ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗುರು ಕಡಿಯುತ್ತಾ ಜಾತ್ರೇಲಿ ತಪ್ಪಿಸಿಕೊಂಡ ಮಗುವಿನ ಮುಖಭಾವದ ಕಾಶೀನಾಥ್

|
Google Oneindia Kannada News

ನರಪೇತಲ ದೇಹ, ತನ್ನನ್ನು ತಾನೇ ಪ್ಯಾದೆ ಅಂದು ಕರೆದುಕೊಳ್ಳುವ 'ಹೀರೋ', ಖಳನಟರಿಂದಲೇ ಒದೆ ತಿಂದೂ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಕಾಶೀನಾಥ್ ಸಿನಿಮಾಗಳೆಂದರೆ ಎಂಥವರಲ್ಲೂ ಆತ್ಮವಿಶ್ವಾಸ ತುಂಬುತ್ತಿದ್ದವು. ಏಕೆಂದರೆ ಕಾಶೀನಾಥ್ ಅವರೇ ಹೀರೋ ಆಗಿದ್ದಾರೆಂದರೆ ನಾನ್ಯಾಕೆ ಹೀರೋ ಆಗಬಾರದು ಎಂಬಂಥ ಆತ್ಮವಿಶ್ವಾಸ ಅದು.

ಆದರೆ, ತೆರೆಯ ಮೇಲೆ ತಮ್ಮನ್ನು ನೋಡುವಂತೆ ಜನರನ್ನು ಹಿಡಿದಿಡುವುದು ಸಲೀಸಲ್ಲ. ಅದಕ್ಕೆ ಕಾರಣ ಏನೆಂದರೆ, ಕಾಶೀನಾಥ್ ಸಿನಿಮಾಗಳಲ್ಲಿ ಭರಪೂರ ಮನರಂಜನೆ ಇರುತ್ತಿತ್ತು. ಡಬಲ್ ಮೀನಿಂಗ್ ಡೈಲಾಗ್, ನಮ್ಮ ಮನೆ ರಸ್ತೆ ಬದಿಯಲ್ಲೇ ಇದ್ದಾನೇನೋ ಎಂಬಂಥ ಹೀರೋ ಮಟೀರಿಯಲ್ಲು, ಅತ್ತೆ ಮಗಳೇನೋ ಅನಿಸುವಷ್ಟೇ ಸಹಜ ಸುಂದರಿಯಾದ ಹೀರೋಯಿನ್ ಇರುತ್ತಿದ್ದರು.

ಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನು ನೆನಪು ಮಾತ್ರಕನ್ನಡದ ಹಿರಿಯ ನಟ, ನಿರ್ದೇಶಕ ಕಾಶಿನಾಥ್ ಇನ್ನು ನೆನಪು ಮಾತ್ರ

ಸ್ನೇಹಿತರ ಗುಂಪು ಪಟ್ಟಾಂಗ ಹೊಡೆಯುವಾಗ ಹೇಳುತ್ತಿದ್ದ ಪಂಚ್ ಡೈಲಾಗ್ ಗಳೇ ಸಿನಿಮಾದಲ್ಲೂ ಇರುತ್ತಿದ್ದವು. ಒಬ್ಬ ಹೀರೋನ ನಮ್ಮ ಥರವೇ, ನಮ್ಮವನೇ ಅಂದುಕೊಳ್ಳುವುದಕ್ಕೆ ಇನ್ನೇನು ಬೇಕಿತ್ತು? ಕಾಶೀನಾಥ್ ಅವರಿಗೆ ಇಟಾಲಿಯನ್, ಇಂಗ್ಲಿಷ್ ಸೇರಿದಂತೆ ವಿದೇಶಿ ಭಾಷೆಗಳ ಸಿನಿಮಾ ಸ್ಫೂರ್ತಿಯಾಗಿತ್ತೇ? ಇದೊಂದು ಪ್ರಶ್ನೆ ಕೇಳಬೇಕು ಅಂದುಕೊಳ್ಳುವಷ್ಟರಲ್ಲಿ ಹೊರಟುಬಿಟ್ಟಿದ್ದಾರೆ.

Kannada movie actor, director Kashinath remembrance

ಅನಂತನ ಅವಾಂತರ, ಅಜಗಜಾಂತರ, ಅನಾಮಿಕ ಹೀಗೆ 'ಅ'ಕಾರ ಪ್ರಿಯರಾಗಿದ್ದ ಕಾಶೀನಾಥ್ ರ ಅಪರಿಚಿತ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಮೈಲುಗಲ್ಲಿನಂತೆ ನಿಲ್ಲುತ್ತದೆ. ಅನುಭವ ಸಿನಿಮಾದ ತಲೆಮಾರಿನಿಂದ ತಲೆಮಾರಿಗೆ ಮತ್ತೆ ಮತ್ತೆ ಇಷ್ಟ ಆಗುವಂತೆ ಮಾಡುತ್ತದೆ.

ಕಣ್ಮರೆಯಾದ ಕಲಾಯೋಗಿ ಕಾಶಿನಾಥ್ ಅಪರೂಪದ ಚಿತ್ರಸಂಪುಟ

ಕಾಶೀನಾಥ್ ರ ಬಳಿ ಚಿತ್ರರಂಗದ ಕೆಲಸ ಕಲಿತ ಅತಿರಥ- ಮಹಾರಥರು ಇದ್ದಾರೆ. ತಮ್ಮ ಗುರುವನ್ನೂ ಮೀರಿ ಅಗಾಧವಾಗಿ ಬೆಳೆದಿದ್ದಾರೆ. ಈ ರೀತಿಯ ಗುರು- ಶಿಷ್ಯ ಪರಂಪರೆ ಕಾಣುವುದು ಕೂಡ ಅಪರೂಪ. ಸಿನಿಮಾ ಎಂಬುದು ಅದ್ಧೂರಿತನ, ಸ್ಕೀನ್ ನ ಪ್ರತಿ ಇಂಚೂ ಸೌಂದರ್ಯವನ್ನೇ ತೋರಿಸಬೇಕು ಎಂಬಂಥ ಎಲ್ಲ ಸೂತ್ರಗಳನ್ನೂ ಮುರಿದುಹಾಕಿದ ವ್ಯಕ್ತಿ ಅವರು.

ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್

ಕಾಶೀನಾಥ್ ರ ಸಿನಿಮಾಗಳಲ್ಲಿನ ಸಂಗೀತದ್ದೇ ಮತ್ತೊಂದು ತೂಕ. ಹೊಸ ಬಗೆಯ ಸಾಹಿತ್ಯವನ್ನು ಪ್ರೇಕ್ಷಕರಿಗೆ ರೂಢಿ ಮಾಡಿಸಿದವರಲ್ಲಿ ಖಂಡಿತಾ ಅವರು ಪ್ರಮುಖರು. ಕಾಶೀನಾಥ್ ತೀರಿಕೊಂಡಿದ್ದಾರೆ. ಟಿವಿಯಲ್ಲಿ ಅವರ ಅಭಿನಯದ ದೃಶ್ಯ ಬಂದರೆ ಕಣ್ಣಿನಲ್ಲಿ ನೀರಿದ್ದರೂ ತುಟಿಯ ಮೇಲೊಂದು ನಗು ಮೂಡುತ್ತದೆ. ಉಗುರು ಕಡಿಯುತ್ತಾ, ಜಾತ್ರೆಯಲ್ಲಿ ತಪ್ಪಿಸಿಕೊಂಡ ಮಗುವಿನಂಥ ಮುಖಭಾವದ ಕಾಶೀನಾಥ್ ಮನದಲ್ಲಿ ಉಳಿದುಹೋಗಿದ್ದಾರೆ.

English summary
Kannada movie actor, director Kashinath passes away on January 18th at Bengaluru Shankar hospital. Here is the tribute to Kashinath.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X