• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶ್ರೀಜಯರಾಮ ಸೇವಾ ಮಂಡಳಿಯ ಸುವರ್ಣ ಸಂಭ್ರಮ

By Mahesh
|

ಜಯನಗರದ ಶ್ರೀ ಜಯರಾಮ ಸೇವಾ ಮಂಡಳಿಗೆ ಇದೀಗ ಸ್ವರ್ಣ ಸಂಭ್ರಮ. ಐದು ದಶಕಗಳ ಕಾಲಘಟ್ಟದ ಇದರ ಪ್ರಗತಿ, ಅಭಿವೃದ್ಧಿ, ಬೆಳವಣಿಗೆ ಬೆರಗು ಹುಟ್ಟಿಸುವಂತಹದ್ದು. ಐದು ದಶಕಗಳ ಹಿಂದೆ ಇದರ ಸ್ಥಾಪನೆ. ಮಂಡಳಿ ಹಾಗೂ ಅದರ ಕಾರ್ಯ ಚಟುವಟಿಕೆಗಳು ಗರಿಗದರೊ ಟಿಸಿಲೊಡೆದು ಹಲವು ಸಮಾಜಮುಖಿ ಜನಪರ - ರಚನಾತ್ಮಕ ಕಾರ್ಯ ಯೋಜನೆಗಳು ರೂಪುಗೊಂಡವು.

ಇಂದು ಮಂಡಳಿಯ ಕಟ್ಟಡವು ಕಟ್ಟಡವಾಗಿ ಕಾಣಿಸದೇ ಆಸ್ತಿಕರ, ಸುಂದರ ಆಕರ್ಷಕ ಕಲಾಸೌಧವಾಗಿ, ಧರ್ಮಪೀಠವಾಗಿ ಹಾಗೂ ಸಾಂಸ್ಕೃತಿಕ ರಸದೌತಣ ನೀಡುವ ಕಾವ್ಯ, ಗಾಯನ, ನರ್ತನ, ಉಪನ್ಯಾಸ, ಪೂಜೆ, ವ್ರತ, ಹಬ್ಬಗಳ, ಉತ್ಸವಗಳ ಕೇಂದ್ರವಾಗಿ ಮೈದಳೆದಿದೆ.

ಶ್ರೀ ಜಯರಾಮ ಸೇವಾ ಮಂಡಳಿ ತನ್ನ ಅನನ್ಯತೆಯನ್ನು ಕಂಡು ಕೊಂಡಿರುವುದು, ಅದರ ಸಾಹಿತ್ಯಕ ಹೊತ್ತಗೆಗಳಲ್ಲಿ, ಮೌಲ್ಯಗಳನ್ನು ಸಾರುವ, ಮೌಲ್ಯವನ್ನು ಸಮಗ್ರವಾಗಿ ಅಂತರ್ಗತಗೊಂಡಿರುವ ಶಾಸ್ತ್ರೀಯ ಕೃತಿಗಳಲ್ಲಿ, ಗ್ರಂಥಗಳಲ್ಲಿ ರಾಮಾಯಣವನ್ನು ಕುರಿತು ಉಪನ್ಯಾಸಗಳನ್ನು ಆಯೋಜಿಸಿ, ಅವುಗಳನ್ನು ಗ್ರಂಥರೂಪದಲ್ಲಿ ಸಂಕಲಿಸಿ ದಾಖಲಿಸಿದ ಕೃತಿ ಶ್ರೀರಾಮ ಸಂಭವ, ಸಂಸ್ಕøತ ರಾಮಾಯಣ ನಾಟಕಗಳಲ್ಲಿ ಪಾತ್ರ ವೈವಿಧ್ಯ, ಬಾಳಿಗೊಂದು ಬೆಳಕು ಕೆಲವು ಇವು ಶಾಶ್ವತ ಮೌಲಿಕ ಕೃತಿಗಳು.

ಮಂಡಳಿ ಆಯೋಜಿಸುವ ರಾಮೋತ್ಸವವು ಗರಿಷ್ಠ ಸಂಖ್ಯೆಯ ಭಕ್ತರನ್ನು, ರಸಿಕರನ್ನು, ಶ್ರೋತೃಗಳನ್ನು ಸೆಳೆಯುತ್ತಿದೆ. ಹಿಂದೂ ಸಮಾಜದ ಎಲ್ಲಾ ಹಬ್ಬ ಹರಿದಿನ, ಜನ್ಮದಿನ, ಪವಿತ್ರ ದಿನಗಳ ಆಚರಣೆಗಳು ವರ್ಷದುದ್ದಕ್ಕೂ ಚಾಚಿಕೊಂಡಿದೆ. ಸಂತರನ್ನು, ಧರ್ಮಪೀಠದ ಹಿರಿಯರನ್ನು ಬರಮಾಡಿ ಆದರಿಸಿ, ಗೌರವಿಸಿ ಅವರ ವಿದ್ವತ್‍ಪೂರ್ಣವಾಣಿಯನ್ನು, ಚಿಂತನೆಗಳನ್ನು ಹಂಚಿಕೊಳ್ಳಲು ಹಾಗೂ ಊರ್ಜಿತಗೊಳ್ಳಲು ವೇದಿಕೆಯನ್ನು ನಿರ್ಮಿಸಿದೆ.

ಜನ್ಮ ಶತಮಾನೋತ್ಸವ

ಜನ್ಮ ಶತಮಾನೋತ್ಸವ

ಪದ್ಮಶ್ರೀ ಪ್ರೊ. ಜಿ. ವೆಂಕಟಸುಬ್ಬಯ್ಯನವರ ಜನ್ಮ ಶತಾಬ್ಧಿಯನ್ನು ಔಚಿತ್ಯಪೂರ್ಣವಾಗಿ ಆಚರಿಸಲು ನಾಂದಿ ಹಾಡಿದ ಮೊದಲನೆಯ ಸಂಸ್ಥೆ ಶ್ರೀ ಜಯರಾಮ ಸೇವಾ ಮಂಡಳಿ.

ಜೀವಿ ಅವರ ಜನ್ಮ ಶತಮಾನವನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸಿ, ರೂಪಿಸಿ, ಯಶಸ್ವಿಗೊಳಿಸಿದ್ದು ಮಂಡಳಿಯ ಬೆಳವಣಿಗೆಯ ಮೈಲುಗಲ್ಲುಗಳಲ್ಲಿ ಒಂದು. ರಾಮಾಯಣ ರಸಾನುಭವದ ರಾಮಾಯಣ ಅಂತರಂಗ, ಶಾಸ್ತ್ರ ಜೀವಿತ, ಸಂಸ್ಕೃತ ಭಾಷೆಯ ಸಾಹಿತ್ಯಗಳಿಗೆ ರಾಜಮನೆತನಗಳ ಕೊಡುಗೆ ಮತ್ತು ಶತನಮನ ಗ್ರಂಥಗಳು ಅಭಿನಂದನಾ ಸಮಾರಂಭದ ಸವಿನೆನಪಿನ ದಾಖಲೆಯಾಗಿ ಪದಜೀವಿ ಸ್ಮರಣ ಸಂಚಿಕೆಯನ್ನು ಹೊರತರಲಾಗಿದೆ.

ಹಿರಿಯ ಮುತ್ಸದ್ಧಿ ಎಲ್.ಕೆ. ಅಡ್ವಾಣಿ ಆಗಮಿಸಿದ್ದರು

ಹಿರಿಯ ಮುತ್ಸದ್ಧಿ ಎಲ್.ಕೆ. ಅಡ್ವಾಣಿ ಆಗಮಿಸಿದ್ದರು

ಅಭಿನಂದನಾ ಕಾರ್ಯಕ್ರಮಕ್ಕೆ ಭಾರತದ ಮಾಜಿ ಉಪ ಪ್ರಧಾನಿ ಹಿರಿಯ ಮುತ್ಸದ್ಧಿ ಎಲ್.ಕೆ. ಅಡ್ವಾಣಿ ಆಗಮಿಸಿದ್ದು ವಿಶೇಷ ಹೆಮ್ಮೆ ಪಡುವ ಸಂಗತಿ. ನೂರು ವರ್ಷದ ತುಂಬು ಜೀವನದ ವಿದ್ವಾಂಸ ಸಜ್ಜನ ಜಿ.ವಿ. ಇಂದಿಗೂ ಸಕ್ರಿಯವಾಗಿ, ಬೆನ್ನೆಲುಬಾಗಿ, ಬೆಂಬಲವಾಗಿ ನಿಂತು ಆಶೀರ್ವಚನವನ್ನು ನೀಡುತ್ತಿದ್ದಾರೆ.

2017-18 ಮಂಡಳಿಗೆ ಸ್ವರ್ಣ ಸಂಭ್ರಮ- ಜನ ಸಾಮಾನ್ಯರ ಕಲ್ಯಾಣವನ್ನು ಗಮನದಲ್ಲಿ ಇಟ್ಟುಕೊಂಡು ದೀರ್ಘವಾದ, ವ್ಯಾಪಕವಾದ, ವಿನಮ್ರವಾದ ಕ್ರಿಯಾ ಯೋಜನೆಯನ್ನು ಮಂಡಳಿ ರೂಪಿಸಿದೆ. ಅತ್ಯಂತ ಯೋಜಿತ ರೀತಿಯಲ್ಲಿ, ಅರ್ಥಪೂರ್ಣವಾಗಿ, ಶಾಶ್ವತ ಫಲ ನೀಡುವ ಯೋಜನೆಗಳನ್ನು ರೂಪಿಸುತ್ತಿದೆ. ಪ್ರಸ್ತುತ ದೇವಾಲಯದ ಸಂಕೀರ್ಣದ ನವೀಕರಣ, ಭಾರತದ ಶ್ರೇಷ್ಠ ಗ್ರಂಥಸಾರ ಸಂದೇಶವನ್ನು ಹೊಂದಿರುವ ಯುವ ಪೀಳಿಗೆಗೆ ಮಾರ್ಗದರ್ಶಿ ಎನಿಸುವ ಚಿಂತನೆ ವಿಚಾರಗಳನ್ನು ಪ್ರಕಟಿಸುವುದು ಮುಂದಿನ ಯೋಜನೆಯಾಗಿದೆ .

ತೆಂಗಿನ ಗರಿಗಳ ಚಪ್ಪರದಡಿ ರಾಮೋತ್ಸವ

ತೆಂಗಿನ ಗರಿಗಳ ಚಪ್ಪರದಡಿ ರಾಮೋತ್ಸವ

50 ವರ್ಷಗಳ ಹಿಂದೆ, ಶ್ರೀ ಜಯರಾಮ ಸೇವಾ ಮಂಡಳಿಯು ಪ್ರಾರಂಭವಾದಾಗ ಶ್ರೀ ರಾಮೋತ್ಸವವನ್ನು ಏರ್ಪಾಡು ಮಾಡಲು ಒಂದು ತೆಂಗಿನ ಗರಿಗಳ ಚಪ್ಪರವನ್ನು ಇದೇ ಜಾಗದಲ್ಲಿ ನಿರ್ಮಾಣ ಮಾಡಿ ಅದರಲ್ಲಿ ಉತ್ಸವವನ್ನು ನಡೆಸಿ, ಜಯನಗರದ ಶ್ರೀರಾಮ ಭಕ್ತರಿಗೆಲ್ಲ ಸಂತೋಷ ಉಂಟುಮಾಡುತ್ತಿದ್ದರು. ಈಗ ಇದೇ ಸ್ಥಳದಲ್ಲಿ ಶ್ರೀ ಜಯರಾಮ ದೇವರ ದೇವಸ್ಥಾನವು ಎದ್ದುನಿಂತಿದೆ. ಸುಂದರವಾದ ಗರ್ಭಗುಡಿಯಲ್ಲಿ ಸುಂದರ ವಿಗ್ರಹಗಳು ಕಂಗೊಳಿಸುತ್ತಿವೆ. ಭಕ್ತ ಮಹಾಜನರು ಸೇರಲು ವಿಸ್ತಾರವಾದ ಸಭಾ ಭವನವಿದೆ.

ದೇಶದ ಸಾಮಾಜಿಕ ಸಂಸ್ಥೆಗಳಲ್ಲಿ ಕೆಲವು ಮಾತ್ರ ತಮ್ಮ ಗುರಿಗಳನ್ನು ತಲುಪುವತ್ತ ಪ್ರತಿದಿನವೂ ಕೆಲಸ ಮಾಡುತ್ತಿವೆ. ಅಂತಹ ಕೆಲವು ಸಂಸ್ಥೆಗಳಲ್ಲಿ ಶ್ರೀ ಜಯರಾಮ ಸೇವಾ ಮಂಡಳಿಯೂ ಒಂದಾಗಿರುವುದು ಸಂತೋಷ ತರುವ ವಿಚಾರ. ಶ್ರೀ ಜಯರಾಮ ಸೇವಾ ಮಂಡಳಿ ಹಲವು ದಶಕಗಳಿಂದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನ ಮೆಚ್ಚುಗೆ ವ್ಯಕ್ತಪಡಿಸುವಂತೆ ಮಾಡಿದೆ.

ಸಮಾಜ ನಿರ್ಮಿಸುವಲ್ಲಿ ಮೌನ ಕ್ರಾಂತಿ

ಸಮಾಜ ನಿರ್ಮಿಸುವಲ್ಲಿ ಮೌನ ಕ್ರಾಂತಿ

ಮಂಡಳಿಯ ಶ್ರೀರಾಮ ಮಂದಿರ ಅನೇಕ ಭಕ್ತರನ್ನು ಹೊಂದಿದೆ. ಹಾಗೂ ಸಾಮಾಜಿಕ ಕಾರ್ಯದಲ್ಲಿ ನಿರಂತರವಾಗಿ ತೊಡಗಿಕೊಂಡು ಒಂದು ಸುಂದರ ಸಂಸ್ಕಾರಯುತ ಸಮಾಜ ನಿರ್ಮಿಸುವಲ್ಲಿ ಮೌನ ಕ್ರಾಂತಿಯನ್ನು ಉಂಟುಮಾಡಿದೆ. ಇದರ ಬೆಳವಣಿಗೆಗೆ ಶ್ರಮಿಸಿದವರು ಅನೇಕರು.

ಒಂದೆರಡು ಹೆಸರುಗಳನ್ನು ಉಲ್ಲೇಖಿಸಬಹುದಾದಲ್ಲಿ ಶ್ರೀ ಚಾ.ಮು.ಕೃಷ್ಣ ಅಯ್ಯಂಗಾರ್, ಶ್ರೀಮತಿ ಕುಮುದ, ಜಿ.ಎಸ್. ಡಿ. ಶರ್ಮ ಮುಂತಾದವರು. ಮಂಡಳಿಯು ಅನೇಕ ಅನೇಕ ಚಟುವಟಿಕೆಗಳನ್ನು ಮಾಡುತ್ತಿದ್ದು. ಸಂಗೀತ ಕಲಿಸುವುದು, ಅನೇಕ ವಿಷಯ ಕುರಿತು ಉಪನ್ಯಾಸಗಳು, ಯುವಕರಿಗೆ, ಮಾತೆಯರಿಗೆ, ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯವಾದದ್ದು.

ಸುವರ್ಣ ಸಂಭ್ರಮದಲ್ಲಿ ರಾಮಾಯಾಣ ಚಿತ್ರ ಸಂಪುಟ

ಸುವರ್ಣ ಸಂಭ್ರಮದಲ್ಲಿ ರಾಮಾಯಾಣ ಚಿತ್ರ ಸಂಪುಟ

ಕಳೆದ 35-40 ವರ್ಷಗಳಿಂದ ಸತತವಾಗಿ ಕಾರ್ಯ ಮಾಡುತ್ತಿದ್ದು, ಇದರ ಪ್ರಗತಿಗೆ ಎಸ್.ಕೆ. ಗೋಪಾಲಕೃಷ್ಣ, ಮುಂತಾದವರು ಕಾರಣೀಭೂತರಾಗಿದ್ದಾರೆ. ಮಂಡಳಿಯು ಆರ್.ಎನ್. ಸ್ವಾಮಿಯವರ ಅಧ್ಯಕ್ಷತೆಯಲ್ಲಿ ಒಂದು ಉತ್ತಮ ಆಡಳಿತ ಮಂಡಳಿ ಹೊಂದಿದು, ಹಿರಿಯರಾದ ಪದ್ಮಶ್ರೀ ಜಿ. ವೆಂಕಟಸುಬ್ಬಯ್ಯನವರು ಹಾಗೂ ಅನೇಕ ಸಾಮಾಜಿಕ ಕಾರ್ಯಕರ್ತರ, ಗಣ್ಯರ ಮಾರ್ಗದರ್ಶನ ನಿರಂತರವಾಗಿ ಸಿಗುತ್ತಿರುವುದು ಸೌಭಾಗ್ಯದ ಸಂಗತಿ.

ಚಿತ್ರ ರಾಮಾಯಣ: ಒಂದು ಚಿತ್ರ ನೂರು ಪದಗಳಿಗೆ ಸಮ. ಎಲ್ಲರೂ ಒಪ್ಪುವ ಹೇಳಿಕೆ. ಈ ಹೇಳಿಕೆಯ ಆಧಾರದಲ್ಲಿ ಜಯರಾಮ ಸೇವಾ ಮಂಡಳಿ ತನ್ನ ಸುವರ್ಣ ಸಂಭ್ರಮದ ವ್ಯಾಪ್ತಿಯಲ್ಲಿ ವರ್ಣಮಯ, ಪ್ರಕಾಶಮಯ ಚಿತ್ರಗಳ ವಿಶಿಷ್ಟ ಕೋಶವನ್ನು ಹೊರತರಲಿದೆ.

ರಾಮಾಯಣ ದರ್ಶನದ ದರ್ಪಣ.

ರಾಮಾಯಣ ದರ್ಶನದ ದರ್ಪಣ.

ಈ ಚಿತ್ರಪಟ ಸಂಪೂರ್ಣವಾಗಿ ರಾಮಾಯಣ ದರ್ಶನದ ದರ್ಪಣ. ರಾಮಾಯಣದ ಎಂಟು ಕಾಂಡಗಳ ಎಲ್ಲಾ ಪ್ರಮುಖ ಸನ್ನಿವೇಶ ಘಟನೆ ಹಾಗೂ ಸಂಭವಿಸಿದ ಪ್ರಕರಣಗಳ ಸಾರವನ್ನು ಹಿಡಿಯಾಗಿ ಚಿತ್ತಾಕರ್ಷಕ ಹೊತ್ತಿಗೆಯಲ್ಲಿ ಮುದ್ರಣಗೊಳ್ಳಲಿದೆ.

ಅತ್ಯಾಧುನಿಕ ತಂತ್ರಜ್ಞಾನದ ಸದುಪಯೋಗದೊಂದಿಗೆ, ರಾಮಾಯಣದ ದೀರ್ಘ ಓದಿಗೆ ಹಿರಿದರ್ಥವನ್ನು ಚಿತ್ರಗಳು ಕಿರಿದರ್ಥದಲ್ಲಿ ಸ್ಮರಿಸುತ್ತದೆ. ಭಾವ, ಭಾವನೆ, ಅಭಿವ್ಯಕ್ತಿ, ವರ್ಣಸಂಯೋಜನೆ ಹಾಗೂ ಚಿತ್ರಕಲೆಯ ಎಲ್ಲಾ ತತ್ವಗಳನ್ನು ಆಧರಿಸಿ, ಹಿರಿಯ ವಿದ್ವಾಂಸರಾದ ನಾಡೋಜ ಜಿ. ವೆಂಕಟಸುಬ್ಬಯ್ಯನವರ ಮಾರ್ಗದರ್ಶನದಲ್ಲಿ ಪ್ರಕಟಗೊಳ್ಳಲಿದೆ.

ಖ್ಯಾತ ವಿದ್ವಾಂಸರಾದ ಡಾ|| ವನಿತರಾಮಸ್ವಾಮಿಯವರು ಈ ಸಂಪುಟದ ಸಂಪಾದಕರಾಗಿ ಶ್ರಮಿಸಿದ್ದಾರೆ.

ಸುವರ್ಣ ಸಂಭ್ರಮದ ಶ್ರೀರಾಮೋತ್ಸವ 2018

ಸುವರ್ಣ ಸಂಭ್ರಮದ ಶ್ರೀರಾಮೋತ್ಸವ 2018

ಶ್ರೀ ಜಯರಾಮ ಸನ್ನಿಧಿಯಲ್ಲಿ ಪ್ರತಿದಿನ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಸಂಜೆ ಮಂಡಳಿಯ ಸಭಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಸಹಯೋಗ ಮತ್ತು ಅನೇಕ ಕಲಾಭಿಮಾನಿ ಪ್ರಾಯೋಜಕರ ನೆರವಿನೊಂದಿಗೆ ಏರ್ಪಡಿಸಿದೆ.

19.3.2018 ಸೋಮವಾರ ಸಂಜೆ 6.30ಕ್ಕೆ ಉದ್ಘಾಟನೆ ಶ್ರೀಮತಿ ಸುಶೀಲರಾವ್ ರವರಿಂದ

ಸ್ಯಾಕ್ಸೋಫೋನ್ ವಾದನ-ವಿದ್ವಾನ್ ಹೇಮಂತ್ ಎಸ್.ಪಿ. ರಾಮಚಂದ್ರನ್

20.3.2018 ಹರಿಕಥೆ- ವಿದ್ವಾನ್ ಮೋಹನ್ ಕುಮಾರ್

21.3.2018 ದ್ವಂದ್ವವೀಣಾವಾದನ- ವಿದ್ವಾನ್ ಡಿ. ಬಾಲಕೃಷ್ಣ ಮತ್ತು ವಿದ್ವಾನ್ ಶ್ರೀನಿವಾಸ ಪ್ರಸನ್ನ

22.3.2018 ಕರ್ನಾಟಕ ಶಾಸ್ತ್ರೀಯ ಸಂಗೀತ- ವಿದುಷಿ ಕಲಾವತಿ ಅವಧೂತ್

23.3.2018 ಕರ್ನಾಟಕ ಶಾಸ್ತ್ರೀಯ ಸಂಗೀತ- ವಿದುಷಿ ವೃಂದ ಆಚಾರ್ಯ

24.3.2018 ಹಿಂದೂಸ್ತಾನಿ ಸಂಗೀತ ವಿದ್ವಾನ್ ಜಯತೀರ್ಥ ಮೇವುಂಡಿ

25.3.2018 ಶ್ರೀರಾಮ ನವಮಿ ಪ್ರಯುಕ್ತ ವಿಶೇಷ ಪೂಜೆ

ಭರತನಾಟ್ಯ- ಕುಚುಪುಡಿ, ಜುಗಲ್ ಬಂಧಿ- ವಿದುಷಿ ಅಪೂರ್ವ ಎನ್. ಪ್ರಕಾಶ್ ಮತ್ತು ವಿದುಷಿ ಮೇಖಲಾ ಅಗ್ನಿಹೋತ್ರಿ

26.3.2018 ಕರ್ನಾಟಕ ಶಾಸ್ತ್ರೀಯ ಸಂಗೀತ - ವಿದ್ವಾನ್ ವಿನಯ್ ಶರ್ವ

27.3.2018 ದ್ವಂದ್ವಕೊಳಲು ವಾದನ - ವಿದ್ವಾನ್ ವೇಣುಗೋಪಾಲ್ ಮತ್ತು ವಿದುಷಿ ವಾರಿಜಶ್ರೀ

28.3.2018 ಕರ್ನಾಟಕ ಶಾಸ್ತ್ರೀಯ ಸಂಗೀತ- ವಿದುಷಿ ಭೂಮಿಕ ಮಧುಸೂದನ್

29.3.2018 ಕರ್ನಾಟಕ ಶಾಸ್ತ್ರೀಯ ಸಂಗೀತ - ವಿದುಷಿ ಸುರಭಿ ರಾಮಚಂದ್ರ

30.3.2018 ದ್ವಂದ್ವ ಪಿಟೀಲು ವಾದನ- ವಿದ್ವಾನ್ ತೇಜಸ್ ಮತ್ತು ವಿದ್ವಾನ್ ಪ್ರಣವ್ ಮಂಜುನಾಥ್

30.3.2018 ಶ್ರೀ ಸೀತಾ ಕಲ್ಯಾಣೋತ್ಸವ

31.3.2018 ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

1.4.2018 ಜಯನಗರ 8ನೇ ಬಡಾವಣೆಯ ರಾಜಬೀದಿಗಳಲ್ಲಿ ಶ್ರೀರಾಮ ದೇವರ ರಥೋತ್ಸವ

2.4.2018 ಹನುಮಂತೋತ್ಸವ ಮತ್ತು ಸಂಜೆ ಶಯನೋತ್ಸವ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Centenarian G Venkatasubbaiah's birth centenary and Golden Jubilee celebration will be held at Jayarama Seva Mandi during Rama Navami festival this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more