ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಪ್ರಶಸ್ತಿ; ಪ್ರೊ. ನ ವೆಂಕೋಬರಾವ್ ಪರಿಚಯ

|
Google Oneindia Kannada News

ಹಾಸನ, ಅಕ್ಟೋಬರ್ 28: 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಹಾಸನ ಜಿಲ್ಲೆಯ ಪ್ರೊ. ನ. ವೆಂಕೋಬರಾವ್ ಅವರಿಗೆ ಸಂಕೀರ್ಣ ವಿಭಾಗದಲ್ಲಿ ಈ ಬಾರಿ ಪ್ರಶಸ್ತಿ ಸಿಕ್ಕಿದೆ.

ಪ್ರೊ. ನ ವೆಂಕೋಬರಾವ್ ಅವರು ನಿವೃತ್ತ ಇತಿಹಾಸ ಪ್ರಾಧ್ಯಾಪಕರು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕಾಂತರಾಜಪುರದಲ್ಲಿ ಜನಿಸಿದವರು. ತಂದೆ ವಿಜ್ಞಾನಿ ನಂಜಪ್ಪ ತಾಯಿ ಸುಂದರಮ್ಮ.

ರಾಜ್ಯೋತ್ಸವ ಪ್ರಶಸ್ತಿ; ಡಾ. ಬಿ. ಎಸ್. ಶ್ರೀನಾಥ್ ಪರಿಚಯ ರಾಜ್ಯೋತ್ಸವ ಪ್ರಶಸ್ತಿ; ಡಾ. ಬಿ. ಎಸ್. ಶ್ರೀನಾಥ್ ಪರಿಚಯ

ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾಂತರಾಜಪುರದಲ್ಲಿ ನಡೆಸಿದ ಅವರು ನಂತರ ಚನ್ನರಾಯಪಟ್ಟಣ ಚಿಂತಾಮಣಿ ದೊಡ್ಡಬಳ್ಳಾಪುರ ಹಾಗೂ ಮೈಸೂರಿನಲ್ಲಿ ವ್ಯಾಸಂಗ ಮಾಡಿದ್ದಾರೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ; ಡಾ. ಚಿಂದಿ ವಾಸುದೇವಪ್ಪ ಪರಿಚಯ ರಾಜ್ಯೋತ್ಸವ ಪ್ರಶಸ್ತಿ; ಡಾ. ಚಿಂದಿ ವಾಸುದೇವಪ್ಪ ಪರಿಚಯ

Kannada Rajyotsava Award 2020 N Venkobarao Profile

ಗುರೂಜಿ ಗೋಳವಲ್ಕರ್, ಅಟಲ್ ಬಿಹಾರಿ ವಾಜಪೇಯಿ, ಅಡ್ವಾಣಿ, ಶೇಷಾದ್ರಿ ಜಗನ್ನಾಥರಾವ್ ಜೋಶಿ, ಯಾದವರಾವ್ ಜೋಶಿ ಮುಂತಾದ ಗಣ್ಯರ ಜೊತೆ ಒಡನಾಟ ಹೊಂದಿದ್ದು, ದೇಶ ಸೇವೆಯನ್ನು ಮಾಡಿದ್ದಾರೆ. ಶ್ರೀಕಾಂತ ಕಾವ್ಯನಾಮದಲ್ಲಿ ಇವರು ಬರೆದ ಹಲವಾರು ಕಥೆಗಳು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವುಗಳಲ್ಲಿ 'ಭೂಮಿ ಕಂಪಿಸಲಿಲ್ಲ' ಎಂಬ ಕಥಾ ಸಂಕಲನವೂ ಒಂದು.

ಹಿರಿಯೂರಿನ ತಿಪ್ಪೇಸ್ವಾಮಿ ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿಹಿರಿಯೂರಿನ ತಿಪ್ಪೇಸ್ವಾಮಿ ಅವರಿಗೆ ರಂಗಭೂಮಿ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ

ಪ್ರೊ. ನ ವೆಂಕೋಬರಾವ್ ಲಯನ್ಸ್ ಸಂಸ್ಥೆಯಲ್ಲಿ ಹಲವಾರು ವಿಭಿನ್ನ ಸೇವಾ ಚಟುವಟಿಕೆಗಳನ್ನು ಮಾಡುವ ಮೂಲಕ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಸೇವೆಯನ್ನು ಪರಿಗಣಿಸಿ ಲಯನ್ಸ್ ಸಂಸ್ಥೆ ಇವರಿಗೆ ಆಜೀವಷ ಗೌರವ ಸದಸ್ಯತ್ವ ನೀಡಿ ಗೌರವಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಥಮ ರಾಷ್ಟ್ರೀಯ ಉಪಾಧ್ಯಕ್ಷ ಹಾಗೂ ರಾಷ್ಟ್ರೋತ್ಥಾನ ಪರಿಷತ್ ಕಟ್ಟುವಲ್ಲಿ ಪ್ರೊ. ನ. ವೆಂಕೋಬರಾವ್ ಯೋಗದಾನವಿದೆ. ಆರ್‌ಎಸ್‌ಎಸ್ ಪ್ರಕಟಿಸುವ ವಿಕ್ರಮ ಪತ್ರಿಕೆಯ ಉಪಸಂಪಾದಕರಾಗಿಯೂ ಕೆಲಸ ಮಾಡಿದ್ದಾರೆ.

English summary
Hassan district based N. Venkobarao bagged Kannada Rajyotsava Award 2020. Here are the brief profile.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X