ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗ ತೃಪ್ತಿ: ಕರ್ನಾಟಕವೇ ಎಲ್ಲಾ ರಾಜ್ಯಗಳಿಗಿಂತ ಮುಂದು

|
Google Oneindia Kannada News

ಬೆಂಗಳೂರು, ಜನವರಿ 04: ಒಂದೆಡೆ ಜಾಗತಿಕ ಮಟ್ಟಕ್ಕೆ ಹೋಲಿಕೆ ಮಾಡಿದರೆ ಬೇರೆ ದೇಶಗಳಿಗಿಂತ ಭಾರತದಲ್ಲಿ ಸಂಬಳ ಏರಿಕೆ ಪ್ರಮಾಣ ಇಳಿಕೆಯಾಗುತ್ತಿದೆ. ಆದರೂ ಭಾರತೀಯ ಉದ್ಯೋಗಿಗಳು ತಮ್ಮ ಕೆಲಸದ ಬಗ್ಗೆ ಸಂತೃಪ್ತಿ ಹೊಂದಿದ್ದಾರೆ. ಬೇರೆಲ್ಲಾ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಯುವಕರು ತಮ್ಮ ಉದ್ಯೋಗದ ಬಗ್ಗೆ ಸಂತೃಪ್ತಿ ಮನೋಭಾವ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಗುಜರಾತ್‌ನಲ್ಲಿ ಶೇ.29 ರಷ್ಟು ಮಂದಿ, ಮಹಾರಾಷ್ಟ್ರದಲ್ಲಿ ಶೇ.17ರಷ್ಟು ಮಂದಿ, ಕೇರಳದಲ್ಲಿ ಶೇ.32ರಷ್ಟು ಮಂದಿ, ತಮಿಳುನಾಡಿನಲ್ಲಿ ಶೇ.27ರಷ್ಟು ಮಂದಿ, ದೆಹಲಿಯಲ್ಲಿ ಶೇ.17ರಷ್ಟು ಮಂದಿ, ಆಂಧ್ರಪ್ರದೇಶದಲ್ಲಿ ಶೇ.17ರಷ್ಟು ಮಂದಿ, ಅಸ್ಸಾಂನಲ್ಲಿ ಶೇ.8ರಷ್ಟು ಮಂದಿ, ಒಡಿಶಾದಲ್ಲಿ ಶೇ.10ರಷ್ಟು ಮಂದಿ , ತೆಲಂಗಾಣದಲ್ಲಿ ಶೇ.17ರಷ್ಟು ಮಂದಿ, ರಾಜಸ್ಥಾನದಲ್ಲಿ ಶೇ.12ರಷ್ಟು ಮಂದಿ, ಜಾರ್ಖಂಡ್‌ನಲ್ಲಿ ಶೇ.7ರಷ್ಟು, ಚಂಡೀಗಢದಲ್ಲಿ ಶೇ.7ರಷ್ಟು, ಉತ್ತರ ಪ್ರದೇಶದಲ್ಲಿ ಶೇ.13ರಷ್ಟು, ಮಧ್ಯಪ್ರದೇಶದಲ್ಲಿ ಶೇ.23, ಬಿಹಾರದಲ್ಲಿ ಶೇ.7ರಷ್ಟು, ಪಂಜಾಬ್‌ನಲ್ಲಿ ಶೇ.18ರಷ್ಟು ಮಂದಿ ಉದ್ಯೋಗದಿಂದ ಸಂತೃಪ್ತ ಭಾವ ಹೊಂದಿದ್ದಾರೆ.

ಲಭ್ಯವಿರುವ ಉದ್ಯೋಗಾವಕಾಶಗಳ ಬಗ್ಗೆ ತೃಪ್ತಿಯ ವಿಷಯದಲ್ಲಿ ಕಳಪೆ ಅಂಕಗಳನ್ನು ಗಳಿಸಿದ ಇತರ ರಾಜ್ಯಗಳಲ್ಲಿ ಛತ್ತೀಸ್‌ಗಢ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿವೆ. ಕರ್ನಾಟಕದ ಕೇವಲ 6 ಪ್ರತಿಶತ ಯುವಕರು ತಮ್ಮ ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಉದ್ಯೋಗಾವಕಾಶಗಳು ಉತ್ತಮವಾಗಿಲ್ಲ ಎಂದು ಭಾವಿಸಿದ್ದಾರೆ.

Youth Job Satisfaction: Karnataka Is The Highest And Punjab Youth Most Dissatisfied With Work In India

ಹಾಗೆಯೇ ಪಂಜಾಬ್‌ನ ಯುವಕರು ತಮ್ಮ ರಾಜ್ಯದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ದೇಶದಲ್ಲೇ ಹೆಚ್ಚು ಅತೃಪ್ತರಾಗಿದ್ದಾರೆ ಎಂದು ಸೆಂಟರ್ ಫಾರ್ ಸ್ಟಡಿಯಿಂಗ್ ಡೆವಲಪಿಂಗ್ ಸೊಸೈಟೀಸ್ (CSDS)-ಲೋಕನೀತಿ ಮತ್ತು ಜರ್ಮನ್ ಥಿಂಕ್ ಟ್ಯಾಂಕ್ ಕೊನ್ರಾಡ್ ಅಡೆನೌರ್ ಸ್ಟಿಫ್ಟುಂಗ್ ನಡೆಸಿದ ಸಮೀಕ್ಷೆಯು ಕಂಡುಹಿಡಿದಿದೆ.

18-34 ವರ್ಷ ವಯಸ್ಸಿನ 6,277 ಜನರಿಂದ ಪಡೆದ ಪ್ರತಿಕ್ರಿಯೆಯ ಆಧಾರದ ಮೇಲೆ ಪ್ಯಾನ್-ಇಂಡಿಯಾ ಸಮೀಕ್ಷೆಯನ್ನು ಈ ವರ್ಷದ ಜುಲೈ ಮತ್ತು ಆಗಸ್ಟ್ ನಡುವೆ ನಡೆಸಲಾಯಿತು. ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದ ಫಲಿತಾಂಶಗಳು ಪಂಜಾಬ್‌ನಲ್ಲಿ ಪ್ರತಿಕ್ರಿಯಿಸಿದವರಲ್ಲಿ 78 ಪ್ರತಿಶತದಷ್ಟು ಜನರು ರಾಜ್ಯದಲ್ಲಿ ಉದ್ಯೋಗಾವಕಾಶಗಳ ಗುಣಮಟ್ಟ "ಕಳಪೆ" ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ರಾಷ್ಟ್ರೀಯ ಸರಾಸರಿ ಶೇಕಡಾ 41 ಕ್ಕಿಂತ ಹೆಚ್ಚು.

ಪಟಿಯಾಲದ ಪಂಜಾಬ್ ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ಮತ್ತು ವಾಣಿಜ್ಯ ವಿಭಾಗದ ಪ್ರಾಧ್ಯಾಪಕರಾದ ಲಖ್ವಿಂದರ್ ಸಿಂಗ್ ಅವರ ಪ್ರಕಾರ, ರಾಜ್ಯದ ಯುವಜನರಲ್ಲಿ ಕಂಡುಬರುವ ಅಸಮಾಧಾನದಿಂದ ಆಶ್ಚರ್ಯವಾಗಿಲ್ಲ ಎಂದು ಹೇಳಿದ್ದಾರೆ.

ಪಂಜಾಬ್‌ನಲ್ಲಿ ಸರ್ಕಾರಿ ಉದ್ಯೋಗಿಗಳ ಪ್ರಾಥಮಿಕ ವೇತನ ತುಂಬಾ ಕಡಿಮೆ ಇರುತ್ತದೆ. ಏತನ್ಮಧ್ಯೆ, ರಾಜ್ಯವು ಪ್ರಾಥಮಿಕವಾಗಿ ಕೃಷಿ ಆರ್ಥಿಕತೆಯನ್ನು ಹೊಂದಿದ್ದು, ಉದ್ಯೋಗ ಸೃಷ್ಟಿಗೆ ಸೀಮಿತ ವ್ಯಾಪ್ತಿಯನ್ನು ಹೊಂದಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ನೆರೆಯ ಹರ್ಯಾಣ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಈಗಾಗಲೇ ನೋಯ್ಡಾ ಮತ್ತು ಗುರುಗ್ರಾಮ‌ನಂತಹ ಕಾರ್ಪೊರೇಟ್ ಮತ್ತು ವ್ಯಾಪಾರ ಕೇಂದ್ರಗಳನ್ನು ಹೊಂದಿದೆ.

ಉದ್ಯೋಗದಲ್ಲಿ ತೃಪ್ತಿ ಹೆಚ್ಚಿಸಿಕೊಳ್ಳಲು ಸಲಹೆ:

ಆಧುನಿಕ ಉದ್ಯೋಗ ಜಗತ್ತಿನಲ್ಲಿ ಉದ್ಯೋಗ ತೃಪ್ತಿಯು ಬಹುಚರ್ಚಿತ ವಿಷಯ. ಪ್ರತಿದಿನ ಮಾಡುವ ಉದ್ಯೋಗದಲ್ಲಿ ಕಾಡುವ ಅತೃಪ್ತಿಯನ್ನು ಅಥವಾ ಅಸಂತೋಷವನ್ನು ಹೋಗಲಾಡಿಸಲು ಪ್ರಯತ್ನಿಸಬಹುದಾಗಿದೆ.

ಅತೃಪ್ತಿಗೆ ಕಾರಣ ಹುಡುಕಿ: ನೀವು ಮಾಡುತ್ತಿರುವ ಉದ್ಯೋಗದಲ್ಲಿ ಸಂತೋಷಕ್ಕೆ ಭಗ್ನ ತರುವ ಅಂಶಗಳನ್ನು ಕಂಡುಹಿಡಿಯಿರಿ. ಕೆಲವೊಂದು ಅತೃಪ್ತಿಗೆ ನೀವೇ ಕಾರಣವಾಗಿರಬಹುದು.

ಸಮಸ್ಯೆಯ ಕುರಿತು ಸಂವಹನ: ಉದ್ಯೋಗದಲ್ಲಿ ನಿಮಗೆ ಏನು ಅನಿಸುತ್ತದೆಯೋ ಅದನ್ನು ನಿಮ್ಮ ಸೀನಿಯರ್‌ ಜೊತೆ ತಿಳಿಸಿ. ನಿಮ್ಮ ಕ್ರೈಸಿಸ್‌ಗೆ ಕಾರಣವಾಗುವ ಅಂಶಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿ.

ಉದ್ಯೋಗ ಪ್ರಯಾಣ ಆನಂದಿಸಿ: ನೀವು ಕಾರಿನಲ್ಲಿ ಆಫೀಸ್‌ಗೆ ಬರುವುದಾದರೆ ಮೆಲುವಾದ ಸಂಗೀತವನ್ನು ಕೇಳುತ್ತ ಬನ್ನಿ. ಬಸ್‌ನಲ್ಲಿ ಬರುವುದಾದರೆ ಎಫ್‌ಎಂ, ಸಂಗೀತವನ್ನು ಸ್ಮಾರ್ಟ್‌ಫೋನ್‌ ಮೂಲಕ ಕೇಳುತ್ತ ಬರಬಹುದು.

ಸಾಕಷ್ಟು ಗೇಮ್ಸ್‌ಗಳೂ ಸ್ಮಾರ್ಟ್‌ಫೋನ್‌ನಲ್ಲಿ ಇರುತ್ತವೆ. ಇಂತಹ ಚಟುವಟಿಕೆಗಳು ನಿಮ್ಮ ಮಿದುಳಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದೇ ರೀತಿ, ಪ್ರಯಾಣದ ಸಮಯದಲ್ಲಿ (ನೀವು ಡ್ರೈವಿಂಗ್‌ ಮಾಡುತ್ತಿಲ್ಲವಾದರೆ) ಪುಸ್ತಕ ಓದುವುದು, ಡೈರಿ ಬರೆಯುವುದು ಇತ್ಯಾದಿಗಳನ್ನು ಮಾಡಬಹುದು. ಫಜಲ್‌, ಸುಡುಕು ಇತ್ಯಾದಿಗಳ ಮೂಲಕವೂ ಮಿದುಳಿಗೆ ಕಸರತ್ತುಕೊಡಬಹುದು.

ಹಣಕಾಸು ನಿರ್ವಹಣೆ: ಬಹುತೇಕ ಅತೃಪ್ತಿಗೆ ಹಣವೇ ಕಾರಣವಾಗಿರುತ್ತದೆ. ಕಟ್ಟಬೇಕಾದ ಬ್ಯಾಂಕ್‌ ಇಎಂಐಗಳು, ಇತರೆ ಸಾಲಗಳು ನಿಮ್ಮ ನೆಮ್ಮದಿಯನ್ನು ಕಸಿದುಕೊಳ್ಳಬಹುದು. ಸಾಲಮಾಡುವ ಮೊದಲು ಪ್ರತಿತಿಂಗಳು ಇಎಂಐ ಕಟ್ಟುವ ಸಾಮರ್ಥ್ಯ‌ ನಿಮಗಿದೆಯೇ ತಿಳಿದುಕೊಳ್ಳಿ. ಕಷ್ಟಕಾಲಕ್ಕೆ ಸಾಕಾಗುವಷ್ಟು ಹಣ(ಸೇವಿಂಗ್ಸ್‌) ನಿಮ್ಮಲ್ಲಿ ಇರಲಿ.

ನಿಮ್ಮ ಕೌಶಲಗಳನ್ನು ಹೆಚ್ಚಿಸಿಕೊಳ್ಳಿ: ಈಗ ತಂತ್ರಜ್ಞಾನಗಳು ವೇಗವಾಗಿ ಬದಲಾಗುತ್ತಿರುತ್ತದೆ. ನಿಮ್ಮಲ್ಲಿರುವ ಕೌಶಲಗಳು ಔಟ್‌ಡೇಟೆಡ್‌ ಆಗಿಬಿಡಬಹುದು. ಇಂತಹ ಸಮಯದಲ್ಲಿ ಉದ್ಯೋಗ ಕಡಿತದ ಆತಂಕವೂ ಎದುರಾಗಬಹುದು. ನಿಮ್ಮಲ್ಲಿ ಕೌಶಲ ಹೆಚ್ಚಿದ್ದರೆ ಹೆಚ್ಚಿನ ವೇತನ, ಬಡ್ತಿ ಇತ್ಯಾದಿಗಳೂ ದೊರಕಬಹುದು.

ಉದ್ಯೋಗ ಸ್ಥಳದಲ್ಲಿ ಗಾಸಿಪ್‌ ಬೇಡ: ಗಾಸಿಪ್‌ ಮಾನಸಿಕ ಆರೋಗ್ಯಕ್ಕೆ ಹಾನಿಕಾರ. ನಿಮ್ಮ ಕಲೀಗ್‌ ಕುರಿತು ಇತರೆ ಸಹೋದ್ಯೋಗಿಗಳ ಜೊತೆ ದೂರುವುದು ಒಳ್ಳೆಯ ವರ್ತನೆಯಲ್ಲ. ಅವನು/ಅವಳು ಹಾಗಂತೆ, ಹೀಗಂತೆ... ಇತ್ಯಾದಿ ಮಾತುಗಳು ಬೇಡ. ಇದು ನಿಮ್ಮ ಹುದ್ದೆ ಮತ್ತು ಉದ್ಯೋಗದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆಫೀಸ್‌ ರಾಜಕೀಯದಿಂದ ದೂರವುಳಿಯಿರಿ. ಈಗಾಗಲೇ ನೀವು ಗಾಸಿಪ್‌ ಸರ್ಕಲ್‌ನಲ್ಲಿದ್ದರೆ ತಕ್ಷಣ ಹೊರಬನ್ನಿ.

ನಿಮ್ಮ ಕುಟುಂಬದ ಜೊತೆ ಸಂವಹನ: 'ಸಮಸ್ಯೆಯನ್ನು ಹಂಚಿಕೊಂಡರೆ ಸಮಸ್ಯೆ ಪರಿಹಾರವಾಗುತ್ತದೆ' ಎಂಬ ಮಾತೊಂದಿದೆ. ಉದ್ಯೋಗದಲ್ಲಿ ನಿಮಗಿರುವ ಎಲ್ಲಾ ಸಮಸ್ಯೆಗಳನ್ನು ನಿಮ್ಮೊಳಗೆ ಇಟ್ಟುಕೊಳ್ಳಬೇಡಿ. ಉದ್ಯೋಗದಲ್ಲಿ ಸಮಸ್ಯೆಗಳು ಸಾಮಾನ್ಯ. ಕುಟುಂಬದ ನಿಮ್ಮ ಆತ್ಮೀಯ ಸದಸ್ಯರ ಜೊತೆ ಇಂತಹ ಸಮಸ್ಯೆಗಳನ್ನು ಹಂಚಿಕೊಳ್ಳಬಹುದು.

ಆದರೆ, ಅವರಿಂದ ಸೂಕ್ತ ಸಲಹೆಗಳು ದೊರಕುವಂತೆ ಇದ್ದರೆ ಮಾತ್ರ ಅವರೊಂದಿಗೆ ಹಂಚಿಕೊಳ್ಳಿ. ಇಲ್ಲವಾದರೆ, 'ಆಫೀಸ್‌ನದ್ದು ಆಫೀಸ್‌ಗೆ, ಮನೆಯದ್ದು ಮನೆಗೆ' ಎಂಬಂತೆ ವರ್ತಿಸಿರಿ. ನಮ್ಮ ಕುಟುಂಬದ ಸದಸ್ಯರ ಜೊತೆ ಕೆಲವು ಸಮಸ್ಯೆಗಳ ಕುರಿತು ಚರ್ಚಿಸುವುದರಿಂದ ಒಳ್ಳೆಯ ಸಲಹೆಗಳು ದೊರಕಬಹುದು.

English summary
The youth in Punjab are the most dissatisfied in the country about employment opportunities in their state, a survey conducted by the Centre for Studying Developing Societies (CSDS)-Lokniti and German think tank Konrad Adenauer Stiftung has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X