ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Lockdown Love Story: ಇದು ಬಾಲ್ಕನಿಯಲ್ಲಿ ಅರಳಿದ ಪ್ರೀತಿ!

|
Google Oneindia Kannada News

ನವದೆಹಲಿ, ಸಪ್ಟೆಂಬರ್.25: ಕೊರೊನಾವೈರಸ್ ಹರಡುವಿಕೆ ಭೀತಿ. ಇಟಲಿಯಲ್ಲಿ 10 ವಾರಗಳ ಲಾಕ್ ಡೌನ್ ಪರಿಸ್ಥಿತಿ. ಮನೆಯ ಬಾಲ್ಕನಿಯಲ್ಲಿ ಎದುರಾದ ಎರಡು ಹೃದಯಗಳಲ್ಲಿ ಹುಟ್ಟಿತು ಮೊದಲ ಪ್ರೀತಿ. ಇದು ರೋಮಿಯೋ-ಜೂಲಿಯಟ್ ಊರಿನಲ್ಲಿ ನಡೆದ ಲಾಕ್ ಡೌನ್ ಲವ್ ಸ್ಟೋರಿಯ ನೈಜ ಘಟನೆ.

ಖ್ಯಾತ ಬರಹಗಾರ ಶೇಕ್ಸ್ ಪಿಯರ್ ಹೇಳುವಂತೆ ಅವರವರ ಪ್ರಯಣ ಕಥೆಗಳು ಮನೆಗಳ ಬಾಲ್ಕನಿಯಲ್ಲಿ ಹುಟ್ಟಿಕೊಳ್ಳುತ್ತವೆ. ಇಟಲಿಯಲ್ಲಿ ಕೊವಿಡ್-19 ಸೋಂಕಿನ ಅಟ್ಟಹಾಸದಿಂದಾಗಿ 10 ವಾರಗಳ ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಜನರು ತಮ್ಮ ತಮ್ಮ ಮನೆಗಳಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದರು.

ಎಂಥವರಿಗೂ ಕಣ್ಣೀರು ಹಾಕಿಸುತ್ತದೆ ಈ ಪ್ರೇಮಿಗಳ ಲವ್ ಸ್ಟೋರಿಎಂಥವರಿಗೂ ಕಣ್ಣೀರು ಹಾಕಿಸುತ್ತದೆ ಈ ಪ್ರೇಮಿಗಳ ಲವ್ ಸ್ಟೋರಿ

ರೋಮಿಯೋ-ಜೂಲಿಯಟ್ ಪ್ರೀತಿಗೆ ಸಾಕ್ಷಿಯಾದ ಇಟಲಿಯ ವೆರೋನಾ ನಗರದಲ್ಲೇ ಈ ಲವ್ ಸ್ಟೋರಿ ಕೂಡಾ ನಡೆದಿದೆ. ರೋಮಿಯೋ-ಜೂಲಿಯಟ್ ಅವರದ್ದು ಫ್ಲಾಪ್ ಲವ್ ಸ್ಟೋರಿ. ಆದರೆ ಇಟಲಿ ಲಾಕ್ ಡೌನ್ ಸಂದರ್ಭದಲ್ಲಿ ಜನಿಸಿದ ಈ ಇಬ್ಬರ ಪ್ರೀತಿ ಸಕ್ಸಸ್ ಆಗಿದೆ. ಮನೆಯ ಬಾಲ್ಕನಿಯಲ್ಲಿ ಮೊದಲು ಹುಟ್ಟಿದ ಒಲವಿನಿಂದ ಮೈಕಲ್ ಡಿ ಅಲ್ಫಾಸ್ ಮತ್ತು ಪಾವೊಲಾ ಅಗ್ನೆಲ್ಲಿ ಜೋಡಿ ವೈವಾಹಿಕ ಬದುಕಿನತ್ತ ಕಾಲಿಡುತ್ತಿದೆ. ಲಾಕ್ ಡೌನ್ ಮುಗಿದ ಆರು ತಿಂಗಳ ನಂತರದಲ್ಲಿ ಭೇಟಿಯಾದ ಈ ಇಬ್ಬರ 'ಪ್ರೇಮ್ ಕಹಾನಿ' ಬಲುರೋಚಕವಾಗಿದೆ.

ಆ ಮೊದಲ ದಿನವೇ 'Love At First Sight'

ಆ ಮೊದಲ ದಿನವೇ 'Love At First Sight'

ಮಾರ್ಚ್ ಮಧ್ಯಭಾಗದಲ್ಲಿ ನಡೆದ ಘಟನೆಯಿದು. ಪಾವೊಲಾ ಅಗ್ನೆಲ್ಲಿ ತಮ್ಮ ಮನೆಯ ಟೆರೆಸ್ ಮೇಲೆ ನಿಂತಿದ್ದನ್ನು ಕಂಡ ಮೈಕಲ್ ಡಿ ಅಲ್ಫಾಸ್ ಅಂದು ಆಕೆಯನ್ನು ನೋಡಿದ ಮೊದಲ ನೋಟದಲ್ಲೇ ಪ್ರೀತಿ ಅರಳಿತು ('Love At First Sight')ಎಂದು ಹೇಳುತ್ತಾ ತಮ್ಮ ಪ್ರೇಮ್ ಕಹಾನಿಯನ್ನು ಹೇಳುವುದಕ್ಕೆ ಆರಂಭಿಸುತ್ತಾರೆ. "ಆ ಹುಡುಗಿಯ ಅಂದ, ಚೆಂದ, ನಗುವನ್ನು ಕಂಡು ಒಂದು ಕ್ಷಣ ನಾನು ಸ್ತಬ್ಧನಾಗಿ ಬಿಟ್ಟೆ. ಈ ಹುಡುಗಿಯ ಬಗ್ಗೆ ತಿಳಿದುಕೊಳ್ಳಬೇಕು ಎನ್ನುವ ಕುತೂಹಲ ನನ್ನ ಮನದಲ್ಲಿ ಮೂಡಿತು" ಎನ್ನುತ್ತಾರೆ ಮೈಕಲ್ ಡಿ ಅಲ್ಫಾಸ್.

ಸುಂದರಿ ಗಮನ ಸೆಳೆಯಲು ಕಾರಣವಾದ ಸಂಗೀತ

ಸುಂದರಿ ಗಮನ ಸೆಳೆಯಲು ಕಾರಣವಾದ ಸಂಗೀತ

ಕೊರೊನಾವೈರಸ್ ಸೋಂಕಿನ ಭೀತಿ ಹಿನ್ನೆಲೆ ಇಟಲಿಯಲ್ಲಿ 10 ವಾರಗಳ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. "ಕ್ವಾರೆಂಟೈನ್ ನಲ್ಲಿದ್ದ ನೆರೆಹೊರೆಯವರಲ್ಲಿ ಚೈತನ್ಯ ತುಂಬುವ ಉದ್ದೇಶದಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ನಡೆಸಲಾಗುತ್ತಿತ್ತು. ಸಂಜೆ 6 ಗಂಟೆ ವೇಳೆಯಲ್ಲಿ 6ನೇ ಫ್ಲೋರ್ ನಲ್ಲಿ ನಿಂತು 'We Are The Champions' ಹಾಡನ್ನು ವೈಲಿನ್ ನಲ್ಲಿ ನುಡಿಸಲಾಗುತ್ತಿತ್ತು. ಈ ವೇಳೆ ವೈಲಿನ್ ನುಡಿಸುತ್ತಿದ್ದ ಸಹೋದರ ಪಕ್ಕದಲ್ಲೇ ನಿಂತಿದ್ದ ಪಾವೊಲಾ ಅಗ್ನೆಲ್ಲಿ ನನ್ನ ಗಮನ ಸೆಳೆದಳು" ಎಂದು ಮೈಕಲ್ ಡಿ ಅಲ್ಫಾಸ್ ಹೇಳುತ್ತಾರೆ.

ಅಪಾರ್ಟ್ ಮೆಂಟ್ ಎದುರಿನಲ್ಲಿದ್ದರೂ ಒಮ್ಮೆಯೂ ಭೇಟಿಯಿಲ್ಲ

ಅಪಾರ್ಟ್ ಮೆಂಟ್ ಎದುರಿನಲ್ಲಿದ್ದರೂ ಒಮ್ಮೆಯೂ ಭೇಟಿಯಿಲ್ಲ

"ನಿಜವಾಗಿಯೂ ಇದೊಂದು ಮಾಯೆಯೆಂತೆ ಗೋಚರಿಸುತ್ತಿದೆ" ಎಂದು ಪಾವೊಲಾ ಅಗ್ನೆಲ್ಲಿ ಹೇಳುತ್ತಾರೆ. "ನಾನು 5 ವರ್ಷ ಇದ್ದಾಗಿನಿಂದ ಇದೇ ಅಪಾರ್ಟ್ ಮೆಂಟ್ ನಲ್ಲಿ ವಾಸಿಸುತ್ತಿದ್ದೇನೆ. ಹೀಗಿದ್ದರೂ ಎದುರಿನ ಅಪಾರ್ಟ್ ಮೆಂಟ್ ನ 7ನೇ ಫ್ಲೋರ್ ನಲ್ಲಿ ವಾಸವಿದ್ದ ಮೈಕಲ್ ಡಿ ಅಲ್ಫಾಸ್ ರನ್ನು ಒಮ್ಮೆಯೂ ಭೇಟಿ ಮಾಡಿರಲಿಲ್ಲ" ಎಂದು ಪಾವೊಲಾ ಅಗ್ನೆಲ್ಲಿ ಹೇಳುತ್ತಾರೆ.

ಎದುರು ಮನೆ ಹುಡುಗಿಗಾಗಿ ಇನ್ ಸ್ಟಾಗ್ರಾಮ್ ಖಾತೆ

ಎದುರು ಮನೆ ಹುಡುಗಿಗಾಗಿ ಇನ್ ಸ್ಟಾಗ್ರಾಮ್ ಖಾತೆ

ಮೈಕಲ್ ಡಿ ಅಲ್ಫಾಸ್ ಸಹೋದರಿ ಮತ್ತು ಪಾವೊಲಾ ಅಗ್ನೆಲ್ಲಿ ಇಬ್ಬರೂ ಲಾಕ್ ಡೌನ್ ಗೂ ಮೊದಲು ಒಂದೇ ಜಿಮ್ ನಲ್ಲಿ ವ್ಯಾಯಾಮಕ್ಕಾಗಿ ತೆರಳುತ್ತಿದ್ದರು. ಸಹೋದರಿ ಪಾವೊಲಿ ಅಗ್ನೆಲ್ಲಿ ಅವರ ಹೆಸರನ್ನು ನಾನು ನನ್ನ ಸಹೋದರಿಯಿಂದ ತಿಳಿದುಕೊಂಡೆ. ನಂತರ ಎಲ್ಲ ಸಾಮಾಜಿಕ ಜಾಲತಾಣಗಳಲ್ಲೂ ಆ ಹುಡುಗಿಗಾಗಿ ಹುಡುಕಾಟ ನಡೆಸಿದೆ. ಕೊನೆಗೆ ಇನ್ ಸ್ಟಾಗ್ರಾಮ್ ನಲ್ಲಿ ಪಾವೊಲಾ ಅಗ್ನೆಲ್ಲಿ ಖಾತೆ ಹೊಂದಿರುವುದನ್ನು ಪತ್ತೆ ಹಚ್ಚಿದೆ. ಆದರೆ ನಾನು ಇನ್ ಸ್ಟಾಗ್ರಾಮ್ ಖಾತೆ ಹೊಂದಿರಲಿಲ್ಲ. ಕೇವಲ ಐದು ನಿಮಿಷಗಳಲ್ಲೇ ಹೊಸ ಇನ್ ಸ್ಟಾಗ್ರಾಮ್ ಖಾತೆಯನ್ನು ತೆರೆದೆನು.

"ಮೈಕಲ್ ಡಿ ಅಲ್ಫಾಸ್ ನನ್ನ ಇನ್ ಸ್ಟಾಗ್ರಾಮ್ ಖಾತೆಯನ್ನು ಫಾಲೋ ಮಾಡಿದರು. ಮೊದಲ ಬಾರಿ ನನಗೆ ಮೆಸೇಜ್ ಮಾಡಿದಾಗ ನಾನು ಅವರನ್ನು ಗುರುತಿಸಿದೆ. ಆಗ ಮನಸಿಗೆ ತುಂಬಾ ಸಂತೋಷವಾಗಿದ್ದು, ಸಾಮಾಜಿಕ ಜಾಲತಾಣದ ಮೂಲಕ ನಮ್ಮ ಪರಿಚಯ ಬಲಗೊಂಡಿತು" ಎಂದು ಪಾವೊಲಾ ಅಗ್ನೆಲ್ಲಿ ಹೇಳುತ್ತಾರೆ.

ಇಟಲಿ ಲಾಕ್ ಡೌನ್ ಮಧ್ಯೆ ಭೇಟಿಯ ಹಾತೊರಿಕೆ

ಇಟಲಿ ಲಾಕ್ ಡೌನ್ ಮಧ್ಯೆ ಭೇಟಿಯ ಹಾತೊರಿಕೆ

ಕೊರೊನಾವೈರಸ್ ಸೋಂಕಿನ ಭೀತಿ ಹಿನ್ನೆಲೆ ಇಟಲಿಯಲ್ಲಿ 10 ವಾರಗಳವರೆಗೂ ಕಡ್ಡಾಯವಾಗಿ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಈ ವೇಳೆ ಪರಸ್ಪರ ಭೇಟಿ ಮಾಡಲಾಗದೇ ಮೈಕಲ್ ಅಲ್ಫಾಸ್ ಮತ್ತು ಪಾವೊಲಾ ಅಗ್ನೆಲ್ಲಿ ಅನುಭವಿಸಿದ ತೊಳಲಾಟವನ್ನು ಪದಗಳಲ್ಲಿ ಹೇಳಲು ಆಗುವುದಿಲ್ಲ ಎಂದು ಇಬ್ಬರೂ ಹೇಳುತ್ತಾರೆ. ಈ ಅವಧಿಯಲ್ಲಿ ಪರಸ್ಪರ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವುದರ ಮೂಲಕ ಮನದಲ್ಲಿನ ಪ್ರೀತಿ ಬಲಗೊಂಡಿತು. ಮೌಲ್ಯಯುತ ಪ್ರೀತಿಯಿಂದ ಬದುಕಿಗೆ ಹೊಸ ಅರ್ಥ ಸಿಕ್ಕಿತು.

ಮನೆ ಬಾಗಿಲಿಗೆ ಬಂದ ಪ್ರೀತಿಯ ಉಡುಗೊರೆ

ಮನೆ ಬಾಗಿಲಿಗೆ ಬಂದ ಪ್ರೀತಿಯ ಉಡುಗೊರೆ

200 ಮೀಟರ್ ದೂರದಲ್ಲೇ ಇರುವ ಪಾಲೊಲಾ ಅಗ್ನೆಲ್ಲಿ ಮನೆಗೆ ಪ್ರತಿನಿತ್ಯ ಹೂವಿನ ಕುಂಡಲಿಗಳನ್ನು ಮೈಕಲ್ ಡಿ ಅಲ್ಫಾಸ್ ಕಳುಹಿಸಿ ಕೊಡುತ್ತಿದ್ದರು. ಮನೆ ಬಾಗಿಲಿಗೆ ಪ್ರೀತಿಯ ಉಡುಗೊರೆ ಬಂದರೂ ಅಷ್ಟು ಸಾಕಾಗಿಲ್ಲ. ಈ ಉಡುಗೊರೆ ಅಷ್ಟೊಂದು ಪರಿಣಾಮಕಾರಿ ಎನಿಸಲಿಲ್ಲ. ಮಾರ್ಚ್ ತಿಂಗಳಾಂತ್ಯದ ವೇಳೆಯಲ್ಲಿ ಮೈಕಲ್ ಡಿ ಅಲ್ಫಾಸ್ ಅವರು ತಮ್ಮ ಅಪಾರ್ಟ್ ಮೆಂಟ್ ಕಿಟಕಿ ಮುಂಭಾಗದಲ್ಲಿ ಬೆಡ್ ಶೀಟ್ ಮೇಲೆ 'ಪಾವೊಲಾ' ಮೇಲಿನ ಪ್ರೀತಿಯ ನಿವೇದನೆಯನ್ನು ದೊಡ್ಡ ಅಕ್ಷರಗಳಲ್ಲಿ ಬರೆದು ನೇತು ಬಿಟ್ಟರು. ಇದೊಂದು ಪ್ರೇಮ ಕಥೆಯು ಇಟಲಿಯ ಸ್ಥಳೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಯಿತು. ಈ ದಂಪತಿಯನ್ನು ಇಟಲಿಯ ಆಧುನಿಕ ರೋಮಿಯೋ-ಜೂಲಿಯಟ್ ಎಂದು ಮಾಧ್ಯಮಗಳಲ್ಲಿ ವರದಿಯಾಯಿತು.

60 ದಿನಗಳ ಬಳಿ ಮೊದಲ ಚುಂಬನ

60 ದಿನಗಳ ಬಳಿ ಮೊದಲ ಚುಂಬನ

ಮೈಕಲ್ ಡಿ ಅಲ್ಫಾಸ್ ನೀಡಿದ ಉಡುಗೊರೆ ನನ್ನ ಪಾಲಿಗೆ ಆಶ್ಚರ್ಯವನ್ನು ಹುಟ್ಟು ಹಾಕಿತು. ನನ್ನ 'ರೋಮಿಯೋ'ನನ್ನು ಮುಖಾಮುಖಿಯಾಗಿ ಭೇಟಿಯಾಗಬೇಕು ಎಂಬ ಉತ್ಸುಕತೆಯು ಮನದಲ್ಲಿ ಇಮ್ಮಡಿಯಾಯಿತು. ಕೊನೆಗೂ ಮೇ ತಿಂಗಳಿನಲ್ಲಿ ಪರಸ್ಪರ ಇಬ್ಬರು ಭೇಟಿಯಾದೆವು. ಸ್ಥಳೀಯ ಉದ್ಯಾನವನದಲ್ಲಿ ಭೇಟಿಯಾದ ಪ್ರೇಮಿಗಳು ಕೊವಿಡ್-19 ಭೀತಿಯಿಂದ ಮುಖಕ್ಕೆ ಧರಿಸಿದ್ದ ಮಾಸ್ಕ್ ನ್ನು ತೆರೆದು ಮನ ಮೆಚ್ಚಿದವರ ಜೊತೆಗೆ ಮೊದಲ ಚುಂಬನ ವಿನಿಮಯ ಮಾಡಿಕೊಂಡರು.

ಎರಡು ಕುಟುಂಬಗಳ ಪರಿಚಯಕ್ಕೆ ಜುಲೈ ತಿಂಗಳು ಸಾಕ್ಷಿ

ಎರಡು ಕುಟುಂಬಗಳ ಪರಿಚಯಕ್ಕೆ ಜುಲೈ ತಿಂಗಳು ಸಾಕ್ಷಿ

ಇಟಲಿಯಲ್ಲಿ ಕೊರೊನಾವೈರಸ್ ಸೋಂಕಿನ ಆತಂಕ ಮರೆಯಾಗಿ ಪರಿಸ್ಥಿತಿ ಕೊಂಚ ತಿಳಿಯಾಗಿತ್ತು. ಮೈಕಲ್ ಡಿ ಅಲ್ಫಾಸ್ ಕಂಪ್ಯೂಟರ್ ನಿರ್ವಹಣೆ ಉದ್ಯೋಗ ಮಾಡುತ್ತಿದ್ದರೆಸ ಪಾವೊಲಾ ಅಗ್ನೆಲ್ಲಿ ವಕೀಲೆಯಾಗಿ ಕೆಲಸ ಮಾಡುತ್ತಿದ್ದರು. ಕಳೆದ ಜುಲೈ ತಿಂಗಳಿನಲ್ಲಿ ಪರಸ್ಪರ ಇಬ್ಬರ ಕುಟುಂಬ ಸದಸ್ಯರು ಭೇಟಿಯಾದರು. ಇಬ್ಬರು ಮದುವೆಯಾಗುವ ಪ್ರಸ್ತಾಪವನ್ನು ಕುಟುಂಬಸ್ಥರ ಮುಂದಿಟ್ಟರು. ಎರಡು ಕುಟುಂಬಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, "ಮನೆಯ ಬಾಲ್ಕನಿಯಲ್ಲಿ ಪ್ರೇಮ ವಿವಾಹ ಆಗಬೇಕು ಎಂಬುದು ತಮ್ಮ ಕನಸಾಗಿತ್ತು" ಎಂದು ಡಿ ಅಲ್ಫಾಸ್ ತಿಳಿಸಿದ್ದಾರೆ.

ಪ್ರೇಮಿಗಳ ಪಾಲಿಗೆ ವಿಶೇಷ ಎನಿಸಿದ ಲಾಕ್ ಡೌನ್

ಪ್ರೇಮಿಗಳ ಪಾಲಿಗೆ ವಿಶೇಷ ಎನಿಸಿದ ಲಾಕ್ ಡೌನ್

ಇಟಲಿ ಲಾಕ್ ಡೌನ್ ನಿಂದಾಗಿ ಜನರು ಪರಿತಪಿಸುವಂತಾ ಸ್ಥಿತಿ ನಿರ್ಮಾಣವಾಗಿತ್ತು. ಮನೆಗಳಿಂದ ಹೊರಗೆ ಬಾರಲಾಗದ ಸ್ಥಿತಿಯಲ್ಲಿ ಜನರು ಖಿನ್ನತೆಗೆ ಒಳಗಾಗುವಂತಾ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇಂಥ ಪರಿಸ್ಥಿತಿಯು ಪ್ರೇಮಿಗಳ ಪಾಲಿಗೆ ಮಾತ್ರ ವಿಶೇಷ ಎನ್ನಿಸಿ ಬಿಟ್ಟಿತು. ಇಬ್ಬರು ಪ್ರೇಮಿಗಳ ಮಾತು, ಭಾವನೆಗಳ ವಿನಿಮಯ ಅವರ ಪ್ರೀತಿಯ ಗಿಡಕ್ಕೆ ನೀರುಣಿಸಿತು. ಎಲ್ಲ ನೋವುಗಳನ್ನು ಮರೆಸಿ ಮನಸಿಗೆ ಖುಷಿ ಕೊಟ್ಟಿತು. "ನಾವು ಪ್ರೇಮಿಗಳಷ್ಟೇ ಅಲ್ಲ, ನಮ್ಮ ನಡುವಿನ ಬಾಂಧವ್ಯ ಅದಕ್ಕಿಂತಲೂ ಹೆಚ್ಚಾಗಿದೆ" ಎನ್ನುವುದು ಮೈಕಲ್ ಡಿ ಅಲ್ಫಾಸ್ ಮಾತು.

English summary
Italian Couple ‘Romeo And Juliet’ Met From Their Balconies During Lockdown. Now They’re Engaged.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X