ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯೋತ್ಸವ ಪ್ರಶಸ್ತಿ; ಡಾ. ಬಿ. ಎಸ್. ಶ್ರೀನಾಥ್ ಪರಿಚಯ

|
Google Oneindia Kannada News

ಶಿವಮೊಗ್ಗ, ಅಕ್ಟೋಬರ್ 28: ಬುಧವಾರ 2020ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದ ಡಾ. ಬಿ. ಎಸ್. ಶ್ರೀನಾಥ್‌ಗೆ ಪ್ರಶಸ್ತಿ ಲಭಿಸಿದೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಸಿ. ಟಿ. ರವಿ ಅವರು 2020ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದರು. ನವೆಂಬರ್ 7ರಂದು ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ.

ರಾಜ್ಯೋತ್ಸವ ಪ್ರಶಸ್ತಿ; ಡಾ. ಚಿಂದಿ ವಾಸುದೇವಪ್ಪ ಪರಿಚಯ ರಾಜ್ಯೋತ್ಸವ ಪ್ರಶಸ್ತಿ; ಡಾ. ಚಿಂದಿ ವಾಸುದೇವಪ್ಪ ಪರಿಚಯ

ಶಿವಮೊಗ್ಗ ಮೂಲದ ಡಾ. ಬಿ. ಎಸ್. ಶ್ರೀನಾಥ್‌ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕ್ಯಾನ್ಸರ್ ಫೌಂಡೇಶನ್‌ನಲ್ಲಿ ಸರ್ಜಿಕಲ್ ಆಂಕಾಲಜಿಸ್ಟ್ ಆಗಿದ್ದಾರೆ. ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಎಸ್. ಹೆಗಡೆ ಕುಂದರಗಿ ಪರಿಚಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎನ್. ಎಸ್. ಹೆಗಡೆ ಕುಂದರಗಿ ಪರಿಚಯ

Kannada Rajyotsava Award 2020 Dr BS Srinath Profile

ಭದ್ರಾವತಿ ಪೇಪರ್ ಟೌನ್ ಪ್ರೌಢಶಾಲೆ, ಸಿಲ್ವರ್ ಜ್ಯುಬಿಲಿ ಕಾಲೇಜಿನಲ್ಲಿ ಶಿಕ್ಷಣ ಪಡೆದಿರುವ ಬಿ. ಎಸ್. ಶ್ರೀನಾಥ್‌ಗೆ ‌ದಾವಣಗೆರೆಯಲ್ಲಿ ವೈದ್ಯಕೀಯ ಪದವಿ ಪಡೆದಿದ್ದಾರೆ. 1979ರಲ್ಲಿ ಇಂಗ್ಲೆಂಡ್‌ಗೆ ತೆರಳಿ ಸಂಶೋಧನೆ ನಡೆಸಿದರು.

ಜಾನಪದ ಕ್ಷೇತ್ರ; ಹಾಸನದ ಹಂಪನಹಳ್ಳಿ ತಿಮ್ಮೇಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಜಾನಪದ ಕ್ಷೇತ್ರ; ಹಾಸನದ ಹಂಪನಹಳ್ಳಿ ತಿಮ್ಮೇಗೌಡ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ

ರಾಯಲ್ ಕಾಲೇಜ್ ಆಫ್ ಸರ್ಜನ್‌ನಲ್ಲಿ ಫೆಲೋಶಿಪ್ ಗಳಿಸಿ 1983ರಲ್ಲಿ ಭಾರತಕ್ಕೆ ವಾಪಸ್ ಆದರು. ಬಳಿಕ ಕಿದ್ವಾಯಿ ಸಂಸ್ಥೆಗೆ ಸೇರಿದರು. ರಾಮಯ್ಯ ಮೆಡಿಕಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಕ್ಯಾನ್ಸರ್ ಬಗ್ಗೆ ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಗ್ರಾಮೀಣ ಭಾಗದಲ್ಲಿ ಶಿಬಿರಗಳನ್ನು ಸಹ ನಡೆಸಿದ್ದಾರೆ.

English summary
Shivamogga district based Dr B. S. Srinath bagged Kannada Rajyotsava Award 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X