ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಜುನೋ’ ಕ್ಲಿಕ್ ಕ್ಲಿಕ್! ಅತಿದೊಡ್ಡ ಉಪಗ್ರಹದ ಫೋಟೋ ತೆಗೆದ ‘ನಾಸಾ’ ನೌಕೆ!

|
Google Oneindia Kannada News

ಬಾಹ್ಯಾಕಾಶ ಸಂಶೋಧನೆಯಲ್ಲಿ ಅಮೆರಿಕದ 'ನಾಸಾ' ಏನಾದರೂ ಒಂದು ಸಾಧನೆ ಮಾಡುತ್ತಲೇ ಇರುತ್ತೆ. ಹೀಗೆ ಗುರು ಗ್ರಹದ ಉಪಗ್ರಹ 'ಗ್ಯಾನಿಮಿಡ್' ಫೋಟೋ ಕ್ಲಿಕ್ಕಿಸಿದೆ ನಾಸಾ ಸಂಸ್ಥೆಯ ಉಪಗ್ರಹ 'ಜುನೋ'. 'ಗ್ಯಾನಿಮಿಡ್' ಸೌರಮಂಡಲದಲ್ಲೇ ದೊಡ್ಡದಾದ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ಗ್ಯಾನಿಮಿಡ್' ಗುರುಗ್ರಹದ ಉಪಗ್ರಹಗಳಲ್ಲೇ ಪ್ರಭಾವಶಾಲಿ ಹಾಗೂ ಇದರ ಗಾತ್ರ ನಮ್ಮ ಬುಧ ಗ್ರಹಕ್ಕೆ ಸಮಾನವಾಗಿದೆ ಎಂದರೆ ನಿಮಗೆ ಆಶ್ಚರ್ಯ ಆಗಬಹುದು.

ಇಷ್ಟು ದೊಡ್ಡದಾದ ಉಪಗ್ರಹದ ಮೈಮೇಲೆ ತೆಳು ಹಾಳೆಯಂತೆ ಹಿಮ ಹರಡಿದ್ದು, ಮುಂದೊಂದು ದಿನ ಜೀವಿಗಳು ಬದುಕಲು ಸಾಧ್ಯವಾಗುವ ಸಾಧ್ಯತೆ ದಟ್ಟವಾಗಿದೆ. ಇದೇ ಕಾರಣಕ್ಕೆ 'ನಾಸಾ' ತನ್ನ ಜುನೋ ಬಾಹ್ಯಾಕಾಶ ನೌಕೆಯನ್ನ 'ಗ್ಯಾನಿಮಿಡ್' ಅಧ್ಯಯನಕ್ಕೆ ಪೂರಕವಾಗಿಯೇ ರೂಪಿಸಿದೆ.

ಪ್ರತಿ ಸೆಕೆಂಡ್‌ಗೆ ಸುಮಾರು 11 ಸಾವಿರ ಕಿಲೋ ಮೀಟರ್ ವೇಗದಲ್ಲಿ ಗ್ಯಾನಿಮಿಡ್ ಗುರು ಗ್ರಹದ ಸುತ್ತಾ ತಿರುಗುತ್ತಿದೆ. ಇಷ್ಟು ವೇಗದಲ್ಲಿ ತಿರುಗುವ 'ಗ್ಯಾನಿಮಿಡ್' ಫೋಟೋ ತೆಗೆಯುವುದು ಸುಲಭದ ಕೆಲಸ ಅಲ್ಲವೇ ಅಲ್ಲ. ಆದ್ರೆ ನಾಸಾದ ಜುನೋ ಬಾಹ್ಯಾಕಾಶ ನೌಕೆ ಸುಮಾರು 1,038 ಕಿಲೋ ಮಿಟರ್ ಅಂತರದಲ್ಲಿ 'ಗ್ಯಾನಿಮಿಡ್' ಫೋಟೋ ಕ್ಲಿಕ್ಕಿಸಿ ಸೈ ಎನಿಸಿಕೊಂಡಿದೆ.

21 ವರ್ಷದಲ್ಲೇ ದೊಡ್ಡ ಸಾಧನೆ..!

21 ವರ್ಷದಲ್ಲೇ ದೊಡ್ಡ ಸಾಧನೆ..!

ಸುಮಾರು 21 ವರ್ಷಗಳಿಂದ 'ಗ್ಯಾನಿಮಿಡ್' ಉಪಗ್ರಹದ ಫೋಟೋ ತೆಗೆಯಲು ಆಗಿರಲಿಲ್ಲ. ಅಲ್ಲದೆ ಜಗತ್ತಿನ ಬಹುದೊಡ್ಡ ಬಾಹ್ಯಾಕಾಶ ಸಂಸ್ಥೆಗಳು ಫೋಟೋ ಕ್ಲಿಕ್ಕಿಸಲು ತಿಣುಕಾಡಿದ್ದವು. ಆದ್ರೆ ನಾಸಾ ಸಂಸ್ಥೆ ಬಹುದೊಡ್ಡ ಸಾಧನೆ ಮಾಡಿದೆ. ಈಗ ಗ್ಯಾನಿಮಿಡ್ ಉಪಗ್ರಹದ ಫೋಟೋ ತೆಗೆದಿರುವ ನಾಸಾದ 'ಜುನೋ' ಬಾಹ್ಯಾಕಾಶ ನೌಕೆ ಈವರೆಗೂ 28 ಬಾರಿ ಗುರು ಗ್ರಹವನ್ನು ಸುತ್ತು ಹೊಡೆದಿದೆ. ಆದರೂ 'ಗ್ಯಾನಿಮಿಡ್' ಉಪಗ್ರಹ ಬಲೆಗೆ ಬಿದ್ದಿರಲಿಲ್ಲ. ಈ ಬಾರಿ ಫೋಟೋ ತೆಗೆಯುವಲ್ಲಿ ಯಶಸ್ವಿಯಾದ 'ಜುನೋ' ಅತಿ ಸಮೀಪದಲ್ಲೇ ಉಪಗ್ರಹದ ಫೋಟೋ ಕ್ಲಿಕ್ಕಿಸಿದೆ. ಈ ಮೂಲಕ ನಾಸಾ ಸಂಸ್ಥೆಗೆ ಮತ್ತೊಂದು ಸಾಧನೆಯ ಗರಿ ದೊರಕಿಸಿದೆ.

ಮತ್ತೊಂದು ‘ಭೂಮಿ’ ಸಿಗುತ್ತಾ..?

ಮತ್ತೊಂದು ‘ಭೂಮಿ’ ಸಿಗುತ್ತಾ..?

ಯಾರು ಏನೇ ಹೇಳಲಿ, ನಮ್ಮ ಭೂಮಿ ರೀತಿ ಜೀವ ವೈವಿದ್ಯದ ಗ್ರಹ ಎಲ್ಲೂ ಸಿಗಲು ಸಾಧ್ಯವಿಲ್ಲ. ಆದರೆ ಭೂ ತಾಯಿಯ ಹೋಲಿಕೆ ಇರುವ ಗ್ರಹಗಳು ಅಲ್ಲಲ್ಲಿ ಕಣ್ಣಿಗೆ ಬೀಳುತ್ತವೆ. ಈಗಲೂ ಕೂಡ ಅಂತಹದ್ದೇ ಅನುಮಾನ ಮೂಡಿದೆ. ಹೇಗೆಂದರೆ ಗುರುಗ್ರಹದ ಉಪಗ್ರಹ 'ಗ್ಯಾನಿಮಿಡ್' ಭೂಮಿ ರೀತಿಯ ಹೋಲಿಕೆ ಹೊಂದಿದೆ. ಅಲ್ಲಿ ನೀರು ಇರುವ ಸಾಧ್ಯತೆ ದಟ್ಟವಾಗಿದೆ. ಅಲ್ಲದೆ ಗ್ಯಾನಿಮಿಡ್ ಮೇಲ್ಮೈ ಥೇಟ್ ಭೂಮಿಯಂತೆ ರೂಪುಗೊಂಡಿದೆ. ಇನ್ನು ಗ್ಯಾನಿಮಿಡ್ ಉಪಗ್ರಹದ ಅಂತರಾಳದಲ್ಲಿ ಜ್ವಾಲಮುಖಿಗಳು ಕೂಡ ಅಲರ್ಟ್ ಆಗಿದ್ದು, ಮುಂದೊಂದು ದಿನ ಇದು ಭೂಮಿಯಂತೆ ಬದಲಾದರೂ ಅಚ್ಚರಿ ಇಲ್ಲ ಎನ್ನುತ್ತಾರೆ ಬಾಹ್ಯಾಕಾಶ ವಿಜ್ಞಾನಿಗಳು.

‘ದಿ ಗ್ರೇಡ್ ರೆಡ್ ಸ್ಪಾಟ್’ ಅಚ್ಚರಿ!

‘ದಿ ಗ್ರೇಡ್ ರೆಡ್ ಸ್ಪಾಟ್’ ಅಚ್ಚರಿ!

ಭೂಮಿಯಲ್ಲಿ ಚಂಡಮಾರುತ ಬೀಸುವ ರೀತಿ ಗುರು ಗ್ರಹದ ಮೇಲೂ ರಾಕ್ಷಸ ಗಾಳಿ ಬೀಸುತ್ತಲಿದೆ. ಈ ಪೈಕಿ 'ದಿ ಗ್ರೇಡ್ ರೆಡ್ ಸ್ಪಾಟ್' ಭಾಗದಲ್ಲಿ ಭಾರಿ ಪ್ರಮಾಣದ ಚಂಡಮಾರುತ ಬೀಸುತ್ತಿದೆ. ಮಾರುತಗಳ ನಡುವೆ ಘರ್ಷಣೆ ಸಂಭವಿಸಿ ಗುರು ಗ್ರಹದ ಮೇಲೆ ಬೆಂಕಿ ಹೊತ್ತುತ್ತಿದೆ. ಮತ್ತೊಂದು ಕಡೆ ಕ್ಷುದ್ರಗ್ರಹ ಅಪ್ಪಳಿಸಿದ ಬಳಿಕ ಗುರು ಗ್ರಹದಲ್ಲಿ ಹೈಡ್ರೋಜನ್ ಸೈನೈಡ್ ಸೇರಿದಂತೆ ವಿವಿಧ ಅನಿಲಗಳು ಉದ್ಭವವಾಗಿವೆ. ಈ ಗ್ಯಾಸ್ ಗ್ರಹದ ಸುತ್ತಲೂ ಸಂಚರಿಸಿ ಹೊಸ ಪ್ರಕ್ರಿಯೆ ಶುರುಮಾಡಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲದರ ನಡುವೆ ಭವಿಷ್ಯದಲ್ಲಿ ಗುರು ಭೂಮಿಗೆ ಮತ್ತೊಂದು ಸೂರ್ಯ ಆಗಬಹುದಾ ಎಂಬ ಪ್ರಶ್ನೆಗೂ ಉತ್ತರವನ್ನ ಹುಡುಕಲಾಗುತ್ತಿದೆ. ಏಕೆಂದರೆ ಬೃಹತ್ ಅನಿಲದ ಮೂಟೆಯಂತಿರುವ ಗುರು ಗ್ರಹ ಸೂರ್ಯನ ಆರಂಭಿಕ ಅವಧಿಯನ್ನೇ ಹೋಲುತ್ತಿದೆ.

ಗೆಲಿಲಿಯೋ ಮಾಡಿದ ಸಾಧನೆ ಇದು..!

ಗೆಲಿಲಿಯೋ ಮಾಡಿದ ಸಾಧನೆ ಇದು..!

ಇಂದಿಗೆ ಮಾನವ ಗುರು ಗ್ರಹದ ಬಗ್ಗೆ ಇಷ್ಟೆಲ್ಲಾ ಜ್ಞಾನ ಹೊಂದಲು ಅಡಿಪಾಯ ಹಾಕಿಕೊಟ್ಟಿದ್ದೇ ಗೆಲಿಲಿಯೋ. 17ನೇ ಶತಮಾನದಲ್ಲಿ ಗೆಲಿಲಿಯೋ ಇಡೀ ಸಮಾಜವನ್ನೇ ಎದುರು ಹಾಕಿಕೊಂಡು ಬಾಹ್ಯಾಕಾಶ ವಿಜ್ಞಾನವನ್ನು ಬೆಳೆಸಿದ್ದರು. ಈ ಪೈಕಿ ಗೆಲಿಲಿಯೋಗೆ ಗುರು ಗ್ರಹ ಕಂಡರೆ ಅದೇನೋ ಪ್ರೀತಿ. ಗುರು ಗ್ರಹದ ಚಂದ್ರರ ಕುರಿತು ಅಧ್ಯಯನ ನಡೆಸಿದ್ದ ಮೊದಲಿಗ ಎಂದರೆ ಗೆಲಿಲಿಯೋ. ಹೀಗೆ ಗುರು ಗ್ರಹದಲ್ಲಿ ರಾಸಾಯನಿಕ ಪ್ರಕ್ರಿಯೆಗಳನ್ನು ಗಮನಿಸಿದ್ದ ಗೆಲಿಲಿಯೋ ಹಲವು ಅಂಶವನ್ನ ಕಂಡುಕೊಂಡಿದ್ದ. ಅಲ್ಲಿಂದ ಈವರೆಗೆ ಸುಮಾರು 400 ವರ್ಷಗಳ ಸುದೀರ್ಘ ಅಧ್ಯಯನದಿಂದ ನಮಗೆ ಗುರು ಗ್ರಹ ಒಂದು ಅಚ್ಚರಿ ಆಗಿ ಉಳಿದುಬಿಟ್ಟಿದೆ. ಭವಿಷ್ಯದಲ್ಲಿ ಈ ಗ್ರಹ ಭೂಮಿಗೆ ಬೆಳಕು ನೀಡಿದರೂ ಅಚ್ಚರಿ ಪಡಬೇಕಿಲ್ಲ ಎನ್ನುತ್ತಾರೆ ವಿಜ್ಞಾನಿಗಳು.

ಗುರು ಗ್ರಹವೇ ಒಂದು ಅಚ್ಚರಿ..!

ಹೌದು, ಇಡೀ ಸೌರಮಂಡಲದಲ್ಲಿ ಗುರು ಗ್ರಹ ಒಂದು ಅಚ್ಚರಿ. ಏಕೆಂದರೆ ಇತರ ಎಲ್ಲಾ ಗ್ರಹಗಳಿಗಿಂತ ಗುರು ಅತ್ಯಂತ ದೊಡ್ಡ ಗ್ರಹ. ಕೆಲ ವಿಚಾರಗಳಲ್ಲಿ ಸೂರ್ಯನಿಗೂ ಸೆಡ್ಡು ಹೊಡೆಯುವ ತಾಕತ್ತು ಗುರು ಗ್ರಹಕ್ಕಿದೆ. ಅಷ್ಟೇ ಅಲ್ಲ, ಗುರು ಗ್ರಹದೊಳಗೆ ನಡೆಯುತ್ತಿರುವ ಆಂತರಿಕ ಕ್ರಿಯೆಗಳು ನಕ್ಷತ್ರಗಳ ಕ್ರಿಯೆಗೆ ಹೋಲುತ್ತದೆ ಎಂಬ ಅನುಮಾನ ಕೂಡ ಇದೆ. ಈ ಅನುಮಾನಗಳಿಗೆ ವಿಜ್ಞಾನಿಗಳು ಬಲವಾದ ಕಾರಣವನ್ನೂ ನೀಡುತ್ತಾರೆ. ಗುರು ಗ್ರಹದಲ್ಲಿ ಅನಿಲಗಳ ಸಂಯೋಜನೆ ಇದೆ, ನಕ್ಷತ್ರದಲ್ಲೂ ಇದೇ ರೀತಿಯ ವಸ್ತುಗಳು ಅಡಗಿರುತ್ತವೆ. ಹೀಗಾಗಿ ಮುಂದೊಂದು ದಿನ ಸೂರ್ಯನ ನಂತರ ಗುರು ಗ್ರಹವೇ ನಮಗೆಲ್ಲಾ ಸೂರ್ಯನ ಸ್ಥಾನ ಪಡೆದರೂ ಅಚ್ಚರಿ ಪಡಬೇಕಿಲ್ಲ.

English summary
NASA’s Juno spacecraft succeeded to click the photo of Jupiter’s big moon Ganymede.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X