ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜುಲೈ 21, ಕರ್ಕಾಟಕ ಸಂಕ್ರಾಂತಿ- ಈ ವರ್ಷದ ಸುದೀರ್ಘ ಹಗಲು ಇರುವ ದಿನ

|
Google Oneindia Kannada News

ನಿಮಗೆ ನಮ್ಮ ವಿಶ್ವದ ಸಣ್ಣಪುಟ್ಟ ಚಮತ್ಕಾರಗಳು ಮತ್ತು ಸೋಜಿಗದ ಸಂಗತಿಗಳು ಕುತೂಹಲ ಮೂಡಿಸುತ್ತವೆ ಎಂದಾದರೆ ನಾಳೆ ಮಂಗಳವರ ಅಂಥದ್ದೊಂದು ದಿನ ಇದೆ. ಜೂನ್ 21 ಕರ್ಕಾಟಕ ಸಂಕ್ರಾಂತಿಯ ದಿನವಾಗಿದೆ. ಇದು ಹಿಂದೂ ಹಬ್ಬದ ದಿನವಲ್ಲ. ಸಮರ್ ಸಾಲ್‌ಸ್ಟೈಸ್ (Summer Solstice) ಎಂದು ಕರೆಯುವ ಇದು ಈ ವರ್ಷದ ಅತೀ ಹೆಚ್ಚು ಅವಧಿ ಹಗಲು ಇರುವ ದಿನವಾಗಿದೆ.

ಈ ದಿನದಂದು ಅತಿ ಹೆಚ್ಚು ಹೊತ್ತು ಹಗಲು ಇರುತ್ತದೆ. ಅತಿ ಕಡಿಮೆ ಅವಧಿ ರಾತ್ರಿ ಇರುತ್ತದೆ. ಭೂಮಿಯ ಉತ್ತರ ಗೋಳಾರ್ಧದಲ್ಲಿರುವ ಕೆಲ ದೇಶಗಳಲ್ಲಿ ನಾಳೆ ಮಂಗಳವಾರ ಸುದೀರ್ಘ ಹಗಲನ್ನು ಕಾಣಬಹುದು. ಈ ದಿನವನ್ನು ಅಲ್ಲಿ ಮಿಡ್ ಸಮ್ಮರ್ ಎಂದೂ ಕರೆಯುತ್ತಾರೆ. ಭಾರತದಲ್ಲಿ ಇದು ಪೂರ್ಣ ಪ್ರಮಾಣದಲ್ಲಿ ಇರುವುದಿಲ್ಲ. ಅಂದರೆ ಅಷ್ಟು ಸುದೀರ್ಘ ಹಗಲು ಭಾರತದಲ್ಲಿ ಕಾಣಸಿಗುವುದಿಲ್ಲ. ಸ್ವೀಡನ್, ನಾರ್ವೆ, ಫಿನ್ಲೆಂಡ್, ಡೆನ್ಮಾರ್ಕ್ ಮೊದಲಾದ ದೇಶಗಳಲ್ಲಿ ಜೂನ್ ೨೧ರ ಸಮರ್ ಸಾಲ್‌ಸ್ಟೈಸ್ ದಿನವನ್ನು ಹಬ್ಬವಾಗಿ ಆಚರಿಸುತ್ತಾರೆ.

ನಾಲ್ಕು ಗ್ರಹಗಳ ಸಾಲು; ಸಾವಿರ ವರ್ಷಗಳಿಗೊಮ್ಮೆ ಕಾಣುವ ಗಗನ ವೈಭವನಾಲ್ಕು ಗ್ರಹಗಳ ಸಾಲು; ಸಾವಿರ ವರ್ಷಗಳಿಗೊಮ್ಮೆ ಕಾಣುವ ಗಗನ ವೈಭವ

ಕೆಲ ದೇಶಗಳಲ್ಲಿ ಜೂನ್ 21ರಂದು ಬೆಳಗ್ಗೆ ೫:೧೪ಕ್ಕೆಯೇ ಸೂರ್ಯೋದಯ ಆಗುತ್ತದೆ. ಸೂರ್ಯಾಸ್ತದ ಸಮಯವೂ ವಿಳಂಬವಾಗಿರುತ್ತದೆ. ಹೀಗಾಗಿ ಈ ದಿನದಂದು ಹಗಲಿನ ಅವಧಿ ಅತಿಹೆಚ್ಚು ಇರುತ್ತದೆ.

June 21st Summer Solstice, Karkataka Sankranti- Longest Day of the Year

ಯಾಕೆ ಹಗಲು ಹೆಚ್ಚು?
ಕರ್ಕಾಟಕ ಸಂಕ್ರಾಂತಿಯ ದಿನದಂದು ಸೂರ್ಯನೆಡೆಗೆ ಭೂಮಿ ಅತಿ ಹೆಚ್ಚು ವಾಲಿರುತ್ತದೆ. ಆಗ ಹಗಲಿನ ಅವಧಿ ಅತಿ ಹೆಚ್ಚು ಇರುತ್ತದೆ. ಇನ್ನು, ಸೂರ್ಯನತ್ತ ಭೂಮಿ ಅತಿಕಡಿಮೆ ವಾಲಿದ್ದರೆ ಆಗ ಹಗಲಿನ ಅವಧಿ ಅತಿ ಕಡಿಮೆ ಇರುತ್ತದೆ. ಇದು ಡಿಸೆಂಬರ್ ತಿಂಗಳಲ್ಲಿ ನಡೆಯುತ್ತದೆ. ಈ ಎರಡು ವಿದ್ಯಮಾನಗಳು ಪ್ರತೀ ವರ್ಷವೂ ಸಹಜವಾಗಿ ಘಟಿಸುವ ನೈಸರ್ಗಿಕ ಕ್ರಿಯೆ.

(ಒನ್ಇಂಡಿಯಾ ಸುದ್ದಿ)

English summary
June 21st of the year some countries get to enjoy the longest day of the year. This pheonomenon is called the summer solstice.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X