ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗತ್ತು ಮಾತನಾಡಿತು, ಆದರೆ ಜಪಾನ್ ಮಾಡಿ ತೋರಿಸಿತು..!

|
Google Oneindia Kannada News

ಕ್ಷುದ್ರಗ್ರಹ ಹುಡುಕಿ ಹೊರಟಿರುವ ಮಾನವರಿಗೆ ಭಾನುವಾರ ಮಹತ್ವದ ದಿನ. ಏಕೆಂದರೆ ಹತ್ತಾರು ವರ್ಷಗಳ ಕನಸು ನನಸಾಗಿದೆ. ಜಪಾನ್ ಬಾಹ್ಯಾಕಾಶ ಸಂಸ್ಥೆಯ 'ಹಯಾಬುಸಾ-2' ಬಾಹ್ಯಾಕಾಶ ನೌಕೆ ಕ್ಷುದ್ರವೊಂದರ ನೆಲವನ್ನು ಅಗೆದು ಭೂಮಿಗೆ ರವಾನಿಸಿದೆ. ಅಂದಹಾಗೆ ಈ 'ಹಯಾಬುಸಾ-2' ಕ್ಷುದ್ರಗ್ರಹವನ್ನು ಹುಡುಕುತ್ತಾ 1 ವರ್ಷದ ಹಿಂದೆ ಪ್ರಯಾಣ ಆರಂಭಿಸಿತ್ತು. 30 ಕೋಟಿ ಕಿಲೋ ಮೀಟರ್ ದೂರ ಕ್ರಮಿಸಿದ ಬಳಿಕ ಕಡೆಗೂ ತನ್ನ ಗುರಿ ತಲುಪಿದ ನೌಕೆ, 'ರ‍್ಯುಗು' ಎಂಬ ಕ್ಷುದ್ರಗ್ರಹದ ನೆಲ ಅಗೆದು ಭೂಮಿಗೆ ತಲುಪಿಸಿದೆ.

ಜಗತ್ತು ಈಗ ಬಾಹ್ಯಾಕಾಶ ಸ್ಪರ್ಧೆಗೆ ಬಿದ್ದಿದೆ. ಭೂಮಿ ಮೇಲಿನ ಒತ್ತಡಗಳು ಹಾಗೂ ಮಾನವನ ಅಗತ್ಯತೆಗಳಿಗೆ ಎದುರಾದ ಕೊರತೆ ಬಾಹ್ಯಾಕಾಶ ಸ್ಪರ್ಧೆಯನ್ನು ತೀವ್ರಗೊಳಿಸಿದೆ. 15ನೇ ಶತಮಾನದ ವೇಳೆಗೆ ಯುರೋಪ್‌ನಲ್ಲಿ ಇದೇ ರೀತಿ ಬೆಳವಣಿಗೆ ಸಂಭವಿಸಿ, ಸಮುದ್ರಯಾನ ಸ್ಪರ್ಧೆ ನಡೆದಂತೆ ಈಗ ಬಾಹ್ಯಾಕಾಶ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಕ್ಷುದ್ರಗ್ರಹ ಎಲ್ಲರ ಟಾರ್ಗೆಟ್.

ಚಂದ್ರನ ಸ್ಯಾಂಪಲ್: ರಷ್ಯಾ, ಅಮೆರಿಕ ನಂತರ ಚೀನಾ ಸಾಧನೆಚಂದ್ರನ ಸ್ಯಾಂಪಲ್: ರಷ್ಯಾ, ಅಮೆರಿಕ ನಂತರ ಚೀನಾ ಸಾಧನೆ

ಸಣ್ಣ ಸಣ್ಣ ಬಂಡೆ ಕಲ್ಲುಗಳಂತೆ ನೂರಾರು ಕೋಟಿ ಸಂಖ್ಯೆಯಲ್ಲಿ ಹರಡಿಕೊಂಡಿರುವ ಕ್ಷುದ್ರಗ್ರಹಗಳ ಮೇಲೆ ಗಣಿಗಾರಿಕೆ ನಡೆಸಲು ಮಾನವ ಜಿದ್ದಿಗೆ ಬಿದ್ದಿದ್ದಾನೆ. ಇದು ಹತ್ತಾರು ವರ್ಷಗಳಿಂದ ಏರ್ಪಟ್ಟಿರುವ ಪೈಪೋಟಿ. ಆದರೆ ಈವರೆಗೂ ಯಾವುದೇ ಕ್ಷುದ್ರಗ್ರಹದ ಮಣ್ಣನ್ನು ತರುವಲ್ಲಿ ಮಾನವ ಸಕ್ಸಸ್ ಆಗಿರಲಿಲ್ಲ. ನಾಸಾ ಕೂಡ ಹಲವು ಪ್ರಯತ್ನಗಳಲ್ಲಿ ಫ್ಲಾಪ್ ಆಗಿತ್ತು. ಆದರೆ ಜಪಾನ್ ಅದನ್ನ ಮಾಡಿ ತೋರಿಸಿದೆ. ಬಾಹ್ಯಾಕಾಶ ಲೋಕದಲ್ಲೂ ತನ್ನ ತಾಕತ್ತು ಏನು ಎಂಬುದನ್ನ ಜಪಾನ್ ತೋರಿಸಿಕೊಟ್ಟಿದೆ.

30 ಕೋಟಿ ಕಿ.ಮೀ. ಪ್ರಯಾಣ..!

30 ಕೋಟಿ ಕಿ.ಮೀ. ಪ್ರಯಾಣ..!

'ಹಯಾಬುಸಾ-2' ಬಾಹ್ಯಾಕಾಶ ನೌಕೆ ಸಹಾಯದಿಂದ 30 ಕೋಟಿ ಕಿಲೋ ಮೀಟರ್ ಕ್ರಮಿಸಿ ಕ್ಷುದ್ರನ ಮಣ್ಣು ಬಗೆಯಲಾಗಿತ್ತು. ಕ್ಷುದ್ರಗ್ರಹದ ಮಣ್ಣನ್ನು ಸುರಕ್ಷಿತವಾಗಿ ಕ್ಯಾಪ್ಸೂಲ್ ಮಾದರಿಯ ದೊಡ್ಡ ಹಂಡೆಗೆ ಸುರಿಯಲಾಗಿತ್ತು. ಆ ಕ್ಯಾಪ್ಸೂಲ್‌ನ 'ಹಯಾಬುಸಾ-2' ಬಾಹ್ಯಾಕಾಶ ನೌಕೆಯಿಂದ ಬೇರ್ಪಡಿಸಲಾಗಿತ್ತು. ಕೆಲವೇ ದಿನಗಳ ಹಿಂದೆ, ಭೂಮಿಯಿಂದ ಸುಮಾರು 2 ಲಕ್ಷ 20 ಸಾವಿರ ಕಿಲೋ ಮೀಟರ್ ದೂರದಲ್ಲಿ ಈ ಪ್ರಕ್ರಿಯೆ ನಡೆದಿತ್ತು. 'ಹಯಾಬುಸಾ-2' ಬಾಹ್ಯಾಕಾಶ ನೌಕೆಯಿಂದ ಬೇರ್ಪಟ್ಟಿದ್ದ ಕ್ಷುದ್ರಗ್ರಹದ ಮಣ್ಣನ್ನು ಹೊತ್ತಿದ್ದ ಕ್ಯಾಪ್ಸೂಲ್ ಯಶಸ್ವಿಯಾಗಿ ಭೂಮಿಯತ್ತ ನುಗ್ಗಿತ್ತು. ಹೀಗೆ ಅಂದುಕೊಂಡಂತೆ ಆಸ್ಟ್ರೇಲಿಯಾದ 'ವೂಮೆರಾ' ಪ್ರದೇಶದಲ್ಲಿ ಕ್ಯಾಪ್ಸೂಲ್ ಲ್ಯಾಂಡ್ ಆಗಿದೆ. ಜಪಾನ್ ಅದನ್ನ ಸಂಶೋಧನೆಗೆ ಕೊಂಡೊಯ್ದಿದೆ.

ಭೂಮಿ, ಸೂರ್ಯನ ಮೂಲ ಅರಿಯಬಹುದು

ಭೂಮಿ, ಸೂರ್ಯನ ಮೂಲ ಅರಿಯಬಹುದು

ಈಗ ಜಪಾನ್ ನೌಕೆ ಕಳುಹಿಸಿರುವ ಕ್ಷುದ್ರಗ್ರಹದ ಸ್ಯಾಂಪಲ್ ಮೂಲಕ ಭೂಮಿ ಹಾಗೂ ಸೂರ್ಯನ ಜನ್ಮ ರಹಸ್ಯ ಅಧ್ಯಯನ ನಡೆಸಬಹುದಾಗಿದೆ. ಭೂಮಿ ಹುಟ್ಟಿದ್ದಾದರೂ ಹೇಗೆ..? ಸೂರ್ಯನ ಜನ್ಮ ಹೇಗಾಯಿತು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆಯಲ್ಲಿ ಬಾಹ್ಯಾಕಾಶ ವಿಜ್ಞಾನಿಗಳು ಸಂತಸಗೊಂಡಿದ್ದಾರೆ. ಆದರೆ ಕ್ಯಾಪ್ಸೂಲ್ ಲ್ಯಾಂಡ್ ಆಗುವ ಅಂತಿಮ ಕ್ಷಣಗಳು ಸಾಕಷ್ಟು ಆತಂಕ ಮೂಡಿಸಿದ್ದವು. ಭೂಮಿಗೆ ಇಳಿಯುವಾಗ ಅಕಸ್ಮಾತ್ ಕ್ಯಾಪ್ಸೂಲ್‌ಗೆ ಹಾನಿ ಆದರೆ ಎಂಬ ಭಯವೂ ಕಾಡುತ್ತಿತ್ತು. ಆದರೆ ಎಲ್ಲವೂ ಜಪಾನ್ ವಿಜ್ಞಾನಿಗಳು ಅಂದುಕೊಂಡ ರೀತಿಯಲ್ಲೇ ಸರಾಗವಾಗಿ ನಡೆದು, ಕ್ಷುದ್ರಗ್ರಹದ ಸ್ಯಾಂಪಲ್ ಮಾನವರ ಕೈಸೇರಿದೆ.

ಚೀನಿ ಗ್ಯಾಂಗ್‌ನಿಂದಲೂ ಸ್ಕೆಚ್..!

ಚೀನಿ ಗ್ಯಾಂಗ್‌ನಿಂದಲೂ ಸ್ಕೆಚ್..!

2021ರ ವೇಳೆಗೆ ಕ್ಷುದ್ರಗ್ರಹಗಳ ಮೇಲೆ ಗಣಿಗಾರಿಕೆ ನಡೆಸುವಷ್ಟು ಶಕ್ತವಾಗಲು ಚೀನಾ ಕೂಡ ಸ್ಕೆಚ್ ಹಾಕಿದೆ. 'ನಿಯೋ-1' ಹೆಸರಲ್ಲಿ 'ಒರಿಜಿನ್ ಸ್ಪೇಸ್' ಎಂಬ ಬೀಜಿಂಗ್ ಮೂಲದ ಖಾಸಗಿ ಕಂಪನಿ ಯೋಜನೆಯನ್ನ ಸಿದ್ಧಪಡಿಸಿದೆ. ಬ್ರಹ್ಮಾಂಡದಲ್ಲಿ ಕೋಟ್ಯಂತರ ಕ್ಷುದ್ರಗ್ರಹಗಳು ಸುತ್ತುಹಾಕುತ್ತಿವೆ. ಒಂದೊಂದು ಕ್ಷುದ್ರಗ್ರಹದಲ್ಲೂ ಟ್ರಿಲಿಯನ್ ಡಾಲರ್‌ಗಳಷ್ಟು ಸಂಪತ್ತು ಅಡಗಿದೆ. ಚಿನ್ನ, ಬೆಳ್ಳಿ, ವಜ್ರ ಸೇರಿದಂತೆ ಭೂಮಿ ಮೇಲೆ ಸಿಗುವ ಎಲ್ಲಾ ಬೆಲೆಬಾಳುವ ಅದಿರು, ಗಣಿ ಸಂಪತ್ತು ಕ್ಷುದ್ರಗ್ರಹಗಳಲ್ಲೂ ಸಿಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಶ್ರೀಮಂತ ರಾಷ್ಟ್ರಗಳು ಕ್ರುದ್ರಗ್ರಹಗಳ ಬೇಟೆಗೆ ಇಳಿದಿದ್ದು, ಈ ಸಾಲಿಗೆ ಚೀನಾ ಕೂಡ ಸೇರ್ಪಡೆಯಾಗುತ್ತಿದೆ. ಮುಂದಿನ ವರ್ಷದೊಳಗೆ ಬಾಹ್ಯಾಕಾಶದ ಗಣಿ ಸಂಪತ್ತಿನ ಲೂಟಿಗೆ ಚೀನಿ ಗ್ಯಾಂಗ್ ಸಿದ್ಧವಾಗಿ ನಿಂತಿದೆ.

ಊಹೆಗೂ ನಿಲುಕದಷ್ಟು ಸಂಪತ್ತು ಸಿಗುತ್ತದೆ..!

ಊಹೆಗೂ ನಿಲುಕದಷ್ಟು ಸಂಪತ್ತು ಸಿಗುತ್ತದೆ..!

ಅಕಸ್ಮಾತ್ ಕ್ಷುದ್ರಗ್ರಹಗಳ ಮೇಲೆ ಮೈನಿಂಗ್ ಸಾಧ್ಯವಾದರೆ ಈವರೆಗೂ ಮನುಕುಲ ಕಾಣದಷ್ಟು ಪ್ರಮಾಣದ ಸಂಪತ್ತು ಭೂಮಿಗೆ ಬರಲಿದೆ. ಭೂಮಿಯ ಅಕ್ಕಪಕ್ಕದ ಕ್ಷುದ್ರಗ್ರಹಗಳ ಮೂಲಕ ಮೈನಿಂಗ್ ಮಾಡಿ, ಭೂಮಿ ಮೇಲೆ ನಡೆಯುವಂತೆ ವ್ಯಾಪಾರ ವಹಿವಾಟು ನಡೆಸಬಹುದು. ಆದರೆ ಈ ಅವಕಾಶ ಖಾಸಗಿ ಕಂಪನಿಗಳಿಗೆ ಸಿಕ್ಕರೆ ವ್ಯತಿರಿಕ್ತ ಪರಿಣಾಮ ಎದುರಾಗುತ್ತದೆ ಎಂಬುದು ಹಿರಿಯ ವಿಜ್ಞಾನಿಗಳ ಆಕ್ಷೇಪ. ಆದರೂ ಜಗತ್ತಿನ ಬಹುಪಾಲು ದೇಶಗಳು ಬಾಹ್ಯಾಕಾಶವನ್ನೂ ಖಾಸಗೀಕರಣ ಮಾಡಲು ಹೊರಟಿವೆ. ಖಾಸಗಿ ಕಂಪನಿಗಳಿಂದ ಮೈನಿಂಗ್ ಮಾಡಿಸಲು ಪ್ರೋತ್ಸಾಹ ನೀಡುತ್ತಿವೆ.

English summary
Finally Japan succeeded to bring the asteroid samples to earth. Japan’s capsule with asteroid samples has landed in Australia’s Woomera.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X