ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭೂಮಿಗೆ ಸಿಗಲಿದ್ದಾನಾ ಮತ್ತೊಬ್ಬ ಸೂರ್ಯ? ಬಾಹ್ಯಾಕಾಶ ವಿಜ್ಞಾನಿಗಳ ಲೆಕ್ಕಾಚಾರವೇನು?

|
Google Oneindia Kannada News

ಭೂಮಿಗೆ ಒಬ್ಬನೇ ಸೂರ್ಯ ಎಂಬ ಮಾತು ಸ್ವಲ್ಪ ದಿನದಲ್ಲೇ ಮಾಯವಾದರೂ ಅಚ್ಚರಿ ಇಲ್ಲ. ಏಕೆಂದರೆ ಈ ಮಾತನ್ನು ಸುಳ್ಳು ಮಾಡುವ ಪ್ರಕ್ರಿಯೆ ಗುರು ಗ್ರಹದ ಅಂತರಾಳದಲ್ಲಿ ನಡೆಯುತ್ತಿದೆ. ಈ ಕಾರಣಕ್ಕೆ ಗುರುವಿನ ಬೆನ್ನುಬಿದ್ದ ವಿಜ್ಞಾನಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ.

ಗುರು ಗ್ರಹದ ಮಧ್ಯ ಭಾಗದ ವಾತಾವರಣ ಅರಿಯಲು ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಆದ್ರೆ ವಿಜ್ಞಾನಿಗಳ ಸಂಶೋಧನೆಗೆ ಸಹಾಯ ಮಾಡಿದ್ದು ಮಾತ್ರ 1994ರಲ್ಲಿ ನಡೆದಿದ್ದ ಘಟನೆ. ಹೌದು, 1994ರಲ್ಲಿ ಭೀಕರ ಘಟನೆಯೊಂದು ನಡೆದಿತ್ತು, ಕ್ಷುದ್ರಗ್ರಹವೊಂದು ಗುರು ಗ್ರಹಕ್ಕೆ ಅಪ್ಪಳಿಸಿತ್ತು. ಈ ಘಟನೆ ನಡೆದು ಸುಮಾರು 26 ವರ್ಷಗಳ ಬಳಿಕ ಗುರು ಗ್ರಹದ ಮಧ್ಯ ಭಾಗದ ವಾತಾವರಣ ಹೇಗಿದೆ ಎಂಬುದನ್ನು ವಿಜ್ಞಾನಿಗಳು ಲೆಕ್ಕಹಾಕಿದ್ದಾರೆ.

ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!ಬ್ರಹ್ಮಾಂಡದ ಹುಟ್ಟಿನ ರಹಸ್ಯ ಬಯಲು, 'ಮ್ಯಾಗ್ನೆಟಿಕ್ ಫೀಲ್ಡ್' ಮೂಲ ಪತ್ತೆ..!

ಚಿಲಿಯ ಬೃಹತ್ ಟೆಲಿಸ್ಕೋಪ್ ಸಹಾಯದೊಂದಿಗೆ ಈ ಅಧ್ಯಯನ ನಡೆದಿತ್ತು. ನೂತನ ಅಧ್ಯಯನದ ಪ್ರಕಾರ ಗುರು ಗ್ರಹದ ಮಧ್ಯಭಾಗದಲ್ಲಿ 1400 ಕಿಲೋಮೀಟರ್ ವೇಗದಲ್ಲಿ ರಾಕ್ಷಸ ಗಾಳಿ ಬೀಸುತ್ತಿದೆ ಎನ್ನಲಾಗಿದೆ. ಅಲ್ಲದೆ ಕ್ಷುದ್ರಗ್ರಹ ಗುರು ಗ್ರಹದ ಮೇಲೆ ಅಪ್ಪಳಿಸಿದ ಬಳಿಕ ಅಂದರೆ 1994ರ ನಂತರ ಅನೇಕ ಬದಲಾವಣೆಗಳು ಸಂಭವಿಸುತ್ತಿವೆ. ಈ ಪೈಕಿ ಗುರು ಗ್ರಹದಲ್ಲಿ ರಾಸಾಯನಿಕ ಬದಲಾವಣೆ ಪ್ರಮುಖವಾಗಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.

‘ದಿ ಗ್ರೇಡ್ ರೆಡ್ ಸ್ಪಾಟ್’ ಅಚ್ಚರಿ..!

‘ದಿ ಗ್ರೇಡ್ ರೆಡ್ ಸ್ಪಾಟ್’ ಅಚ್ಚರಿ..!

ಭೂಮಿಯಲ್ಲಿ ಚಂಡಮಾರುತ ಬೀಸುವ ರೀತಿ ಗುರು ಗ್ರಹದ ಮೇಲೂ ರಾಕ್ಷಸ ಗಾಳಿ ಬೀಸುತ್ತಲಿದೆ. ಈ ಪೈಕಿ 'ದಿ ಗ್ರೇಡ್ ರೆಡ್ ಸ್ಪಾಟ್' ಭಾಗದಲ್ಲಿ ಭಾರಿ ಪ್ರಮಾಣದ ಚಂಡಮಾರುತ ಬೀಸುತ್ತಿದೆ. ಮಾರುತಗಳ ನಡುವೆ ಘರ್ಷಣೆ ಸಂಭವಿಸಿ ಗುರು ಗ್ರಹದ ಮೇಲೆ ಬೆಂಕಿ ಹೊತ್ತುತ್ತಿದೆ. ಮತ್ತೊಂದು ಕಡೆ ಕ್ಷುದ್ರಗ್ರಹ ಅಪ್ಪಳಿಸಿದ ಬಳಿಕ ಗುರು ಗ್ರಹದಲ್ಲಿ ಹೈಡ್ರೋಜನ್ ಸೈನೈಡ್ ಸೇರಿದಂತೆ ವಿವಿಧ ಅನಿಲಗಳು ಉದ್ಭವವಾಗಿವೆ. ಈ ಗ್ಯಾಸ್ ಗ್ರಹದ ಸುತ್ತಲೂ ಸಂಚರಿಸಿ ಹೊಸ ಪ್ರಕ್ರಿಯೆ ಶುರುಮಾಡಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಭವಿಷ್ಯದಲ್ಲಿ ಗುರು ಭೂಮಿಗೆ ಮತ್ತೊಂದು ಸೂರ್ಯ ಆಗಬಹುದಾ ಎಂಬ ಪ್ರಶ್ನೆಗೂ ಉತ್ತರವನ್ನು ಹುಡುಕಲಾಗುತ್ತಿದೆ. ಏಕೆಂದರೆ ಬೃಹತ್ ಅನಿಲದ ಮೂಟೆಯಂತಿರುವ ಗುರು ಗ್ರಹ ಸೂರ್ಯನ ಆರಂಭಿಕ ಅವಧಿಯನ್ನೇ ಹೋಲುತ್ತಿದೆ.

 ಗೆಲಿಲಿಯೋ ಮಾಡಿದ ಸಾಧನೆ ಇದು..!

ಗೆಲಿಲಿಯೋ ಮಾಡಿದ ಸಾಧನೆ ಇದು..!

ಇಂದಿಗೆ ಮಾನವ ಗುರು ಗ್ರಹದ ಬಗ್ಗೆ ಇಷ್ಟೆಲ್ಲಾ ಜ್ಞಾನ ಹೊಂದಲು ಅಡಿಪಾಯ ಹಾಕಿಕೊಟ್ಟಿದ್ದೇ ಗೆಲಿಲಿಯೋ. 17ನೇ ಶತಮಾನದಲ್ಲಿ ಗೆಲಿಲಿಯೋ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ಬಾಹ್ಯಾಕಾಶ ವಿಜ್ಞಾನವನ್ನು ಬೆಳೆಸಿದ್ದರು. ಈ ಪೈಕಿ ಗೆಲಿಲಿಯೋಗೆ ಗುರು ಗ್ರಹ ಕಂಡರೆ ಅದೇನೋ ಪ್ರೀತಿ. ಗುರು ಗ್ರಹದ ಚಂದ್ರರ ಕುರಿತು ಅಧ್ಯಯನ ನಡೆಸಿದ್ದ ಮೊದಲಿಗ ಎಂದರೆ ಗೆಲಿಲಿಯೋ. ಹೀಗೆ ಗುರು ಗ್ರಹದಲ್ಲಿ ರಾಸಾಯನಿಕ ಪ್ರಕ್ರಿಯೆಗಳನ್ನು ಗಮನಿಸಿದ್ದ ಗೆಲಿಲಿಯೋ ಹಲವು ಅಂಶವನ್ನ ಕಂಡುಕೊಂಡಿದ್ದ. ಅಲ್ಲಿಂದ ಈವರೆಗೆ ಸುಮಾರು 400 ವರ್ಷಗಳ ಸುದೀರ್ಘ ಅಧ್ಯಯನದಿಂದ ನಮಗೆ ಗುರು ಗ್ರಹ ಒಂದು ಅಚ್ಚರಿ ಆಗಿ ಉಳಿದುಬಿಟ್ಟಿದೆ. ಭವಿಷ್ಯದಲ್ಲಿ ಈ ಗ್ರಹ ಭೂಮಿಗೆ ಬೆಳಕು ನೀಡಿದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಭೂಮಿ ಜಸ್ಟ್ ಮಿಸ್! ಕೂದಲೆಳೆ ಅಂತರದಲ್ಲಿ ದೂರವಾಯ್ತು ಮಹಾ ಕಂಟಕ!ಭೂಮಿ ಜಸ್ಟ್ ಮಿಸ್! ಕೂದಲೆಳೆ ಅಂತರದಲ್ಲಿ ದೂರವಾಯ್ತು ಮಹಾ ಕಂಟಕ!

ಗುರು ಗ್ರಹವೇ ಒಂದು ಅಚ್ಚರಿ..!

ಗುರು ಗ್ರಹವೇ ಒಂದು ಅಚ್ಚರಿ..!

ಹೌದು, ಇಡೀ ಸೌರಮಂಡಲದಲ್ಲಿ ಗುರು ಗ್ರಹ ಒಂದು ಅಚ್ಚರಿ. ಏಕೆಂದರೆ ಇತರ ಎಲ್ಲಾ ಗ್ರಹಗಳಿಗಿಂತ ಗುರು ಅತ್ಯಂತ ದೊಡ್ಡ ಗ್ರಹ. ಕೆಲ ವಿಚಾರಗಳಲ್ಲಿ ಸೂರ್ಯನಿಗೂ ಸೆಡ್ಡು ಹೊಡೆಯುವ ತಾಕತ್ತು ಗುರು ಗ್ರಹಕ್ಕಿದೆ. ಅಷ್ಟೇ ಅಲ್ಲ, ಗುರು ಗ್ರಹದೊಳಗೆ ನಡೆಯುತ್ತಿರುವ ಆಂತರಿಕ ಕ್ರಿಯೆಗಳು ನಕ್ಷತ್ರಗಳ ಕ್ರಿಯೆಗೆ ಹೋಲುತ್ತದೆ ಎಂಬ ಅನುಮಾನ ಕೂಡ ಇದೆ. ಈ ಅನುಮಾನಗಳಿಗೆ ವಿಜ್ಞಾನಿಗಳು ಬಲವಾದ ಕಾರಣವನ್ನೂ ನೀಡುತ್ತಾರೆ. ಗುರು ಗ್ರಹದಲ್ಲಿ ಅನಿಲಗಳ ಸಂಯೋಜನೆ ಇದೆ, ನಕ್ಷತ್ರದಲ್ಲೂ ಇದೇ ರೀತಿಯ ವಸ್ತುಗಳು ಅಡಗಿರುತ್ತವೆ. ಹೀಗಾಗಿ ಮುಂದೊಂದು ದಿನ ಸೂರ್ಯನ ನಂತರ ಗುರು ಗ್ರಹವೇ ನಮಗೆಲ್ಲಾ ಸೂರ್ಯನ ಸ್ಥಾನ ಪಡೆದರೂ ಅಚ್ಚರಿ ಪಡಬೇಕಿಲ್ಲ.

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ಊಹೆಗೆ ನಿಲುಕದಷ್ಟು ಶಾಖ ಬಿಡುಗಡೆ

ನಕ್ಷತ್ರಗಳು ಮೊದಲಿಗೆ ಸಾಮಾನ್ಯ ಮೋಡ ಅಥವಾ ಅನಿಲ ಗ್ರಹದಂತೆ ಗೋಚರಿಸಿದರೂ ಅಲ್ಲಿ ಬಿಸಿ ಹೆಚ್ಚಾಗಿ ಬೈಜಿಕ ಸಮ್ಮಿಲ ಆರಂಭವಾಗುತ್ತದೆ. ಇದನ್ನ ಸಾಮಾನ್ಯವಾಗಿ ಹೇಳುವುದಾದರೆ ಭೂಮಿ ವಿನಾಶಕ್ಕೆ ಮನುಷ್ಯ ಕಂಡುಹಿಡಿದ ಅಣುಬಾಂಬ್ ಅಥವಾ ನ್ಯೂಕ್ಲಿಯರ್ ವೆಪನ್ಸ್ ಇದೇ ಮಾದರಿಯನ್ನು ಅನುಸರಿಸುತ್ತವೆ. ಆದರೆ ಮಾನವನ ಬಾಂಬ್ ಬೈಜಿಕ ವಿದಳನ ಕ್ರಿಯೆಯಿಂದ ಆಗುತ್ತದೆ. ಆದರೆ ನಕ್ಷತ್ರಗಳಲ್ಲಿ ಬೈಜಿಕ ಸಮ್ಮಿಲನ ಕ್ರಿಯೆ(Nuclear fusion) ಮೂಲಕ ಅಪಾರ ಪ್ರಮಾಣದಲ್ಲಿ ಶಾಖ ಹಾಗೂ ಶಕ್ತಿ ಬಿಡುಗಡೆಯಾಗುತ್ತದೆ. ಇದೇ ಪ್ರಕ್ರಿಯೆ ಮುಂದೆ ನಕ್ಷತ್ರ ರೂಪಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಹೈಡ್ರೋಜನ್ (H1) + ಹೈಡ್ರೋಜನ್ (H1) ಒಂದುಗೂಡಿ ಹೀಲಿಯಂ (H2) ಆಗುತ್ತದೆ. ಮುಂದೆ ಹೀಲಿಯಂ (H2) + ಹೀಲಿಯಂ (H2) ಒಂದುಗೂಡಿ ಬೆರಿಲಿಯಂ (Be4) ಆಗುತ್ತದೆ. ನಕ್ಷತ್ರಗಳ ಬೈಜಿಕ ಸಮ್ಮಿಲನ 1+1ರ ಸೂತ್ರ ಆಧರಿಸಿರುತ್ತದೆ.

ಸೂರ್ಯನ ಮೇಲೆ 'ಕ್ಯಾಂಪ್‌ಫೈರ್' ಕಂಡ ಬಾಹ್ಯಾಕಾಶ ವಿಜ್ಞಾನಿಗಳು..!ಸೂರ್ಯನ ಮೇಲೆ 'ಕ್ಯಾಂಪ್‌ಫೈರ್' ಕಂಡ ಬಾಹ್ಯಾಕಾಶ ವಿಜ್ಞಾನಿಗಳು..!

English summary
Scientists found Jupiter’s mid atmosphere situation and their speed of wind.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X