸಂಪದ್ಭರಿತ ಇತಿಹಾಸದ ಐತಿಹ್ಯವುಳ್ಳ ಕರ್ನಾಟಕ ಇಂದಿನ ಕಾವೇರಿ ನದಿಯಿಂದ ಹಿಡಿದು ಉತ್ತರದ ಗೋದಾವರಿಯವರೆಗೆ ಕನ್ನಡ ಪ್ರದೇಶವಿತ್ತು. ಹರಿದು ಹಂಚಿ ಹೋಗಿದ್ದ ಕನ್ನಡಿಗರು, ಕರುನಾಡು 1956ರಲ್ಲಿ ಉದಯವಾಯಿತು 1973ರಲ್ಲಿ ಕರ್ನಾಟಕ ಎಂಬ ಹೆಸರು ಪಡೆದುಕೊಂಡಿತು.

ಆದರೂ ಕರ್ನಾಟಕ-ಮಹಾರಾಷ್ಟ್ರದ ನಡುವಿನ ತಿಕ್ಕಾಟಕ್ಕೆ ಆಗಾಗ ಕೆಲ ಮರಾಠಿಗರು ಕಿಚ್ಚು ಹಚ್ಚುತ್ತಿರುತ್ತಾರೆ. ಈಗ ಕರುನಾಡ ಹಬ್ಬದ ದಿನ ಬೆಳಗಾವಿಯಲ್ಲಿ ಮರಾಠರು ಮಾಡುವ ಕರಾಳ ದಿನಾಚರಣೆಗೆ ಮುಂದಾಗಿರುವುದು ಒಂದು ಥರ ತೀರ ಅಸಂಬದ್ಧ ಎನಿಸುತ್ತದೆ.

ಭಾಷಾ ಕಲಹದ ನಡುವೆ ಸೊರಗುತ್ತಿರುವ ಬೆಳಗಾವಿ

ಈ ನಡುವೆ ನ.1ರಂದು ರಾಜ್ಯೋತ್ಸವ ಆಚರಣೆ ವೇಳೆ ಭದ್ರತೆ ಕೊಡಿ ಎಂದು ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ನ್ಯಾಯಪೀಠವು ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸುವವರಿಗೆ ಭದ್ರತೆ ಒದಗಿಸುವಂತೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ನಿರ್ದೇಶಿಸಿದೆ.

ಕನ್ನಡ ಕಲಿತು ಕುಮಾರವ್ಯಾಸ ಭಾರತ ಮರಾಠಿಗೆ ಅನುವಾದಿಸಿದ ಪ್ರೊಫೆಸರ್

ಆ ಕರಾಳ ದಿನಾಚರಣೆ ಮಾಡುವ ಮರಾಠಿ ಭಾಷಿಕರಿಗೆ ನನ್ನದೊಂದಿಷ್ಟು ಪ್ರಶ್ನೆಗಳಿವೆ-ಜೊತೆಗೆ ಉತ್ತರವನ್ನು ಕೊಟ್ಟಿದ್ದೇನೆ ಇವೆಲ್ಲವನ್ನ ಪರಿಗಣಿಸಿ ಮರಾಠರು ಕರಾಳ ದಿನಾಚರಣೆ ಮಾಡಲಿ ಎಂದು ಶಿವಾನಂದ ಗುಂಡಾನವರ ಅವರು 10 ಪ್ರಶ್ನೆಗಳನ್ನು ಹಾಕಿದ್ದಾರೆ. ಕನ್ನಡಿಗರು ಮರಾಠಿಗರ ಬಾಂಧವ್ಯ, ಉಭಯ

ಪುರಾಣ ಇತಿಹಾಸಗಳಲ್ಲಿ ಕನ್ನಡ ದೇಶದೋಳ್

ಪುರಾಣ ಇತಿಹಾಸಗಳಲ್ಲಿ ಕನ್ನಡ ದೇಶದೋಳ್

ಕನ್ನಡ ಕಟ್ಟಾಳುಗಳ ಹೋರಾಟದ ಫಲವಾಗಿ ಕರ್ನಾಟಕವೆನ್ನುವುದು ಮೂರ್ತು ಸ್ವರೂಪ ಪಡೆದು 1956ನೆಯ ನವೆಂಬರ್ ಒಂದರಂದು ಹರಿದು ಹಂಚಿಹೋಗಿದ್ದ ಕನ್ನಡಿಗರು ಮತ್ತು ಕರುನಾಡು ಒಂದಾಯಿತು.

ಕರ್ನಾಟಕವೆಂಬ ಪ್ರದೇಶದ ಹೆಸರು ಪುರಾಣದ ಮಹಾಭಾರತದ ಭೀಷ್ಮಪರ್ವದಲ್ಲಿ ಕರ್ನಾಟಕದವರು ಎಂಬ ಪದ ಬಳಕೆ, ಸ್ಕಂದಪುರಾಣ, ವಿಷ್ಣುಪುರಾಣ, ಪದ್ಮಪುರಾಣದಲ್ಲಿ ಕರ್ನಾಟಕ ಕನ್ನಡಿಗರ ಪ್ರಸ್ತಾಪ, ಪ್ರಾಚೀನ ತಮಿಳು ಕೃತಿ ಶಿಲಪ್ಪಾದಿಗಾರನ್ ಹಿಡಿದು ಗ್ರೀಕನ ನಗೆಯಾಟದಲ್ಲಿರುವ ಕನ್ನಡ (ಶಂಬಾ ಸಂಪುಟದಿಂದ ಯಶವಂತಪುರದಲ್ಲಿ ಕನ್ನಡ ನಾಣ್ಯಗಳು ಸಿಕ್ಕ ಉಲ್ಲೇಖವಿದೆ ಇದು ಕ್ರಿಶ 1- ಶತಮಾನದಲ್ಲಿ ಗ್ರೀಕರ ಜೊತೆ ವ್ಯಪಾರ ಸಂಬಂಧ ನಮಗಿತ್ತು ಹೀಗಾಗಿ ಕನ್ನಡ ಪದಗಳು ಗ್ರೀಕ್ ಗೆ ಹೋದವು) ಕ್ರಿಪೂ 250ರ ಅಶೋಕನ ಶಾಸನದಲ್ಲಿ ಕನ್ನಡಪದಗಳು, ಕ್ರಿಪೂ ಶಾತವಾಹನರ ಹಾಲ ಮತ್ತು ಪುಲಮಾಯಿ ಕನ್ನಡಿಗರು, ಕ್ರಿಪೂ 300 ಶತಮಾನದ ಹಿಂದಿನದ ಕದಂಬರ ಹಲ್ಮಿಡಿ ಶಾಸನ, ಕರ್ನಾಟಕಬಲಂ(ಚಾಲುಕ್ಯ ಸೈನ್ಯದ ಹೆಸರು), ವಡ್ಡಾರಾಧನೆ(೬ನೇ ಶತಮಾನದಲ್ಲಿ ಶಿವಕೋಟ್ಯಾಚಾರ್ಯರಿಂದ ರಚಿತವಾದ ಮೊದಲ ಸಿಕ್ಕ ಕನ್ನಡದ ಗದ್ಯ ಕೃತಿ), ಕವಿರಾಜಮಾರ್ಗ(ಕ್ರಿಶ 8ರ ಅಮೋಘವರ್ಷ-ಶ್ರೀವಿಜಯ ರಚಿಸಿರುವ ಮೊದಲ ಸಿಕ್ಕ ಕನ್ನಡದ ಕಾವ್ಯ ಕೃತಿ) ಹೀಗೆ ಕನ್ನಡವನ್ನ ಹುಡುಕುತ್ತಾ ಹೋದರೆ 2300 ವರ್ಷಗಳ ಹಿಂದಿಕ್ಕೆ(ಇತಿಹಾಸದ ಮೂಲಾಧಾರಗಳಿಂದ) ಕನ್ನಡ ಕರ್ನಾಟಕದ ಇತಿಹಾಸ ಹೋಗುತ್ತದೆ.

ಇಂತಹ ಬಲಾಢ್ಯ ಸಂಪದ್ಭರಿತ ಇತಿಹಾಸದ ಐತಿಹ್ಯವುಳ್ಳ ಕರ್ನಾಟಕ ಇಂದಿನ ಕಾವೇರಿ ನದಿಯಿಂದ ಹಿಡಿದು ಉತ್ತರದ ಗೋದಾವರಿಯವರೆಗೆ ಕನ್ನಡ ಪ್ರದೇಶವಿತ್ತು.

ಬೆಳಗಾವಿಯಲ್ಲಿ ಠುಸ್ ಆದ ನಾಡದ್ರೋಹಿ ಎಂಇಎಸ್ ಕರಾಳ ದಿನಾಚರಣೆ

ಹೀಗೆಂದು...ಕವಿರಾಜಮಾರ್ಗದಲಿ

ಹೀಗೆಂದು...ಕವಿರಾಜಮಾರ್ಗದಲಿ

"ಕಾವೇರಿಯಿಂದಮಾ ಗೋದಾವರಮಿರ್ದ ನಾಡದಾ ಕನ್ನಡದೊಳ್"

ಇನ್ನೂ ಅನೇಕ ದಾಖಲೆಗಳಿಂದ ಇದಷ್ಟು ಪ್ರದೇಶ ಸುಮಾರು 1600 ವರ್ಷಗಳ ಕಾಲ ಈ ಪ್ರದೇಶಗಳಲ್ಲಿ ಕನ್ನಡ ಮತ್ತು ಕನ್ನಡಿಗರೆ ಇದ್ದರು ಎಂದು ಸಾರಿ ಸಾರಿ ಹೇಳುತ್ತೆ!. ದಕ್ಷಿಣದ ಉದಕಮಂಡಲದ ನೆತ್ತಿಯನ್ನಿಡಿದು ಉತ್ತರದ ನಾಸಿಕವರೆಗೂ ಕನ್ನಡತಾಯಿಯ ಹಕ್ಕುದಾರಿಕೆ ಇತ್ತು(ಈಗಲು ಊಟಿ ಅಲ್ಲಿ ಕನ್ನಡ ಉಪ ಭಾಷೆಯ ಬಡಗ ಜನಾಂಗದವರೆ ಬಹುಸಂಖ್ಯಾತರು, ಉತ್ತರದ ಮತ್ತು ಮಧ್ಯಪ್ರದೇಶದ ಗಡಿ ಭಾಗಗಳಲ್ಲಿ ಗೊಂಡ ಗೊಂಡಿ ಮತ್ತು ಹೆಳವಿ ಎನ್ನುವ ಮೂರು ಕನ್ನಡ ಉಪ ಭಾಷೆಗಳಿವೆ), ಮಹಾರಾಷ್ಟ್ರದ ಬಹುಭಾಗ ಕನ್ನಡಿಗರದೆ ಆಗಿತ್ತು ಜೊತೆಗೆ ಶಂಬಾ ಜೋಶಿ ಮತ್ತು ಮಾಹಾರಾಷ್ಟ್ರದ ಕೆಲ ವಿದ್ವಾಂಸರು ಹೇಳುವ ಪ್ರಕಾರ ಮಹಾರಾಷ್ಟ್ರದ 70% ಜನರೆಲ್ಲರೂ ಕನ್ನಡಿಗರೆ ಆಗಿದ್ದರು ಎಂದು ಹೇಳಿರುತ್ತಾರೆ.

ಹೀಗೆ ಅನೇಕ ಮೂಲಾಧಾರಗಳು ಕರ್ನಾಟಕ-ಮಹಾರಾಷ್ಟ್ರದ ಹತ್ತಿರಗಳನ್ನು ತಿಳಿಸಿಕೊಡುತ್ತಿದ್ದರು ಕರುನಾಡ ಹಬ್ಬದ ದಿನ ಬೆಳಗಾವಿಯಲ್ಲಿ ಮರಾಠರು ಮಾಡುವ ಕರಾಳ ದಿನಾಚರಣೆ ಒಂದು ತರಹ ತೀರ ಅಸಂಬದ್ಧ ಎನಿಸುತ್ತದೆ.

ಆ ಕರಾಳ ದಿನಾಚರಣೆ ಮಾಡುವ ಮರಾಠಿ ಭಾಷಿಕರಿಗೆ ನನ್ನದೊಂದಿಷ್ಟು ಪ್ರಶ್ನೆಗಳಿವೆ-ಜೊತೆಗೆ ಉತ್ತರವನ್ನು ಕೊಟ್ಟಿದ್ದೇನೆ ಇವೆಲ್ಲವನ್ನು ಪರಿಗಣಿಸಿ ಮರಾಠರು ಕರಾಳ ದಿನಾಚರಣೆ ಮಾಡಲಿ!

ಶತಮಾನದ ಹಿಂದೆ ಇರುವರೆಲ್ಲರೂ ಕನ್ನಡಿಗರೆ

ಶತಮಾನದ ಹಿಂದೆ ಇರುವರೆಲ್ಲರೂ ಕನ್ನಡಿಗರೆ

1. ಕ್ರಿ.ಶ 14 ಶತಮಾನದವರೆಗೂ ಈಗಿನ ಮಹಾರಾಷ್ಟ್ರದ 80% ಭಾಗ ಕನ್ನಡಿಗರದ್ದೆ ಆಗಿತ್ತು ಹೀಗಾಗಿ 14 ಶತಮಾನದ ಹಿಂದಿನಾಚೆಗೆ ಮರಾಠಿಗರ ಯಾವುದೇ ಇತಿಹಾಸವನ್ನ ಕನ್ನಡಿಗರ ಇತಿಹಾಸವೆಂದೆ ಇತಿಹಾಸಕಾರರು ಗುರುತಿಸಿದ್ದಾರೆ. ಹೀಗಾಗಿ 14 ಶತಮಾನದ ಹಿಂದೆ ಇರುವರೆಲ್ಲರೂ ಕನ್ನಡಿಗರೆ.

2. 12ನೇ ಶತಮಾನದಲ್ಲಿ ವಿದರ್ಭದ ವರ್ಹಾಡ ಭಾಷೆ ಮತ್ತು ಕನ್ನಡದ ಭಾಷೆಗಳ ಮಿಶ್ರಣದಿಂದ ಉದ್ಭವವಾದ ಉಪಭಾಷೆ ಮರಾಠಿ, ಮತ್ತು ಆಗಿನ ಕಾಲದಲ್ಲಿ ಮರಾಠಿಗರು ಕನ್ನಡಿಗರೆ ಆಗಿದ್ದರಿಂದ ಕನ್ನಡ ಮಿಶ್ರಿತ ಮರಾಠಿ ಶಾಸನ ಅಲ್ಲಿ ಬರೆಸಲಾಯಿತು. ಮಹಾರಾಷ್ಟ್ರದ ಅಷ್ಟು ಪ್ರದೇಶ ಮತ್ತು ಅಲ್ಲಿರುವ ಜನರೆಲ್ಲ ಕನ್ನಡಿಗರೇ ಆದುದರಿಂದ ಅಲ್ಲಿ ಕನ್ನಡ ಶಾಸನಗಳು ಸಹಜವಾಗೆ ಸಿಕ್ಕಿದ್ದಾವೆ!.

3. ಕನ್ನಡ ದೊರೆಗಳು ಸೇವುಣರು (ಮಹಾರಾಷ್ಟ್ರದ ಇಟ್ಕಲ್ ಶಾಸನ, ಕೇಸೇಗಾಂವ್ ಶಾಸನ, ಜಾಮಗಾಂವ್ ಶಾಸನ, ನೀಲೆಗಾಂವ್ ಶಾಸನ 1217, 1198, 1195, 1192 ಸೇವುಣ ದೊರೆ ಸಿಂಗಣದೊರೆ, ಬಿಲ್ಲಮ ದೇವ, ಜೈತುಗಿ ರಸಜರುಗಳು ಕೆತ್ತಿಸಿದ ಹಲವಾರು(100 ಕ್ಕೂ ಹೆಚ್ಚು) ಕನ್ನಡ ಶಾಸನಗಳು ಸೇವುಣರು ಕನ್ನಡದವರೆ ಎಂದೇ ಇದೆ) ಕೊನೆಯ 100 ವರ್ಷದ ನಾಲ್ಕಾರು ರಾಜರು ಮರಾಠ ಭಾಷೆಗೆ ಸಹಾಯ ನೀಡಿದರು. ಹೀಗಾಗಿ ಅಂದಿನಿಂದ ಸ್ವಲ್ಪ ಪ್ರಮಾಣದಿಂದ ಮರಾಠಿ ಬೆಳವಣಿಗೆ ಶುರುವಾಯಿತು.

ತುಕಾರಾಮ, ತುಕೋಬಾ, ತುಕಪ್ಪಾ

ತುಕಾರಾಮ, ತುಕೋಬಾ, ತುಕಪ್ಪಾ

4. ಅವನನ್ನ ತುಕಾರಾಮ, ತುಕೋಬಾ, ತುಕಪ್ಪಾ ಅಂತ ಇಗಲೂ ಕರೆಯುತ್ತಾರೆ, ತೂಕ ಎನ್ನುವುದು ಕನ್ನಡದ ಪದ ತೂಕಪ್ಪ ಅಂತ ಅವನ ಮೊದಲ ಹೆಸರು ಅವನೇಕೆ ತುಕಾರಾಮನೆಂದು ಬದಲಾದ ಎಂದು ಚೆನ್ನಬಸವ ಪುರಾಣದಲ್ಲಿ ಸ್ಪಷ್ಟವಾಗಿ ಕೊಟ್ಟಿದ್ದಾರೆ, ಕುಲದಿಂದ ವಾಣಿ ಅಂದರೆ ಬಣಜಿಗ (ಕುಣ್ಬಿ) ಆಗಿದ್ದ ಈತ ಆಗಿನ ಕಾಲಮಾನಕ್ಕೆ ಒಬ್ಬ ಗರ್ಭಿಣಿಯಾದ ವಿಧವೆಯೊಬ್ಬಳ ಶಿಕ್ಷೆಯನ್ನು ತಾನು ಅನುಭವಿಸುತ್ತಾನೆ ಆಗ ಜನರು ನೀನಾರೆಂದು ಕೇಳಿದಾಗ ಲಿಂಗವಂತರೊಳುದಿಸಿದವನು ಲಿಂಗಾಯತ ಎಂದು ಹೇಳುವ ಪ್ರಸಂಗ ಹಲವು ಲಾವಣಿಗಳಲ್ಲಿ ಕಂಡು ಬರುತ್ತೆ.

ಮುಂದೆ ಕಾಲದ ನಿಯಮದಂತೆ ಈತ ಪಾಂಡುರಂಗನ(ಕನ್ನಡದ ದೇವರೆ) ಭಕ್ತನಾಗುತ್ತಾನೆ...

ಇದನ್ನ ಚೆನ್ನಬಸವ ಪುರಾಣದಲ್ಲಿ ಹೀಗೆ ಇವನ ಧರ್ಮ ತೊರೆದ ವಿಷಯನ್ನ ಹೇಳಿದ್ದಾರೆ‌...

ಲಿಂಗವಂತರೊಳುದಿಸಿ ಲಿಂಗವ ಧರಿಸಿ ಪಾಂಡು

ರಂಗನಂ ಪೊಗಳುತಿಹ ಸಂತನೆನಿಸಿರ್ದು ಓ

ರ್ವಂಗನೆಯ ಗಂಡನಳಿದುರ್ದ ಗರ್ಭರ್ಬಿನಿಯೆನಿಸಲವಳ ದಂಡವಂ ಕೊಂಡು ತಾಂ

ವಿಂಗಿತನದಿಂದುಳ್ಳಿಗಡ್ಡಿ ಬದನೀಯ ಕಾ

ಯಂಗಳಂ ತಳೆದು ಮೆರೆಯಿಸಿಕೊಂಡನೆಂದುಸಿರ್ವ

ಮಂಗರೆನಿಸಿರುವ ಹರಿದಾಸರಿಂ ಕೇಳೆಂದ ನಗುತಿರುವ ಗುರುವೆ ಶರಣು...||.

ಗಂಡನಿಲ್ಲ###ದ ವಿದವೆಯ

ಕಂಡು ಮಾತಾಡಿದರೆ ದೋಷವೆಂದಿರಲಾ

ಮುಂಡೆಗುರೆ ಮಾಳ್ಪ ಶಿಕ್ಷೆನುರೆದೆ ಕೈಕೊಂಡು ಸತ್ಪುರುಷರೆಬಿಕೊಂಡ

###ರ ಪುರದಿ ತುಕಾರಾಮ ವಾಣಿಯೆನಿಸಿ

ಕೊಂಡಿರ್ದು ವೈಕುಂಠಕ್ಕೆ ಪೋಗಿಯುವನುರೆ

ಕಂಡವರ ಹೇಳುವರವರನುರದೆ ಕೇಳಿ ತಿಳಿಯೆಂಬ ಗುರುವರನೆ ಶರಣು||

ಹಿಗೇ ಒಟ್ಟಾರೆಯಾಗಿ ಕನ್ನಡಿಗನಾಗಿರುವ ಸಂತ ತುಕಾರಾಮ ಲಿಂಗಾಯತನು ಆಗಿರುವನೆಂದು ಈ ಕೃತಿ ತಿಳಿಸಿರುವ ಹೊಸ ಸಂಗತಿಯಾಗಿದೆ.

ವಿಠಲ ಕನ್ನಡ ದೇವತೆ ಪಂಡರಾಪುರ

ವಿಠಲ ಕನ್ನಡ ದೇವತೆ ಪಂಡರಾಪುರ

5. ವಿಠಲ ಕನ್ನಡ ದೇವತೆ ಪಂಡರಾಪುರ ಮೂಲತಃ ಕನ್ನಡ ಪ್ರದೇಶ ಎಂಬ ಮಾತನ್ನು ಸ್ವತಃ ಮರಾಠಿ ವಿದ್ವಾಂಸರೆ ಒಪ್ಪಿಕೊಂಡಿದ್ದಾರೆ.

ಮರಾಠಿ ಸಾಹಿತ್ಯದಲ್ಲಿ ವಿಠಲ ಕನ್ನಡದವನೂ ಎಂಬ ವಿವರ ಹಲವಾರು ಕಡೆ ಬಂದಿದೆ .

ಮಾಹಾ ಸಂತ ಜ್ಙಾನದೇವ ತನ್ನ ಜ್ಙಾನೇಶ್ವರಿಯಲ್ಲಿ 'ಕಾನಡಾ ಹೋ ವಿಠಲ ಕರ್ನಾಟಕು'(ಕನ್ನಡದ ವಿಠಲ ಕರ್ನಾಕದವನು) ಅಂತ ಹೇಳಿದ್ದಾರೆ.

ಪಂಡರಾಪುರದ ಮೂಲ ಹೆಸರು ಪಂಡರಿಗೆ - ಇದು ಕನ್ನಡದ ಹೆಸರು ಅಂತ ಮರಾಠಿಯ ಹೆಸರಾಂತ ಸಂಶೋಧಕ ರಾಮಚಂದ್ರ ಚಿಂತಾಮಣಿ ಢೇರೆ ಹೇಳಿದ್ದಾರೆ ಜೊತೆಗೆ ಪ್ರಸಿದ್ದ ಮರಾಠಿ ಸಂಶೋಧಕ ಚಂದ್ರಕಾಂತ ಪೊಕಳೆ ಅವರ ವಿಠಲ ಒಂದು ಮಾಹಾ ಸಮನ್ವಯ ಎಂಬ ಕೃತಿಯ 153 ರಲ್ಲಿ ಪಂಡರಗೆರೆ ಎಂಬ ಕನ್ನಡ ಹೆಸರು ಮುಂದೆ ಸಂಸ್ಕೃತ ಹೇರಿಕೆಯಿಂದಾಗಿ ಪಂಡರಿಪುರ ಆಗಿದೆ ಎಂದು ಸ್ಪಷ್ಟವಾಗಿ ಮೂಲಾಧಾರದೊಂದಿಗೆ ಹೇಳಿದ್ದಾರೆ.

ಕನ್ನಡ ಸಾಹಿತ್ಯದಲ್ಲಿ ಚೌಡರಸ ಕೃತ ನಳಚಂಪು ಹಾಗೂ ದಶಕುಮಾರದಲ್ಲಿ ವಿಠಲ ವರ್ಣನೆ

"ಶ್ರೀ ಸತಿ ತನ್ನ ಪೇರುರಮನಾವಗಮಪ್ಪಿರಲಂಫ್ರಿಯಂ ಧರಿತ್ರಿ

ಸತಿ ಸಾರ್ದಿರಲ್ ಕದನಮೋಹನ ಕೇಳಿಯನೊಲ್ದು ಸತ್ಯಭಾ

ಮಸತಿ ಪೆರ್ಚಿಸಲ್ ಸೊಬಗವೆತ್ತು ಜಗತ್ಪತಿ ತನ್ನ ಮಾನಸೋ

ಲ್ಲಾಸದಿನೆಲ್ಲರಂ ಪೊರೆಗೆ ಮಂಗಳ ಮೂರ್ತಿಯಭಂಗ ವಿಠಲಂ"

ಹೊಯ್ಸಳರು ಕಟ್ಟಿದ್ದ ಪಂಡರಾಪೂರದ ವಿಠಲನ ದೇಗುಲ :

ಕಾಲಮಾನ : 1159.

ಕಟ್ಟಿಸಿದವನು : ಹೊಯ್ಸಳ ನೃಪತಿ ಸೋಮೆಶ್ವರ (ಶಾಸನದಲ್ಲಿ ಉಲ್ಲೇಕವಾಗಿದೆ).

ಈಗಿನ ವಿಠಲನ ಮೂರ್ತಿ ಕರ್ನಾಟಕ ಸಾಮ್ರಾಜ್ಯ ವಿಜಯನಗರದಿಂದ ಭಾನುದಾಸನೆಂಬ ಸಂತ ಒಯ್ದನೆಂಬ ವಿವರ ಮರಾಠಿ ಸಂತ ಸಾಹಿತ್ಯದಲ್ಲಿ ಸಿಗುತ್ತದೆ.

ಖಂಡೋಬಾ(ಏಳುಕೋಟಿ ಏಳುಕೋಟಿ ಜೈ ಮಲ್ಲಾರ)

ಖಂಡೋಬಾ(ಏಳುಕೋಟಿ ಏಳುಕೋಟಿ ಜೈ ಮಲ್ಲಾರ)

6. ಖಂಡೋಬಾ(ಏಳುಕೋಟಿ ಏಳುಕೋಟಿ ಜೈ ಮಲ್ಲಾರ) ಮಹಾರಾಷ್ಟ್ರದ ಹಲವಾರು ದೇವತೆಗಳು ದೇವಸ್ಥಾನಗಳು ಕನ್ನಡಿಗರದ್ದೇ ಎಂಬುದರಲ್ಲಿ ಎರಡು‌ ಮಾತಿಲ್ಲ ಅಂತ ಮರಾಠಿ ವಿದ್ವಾಂಸರೆ ತಿಳಿಸಿದ್ದಾರೆ, ಈಗಿರುವ ಮಹಾರಾಷ್ಟ್ರದ ಊರುಗಳಾದ ನೇವಾಸೆ, ಜೇಜುರಿ, ಪಾಲಿಪೆರಂಬರನ ಖಂಡೋಬಗೆ ಹೇಳುವ ಜೈಕಾರಗಳು ಕನ್ನಡದವೆ ಮತ್ತು ಕನ್ನಡದ ಮೈಲಾರಲಿಂಗ ಅಲ್ಲಿ ಖಡೋಬಾಗಿದಾನೆ ಅಂತಲ್ಲ ಅದು ಕನ್ನಡ ಪ್ರದೇಶವೆ ಮರಾಠಿ ಪ್ರಾಬಲ್ಯ ಬೆಳದ ಮೇಲೆ ಮೈಲಾರ ಹೋಗಿ ಖಂಡೋಬ ಆದ ಎಂದು ಹೇಳಬಹುದು. ಮಹಾರಾಷ್ಟ್ರದ ಹಲವು ರಾಜ ಮನೆತನಗಳ ರಾಜ್ಯದೇವರು ಮೈಲಾರಲಿಂಗನೆ ಆಗಿದ್ದಾನೆ. ಜೇಜುರಿನಲ್ಲಿ 10 ಕ್ಕೂ ಹೆಚ್ಚು ಕನ್ನಡ ಶಾಸನಗಳು ಮೈಲಾರಲಿಂಗನ ಬಗ್ಗೆ ತಿಳಿಸಿಕೊಡಯತ್ತದೆ, ಪ್ರಸಿದ್ದ ಮರಾಠಿ ಕೃತು ಜ್ಙಾನೆಶ್ವರಿಯಲ್ಲಿ ಖಂಡೋಬಾ ಮೈಲಾರನೆಂದೆ ತಿಳಿಸಿದೆ(1992 ಪುಟ ಮೂರು), ಖಂಡೋಬಾನನ್ನು ಪೂಜಿಸುವವರು ಕನ್ನಡದ ಗೊರವರೆ(ಈಗಲೂ ಅವರನ್ನ ಗೊರವರಂತೆ ಕರಿತಾರೆ).

7. ಸೊಲ್ಲಾಪುರದ ಸಿದ್ದರಾಮ: ಸಿದ್ದರಾಮರು ಕೆತ್ತಿಸಿದ ಮತ್ತು ಸಿಕ್ಕ 30 ಶಾಸನಗಳು ಕನ್ನಡವುಗಳೆ ಮಹಾರಾಷ್ಟದ ವಿದ್ವಾಂಸರು ಮರಾಠಿಗರು ಕೂಡ ಸಿದ್ದರಾಮನನ್ನ ಕನ್ನಡದವನೆ ಎನ್ನುತ್ತಾರೆ ಹೀಗಾಗಿ ಯಾವುದೇ ವಾದಗಳಿಲ್ಲದೆ ಸಿದ್ದರಾಮ ಕನ್ನಡದವನೆ!.

8. ಗುಡಿ ಪಾಡ್ವ - ಗುಡಿ ಅಚನ್ನ ಕನ್ನಡ ಪದ ಅಂದರೆ ಕನ್ನಡದಲ್ಲಿ ಮತ್ತೊಂದು ಹೆಸರು ಬಾವುಟ ಮರಾಠಿಯಲ್ಲಿ ಧ್ವಜ, ಗುಡಿ ಪದ ಚಾಲುಕ್ಯರ ವೇಸರ ಶೈಲಿಯಿಂದ ಬಂದದ್ದು, ಪಾಡ್ವ-ಪ್ರತಿಪದ(ಶುಕ್ಲಪಕ್ಷದ ಮೊದಲನೆ ದಿನ) ಹೀಗೆ ಗುಡಿಪಾಡ್ವದ ಪೂರ್ವಾರ್ಧ ಕನ್ನಡಪದ ನಂತರ ಸಂಸ್ಕೃತ ಇರುವುದು ಗಮನಿಸಬೇಕು. ಮೊದಲು ಕನ್ನಡಿಗರ ಹಬ್ಬ ಯುಗಾದಿ ಹಬ್ಬವೇ ಗುಡಿಪಾಡ್ವ ಆಯಿತು ಎಂದು ಹಲವು ಜನಪದರದಿಂದ ತಿಳಿದು ಬರುತ್ತದೆ.

ತುಳಜಾಪುರದ ಭವಾನಿ ದೇವಿ

ತುಳಜಾಪುರದ ಭವಾನಿ ದೇವಿ

9. ಉಸ್ಮಾನಾಬಾದ ಜಿಲ್ಲೆಯ ತುಳಜಾಪುರದ ಭವಾನಿ ದೇವಿಯು ಕನ್ನಡದವಳೆ, ಹಿಗಂತ ಅಲ್ಲಿ ಸಿಕ್ಕ ಕೇಸಗಾಂವ ಇಟ್ಕಲ್ ಕನ್ನಡ ಶಾಸನಗಳು ಸಾರಿ ಸಾರಿ ಹೇಳ್ತವೆ, ಅಂಬೆಯು ಕಲ್ಯಾಣ ಚಾಲುಕ್ಯ ಸಾಮ್ರಾಜ್ಯದ ಆದಿ ದೇವತೆ ಇವಳನ್ನ ಏಕನಾಥೆಶ್ವರಿ ಎಲ್ಲಮ್ಮ ಮತ್ತು ಎಲ್ಲರ ಅಂಬೆಯಾಗಿ ಇಂದು ತುಳಜಾಪುರದಲ್ಲಿ ಅಂಬಾ ಭವಾನಿಯಾಗಿ ನೆಲೆನಿಂತಿದ್ದಾಳೆ, ಭವಾನಿ ಗುಡಿಯಲ್ಲಿ ಈಗಲೂ ಇರುವ ತೋಳಬೈರವ ದೈವ ಕನ್ನಡಿಗರ ನುಡಿಯನ್ನ ಸೂಚಿಸುತ್ತದೆ‌ ಉಸ್ಮನಾಬಾದ್ ಜಿಲ್ಲೆಯಲ್ಲಿ ಚಿಂಚೊಳಿ, ದೇವಳಗಾವ, ಕದ್ದೂರ, ಬಿಳೂರ, ಬೆಳವಾಡಿ, ಚಿಕಲೀ, ಹಲ್ಲಾಳಿ, ಲಾತೂರ ಮತ್ತು ಮರಡ್(ಮೂರಡೇಶ್ವರನ ದೇವಸ್ಥಾನವಿದೆ) ಎಂಬ ಹೆಸರಿನ ಅನೇಕ ಕನ್ನಡ ಊರುಗಳಿವೆ.

10. ಕೊಲ್ಲಾಪುರದ ಮಹಾಲಕ್ಷ್ಮೀ - 150 ವರ್ಷದಿಂದಾಚೆಗೆ 80% ಕನ್ನಡ ಮಾತಾಡುವವರು ಇದ್ದರು ಎಂದು ಬ್ರಿಟೀಷರ ಮೆಡೋಸ್ ಟೇಲರ್ ಕೊಲ್ಲಾಪುರದ ದತ್ತಕದಲ್ಲಿ ದಾಖಲಿಸಿದ್ದಾನೆ, ಮಾಲೆಗಾರ ಮುತ್ತಯ್ಯ(ಕಲ್ಬುರ್ಗಿ 1987ರ ಪುಟ 84) ಲಕ್ಷ್ಮಿ ದೇವಿಯ ಗುಡಿ ಕಟ್ಟಿಸಿದನೆಂದು ಅನೇಕ ಶಾಸನಗಳು ಹೇಳುತ್ತವೆ ಆಗು ಅದನ್ನು ರಕ್ಷಿಸಿ ಮಡಿದ ಸುದ್ದಿ ವೀರಗಲ್ಲಿನಲ್ಲಿದೆ, ಮತ್ತು ಗುಡಿಯ ಗೋಪುರದ ಕೆಳಭಾಗ ಹೊಯ್ಸಳ ಶಿಲ್ಪಕಲೆಯ ರಚನೆ ಇದೆ, ಕನ್ನಡ ಸಾಮ್ರಾಟ ಅಮೋಘವರ್ಷ ನೃಪತುಂಗ ಮಾಹಾಲಕ್ಷ್ಮಿಗೆ ತನ್ನ ಹೆಬ್ಬೆರಳನ್ನ ದಾನವಾಗಿ ಅರ್ಪಿಸಿದ ಉಲ್ಲೇಖವಿದೆ.

ಮರಾಠರ ಶಿವಾಜಿ ಸಾವಿಗೆ ಕಾರಣವೇನು

ಮರಾಠರ ಶಿವಾಜಿ ಸಾವಿಗೆ ಕಾರಣವೇನು

ಹೀಗೆ ಅನೇಕ ದಾಖಲೆಗಳು ಇತಿಹಾಸದ ಮೂಲಾಧಾರಗಳು ದಕ್ಷಿಣ ಮರಾಠ ಪ್ರದೇಶ ಮತ್ತು ಮರಾಠಿಗರನ್ನ ಕನ್ನಡಿಗರೆಂದೆ ಸಾರಿದೆ, ಕರ್ನಾಟಕ-ಮಹಾರಾಷ್ಟ್ರದ ಸಾಸ್ಕೃತಿಕ ಸಂಬಂಧಗಳು ಮುಗಿಲಿನಷ್ಟು ದೊಡ್ಡದು, ಶಿವಸೇನೆ ಮತ್ತು ಎಮ್ ಈ ಎಸ್ ನ ಪರಕುಲದ(ಮರಾಠರಲ್ಲ) ದುಷ್ಟರು ರಾಜಕೀಯ ನೆಪದಲ್ಲಿ ಈ ಇಬ್ಬರು ಭಾಷಿಕ ಸಹೋದರರ ನಡುವೆ ವಿಷ ಬೀಜಗಳನ್ನು ಬಿತ್ತಿದ್ದಾರೆ! ಆ ಕುತಂತ್ರಕ್ಕೆ ಬಲಿಯಾಗಿ ಗಡಿ ತಂಟೆ, ನದಿ ನೀರಿನ ಹಂಚಿಕೆಯಂತ ಸಣ್ಣಪುಟ್ಟ ವಿಷಯಗಳು ಇಂದು ಬಿಡಿಸಲಾಗದ ಕಗ್ಗಂಟಾಗಿ ಉಳಿದಿವೆ, ಎರಡೂ ಭಾಷಿಕರದ್ದು ಒಂದೆ ಸಂಸ್ಕೃತಿ ಕನ್ನಡನುಡಿ ಉಪಭಾಷೆ ಮರಾಠಿಗರನ್ನ ಮತ್ತು ಕನ್ನಡಿಗರನ್ನು ಇಂದುಗೂಡಿ ಬಾಳುವುದಕ್ಕೆ ಕಲ್ಲು ಹಾಕಿದವರು ಅಲ್ಲಿರುವ ರಾಜಕಾರಣಿಗಳೆ.

ಅಂದು ಮಹಾರಾಷ್ಟ್ರಕ್ಕೆ ವಲಸೆ ಬಂದ ಜನಾಂಗವೇ ಇಂದು ಕನ್ನಡಿಗರ ಮತ್ತು ಮರಾಠಿಗರ ನಡುವೆ ತಂದಿಟ್ಟು ಮರಾಠರ ಮೂಲ ಸಂಸ್ಕೃತಿಯ ಮೇಲೆ ಅವರೆ ತಿರುಗಿ ಬಿಳುವ ಹಾಗೆ ಬದಲಾಯಿಸಿದ್ದಾರೆ. ಹೀಗಾಗಿ ಇನ್ನಾದರು ಮರಾಠರು ಅರಿಯಬೇಕು, ಕನ್ನಡದ ಜಿಜಾಬಾಯಿಯ ಮಗ ಮರಾಠರ ಶಿವಾಜಿ ಸಾವಿಗೆ ಕಾರಣವೇನು ಕೊಂದವರಾರು, ಈಗ ಮಹಾರಾಷ್ಟ್ರವನ್ನು ಯಾರು ಆಳುತ್ತಿದ್ದಾರೆ. ಈಗ ಮರಾಠಿ ಮತ್ತು ಮರಾಠಿಗರ ಪರಿಸ್ಥಿತಿ ಎಲ್ಲಿದೆ ಮಹಾರಾಷ್ಟ್ರಕ್ಕೆ ಎಷ್ಟು ವಲಸೆಯಾಗಿದೆ ಎಂಬಂತಹ ಗಂಭೀರ ವಿಷಯಗಳನ್ನ ಮರಾಠಿಗರು ಚಿಂತನೆ ಮಾಡಲಿ ಅದು ಬಿಟ್ಟು ಬೆಳಗಾವಿಯಲ್ಲಿ ಕರುನಾಡ ಸಂಭ್ರಮದಲಿ ಕರಾಳದಿನವನ್ನು ಆಚರಿಸುವುದು ಮೂರ್ಖರ ವಿಷಯವಾದಿತು ತನ್ನ ತಾಯಿಗೆ ತಾನೆ ಮಸಿ ಬಳಿಯುವ ಕಾರ್ಯವನ್ನು ಇನ್ನಾದರೂ ಮರಾಠಿಗರು ಬಿಡಲಿ ಕನ್ನಡಿಗರ ಜೊತೆ ಮತ್ತೆ ಸ್ನೇಹ ಸಂಬಂಧಗಳು ಮೊಳೆಯಲಿ, ಸಹೋದರರ ಭ್ರಾತೃತ್ವ ಬೆರೆಯಲಿ ಎಂದು ಆಶಿಸುತ್ತ.....

ಕೊನೆಯಲಿ: ಮರಾಠಿಗರ 50% ಜನರ ಆರಾಧ್ಯ ದೈವಗಳು ಕನ್ನಡದ ದೇವತೆಗಳೆ ಆಗಿವೆ, ದಕ್ಷಿಣ ಮಹಾರಾಷ್ಟ್ರದಲ್ಲಿ 1800 ಹೊತ್ತಿಗೆ 50% ಜನ ಕನ್ನಡದಲ್ಲೆ ಬರೆದು ಓದುತ್ತಿದ್ದರು ಎಂದು ಎಂದು ಬ್ರಿಟಿಷರ ದತ್ತಕಗಳು ಹೇಳುತ್ತವೆ ಹಿಗಾಗಿ ವಿಚಾರ ಮಾಡಿ ಸಂಶೋಧನೆ ಮಾಡಿ ನಿಮ್ಮ ಕುಲವನ್ನ ನೀವರಿಯರಿ, ಮನುಷ್ಯರಾಗಿ ಸಹಬಾಳ್ವೆಯಿಂದ ಬಾಳಿ.

English summary
Kannadiga throws 10 question to MES on proposed Black Day against Kannada Rajyotsava on November 01.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X