ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುರು ಗ್ರಹ ಜೀವಿಗಳಿಗೂ ಉಗಮ ತಾಣ? ಯುರೋಪಾದಲ್ಲಿ ಭಾರಿ ಪ್ರಮಾಣದ ನೀರು!

|
Google Oneindia Kannada News

ಭೂಮಿ ಬಿಟ್ಟು ಬೇರೆ ಎಲ್ಲಾದರೂ ಮನುಷ್ಯ ಬದುಕಬಹುದಾ ಅಥವಾ ಭೂಮಿ ಬಿಟ್ಟು ಬೇರೆ ಎಲ್ಲಾದ್ರೂ ಜೀವ ಜಗತ್ತು ಇದೆಯಾ ಎಂಬ ಪ್ರಶ್ನೆಗಳು ಹಲವು ಶತಮಾನಗಳಿಂದ ಕಾಡುತ್ತಿದೆ. ಆದರೆ ಕೆಲವು ವರ್ಷಗಳಿಂದ ಈ ಕುತೂಹಲಕ್ಕೆ ಉತ್ತರ ಹುಡುಕುತ್ತಿದ್ದಾನೆ ಮಾನವ. ಇದೀಗ ಆ ಪ್ರಶ್ನೆಗೆ ಒಂದೊಂದೇ ಉತ್ತರ ಸಿಗುತ್ತಿದ್ದು, ಗುರು ಗ್ರಹದ ಉಪಗ್ರಹ ಯುರೋಪಾದಲ್ಲಿ ಭಾರಿ ಪ್ರಮಾಣದ ನೀರು ಕಂಡುಬಂದಿದೆ.

ಗುರು ಗ್ರಹಕ್ಕೆ 79 ಉಪಗ್ರಹ ಇದ್ದು ಈ ಪೈಕಿ 'ಯುರೋಪಾ' ಕೂಡ ಒಂದಾಗಿದೆ. ಆದ್ರೆ ಜೀವಿಗಳು ಬದುಕಬಹುದಾದ ಸಾಧ್ಯತೆ ಇರುವುದು ಯುರೋಪಾ ಉಪಗ್ರಹದಲ್ಲಿ ಮಾತ್ರ. ಏಕೆಂದರೆ ಇದು ಸದಾ ಚಳಿಯಿಂದ ಕೂಡಿದ್ದರೂ, ಯುರೋಪಾ ಭಾರಿ ಪ್ರಮಾಣದ ನೀರು ಅಂದರೆ ಜೀವಜಲ ಹೊಂದಿದೆ.

ಇದು ಹಳೆಯ ವಿಚಾರ, ಆದರೆ ಇದಕ್ಕೆ ಜೀವ ತುಂಬುವ ಕೆಲಸ ಮಾಡಿದ್ದಾರೆ ವಿಜ್ಞಾನಿಗಳು. ಬಾಹ್ಯಾಕಾಶ ವಿಜ್ಞಾನಿಗಳ ಹೊಸ ಸಂಶೋಧನೆ ಪ್ರಕಾರ ಯುರೋಪಾದಲ್ಲಿ ನೀರು ಪಾಕೆಟ್ ರೂಪದಲ್ಲಿ ಶೇಖರಣೆ ಆಗಿದೆಯಂತೆ. ಈ ನೀರು ಹೆಪ್ಪುಗಟ್ಟದಂತೆ ಉಪಗ್ರಹದಲ್ಲಿ ಅಡಗಿರುವ ಲವಣಗಳು, ಅಂದರೆ ನಮ್ಮ ಸಮುದ್ರದ ನೀರಿನಂತೆ ಪಾಕೆಟ್ ವಾಟರ್ ರೂಪುಗೊಂಡಿದೆ ಎನ್ನಲಾಗುತ್ತಿದೆ.

ಸೂಕ್ಷ್ಮ ಜೀವಿಗಳು ಬದುಕಿರಬಹುದಾ..?

ಸೂಕ್ಷ್ಮ ಜೀವಿಗಳು ಬದುಕಿರಬಹುದಾ..?

ಜೀವ ಜಗತ್ತಿನ ಬಗ್ಗೆ ಇದುವರೆಗೂ ಮಾನವ ಕಂಡುಕೊಂಡಿರುವ ಏಕೈಕ ಉತ್ತರ ನೀರು. ಹೌದು ನೀರನ್ನು ಈ ಜಗತ್ತು ಜೀವಜಲ ಎಂದು ಗುರುತಿಸುತ್ತೆ. ಏಕೆಂದರೆ ನೀರು ಇದ್ದರೆ ಮಾತ್ರ ಜೀವಿಗಳು ಬದುಕಲು ಸಾಧ್ಯವಿದೆ. ನೀರು ಇಲ್ಲದೆ ಜೀವಿಗಳ ಅಸ್ತಿತ್ವ ಸಾಧ್ಯವಿಲ್ಲ. ಹೀಗಾಗಿ ನೀರು ಕಂಡ ಕಡೆಗೆಲ್ಲಾ ಜೀವಿಗಳನ್ನ ಹುಡುಕುವ ಪದ್ಧತಿ ತುಂಬಾ ಹಳೆಯದು. ಇದೇ ರೀತಿ ಯುರೋಪಾ ಮೇಲೂ ಜಗತ್ತಿನ ಕಣ್ಣುಬಿದ್ದಿದೆ. ಯುರೋಪಾ ಉಪಗ್ರಹದ ಹೆಪ್ಪುಗಟ್ಟಿದ ಮೇಲ್ಮೈನಲ್ಲಿ ಸೂಕ್ಷ್ಮ ಜೀವಿಗಳು ಬದುಕಿರಬಹುದು ಎಂಬ ಅನುಮಾನ ಮೂಡುತ್ತಿದೆ.

2 ಕಿ.ಮೀ ಆಳಕ್ಕೆ ನೀರಿದೆ..!

2 ಕಿ.ಮೀ ಆಳಕ್ಕೆ ನೀರಿದೆ..!

ಯುರೋಪಾ ಮೇಲೆ ಅಪಾರ ಪ್ರಮಾಣದಲ್ಲಿ ನೀರು ಹುದುಗಿದ್ದು, ಮಂಜುಗಡ್ಡೆ ತುಂಬಿರುವ ಮೇಲ್ಮೈಯಿಂದ 2 ಕಿಲೋ ಮೀಟರ್ ಅಂತರದವರೆಗೂ ನೀರು ಹುದುಗಿದೆ ಎನ್ನಲಾಗುತ್ತಿದೆ. ಈ ನೀರು ಸುದೀರ್ಘ 10 ಸಾವಿರ ವರ್ಷಗಳ ಕಾಲ ಹಾಗೇ ಇರುತ್ತದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು. 'ಯುರೋಪಾ'ದ ಫೋಟೋಗಳು ಸೇರಿದಂತೆ ಟೆಲಿಸ್ಕೋಪ್ ಅಧ್ಯಯನದ ವರದಿ ಬಿಡುಗಡೆಯಾಗಿದೆ. ಈ ವರದಿಯಲ್ಲಿ ಇಂತಹದ್ದೇ ಹಲವು ಸಂಗತಿಗಳನ್ನು ವಿಜ್ಞಾನಿಗಳು ಹಂಚಿಕೊಂಡಿದ್ದು, ಗುರು ಗ್ರಹದ ಉಪಗ್ರಹ ಯುರೋಪಾ ಮೇಲೆ ಜೀವಿಗಳು ಬದುಕಿವೆಯಾ..? ಎಂಬ ಅನುಮಾನವನ್ನು ಹೆಚ್ಚು ಮಾಡಿದೆ.

ಗುರು ಗ್ರಹವೇ ಒಂದು ಅಚ್ಚರಿ..!

ಗುರು ಗ್ರಹವೇ ಒಂದು ಅಚ್ಚರಿ..!

ಹೌದು, ಇಡೀ ಸೌರಮಂಡಲದಲ್ಲಿ ಗುರು ಗ್ರಹ ಒಂದು ಅಚ್ಚರಿ. ಏಕೆಂದರೆ ಇತರ ಎಲ್ಲಾ ಗ್ರಹಗಳಿಗಿಂತ ಗುರು ಅತ್ಯಂತ ದೊಡ್ಡ ಗ್ರಹ. ಕೆಲ ವಿಚಾರಗಳಲ್ಲಿ ಸೂರ್ಯನಿಗೂ ಸೆಡ್ಡು ಹೊಡೆಯುವ ತಾಕತ್ತು ಗುರು ಗ್ರಹಕ್ಕಿದೆ. ಅಷ್ಟೇ ಅಲ್ಲ, ಗುರು ಗ್ರಹದೊಳಗೆ ನಡೆಯುತ್ತಿರುವ ಆಂತರಿಕ ಕ್ರಿಯೆಗಳು ನಕ್ಷತ್ರಗಳ ಕ್ರಿಯೆಗೆ ಹೋಲುತ್ತದೆ ಎಂಬ ಅನುಮಾನ ಕೂಡ ಇದೆ. ಈ ಅನುಮಾನಗಳಿಗೆ ವಿಜ್ಞಾನಿಗಳು ಬಲವಾದ ಕಾರಣವನ್ನೂ ನೀಡುತ್ತಾರೆ. ಗುರು ಗ್ರಹದಲ್ಲಿ ಅನಿಲಗಳ ಸಂಯೋಜನೆ ಇದೆ, ನಕ್ಷತ್ರದಲ್ಲೂ ಇದೇ ರೀತಿಯ ವಸ್ತುಗಳು ಅಡಗಿರುತ್ತವೆ. ಹೀಗಾಗಿ ಮುಂದೊಂದು ದಿನ ಸೂರ್ಯನ ನಂತರ ಗುರು ಗ್ರಹವೇ ನಮಗೆಲ್ಲಾ ಸೂರ್ಯನ ಸ್ಥಾನ ಪಡೆದರೂ ಅಚ್ಚರಿ ಪಡಬೇಕಿಲ್ಲ.

ಗೆಲಿಲಿಯೋ ಮಾಡಿದ ಸಾಧನೆ ಇದು..!

ಗೆಲಿಲಿಯೋ ಮಾಡಿದ ಸಾಧನೆ ಇದು..!

ಇಂದಿಗೆ ಮಾನವ ಗುರು ಗ್ರಹದ ಬಗ್ಗೆ ಇಷ್ಟೆಲ್ಲಾ ಜ್ಞಾನ ಹೊಂದಲು ಅಡಿಪಾಯ ಹಾಕಿಕೊಟ್ಟಿದ್ದೇ ಗೆಲಿಲಿಯೋ. 17ನೇ ಶತಮಾನದಲ್ಲಿ ಗೆಲಿಲಿಯೋ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ಬಾಹ್ಯಾಕಾಶ ವಿಜ್ಞಾನವನ್ನು ಬೆಳೆಸಿದ್ದರು. ಈ ಪೈಕಿ ಗೆಲಿಲಿಯೋಗೆ ಗುರು ಗ್ರಹ ಕಂಡರೆ ಅದೇನೋ ಪ್ರೀತಿ. ಗುರು ಗ್ರಹದ ಚಂದ್ರರ ಕುರಿತು ಅಧ್ಯಯನ ನಡೆಸಿದ್ದ ಮೊದಲಿಗ ಎಂದರೆ ಗೆಲಿಲಿಯೋ. ಹೀಗೆ ಗುರು ಗ್ರಹದಲ್ಲಿ ರಾಸಾಯನಿಕ ಪ್ರಕ್ರಿಯೆಗಳನ್ನು ಗಮನಿಸಿದ್ದ ಗೆಲಿಲಿಯೋ ಹಲವು ಅಂಶವನ್ನ ಕಂಡುಕೊಂಡಿದ್ದ. ಅಲ್ಲಿಂದ ಈವರೆಗೆ ಸುಮಾರು 400 ವರ್ಷಗಳ ಸುದೀರ್ಘ ಅಧ್ಯಯನದಿಂದ ನಮಗೆ ಗುರು ಗ್ರಹ ಒಂದು ಅಚ್ಚರಿ ಆಗಿ ಉಳಿದುಬಿಟ್ಟಿದೆ. ಭವಿಷ್ಯದಲ್ಲಿ ಈ ಗ್ರಹ ಭೂಮಿಗೆ ಬೆಳಕು ನೀಡಿದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

English summary
Europa, the Jupiter's moon may have pockets of water in its icy shell.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X