ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಲೂ ಒರಿಜಿನ್‌ನ ಬಾಹ್ಯಾಕಾಶ ನೌಕೆ ಇಂದು ಹಾರಾಟ: ಎಲ್ಲಿ, ಯಾವಾಗ ವೀಕ್ಷಿಸಬಹುದು?

|
Google Oneindia Kannada News

ಲಂಡನ್‌, ಜು.20: ರಿಚರ್ಡ್ ಬ್ರಾನ್ಸನ್ ತನ್ನ ವಿಎಸ್ಎಸ್ ಯೂನಿಟಿಯಲ್ಲಿ ಬಾಹ್ಯಾಕಾಶದ ಅಂಚಿಗೆ ಹಾರಿದ ಒಂಬತ್ತು ದಿನಗಳ ನಂತರ, ಜುಲೈ 20 ರ ಮಂಗಳವಾರ ಮಾಜಿ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೋಸ್ ಭೂಮಿಯ ಮೇಲ್ಮೈಯಿಂದ 100 ಕಿಲೋಮೀಟರ್ ಎತ್ತರಕ್ಕೆ ಹಾರಲು ತನ್ನ ತಂಡದೊಂದಿಗೆ ಸಜ್ಜಾಗಿದ್ದಾರೆ. ಬಿಲಿಯನೇರ್ ತನ್ನ ಕಂಪನಿ ಬ್ಲೂ ಒರಿಜಿನ್‌ನ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯ ಮೇಲೆ ಸವಾರಿ ಮಾಡಲಿದ್ದಾರೆ. ಈ ನೌಕೆಯು ಪಶ್ಚಿಮ ಟೆಕ್ಸಾಸ್‌ನ ಎತ್ತರದ ಮರುಭೂಮಿ ಬಯಲು ಪ್ರದೇಶದಿಂದ ಇಂದು ಸಂಜೆ 6.30 ಕ್ಕೆ ಹೊರಡಲಿದೆ.

ಈ ಬಾಹ್ಯಾಕಾಶ ನೌಕೆಯಲ್ಲಿ ಬೆಜೋಸ್ ಜೊತೆಗೆ ಸಹೋದರ ಮಾರ್ಕ್, 82 ವರ್ಷದ ಮಾಜಿ ಪೈಲಟ್ ವಾಲಿ ಫಂಕ್ ಮತ್ತು 18 ವರ್ಷದ ಹದಿಹರೆಯದ ಆಲಿವರ್ ಡೇಮನ್ ಸೇರಿಕೊಳ್ಳಲಿದ್ದಾರೆ. ಬ್ಲೂ ಒರಿಜಿನ್‌ನ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆಯೆ ಮೊದಲ ಹಾರಾಟದಲ್ಲಿ ತನ್ನ ನಾಲ್ಕು ಪ್ರಯಾಣಿಕರನ್ನು ಕರ್ಮನ್ ರೇಖೆಯನ್ನು ಮೀರಿ ಹೊತ್ತೊಯ್ಯಲಿದೆ.

 ಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದತ್ತ ಚಿತ್ತ: ಏನಿದು ಪ್ರವಾಸ? ಇಲ್ಲಿದೆ ಮಾಹಿತಿ ಬ್ಲೂ ಒರಿಜಿನ್‌ನ ಮೊದಲ ಮಾನವ ಬಾಹ್ಯಾಕಾಶ ಹಾರಾಟದತ್ತ ಚಿತ್ತ: ಏನಿದು ಪ್ರವಾಸ? ಇಲ್ಲಿದೆ ಮಾಹಿತಿ

ಭೂಮಿಯಿಂದ ಸರಿಸುಮಾರು 100 ಕಿಲೋಮೀಟರ್ ದೂರಕ್ಕೆ ಕರೆದೊಯ್ಯುವ ಈ ನ್ಯೂ ಶೆಪರ್ಡ್ ಬಾಹ್ಯಾಕಾಶ ನೌಕೆ ಭೂಮಿಗೆ ಪ್ಯಾರಾಚೂಟ್‌ ಮೂಲಕ ಹಿಂತಿರುಗುವ ಮುನ್ನ ಪ್ರಯಾಣಿಕರು ನೀಲಿ ಗ್ರಹದ ಸೊಬಗನ್ನು ನೋಡಲು ಅವಕಾಶ ಮಾಡಿಕೊಡುತ್ತದೆ. ಈ ನೌಕೆಯು ಉಡಾವಣೆಯಿಂದ ಲ್ಯಾಂಡಿಂಗ್‌ವರೆಗೆ 10 ನಿಮಿಷಗಳ ಕಾಲ ಇರುತ್ತದೆ. ಬಾಹ್ಯಾಕಾಶ ನೌಕೆಗಾಗಿ ಯಾವುದೇ ಪೈಲಟ್‌ಗಳು ಇರವುದಿಲ್ಲ. ಇದು ಸ್ವಯಂ ಚಾಲಿತ ಬಾಹ್ಯಾಕಾಶ ನೌಕೆಯಾಗಿದೆ.

Jeff Bezos Blue Origin spaceflight launch on July 20: When and where to watch

ಜೆಫ್‌ ಬೆಜೋಸ್‌ನ ಬಾಹ್ಯಾಕಾಶ ನೌಕೆ ಪ್ರಯಾಣ ವೀಕ್ಷಣೆ ಆನ್‌ಲೈನ್‌ನಲ್ಲಿ

ಜೆಫ್‌ ಬೆಜೋಸ್‌ನ ಬ್ಲೂ ಒರಿಜಿನ್‌ನ ನ್ಯೂ ಶೆಪರ್ಡ್‌ನ ಹಾರಾಟದ ನೇರ ಪ್ರಸಾರವನ್ನು ಆನ್‌ಲೈನ್‌ ಮಾಧ್ಯಮಗಳಲ್ಲಿ ವೀಕ್ಷಿಸಬಹುದಾಗಿದೆ. ಬ್ಲೂ ಒರಿಜಿನ್ ಲಾಂಚ್ ಸೈಟ್ ಒನ್‌ನಿಂದ ಪೂರ್ವ-ಉಡಾವಣಾ ಮಿಷನ್ ಬ್ರೀಫಿಂಗ್ ಅನ್ನು ನೇರ ಪ್ರಸಾರ ಮಾಡಲಾಗುತ್ತದೆ. ಬ್ಲೂ ಒರಿಜಿನ್ ಲಾಂಚ್ ಸೈಟ್‌ನಲ್ಲಿ ಈ ಬಾಹ್ಯಾಕಾಶ ನೌಕೆಗೆ ಸಂಬಂಧಿಸಿದ ವಿವರಗಳನ್ನು ಉಲ್ಲೇಖ ಮಾಡಲಾಗಿದೆ. ಪ್ರಸ್ತುತ ಬ್ಲೂ ಒರಿಜಿನ್ ಲಾಂಚ್ ಸೈಟ್ ಒನ್ ಪಶ್ಚಿಮ ಟೆಕ್ಸಾಸ್ ಮರುಭೂಮಿಯ ದೂರದ ಸ್ಥಳದಲ್ಲಿದೆ. ಅದರ ಸುತ್ತಮುತ್ತಲ ಸ್ಥಳಗಳಲ್ಲಿ ಸಾರ್ವಜನಿಕ ವೀಕ್ಷಣೆ ಪ್ರದೇಶಗಳಿಲ್ಲ ಎಂದು ಕಂಪನಿಯು ಹೇಳಿದೆ. ಕಂಪನಿಯು ತನ್ನ ಟ್ವಿಟ್ಟರ್ ಫೀಡ್‌ನಲ್ಲಿ ಎಲ್ಲಾ ನವೀಕರಣಗಳನ್ನು ಸಹ ಪೋಸ್ಟ್ ಮಾಡುತ್ತದೆ ಎಂದು ತಿಳಿಸಿದೆ. ಈ ಹಾರಾಟದ ನೇರ ಪ್ರಸಾರ ಕಂಪನಿಯ ವೆಬ್‌ಸೈಟ್‌ https://www.blueorigin.com/ ನಲ್ಲಿ ಲಭ್ಯವಿರುತ್ತದೆ.

Jeff Bezos Blue Origin spaceflight launch on July 20: When and where to watch

ಈ ನ್ಯೂ ಶೆಪರ್ಡ್‌ನ ಹಾರಾಟ ಹೇಗೆ?

ಬಾಹ್ಯಾಕಾಶ ನೌಕೆ ಟೆಕ್ಸಾಸ್ ಸೈಟ್‌ನಿಂದ ಮೇಲಕ್ಕೆ ಹಾರಿದಂತೆ, ಶಬ್ದದ ಮೂರು ಪಟ್ಟು ವೇಗವಾಗಿ ಮ್ಯಾಕ್ 3 ನ ಉನ್ನತ ವೇಗವನ್ನು ತಲುಪುತ್ತದೆ. ಹಾರಾಟದ ಮೂರು ನಿಮಿಷಗಳಲ್ಲಿ ನ್ಯೂ ಶೆಪರ್ಡ್ ಬೂಸ್ಟರ್‌ನಿಂದ ಬೇರ್ಪಡುತ್ತದೆ. ಪ್ರಯಾಣಿಕರು ತಮ್ಮ ಆಸನಗಳಿಂದ ದೂರವಾಗಲಿದ್ದಾರೆ. ಈ ಸಂದರ್ಭ ಯಾವುದೇ ಗುರುತ್ವಾಕರ್ಷಣಾ ಬಲ ಇರುವುದಿಲ್ಲ. ನಾಲ್ಕು ನಿಮಿಷಗಳಲ್ಲಿ, ನ್ಯೂ ಶೆಪರ್ಡ್ ಕರ್ಮನ್ ರೇಖೆಯನ್ನು ದಾಟಿ ಬಾಹ್ಯಾಕಾಶಕ್ಕೆ ಪ್ರವೇಶಿಸುತ್ತದೆ. ಬೂಸ್ಟರ್‌ಗಳು ಭೂಮಿಗೆ ಮರಳುತ್ತವೆ. ಹಾರಾಟಕ್ಕೆ ಆರು ನಿಮಿಷಗಳು ಆಗುತ್ತಿದ್ದಂತೆ ಬಾಹ್ಯಾಕಾಶ ನೌಕೆ ಇಳಿಯಲು ಪ್ರಾರಂಭಿಸಲಿದೆ. ಈ ವೇಳೆ ಬೆಜೋಸ್ ಮತ್ತು ಸಿಬ್ಬಂದಿ ತಮ್ಮ ಆಸನಗಳಲ್ಲಿ ಸುರಕ್ಷತೆ ಬೆಲ್ಟ್‌ ಧರಿಸಿ ಕೂರಬೇಕಾಗಿದೆ. ಮೊದಲ ಪ್ಯಾರಚೂಟ್‌ ಒಂಬತ್ತು ನಿಮಿಷಗಳಲ್ಲಿ ಹಾರುತ್ತದೆ. ಇದು ಕ್ಯಾಪ್ಸುಲ್ ವೇಗವನ್ನು ಗಂಟೆಗೆ 26 ಕಿಲೋಮೀಟರ್‌ಗೆ ನಿಧಾನಗೊಳಿಸುತ್ತದೆ. ಕ್ಯಾಪ್ಸುಲ್ ಗಂಟೆಗೆ 1.6 ಕಿಲೋಮೀಟರ್ ವೇಗದಲ್ಲಿ ಮರುಭೂಮಿಯಲ್ಲಿ ಮೃದುವಾಗಿ ಇಳಿಯಲಿದೆ. ಆ ಪ್ರದೇಶದಲ್ಲಿ ರಕ್ಷಣಾ ತಂಡವೊಂದು ಈಗಾಗಲೇ ನಿಯೋಜಿಸಲಾಗಿದೆ. ಈ ಪ್ರವಾಸವು ಎಲ್ಲಾ ನಾಗರಿಕ ಸಿಬ್ಬಂದಿಯೊಂದಿಗೆ ವಿಶ್ವದ ಮೊದಲ ಪೈಲಟ್ ಇಲ್ಲದ ಬಾಹ್ಯಾಕಾಶ ಪ್ರಯಾಣವಾಗಲಿದೆ.

(ಒನ್‌ಇಂಡಿಯಾ ಸುದ್ದಿ)

English summary
Jeff Bezos's Blue Origin's New Shepard spaceflight launch on July 20. Where and When to watch?. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X