ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯನ್ಯಾಯಮೂರ್ತಿಯಾಗಲಿರುವ ಶರದ್ ಅರವಿಂದ್ ಬೊಬ್ಡೆ ವ್ಯಕ್ತಿಚಿತ್ರ

|
Google Oneindia Kannada News

ತಮ್ಮ ಉತ್ತರಾಧಿಕಾರಿ ಎಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನ್ಯಾ. ಶರದ್ ಅರವಿಂದ್ ಬೊಬ್ಡೆ ಅವರ ಹೆಸರನ್ನು ಸೂಚಿಸಿದ್ದಾರೆ.

ಆಧಾರ್ ಸಿಂಧುತ್ವ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ವಿಚಾರಣೆ ನಡೆಸಿದ್ದ ಬೊಬ್ಡೆ, ಮಧ್ಯಪ್ರದೇಶ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿಯಾಗಿ ಪ್ರಸಿದ್ಧರಾಗಿದ್ದರು.

ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ವಿಚಾರಣೆ ಮುಕ್ತಾಯ, ಏನೆಲ್ಲ ಆಯ್ತು?ಸುಪ್ರೀಂ ಕೋರ್ಟ್ ನಲ್ಲಿ ಅಯೋಧ್ಯೆ ವಿಚಾರಣೆ ಮುಕ್ತಾಯ, ಏನೆಲ್ಲ ಆಯ್ತು?

2021 ಏಪ್ರಿಲ್ 23 ರವರೆಗೂ ಸುಪ್ರೀಂಕೋರ್ಟ್ ನ ಮುಖ್ಯನ್ಯಾಯಮೂರ್ತಿಯಾಗಿರಲಿರುವ ಬೊಬ್ಡೆ ಮಹತ್ವದ ಪ್ರಕರಣಗಳ ತೀರ್ಪು ನೀಡಲಿದ್ದಾರೆ.

Justice Sharad Arvind Bobde Profile In Kannada

* ಮಹಾರಾಷ್ಟ್ರದ ನಾಗ್ಪುರದಲ್ಲಿ ಏಪ್ರಿಲ್ 24, 1956ರಂದು ಜನಿಸಿದ ಬೊಬ್ಡೆ ಅವರು ನಾಗ್ಪುರ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿದ್ದರು.

* ಬೊಬ್ಡೆ ಅವರದು ವಕೀಲರ ವಂಶ. ಅವರ ತಾತ ವಕೀಲರಾಗಿದ್ದರೆ, ತಂದೆ ಅರವಿಂದ್ ಬೊಬ್ಡೆ ಮಹಾರಾಷ್ಟ್ರ ರಾಜ್ಯದ ಅಡ್ವೋಕೇಟ್ ಜನರಲ್ ಆಗಿದ್ದವರು. ಬೊಬ್ಡೆ ಅವರ ಹಿರಿಯ ಮಗ ವಿನೋದ್ ಅರವಿಂದ್ ಬೊಬ್ಡೆ ಸುಪ್ರೀಂ ಕೋರ್ಟಿನ ಹಿರಿಯ ವಕೀಲರಾಗಿದ್ದರು.

* 1978 ನಾಗ್ಪುರ ವಿಶ್ವವಿದ್ಯಾಲಯದ ಎಸ್ ಎಫ್ ಎಸ್ ಕಾಲೇಜ್ ನಲ್ಲಿ ಕಾನೂನು ಪದವಿ ಪಡೆದರು.

* 1978 ಸೆಪ್ಟೆಂಬರ್ 13 ರಂದು ಅಡ್ವೋಕೇಟ್ ಆಗಿ ನೇಮಕಗೊಂಡರು. ಬಾಂಬೆ ಹೈಕೋರ್ಟ್ ನ ನಾಗ್ಪುರ ಬೆಂಚ್ ನಲ್ಲಿ ಅಡ್ವೋಕೇಟ್ ಆಗಿ ಪ್ರಾಕ್ಟಿಸ್ ಆರಂಭಿಸಿದ ಅವರು ನಂತರ 1998 ರಲ್ಲಿ ಸುಪ್ರೀಂ ಕೋರ್ಟ್ ನ ಹಿರಿಯ ವಕೀಲರಾಗಿ ನೇಮಕಗೊಂಡರು.

* ಮಾರ್ಚ್ 29, 2000 ರಲ್ಲಿ ಬಾಂಬೇ ಹೈಕೋರ್ಟ್ ನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು.

* ಮಹಾರಾಷ್ಟ್ರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು.

* 2012ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

* 2013ರ ಏಪ್ರಿಲ್ ನಲ್ಲಿ ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾಗಿ ಬಡ್ತಿ ಪಡೆದ ಬೊಬ್ಡೆ ಹಲವು ಮಹತ್ವದ ಪ್ರಕರಣಗಳ ತೀರ್ಪು ನೀಡಿದ್ದರು.

* ಆಧಾರ್ ಸಿಂಧುತ್ವ, ಭ್ರೂಣ ಹತ್ಯೆ ತಡೆ, ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಮಾತೆ ಮಹಾದೇವಿ ಪುಸ್ತಕ ನಿಷೇಧ, ಪಟಾಕಿ ನಿಷೇಧ ಸೇರಿದಂತೆ ಹಲವು ಪ್ರಕರಣಗಳ ತೀರ್ಪು ನೀಡಿದ್ದಾರೆ.

English summary
Justice Sharad Arvind Bobde Profile In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X