ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಯೂರಿಟಿ ಗಾರ್ಡ್ ನಿಂದ ತಹಶೀಲ್ದಾರ್ ತನಕ ಲಾಲ್ ಸಾಬ್ ಗೊಂದು ಸಲಾಂ

By ಅನಿಲ್ ಆಚಾರ್
|
Google Oneindia Kannada News

ಇಪ್ಪತ್ತೆಂಟು ವರ್ಷದ ಲಾಲ್ ಸಾಬ್ ಸದ್ಯಕ್ಕೆ ಮೈಸೂರಿನಲ್ಲಿರುವ ಸರಕಾರಿ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆಯಲ್ಲಿ ತಹಶೀಲ್ದಾರ್ ಆಗಿ ಆಯ್ಕೆ ಆದ ಅವರು, ಅದಕ್ಕಾಗಿಯೇ ತರಬೇತಿಯನ್ನು ಪಡೆಯುತ್ತಿದ್ದಾರೆ. ಆದರೆ ಕೆಲ ತಿಂಗಳ ಹಿಂದೆ ಅವರ ಜೀವನವೇ ವಿಭಿನ್ನವಾಗಿತ್ತು.

ಕಳೆದ ವರ್ಷದ ಅಕ್ಟೋಬರ್ ತನಕ ಲಾಲ್ ಸಾಬ್ ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದರು. ತಮಗೆ ಹದಿನಾರು ವರ್ಷ ತುಂಬಿದಾಗಿನಿಂದ ಒಂದಲ್ಲ ಒಂದು ಉದ್ಯೋಗ ಮಾಡಿಕೊಂಡು ಬರುತ್ತಲೇ ಇದ್ದರು ಲಾಲ್ ಸಾಬ್. ಬಾಣಸಿಗ, ಅಡುಗೆ ಬಡಿಸುವುದು, ಸೆಕ್ಯೂರಿಟಿ ಗಾರ್ಡ್ ಹೀಗೆ ತಮ್ಮ ಓದಿಗೆ ಹಣಕಾಸು ವ್ಯವಸ್ಥೆ ಮಾಡಿಕೊಳ್ಳಲು ನಾನಾ ಕೆಲಸ ಮಾಡಿದ್ದಾರೆ.

ಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿಭಾರತೀಯ ಅರಣ್ಯ ಸೇವೆಗೆ ಆಯ್ಕೆಯಾದ ಕರ್ನಾಟಕದ ಏಕೈಕ ಅಭ್ಯರ್ಥಿ ಲಕ್ಷ್ಮಿ

ಲಾಲ್ ಸಾಬ್ ಎಸ್ಸೆಸ್ಸೆಲ್ಸಿ ಓದುವಾಗ ಪತ್ರಿಕೆ ಹಾಗೂ ಹಾಲು ಹಾಕುತ್ತಿದ್ದರು. ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. "ನನ್ನಂಥ ಸಾಮಾನ್ಯ ಜೀವನ ಸುಧಾರಿಸಲು ಲೋಕಸೇವಾ ಉದ್ಯೋಗಕ್ಕೆ ಸೇರಬೇಕು ಎಂಬುದು ನನ್ನ ಆಸೆಯಾಗಿತ್ತು. ಆ ಕಾರಣಕ್ಕೆ ಮುಂದೆ ಐಎಎಸ್ ಗೆ ಪ್ರಯತ್ನ ಮಾಡುತ್ತೇನೆ ಎನ್ನುತ್ತಾರೆ.

Journey of common man Laal Saab from security guard to Tahsildar

ಇನ್ನು ಲಾಲ್ ಸಾಬ್ ಸಹೋದರ ಸಲಬೇತ್ ಖಾನ್ ಮಾತನಾಡಿ, ನಮ್ಮ ಇಡೀ ಹಳ್ಳಿಯಲ್ಲಿ ಲಾಲ್ ಸಾಬ್ ನನ್ನು ಮಾದರಿಯಾಗಿ ತೆಗೆದುಕೊಂಡಿದ್ದಾರೆ ಎಂದಿದ್ದಾರೆ. ಲಾಲ್ ಸಾಬ್ ಮೂಲತಃ ಬಾಗಲಕೋಟೆಯ ಕೆರೂರಿನವರು. ಅಂದಹಾಗೆ ಸಲಬೇತ್ ಕಾನ್ ಖಾನ್ ಅವರು ಜಮ್ಮು-ಕಾಶ್ಮೀರದಲ್ಲಿ 54 ರಾಷ್ಟ್ರೀಯ ರೈಫಲ್ಸ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ.

ಲಾಲ್ ಸಾಬ್ ಶಾಲೆ-ಕಾಲೇಜಿಗೆ ಹೋಗುವ ದಿನಗಳಲ್ಲಿ ಬೆಳಗ್ಗೆ ನಾಲ್ಕೂ ಮೂವತ್ತಕ್ಕೆ ಕೆಲಸ ಶುರು ಆಗುತ್ತಿತ್ತು. ದಿನಪತ್ರಿಕೆ, ಹಾಲು ಹಾಕುತ್ತಿದ್ದರು. ಪರೀಕ್ಷೆ ದಿನಗಳಲ್ಲೂ ಕೆಲಸ ತಪ್ಪಿಸುತ್ತಿರಲಿಲ್ಲ. ಅಷ್ಟೇ ಲ್ಲ್, ಮಧ್ಯಾಹ್ನ ಹಾಗೂ ಸಂಜೆ ಕೂಡ ತನ್ನ್ ತಂದೆ ಜತೆಗೆ ನಿರ್ಮಾಣ ಕಾರ್ಯಗಳಲ್ಲಿ ಸಹಾಯ ಮಾಡುತ್ತಿದ್ದರು. ತಾನು ಸಂಪಾದಿಸಿದ ಹಣದಲ್ಲೇ ಶಾಲೆ ಫೀ ಪಾವತಿಸಿ, ಪುಸ್ತಕಗಳನ್ನು ಖರೀದಿ ಮಾಡುತ್ತಿದ್ದರಂತೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದರು.

ಆಟೋ ಚಾಲಕನ ಪತ್ನಿ ಲತಾ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ಆಟೋ ಚಾಲಕನ ಪತ್ನಿ ಲತಾ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್

ಆರಂಭದಲ್ಲಿ ಶಾಲಾ ಶಿಕ್ಷಕರಾಗಬೇಕು ಅಂದುಕೊಂಡಿದ್ದರಂತೆ ಲಾಲ್ ಸಾಬ್. ಆದರೆ ನಂತರ ಜನರಿಗೆ ಸಹಾಯ ಮಾಡಬೇಕು ಅಂದರೆ, ಲೋಕಸೇವಾ ಆಯೋಗದ ಪರೀಕ್ಷೆ ಮೂಲಕ ಅಧಿಕಾರಿಯಾಗಿ ಆಯ್ಕೆಯಾಗಬೇಕು ಎಂದು ಬಿ.ಎ., ವ್ಯಾಸಂಗ ಮಾಡಿದ್ದಾರೆ. ಕಾಲೇಜು ದಿನಗಳಲ್ಲಿ ನನ್ನ ಇತರ ಸಹಪಾಠಿಗಳ ಥರ ಹೊರಗೆ ತಿನ್ನಲು ಹೋಗುತ್ತಿರಲಿಲ್ಲ, ಹೆಣ್ಣುಮಕ್ಕಳ ಜತೆ ಸುತ್ತಾಡುತ್ತಿರಲಿಲ್ಲ ಎನ್ನುತ್ತಾರೆ.

ಮೊದಲಿಗೆ ಹೈದರಾಬಾದ್ ನಲ್ಲಿ ನಂದಿನಿ ಹೋಟೆಲ್ ಸಮೂಹದಲ್ಲಿ ಪೂರ್ಣಾವಧಿ ಕೆಲಸ ಸಿಕ್ಕಿತ್ತು. ತಿಂಗಳಿಗೆ ಒಂಬತ್ತು ಸಾವಿರ ಸಂಬಳವೂ ಬರುತ್ತಿತ್ತು. ಆದರೆ ತನ್ನ ತಂದೆಗೆ ಆರೋಗ್ಯ ಸರಿಯಿಲ್ಲದೆ ನಾಲ್ಕೇ ತಿಂಗಳಲ್ಲಿ ಅಲ್ಲಿಂದ ವಾಪಸಾಗಿದ್ದರು. ಆ ಮೇಲೆ ಬೆಂಗಳೂರಿಗೆ ಬಂದು 2014ರಿಂದ 2017ರ ಮಧ್ಯೆ ವಿವಿಧ ಸಂಸ್ಥೆಗಳಲ್ಲಿ ಹೌಸ್ ಕೀಪಿಂಗ್, ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಂಗಳಮುಖಿಯರಿಂದ ಕೃಷಿ, ಹೈನುಗಾರಿಕೆಚಿಕ್ಕಮಗಳೂರಿನಲ್ಲಿ ಮಂಗಳಮುಖಿಯರಿಂದ ಕೃಷಿ, ಹೈನುಗಾರಿಕೆ

2017ರಲ್ಲಿ ಕರ್ನಾಟಕ ಲೋಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾದ ಲಾಲ್ ಸಾಬ್, ಸಂದರ್ಶನದಲ್ಲಿ ಯಶಸ್ವಿಯಾದರು. ಒಂಬತ್ತು ತಿಂಗಳ ಅವರ ತರಬೇತಿ ಅಕ್ಟೋಬರ್ 29, 2018ರಿಂದ ಆರಂಭವಾಗಿದೆ. ನನ್ನ ಸೂಪರ್ ವೈಸರ್ ಯಾಕೆ ಕೆಲಸ ಬಿಡುತ್ತಿದೆಯಾ ಎಂದು ಕೇಳಿದರು. ನನಗೆ ಸರಕಾರಿ ಉದ್ಯೋಗ ಸಿಕ್ಕಿದೆ ಎಂದು ಹೇಳಿದಾಗ ತಮ್ಮ ಕುರ್ಚಿಯಿಂದ ಬಿದ್ದೇಹೋದರು ಎನ್ನುತ್ತಾರೆ.

ಎಸ್ ಆರ್ ಎಫ್ ಮ್ಯಾನೇಜಿಂಗ್ ಡೈರೆಕ್ಟರ್ ಸ್ವತಃ ನನಗೆ ಬೀಳ್ಕೊಡುಗೆ ನೀಡಿದರು. ಆಗ ನೂರಿಪ್ಪತ್ತು ಮಂದಿ ಸೆಕ್ಯೂರಿಟಿ ಗಾರ್ಡ್ ಗಳೂ ಇದ್ದರು. ಆಗ ನನ್ನ ಕಣ್ಣಲ್ಲಿ ನೀರಿತ್ತು ಎಂದು ಮಾಧ್ಯಮವೊಂದರ ಜತೆ ಮಾತನಾಡುತ್ತಾ ನೆನಪಿಸಿಕೊಂಡಿದ್ದಾರೆ ಲಾಲ್ ಸಾಬ್.

English summary
Here is the success journey of Laal Saab, one who was security guard for 3 years in Bengaluru, now under training in Mysuru for Tahsildar post. He was selected through KPSC.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X