ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಳಿಮಾತೆ ಕೈಗೆ ಸಿಗರೇಟ್ ಇಟ್ಟ ನಿರ್ದೇಶಕಿ ಲೀನಾ ಯಾರು?

|
Google Oneindia Kannada News

ಬೆಂಗಳೂರು, ಜುಲೈ 6: ಕೆನಡಾದಲ್ಲಿರುವ ಭಾರತ ಮೂಲದ ಸಿನಿಮಾ ನಿರ್ದೇಶಕಿ ಲೀನಾ ಮಣಿಮೇಕಲೈ ವಿವಾದಕ್ಕೆ ಸಿಲುಕಿದ್ದಾರೆ. ಇವರು ನಿರ್ದೇಶಿಸಿದ 'ಕಾಳಿ' ಸಿನಿಮಾದಲ್ಲಿ ಹಿಂದೂ ದೇವರು ಸಿಗರೇಟು ಸೇದುತ್ತಿರುವ ಚಿತ್ರವಿರುವ ಪೋಸ್ಟರ್ ವಿರುದ್ಧ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಕಾಳಿ ಸಿನಿಮಾ ಮೂಲಕ ಲೀನಾ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಲೀನಾ ಮಣಿಮೇಕಲೈ ಸಿನಿಮಾ ತಯಾರಕಿ ಮತ್ತು ನಿರ್ದೇಶಕಿ ಹಾಗು ಕವಯಿತ್ರಿಯೂ ಹೌದು. ಬಹಳಷ್ಟು ಡಾಕ್ಯುಮೆಂಟರಿ ಚಿತ್ರಗಳನ್ನು ತಯಾರಿಸಿದ್ದಾರೆ. ಹಲವು ಕವಿತೆಗಳನ್ನು ರಚಿಸಿದ್ದಾರೆ.

ಕಾಳಿ: ಭಾರತದ ಆಕ್ಷೇಪಕ್ಕೆ ವಿಷಾದ ವ್ಯಕ್ತಪಡಿಸಿದ ಕೆನಡಾ ಮ್ಯೂಸಿಯಂಕಾಳಿ: ಭಾರತದ ಆಕ್ಷೇಪಕ್ಕೆ ವಿಷಾದ ವ್ಯಕ್ತಪಡಿಸಿದ ಕೆನಡಾ ಮ್ಯೂಸಿಯಂ

ಕೆನಡಾದ ಟೊರಂಟೋ ರಾಜಧಾನಿ ಆಗಾ ಖಾನ್ ಮ್ಯೂಸಿಯಂನಲ್ಲಿ ನಡೆಯುತ್ತಿರುವ 'ರಿದಮ್ಸ್ ಆಫ್ ಕೆನಡಾ' ವಿಭಾಗದಲ್ಲಿ ಕಳೆದ ವಾರಾಂತ್ಯದಲ್ಲಿ 'ಕಾಳಿ' ಸಾಕ್ಷ್ಯಚಿತ್ರ ಪ್ರದರ್ಶನವಾಗಿತ್ತು. ಆಗ ಮಣಿಮೇಕಲೈ ಈ ಸಿನಿಮಾದ ಪೋಸ್ಟರ್ ಅನ್ನು ಲಗತ್ತಿಸಿ ಟ್ವೀಟ್ ಮಾಡಿದ್ದರು.

ಕಾಳಿ ಮಾತೆಯ ರೀತಿಯಲ್ಲಿ ಕಾಣುವ ಮಹಿಳೆ ಸಿಗರೇಟು ಸೇದುತ್ತಿರುವಂತೆ ತೋರಿಸಿರುವ ಈ ಪೋಸ್ಟರ್ ವಿರುದ್ಧ ಅನೇಕ ಹಿಂದೂ ಸಂಘಟನೆಗಳು ಪ್ರತಿಭಟನೆ ವ್ಯಕ್ತಪಡಿಸಿವೆ. ದೆಹಲಿ, ಉತ್ತರ ಪ್ರದೇಶದಲ್ಲಿ ಈಕೆಯ ವಿರುದ್ಧ ಎಫ್‌ಐಆರ್‌ಗಳು ದಾಖಲಾಗಿವೆ. ಭಾರತ ಸರಕಾರದ ಆದೇಶದ ಮೇರೆಗೆ ಲೀನಾ ಅವರ ಆ ಪೋಸ್ಟರ್ ಟ್ವೀಟ್ ಅನ್ನು ಡಿಲೀಟ್ ಮಾಡಿದೆ.

 ಯಾರು ಈ ಮಣಿಮೇಕಲೈ?

ಯಾರು ಈ ಮಣಿಮೇಕಲೈ?

ಲೀನಾ ಮಣಿಮೇಕಲೈ ತಮಿಳುನಾಡಿನ ವಿರುದ್ದನಗರ್ ಜಿಲ್ಲೆಯ ಮೂಲದವರು. ಇವರದ್ದು ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾದ (CPI) ನಂಟಿರುವ ಹಾಗೂ ಕೃಷಿ ಹಿನ್ನೆಲೆಯ ಕುಟುಂಬದವರು. ಇವರ ತಂದೆ ತಮಿಳು ಪ್ರೊಫೆಸರ್. ಚಿತ್ರರಂಗದೊಂದಿಗೆ ಸ್ವಲ್ಪ ನಂಟಿದ್ದವರು. ಹೀಗಾಗಿ, ಲೀನಾ ಮಣಿಮೇಕಲೈಗೆ ಚಿಕ್ಕಂದಿನಿಂದಲೇ ಚಿತ್ರ ತಯಾರಿಕೆ ಬಗ್ಗೆ ಒಲವು ಮತ್ತು ಜ್ಞಾನ ಬೆಳೆದಿತ್ತು.

ಕಾಳಿ ದೇವಿ ಸಿಗರೇಟು ಸೇದುವ ಪೋಸ್ಟರ್‌: ನಿರ್ದೇಶಕಿ ವಿರುದ್ಧ ದೂರುಕಾಳಿ ದೇವಿ ಸಿಗರೇಟು ಸೇದುವ ಪೋಸ್ಟರ್‌: ನಿರ್ದೇಶಕಿ ವಿರುದ್ಧ ದೂರು

 ಲೈಂಗಿಕ ಕಿರುಕುಳ ಆರೋಪ

ಲೈಂಗಿಕ ಕಿರುಕುಳ ಆರೋಪ

2017ರಲ್ಲಿ ಲೀನಾ ಮಣಿಮೇಕಲೈ ಅವರು ತಮ್ಮ ಫೇಸ್‌ಬುಕ್ ಪೋಸ್ಟ್‌ವೊಂದರಲ್ಲಿ ತಮಗೆ ಲೈಂಗಿಕ ಕಿರುಕುಳವಾಗಿರುವ ಬಗ್ಗೆ ಬರೆದುಕೊಂಡಿದ್ದರು. ಆ ಬಳಿಕ ಅವರು, ತಮಿಳು ಸಿನಿಮಾ ನಿರ್ದೇಶಕ ಸೂಸಿ ಗಣೇಶನ್ ಅವರಿಂದ ತಮಗೆ ಲೈಂಗಿಕ ಕಿರುಕುಳ ಆಗಿದ್ದೆಂದೂ ಹೇಳಿದ್ದರು.

ಲೀನಾ ಇನ್ನೂ ಚಿಕ್ಕವಳಿದ್ದಾಗಲೇ ಅಪ್ಪನನ್ನು ಕಳೆದುಕೊಂಡಿದ್ದರು. ಅಪ್ಪನ ಜೊತೆ ಲೀನಾಗೆ ಸ್ವಾತಂತ್ರ್ಯವೂ ಹೊರಟುಹೋದಂತಾಗಿತ್ತು. ಆರ್ಟ್ಸ್ ಓದಬೇಕೆಂದಿದ್ದವರನ್ನು ಎಂಜಿನಿಯರಿಂಗ್‌ಗೆ ಬಲವಂತವಾಗಿ ನೂಕಲಾಗಿತ್ತು. ಅಷ್ಟೇ ಅಲ್ಲ, 18 ವರ್ಷ ಪ್ರಾಯಕ್ಕೆ ಬರುತ್ತಲೇ ಈಕೆಗೆ ಮದುವೆ ಮಾಡುವ ಪ್ರಯತ್ನವಾಗಿತ್ತು. ಇದರಿಂದ ಆಕ್ರೋಶಗೊಂಡ ಲೀನಾ ಮನೆಯನ್ನೇ ತೊರೆದು ಹೊರಬಂದರೆನ್ನಲಾಗಿದೆ.

 ದ್ವಿಲಿಂಗಿ

ದ್ವಿಲಿಂಗಿ

ಸಮಾಜದ ಕಟ್ಟುಪಾಡುಗಳಿಗೆ ಪ್ರತಿರೋಧ ಒಡ್ಡುವ ಸ್ವಭಾವ ರೂಡಿಸಿಕೊಂಡಿದ್ದ ಅವರು ಮನೆಯಿಂದ ಹೊರಬಂದ ಬಳಿಕ ಅಂತರ್ ಧರ್ಮೀಯ ಮದುವೆಯಾದರು. ಬಳಿಕ ವಿಚ್ಛೇದನ ಪಡೆದರು. ಅದಾದ ಬಳಿಕ ಲೀನಾ ದ್ವಿಲಿಂಗಿಯಾಗಿದ್ದಾರೆ. ಈ ವಿಚಾರವನ್ನು ಅವರು ತಮ್ಮ ಒಂದು ಕವಿತೆಯಲ್ಲಿ ಹೇಳಿಕೊಂಡಿದ್ದಾರೆ. ದ್ವಿಲಿಂಗಿ ಎಂದರೆ ಪುರುಷ ಮತ್ತು ಮಹಿಳೆ ಇಬ್ಬರೊಂದಿಗೂ ಲೈಂಗಿಕ ಸಂಬಂಧ ಇಟ್ಟುಕೊಳ್ಳುವುದು.

 ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ

ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ

ಸ್ವತಃ ದ್ವಿಲಿಂಗಿಯಾಗಿರುವ ಲೀನಾ ಮಣಿಮೇಕಲೈ ಸಹಜವಾಗಿ ಎಲ್‌ಜಿಬಿಟಿ ಸಮುದಾಯಗಳಿಗೆ ಬೆಂಬಲ ನೀಡುತ್ತಾರೆ. 'ಅಂತರಕಣ್ಣಿ' ಎಂದು ಇವರು ಬರೆದಿರುವ ಕವನ ಸಂಕಲನದಲ್ಲಿ ಸಲಿಂಗಸ್ತ್ರೀಕಾಮವನ್ನು ಬಣ್ಣಿಸಿದ್ದಾರೆ.

2016ರಲ್ಲಿ "It Is Too Much To Ask" ಎಂಬ ಡಾಕ್ಯುಮೆಂಟರಿ ಚಿತ್ರದಲ್ಲಿ ಅವರು ಇಬ್ಬರು ಲೈಂಗಿಕ ಅಲ್ಪಸಂಖ್ಯಾತ ಮಹಿಳೆಯರು ಚೆನ್ನೈನಲ್ಲಿ ಪಡುವ ಮುಜುಗರ, ಕಷ್ಟಗಳ ಕಥೆ ಹೆಣೆದಿದ್ದರು. ಈ ಸಿನಿಮಾ ವಿಶ್ವಾದ್ಯಂತ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾಗಿತ್ತು.

 2003ರಿಂದಲೇ ಚಿತ್ರ ತಯಾರಿಕೆಯಲ್ಲಿ

2003ರಿಂದಲೇ ಚಿತ್ರ ತಯಾರಿಕೆಯಲ್ಲಿ

ಲೀನಾ ಮಣಿಮೇಕಲೈ 2003ರಲ್ಲಿ ಮಾದಮ್ಮ ಎಂಬ ಸಾಕ್ಷ್ಯಚಿತ್ರದ ಮೂಲಕ ಚಿತ್ರತಯಾರಿಕೆಗೆ ಧುಮುಕಿದರು. ಏಳೆಂಟು ಡಾಕ್ಯುಮೆಂಟರಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2021ರಲ್ಲಿ ಮಾದಾತಿ ಎಂಬ ತಮಿಳು ಸಿನಿಮಾ ಇವರ ಮೊತ್ತಮೊದಲ ಫೀಚರ್ ಸಿನಿಮಾ ಎನಿಸಿದೆ. ದಲಿತ ಸಮುದಾಯದ ಧ್ವನಿಯನ್ನು ಈ ಸಿನಿಮಾ ಮೂಲಕ ತೋರಿಸಿದ್ದಾರೆ. ಜಾತಿ ವ್ಯವಸ್ಥೆಯ ಶೋಷಣೆಯನ್ನು ಚಿತ್ರಿಸಿದ್ದಾರೆ.

ಇದರ ಜೊತೆಗೆ ಅನೇಕ ಕವನಗಳನ್ನು ರಚಿಸಿದ್ದಾರೆ. ದೃಶ್ಯಕಾವ್ಯಗಳನ್ನು ಕೊಟ್ಟಿದ್ದಾರೆ. ದೇಶ ವಿದೇಶಗಳಲ್ಲಿ ಹಲವು ಸನ್ಮಾನ, ಪುರಸ್ಕಾರಗಳನ್ನು ಪಡೆದಿದ್ದಾರೆ. ಕೆಲ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ತೀರ್ಪುಗಾರ್ತಿಯಾಗಿಯೂ ಕೆಲಸ ಮಾಡಿದ್ದಾರೆ.

(ಒನ್ಇಂಡಿಯಾ ಸುದ್ದಿ)

English summary
Kaali movie that was screened in Toronto has become controversy after its poster showed Goddess Kali smoking cigarrette. Leena Manimekalai is a canada based film maker, and born in Tamil Nadu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X