ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಚ್ಚುಮೊಳೆಯಿಂದ ಕಂಪ್ಯೂಟರ್ ಕೀಲಿಮಣೆಯವರೆಗೆ.... ಕನ್ನಡ 'ಇ' ಲೋಕ ಬೆಳೆದಿದ್ದು....

|
Google Oneindia Kannada News

"ಅದೊಂದಿತ್ತು ಕಾಲ. ಪ್ರತಿ ಪದಕ್ಕೂ ಅಚ್ಚುಮೊಳೆಗಳನ್ನು ಜೋಡಿಸಿ ಮುದ್ರಿಸಬೇಕಿದ್ದ ಕಾಲ. ಒಂದಕ್ಷರ ಹೆಚ್ಚುಕಮ್ಮಿಯಾದರೂ ತಲೆದಂಡವಾಗಬೇಕಿದ್ದ ಕಾಲ!" ಹೌದು, ಕನ್ನಡ ಪತ್ರಿಕೋದ್ಯಮದ ಇತಿಹಾಸದ ಬಗ್ಗೆ ಓದುವ ಈಗಿನ ಪತ್ರಕೋದ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಅಕ್ಷರಗಳ ಮುದ್ರಣಕ್ಕೆ ಇಷ್ಟೆಲ್ಲ ಪರದಾಡಬೇಕಿತ್ತು ಎಂಬುದನ್ನು ಊಹಿಸಿಕೊಳ್ಳುವುದಕ್ಕೂ ಕಷ್ಟವಾಗಬಹುದು!

ಆದರೆ ಈಗ ಕಾಲಬದಲಾಗಿದೆ. ಕಂಪ್ಯೂಟರ್ ಆವಿಷ್ಕಾರದ ನಂತರ, ಕೇವಲ ಇಂಗ್ಲಿಷ್ ಭಾಷೆಗೆ ಮಾತ್ರ ಒಗ್ಗಿದ್ದ ಗಣಕಯಂತ್ರಗಳನ್ನು ಸ್ಥಳೀಯ ಭಾಷೆಗಳ ಬಳಕೆಗೂ ಒಗ್ಗಿಸುವ ಪ್ರಯತ್ನ ನಡೆಯಿತು.

64 ಮಂದಿ ಸಾಧಕರಿಗೆ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ 64 ಮಂದಿ ಸಾಧಕರಿಗೆ 2019ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

1986 ರಲ್ಲಿ ಮೊಟ್ಟಮೊದಲ ಬಾರಿಗೆ 'ಸೇಡಿಯಾಪು' ತಂತ್ರಾಂಶವನ್ನು ಬಳಸುವ ಮೂಲಕ ಕನ್ನಡವನ್ನು ಕಂಪ್ಯೂಟರ್ ನಲ್ಲಿ ಬಳಸುವುದಕ್ಕೆ ಅನುವು ಮಾಡಿಕೊಟ್ಟಿದ್ದು, ಕೆ.ಪಿ. ರಾವ್ ಅವರು. ನಂತರದ ದಿನಗಳಲ್ಲಿ ಕನ್ನಡ ಟೈಪಿಂಗ್ ಗೆಂದೇ ಸಾಕಷ್ಟು ತಂತ್ರಾಂಶಗಳು ಬಂದವು.

ಸ್ಮಾರ್ಟ್ ಫೋನ್ ಗಳಲ್ಲೂ ಬಳಕೆ

ಸ್ಮಾರ್ಟ್ ಫೋನ್ ಗಳಲ್ಲೂ ಬಳಕೆ

ನುಡಿ, ಬರಹ, ಪದ ಸೇರಿದಂತೆ ಕಂಪ್ಯೂಟರ್ ನಲ್ಲಿ ಬಳಸಲು ಮಾತ್ರವಲ್ಲದೆ, ಈಗೀಗ ಸ್ಮಾರ್ಟ್ ಫೋನ್ ಗಳಲ್ಲೂ ಕನ್ನಡ ಬಳಸಲು ಜಸ್ಟ್ ಕನ್ನಡದಂಥ app ಗಳು ಬಂದಿವೆ.

ಕನ್ನಡ ಲಿಪಿಹಯನ್ನು ಟೈಪ್ ಮಾಡುವ ಸಾಧನಗಳಿಲ್ಲ ಎಂಬ ಕಾರಣಕ್ಕೆ ಕನ್ನಡ ಭಾಷೆಯ ಬಳಕೆ ಕಡಿಮೆಯಾಗಬಾರದು, ಇದು ಭಾಷೆಯ ಬೆಳವಣಿಗೆ, ಉಳಿವಿಗೆ ಮಾರಕ ಎಂಬುದನ್ನು ಅರಿತ ಹಲವು ಭಾಷಾ ತಜ್ಞರು, ಸಾಹಿತಿಗಳು, ಎಂಜನಿಯರ್ ಗಳು ವಿವಿಧ ತಂತ್ರಾಂಶಗಳ ಆವಿಷ್ಕಾರಕ್ಕೆ ಮುಂದಾದರು. ಅದರ ಫಲವಾಗಿಯೇ ಇಂದು ಕನ್ನಡ ಟೈಪ್ ಮಾಡಲು ಸಾಕಷ್ಟು ಸಾಧನಗಳಿವೆ.

ಅಷ್ಟೇ ಅಲ್ಲ, ಸರ್ಚ್ ಇಂಜಿನ್ ಗೆ ಸಹಾಯಕವಾಗುವಂತೆ ಗೂಗಲ್ ನಲ್ಲಿ ನೇರವಾಗಿಯೇ ಕನ್ನಡವನ್ನು ಟೈಪ್ ಮಾಡುವ ಸೌಕರ್ಯವನ್ನೂ ಪರಿಚಯಿಸಲಾಗಿದೆ.

ಕನ್ವರ್ಟರ್ ಗಳು

ಕನ್ವರ್ಟರ್ ಗಳು

'ನುಡಿ' ತಂತ್ರಾಂಶದಿಂದ ಬರಹ, ಶ್ರೀಲಿಪಿ, ಯುನಿಕೋಡ್ ಸೇರಿದಂತೆ ಬೇರೆ ಫಾಂಟ್ ಗಳಿಗೆ ಬದಲಿಸುವುದಕ್ಕೂ ಸಾಧನಗಳಿವೆ. ಇದರಿಂದ ಪತ್ರಿಕೆಗಳಲಿಗೆ ಅತ್ಯವಿರುವ ಫಾಂಟ್ ಗಳನ್ನು ಅರೆಕ್ಷಣದಲ್ಲಿ ಕನ್ವರ್ಟ್ ಮಾಡಿಕೊಳ್ಳಬಹುದಾದ ಸುಲಭ ವಿಧಾನವನ್ನೂ ಪರಿಚಯಿಸಲಾಯ್ತು. ಇದರಿಂದಾಗಿ ಬರಹಗಾರರು ಯಾವುದೇ ಫಾಂಟ್ ನಲ್ಲಿ ಕಳಿಸಿದರೂ, ಅದನ್ನು ಕೂತು ಮತ್ತೆ ಟೈಪ್ ಮಾಡುವ ಕಷ್ಟವಿಲ್ಲದೆ ಸೆಕೆಂಡ್ ನಲ್ಲಿ ತಮಗೆ ಬೇಕಾದ ಫಾಂಟ್ ಗೆ ಬದಲಾಯಿಸಿಕೊಳ್ಳುವ ಸವಲತ್ತೂ ಲಭ್ಯವಾಗಿದೆ.

ಓದು ಜನಮೇಜಯ, ಕನ್ನಡದ ಕುರಿತ ಒಂದು ಚರ್ಚೆಓದು ಜನಮೇಜಯ, ಕನ್ನಡದ ಕುರಿತ ಒಂದು ಚರ್ಚೆ

ಟ್ರಾನ್ಸ್ ಲೇಟರ್ ಗಳು

ಟ್ರಾನ್ಸ್ ಲೇಟರ್ ಗಳು

ಯಾವುದೇ ಒಂದು ಇಂಗ್ಲಿಷ್, ಹಿಂದಿ ಇನ್ನಿತರ ಯಾವುದೇ ಪದದ ಅರ್ಥ ತಿಳಿಯದಿದ್ದರೆ ಅದರ ಅರ್ಥವನ್ನು ಮಾತೃಭಾಷೆಯಲ್ಲಿಯೇ ತಿಳಿಯುವುದಕ್ಕೆ ಅನುವಾದಕ(ಟ್ರಾನ್ಸ್ ಲೇಟರ್ ಗಳು)ಗಳು ಬಂದಿವೆ. ಗೂಗಲ್ ಟ್ರಾನ್ಸ್ ಲೇಟರ್ ಲಭ್ಯವಿದೆ. ಡಿಕ್ಷನರಿಯೂ ಲಭ್ಯವಿದೆ. ವಿಕಿಪೀಡಿಯದಲ್ಲೂ ಕನ್ನಡದಲ್ಲೇ ಅಗತ್ಯ ಮಾಹಿತಿಗಳನ್ನು ಪಡೆಯಬಹುದಾಗಿದೆ.

android ಫೋನ್ ಗಳಲ್ಲೂ ಸೌಲಭ್ಯ

android ಫೋನ್ ಗಳಲ್ಲೂ ಸೌಲಭ್ಯ

ಅಷ್ಟೇ ಅಲ್ಲ, ಕನ್ನಡ ಅಕ್ಷರಗಳನ್ನು ಹುಡುಕಿ, ತಡಕಾಡಿ ಟೈಪ್ ಮಾಡುವ ಕಷ್ಟವನ್ನೂ ತಪ್ಪಿಸುವುದಕ್ಕೆ ಇಂಗ್ಲಿಷ್ ಅಕ್ಷರಗಳನ್ನೇ ಬಳಸಿ ಕನ್ನಡವನ್ನು ಟೈಪ್ ಮಾಡಬಹುದಾದ ಸೌಲಭ್ಯವೂ android ಫೋನ್ ಗಳಲ್ಲಿ ಲಭ್ಯವಿದೆ. ಅಷ್ಟೇ ಅಲ್ಲ, ಮೊಬ್ಐಲ್ ಅಥವಾ ಲ್ಯಾಪ್ ಟಾಪ್ ನಲ್ಲಿ ಗೂಗಲ್ ಸೇರಿದಂತೆ ಇನ್ಯಾವುದೇ ಸಾಧನಗಳನ್ನು ಕನ್ನಡದಲ್ಲೇ ಬಳಸುವುದಕ್ಕೂ ಸಾಧ್ಯವಿದೆ. ಮೊದಲೇ ಲ್ಯಾಂಗ್ವೇಜ್ ಸೆಟಿಂಗ್ ನಲ್ಲಿ ಕನ್ನಡ ಆಯ್ಕೆ ಮಾಡಿದರೆ ಫೋನ್, ಕಂಪ್ಯೂಟರ್ ಪೂರ್ತಿ ಕನ್ನಡಮಯವಾಗುತ್ತದೆ.

ಹೌದು, ಭಾಷೆಯನ್ನು ಉಳಿಸಲು, ಮಾತೃಭಾಷೆಯ ಬಳಕೆ ಸುಲಭವಾಗಲು ತಂತ್ರಾಂಶವೇನೋ ಸಾಕಷ್ಟಿದೆ. ಆದರೆ ಭಾಷೆ ಎಂಬ ಭಾವನಾತ್ಮಕ ಸಂಗತಿಯನ್ನು ನಿರಂತರವಾಗಿ ಬಳಸುವ ಮೂಲಕ ಅದನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಬಳಕೆದಾರರ ಕೈಲಿದೆ. ಏಕೆಂದರೆ ಬಳಕೆಯಲ್ಲಿಲ್ಲದ ಭಾಷೆಯ ಆಯುಷ್ಯ ಕಡಿಮೆ!

English summary
Kannada Rajyotsava: Uses Of Kannada Tools In Computer, Kannada Language In Computer,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X