ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಲಿಬರಲ್' ಗೆ ಮರುಜೀವ ಕೊಟ್ಟ ಟ್ರುಡೋ, ಪ್ರಬುದ್ಧ ರಾಜಕಾರಣಿಯಾದಾರೆ...?

|
Google Oneindia Kannada News

ಅದು 1971 ರ ಡಿಸೆಂಬರ್ 25. ಕ್ರಿಸ್ ಮಸ್ ಸಂಭ್ರಮದಲ್ಲಿದ್ದ ಅಂದಿನ ಕೆನಡಾ ಪ್ರಧಾನಿ ಪಿರ್ರೆ ಟ್ರುಡೋ ಕುಟುಂಬಕ್ಕೆ ಸಂಭ್ರಮದ ಡಬಲ್ ಧಮಾಕಾ... ಮುಂದೊಮ್ಮೆ ಅತೀ ಕಿರಿ ವಯಸ್ಸಿನಲ್ಲಿ ಕೆನಡಾದ ಪ್ರಧಾನಿಯಾದ ಹೆಗ್ಗಳಿಕೆ ಪಾತ್ರರಾದ ಜಸ್ಟಿನ್ ಟ್ರುಡೋ ಜನಿಸಿದ ದಿನ ಅದು.

ಅಂದು ಮಗುವನ್ನು ನೋಡಲು ಬಂದವರೆಲ್ಲ, 'ಭವಿಷ್ಯದ ಪ್ರಧಾನಿ' ಎಂದು ಹರಸಿದ್ದರು. ಅದು ಸೌಜನ್ಯದ ಮಾತಾಗಿತ್ತೋ ಏನೋ. ಆದ್ರೆ ಜಸ್ಟಿನ್ ಟ್ರುಡೋ ಮಾತ್ರ ಆ ಹಾರೈಕೆಯನ್ನು ಸಾಕಾರಗೊಳಿಸಿದರು. ಮಕಾಡೆ ಮಲಗಿದ್ದ ಲಿಬರ್ ಪಕ್ಷಕ್ಕೆ ಮರುಜೀವ ನೀಡಿ, ಆ ಪಕ್ಷದ ಅನಿವಾರ್ಯ ನಾಯಕರಾಗಿ ಬೆಳೆದರು.

ತಂದೆ ಪಿರ್ರೆ ಟ್ರುಡೊ ತೀರಿಕೊಂಡ ಸಂದರ್ಭದಲ್ಲಿ ಜಸ್ಟಿನ್ ಮಾಡಿದ ಭಾಷಣವೇ ಅವರನ್ನು ಗುರುತಿಸುವಂತೆ ಮಾಡಿತು. ಹೀಗೇ ಅವರು ಬೆಳಕಿಗೆ ಬಂದರು.

2015 ರ ನವೆಂಬರ್ ನಲ್ಲಿ ಟ್ರುಡೋ ಕೆನಡಾ ಪ್ರಧಾನಿಯಾಗಿ, ಲವಲವಿಕೆಯ ನಾಯಕರಾಗಿ ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿದರು. ಆ ಜನಪ್ರಿಯತೆ ಹೆಚ್ಚಾಗದಿದ್ದರೂ, ಮತ್ತಷ್ಟು ಕುಗ್ಗಿಲ್ಲ ಎಂಬುದಕ್ಕೆ ಸಾಕ್ಷಿ ಎಂಬಂತೆ ಕೆನಡಾದ ಪ್ರಧಾನಿಯಾಗಿ ಎರಡನೇ ಬಾರಿಗೆ ಜಸ್ಟಿನ್ ಟ್ರುಡೋ ಆಯ್ಕೆಯಾಗಿದ್ದಾರೆ. ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗಿದ್ದ, ಅತ್ಯಂತ ಕಿರಿ ವಯಸ್ಸಿನಲ್ಲಿ ಕೆನಡಾದ ಪ್ರಧಾನಿಯಾಗುವ ಮೂಲಕ ಈ ಸಾಧನೆ ಮಾಡಿದ ಎರಡನೇ ನಾಯಕ ಅವರಾಗಿದ್ದಾರೆ. ಅದಕ್ಕೂ ಮುನ್ನ ಚಾರ್ಲ್ಸ್ ಜೋಸೆಫ್ (ಜೋಯ್ ಕ್ಲಾರ್ಕ್) ಈ ಸಾಧನೆ ಮಾಡಿದ್ದರು.

ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!ಕೊನೆಗೂ ಮೋದಿ-ಟ್ರುಡೋ ಭೇಟಿ: ಊಹಾಪೋಹಗಳಿಗೆ ತೆರೆ!

ನಾಲ್ಕು ವರ್ಷಗಳ ಯಶಸ್ವಿ ಆಡಳಿತದ ನಂತರ ಇದೀಗ ಮತ್ತೊಮ್ಮೆ ಅವರು ಕೆನಡಾ ಪ್ರಧಾನಿ ಗಾದಿ ಅಲಂಕರಿಸಿದ್ದಾರೆ. ಪೂರ್ಣ ಬಹುಮತ ಪಡೆಯದಿದ್ದರೂ, ಅಲ್ಪಮತದ ಸರ್ಕಾರಕ್ಕೆ ಟ್ರುಡೋ ನಾಯಕರು. ಮಸೂದೆ ಮಂಡನೆ ಸಮಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದನ್ನು ಬಿಟ್ಟರೆ ಟ್ರುಡೋ ಸರ್ಕಾರವಂತೂ ಸೇಫ್.

ಪ್ರಧಾನಿ ಮಗನಾಗಿ...

ಪ್ರಧಾನಿ ಮಗನಾಗಿ...

ಕೆನಡಾದ ಒಂಟಾರಿಯೋದ ಒಟ್ಟಾವ ಎಂಬಲ್ಲಿ ಅಂದಿನ ಪ್ರಧಾನಿ ಪಿರ್ರೆ ಎಲಿಯಟ್ ಟ್ರುಡೋ ಅವರ ಮಗನಾಗಿ ಜನಸಿದ ಜಸ್ಟಿನ್ ಟ್ರುಡೋ, ಆರ್ಟ್ಸ್ ಪದವಿ ಪಡೆದ ನಂತರ ಹಲವು ಕಡೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದ್ದರು. 2005 ರ ವರೆಗೂ ರಾಜಕೀಯ ಕ್ಷೇತ್ರದತ್ತಲೇ ನೋಡದ ಜಸ್ಟಿನ್ ಟ್ರುಡೋ ಇದ್ದಕ್ಕಿದ್ದಂತೆ ಪ್ರಧಾನಿಯಾಗಿದ್ದು ಹೇಗೆ ಎಂಬುದರ ಹಿಂದೆ ಸಾಕಷ್ಟು ಕತೆಯಿದೆ!

ಕೆನಡಾ ದೊರೆಯ ಚರಕ ಪ್ರೀತಿ: ಸಾಬರಮತಿಯಲ್ಲೊಂದು ಚೆಂದದ ಚಿತ್ರ!ಕೆನಡಾ ದೊರೆಯ ಚರಕ ಪ್ರೀತಿ: ಸಾಬರಮತಿಯಲ್ಲೊಂದು ಚೆಂದದ ಚಿತ್ರ!

ಮಕಾಡೆ ಮಲಗಿದ್ದ ಲಿಬರಲ್ ಪಾರ್ಟಿ

ಮಕಾಡೆ ಮಲಗಿದ್ದ ಲಿಬರಲ್ ಪಾರ್ಟಿ

2015 ಕ್ಕೂ ಮುನ್ನ ಸಂಸತ್ತಿನಲ್ಲಿ ಕೇವಲ 36 (338) ಪ್ರತಿನಿಧಿಗಳನ್ನಷ್ಟೇ ಹೊಂದಿದ್ದ ಲಿಬರಲ್ ಪಕ್ಷವನ್ನು 184 ಕ್ಕೇರಿಸಿದ್ದು ಟ್ರುಡೋ ಅವರ ಸಮಯೋಚಿತ ಪ್ರಚಾರ ತಂತ್ರ. ಅದೇ ಕಾರಣಕ್ಕಾಗಿಯೇ 2015 ರಲ್ಲಿ ಅನಿರೀಕ್ಷಿತವಾಗಿ ಗೆಲುವು ಸಾಧಿಸಿದ ಲಿಬರಲ್ ಪಕ್ಷ ಟ್ರುಡೋ ಅವರನ್ನೇ ಪ್ರಧಾನಿ ಹುದ್ದೆಗೆ ಸೂಚಿಸಿತ್ತು. ವಿರೋಧಿ ಕನ್ಸರ್ವೇಟಿವ್ ಪಕ್ಷ ಅಚ್ಚರಿಯ ಸೋಲನುಭವಿಸಿಸತ್ತು. ಕನ್ಸರ್ವೇಟಿವ್ ಪಕ್ಷದ ಸುದೀರ್ಘ ಆಳ್ವಿಕೆಗೆ ಕಡಿವಾಣ ಹಾಕಿದ ಕೀರ್ತಿಯೂ ಟ್ರುಡೋಗೆ ಸಂದಿತ್ತು.

ರಾಜಕೀಯ ಹಾದಿ

ರಾಜಕೀಯ ಹಾದಿ

2008 ರ ಚುನಾವಣೆಯಲ್ಲಿ ಪ್ಯಾಪಿನಿಯೋ ಜಿಲ್ಲೆಯಿಂದ ಹೌಸ್ ಆಫ್ ಕಾಮನ್ಸ್ ಗೆ ಆಯ್ಕೆಯಾದ ನಂತರ ಟ್ರುಡೋ ರಾಜಕೀಯ ಹಾದಿ ಗಟ್ಟಿಯಾಗಿತ್ತು. 2009 ರಲ್ಲಿ ಅವರನ್ನು ಲಿಬರಲ್ ಪಕ್ಷದ ವಕ್ತಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಯುವಕರ ಪ್ರತಿನಿಧಿಯಾಗಿ ಟ್ರುಡೋ ಮಾಡಿದ ಕೆಲಸವನ್ನು ಮೆಚ್ಚಿ ಪಕ್ಷ ಅವರನ್ನು ಗುರುತಿಸಿತ್ತು. ನಂತರ ಅವರನ್ನು ಲಿಬರಲ್ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಯ್ತು.

ಆಹಾ... ಎಷ್ಟು ಚೆಂದ! ಈ ಕುಟುಂಬಕ್ಕೆ ದೃಷ್ಟಿಯಾದೀತು ಜೋಕೆ..!ಆಹಾ... ಎಷ್ಟು ಚೆಂದ! ಈ ಕುಟುಂಬಕ್ಕೆ ದೃಷ್ಟಿಯಾದೀತು ಜೋಕೆ..!

ಫಲ ನೀಡಿತು ಟ್ರುಡೋ ಪ್ರಚಾರ ತಂತ್ರ

ಫಲ ನೀಡಿತು ಟ್ರುಡೋ ಪ್ರಚಾರ ತಂತ್ರ

ಜಸ್ಟಿನ್ ಟ್ರುಡೋ ಅವರು ಉತ್ತಮ ಮಾತುಗಾರ. ತಮ್ಮ ಭಾಷಣದಲ್ಲಿ ಕೆನಡಾ ಬಗೆಗಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತ, ಪ್ರಚಾರಕ್ಕೆ ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸಮರ್ಥವಾಗಿ ಬಳಸಿಕೊಳ್ಳುತ್ತ, ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಸಕ್ರಿಯವಾಗಿಯೇ ಉಳಿಯುವ ಮೂಲಕ ಜನರ ಮನಸ್ಸಿಗೆ ಬಹುಬೇಗನೇ ಹತ್ತಿವಾದರು. ಸ್ಪುರದ್ರೂಪಿ, ಯುವಕ ಟ್ರುಡೋಗೆ ಜನರನ್ನು ಸೆಳೆಯುವುದು ಕಷ್ಟದ ಕೆಲಸವೇ ಆಗಿರಲಿಲ್ಲ. ಆದರೆ ಪ್ರಧಾನಿಯಾಗುವ ಮಟ್ಟಿನ ಪ್ರಬುದ್ಧತೆಯ ಕೊರತೆ ಅವರ ಹಲವು ನಡೆಗಳಲ್ಲಿ ಕಾಣಿಸಿದೆ. ಎಲ್ಲೋ ಒಂದೆಡೆ ಜನಪ್ರಿಯತೆ ಗಳಿಸುವುದೇ ಮುಖ್ಯ ಉದ್ದೇಶವಾಗಿ, ವಿವಾದಾತ್ಮಕ ಹೇಳಿಕೆಗಳಲು, ನಡೆಗಳಿಂದಲೇ ಟ್ರುಡೋ ಹೆಚ್ಚು ಹೆಸರಾದರು. ಆದರೂ ನಾಲ್ಕು ವರ್ಷಗಳ ಆಡಳಿತದ ಮೂಲಕ ಅಲ್ಪಸ್ವಲ್ಪ ರಾಜಕೀಯ ಪ್ರಬುದ್ಧತೆ ಗಳಿಸಿದರೂ, ಮತ್ತಷ್ಟು ಬೇಕು ಎನ್ನಿಸೋದು ಸುಳ್ಳಲ್ಲ.

ಸೆಳೆಯುವಂಥ ಮಾತುಗಾರ

ಸೆಳೆಯುವಂಥ ಮಾತುಗಾರ

ಟ್ರುಡೋ ಒಬ್ಬ ಬಾಕ್ಸರ್, ಜೊತೆಗೆ ಉತ್ತಮ ನಟ ಕೂಡ. ಇದರೊಟ್ಟಿಗೆ ತಂದೆಯಿಂದ ಸಿದ್ಧಿಸಿದ್ದ ಭಾಷಣದ ಕಲೆ... ಎಲ್ಲವೂ ಸೇರಿ ಜನರನ್ನು ಸೆಳೆಯಲು ಏನೆಲ್ಲ ಬೇಕೋ, ಎಲ್ಲವೂ ಸುಲಭವಾಗಿ ಸಿಕ್ಕಿತ್ತು. 2013 ರಲ್ಲಿ ಲಿಬರಲ್ ಪಕ್ಷದ ನಾಯಕರಾಗಿ ಆಯ್ಕೆಯಾಗುತ್ತಿದಂತೆಯೇ ಜನರ ನಾಡಿ ಮಿಡಿತ ಅರಿತಂತೆ ಟ್ರುಡೋ ಆಡಿದ ಮೊದಲ ಮಾತಂದ್ರೆ ತೆರಿಗೆ ನೀತಿಯಲ್ಲಿ ಬದಲಾವಣೆ. ಶ್ರೀಮಂತರಿಗೆ ಹೆಚ್ಚಿನ ತೆರಿಕೆ, ಮಧ್ಯಮ ವರ್ಗದವರಿಗೆ ಕಡಿಮೆ ತೆರಿಗೆ ಹೇರುವ ಬಗ್ಗೆ ಟ್ರುಡೋ ಮಾತನಾಡಿದ್ದರು. ಜೊತೆಗೆ ವಾತಾವರಣದಲ್ಲಾಗುತ್ತಿರುವ ವೈಪರೀತ್ಯಗಳು, ಅದರ ನಿಯಂತ್ರಣಕ್ಕೆ ಕ್ರಮ, ಜಿ7 ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಅವರ ಕೆಲವು ನೀತಿಯನ್ನು ಬಹಿರಂಗವಾಗಿ ವಿರೋಧಿಸಿದ್ದು... ಎಲ್ಲವೂ ಸೇರಿ ಅವರನ್ನು ಮತ್ತೊಮ್ಮೆ ಕೆನಡಾ ಅಧ್ಯಕ್ಷ ಪಟ್ಟಕ್ಕೆ ತಂದು ಕೂರಿಸಿದೆ. ಕಾರ್ಬನ್ ಎಮಿಶನ್ ಅನ್ನು ಕಡಿಮೆ ಮಾಡುವುದೇ ನಮ್ಮ ಆದ್ಯ ಉದ್ದೇಶ ಎಂದು ಲಿಬರಲ್ ಮತ್ತು ಕನ್ಸರ್ವೇಟಿವ್ ಎರಡು ಪಕ್ಷಗಳೂ ಹೇಳಿದ್ದವು. ಆದರೆ ಮತ್ತೆ ಜನರು ಟ್ರುಡೋ ಮಾತಿನ ಮೋದಿಗೆ ಒಲಿಸಿದ್ದಾರೆ. ಈ ಬಾರಿಯ ಚುನಾವಣೆಯ ಆದರೆ ಅಲ್ಪಮತದ ಸರ್ಕಾರವಾಗಿರುವುದರಿಂದ ಒಂದೊಂದು ಹಜ್ಜೆಯನ್ನೂ ನಾಜೂಕಾಗಿಯೇ ಇಡಬೇಕಾದ್ದು ಅನಿವಾರ್ಯ. ಅದು ಟ್ರೂಡೋಗೆ ಗೊತ್ತಿಲ್ಲದ್ದೇನಲ್ಲ. ತಮ್ಮ ಎರಡನೇ ಅವದಿಯನ್ನು ಟಟ್ರುಡೋ ಎಷ್ಟರ ಮಟ್ಟಿಗೆ ಯಶಸ್ವಿಯಾಗಿ ನಿರ್ವಹಿಸುತ್ತಾರೆ ಎಂಬುದು ಕುತೂಹಲದ ವಿಷಯವಾಗಿದೆ.

English summary
Justin Pierre James Trudeau Elected As Prime Minister Of Canada For the 2nd term. Here is His Brief profile,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X