ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದಾರ್ಥರ 650 ಕೋಟಿ ರು ಮೊತ್ತ ಎಲ್ಲೆಲ್ಲಿ ಹೂಡಿಕೆ?

By ಮಲೆನಾಡಿಗ
|
Google Oneindia Kannada News

ಎಬಿಸಿ ಒಡೆತನದ ಕಾಫಿ ಡೇ ಸಂಸ್ಥೆಯ ಒಡೆಯ ವಿ.ಜಿ ಸಿದ್ದಾರ್ಥ ಅವರು ಅವರು ಘೋಷಿಸಿಕೊಂಡಿರುವ ಆದಾಯಕ್ಕಿಂತ ಹೆಚ್ಚುವರಿಯಾಗಿ 650 ಕೋಟಿ ರು. ಆದಾಯ ಪತ್ತೆಯಾಗಿದ್ದು ಗೊತ್ತಿರಬಹುದು. ಈ ಆದಾಯವನ್ನು ಯಾವೆಲ್ಲ ಸಂಸ್ಥೆ ಮೇಲೆ ಹೂಡಿಕೆ ಮಾಡಲಾಗಿತ್ತು ಎಂಬ ಪಟ್ಟಿ ಇಲ್ಲಿದೆ.

ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸದ ಮೇಲೆ ನಡೆದಿದ್ದ ಐಟಿ ದಾಳಿಗೆ ಸಂಬಂಧಿಸಿದಂತೆ ಅವರ ಸ್ನೇಹಿತ ನಿರಂಜನ್ ಮೇಲೆ ಐಟಿ ದಾಳಿ ನಡೆಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಸಿದ್ದಾರ್ಥ ಅವರ ವ್ಯವಹಾರಗಳ ಮೇಲಿನ ದಾಳಿ ನಡೆಸಲಾಗಿದೆ ಎಂಬ ಸುದ್ದಿಯೂ ಹಬ್ಬಿದೆ.

ಸಾಮಾಜಿಕ ಕಾರ್ಯಕರ್ತ ಎಸ್. ಆರ್ ಹಿರೇಮಠ ಅವರು ಎಸ್ ಐಟಿಗೆ ಎಂದೂ ಸಲ್ಲಿಸಿದ್ದ ದೂರಿನಲ್ಲಿ ಉಲ್ಲೇಖಿಸಿದ್ದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿ 650 ಕೋಟಿ ರು ಗೂ ಅಧಿಕ ಬೇನಾಮಿ ಹೆಸರಿನ ಆಸ್ತಿ ಪತ್ತೆಯಾಗಿದೆ. ಮುಂದೇನಾಯ್ತು? ಆದಾಯ ತೆರಿಗೆ ಇಲಾಖೆ, ಎಸ್ ಐಟಿ ಅಧಿಕಾರಿಗಳಿಗೆ ಗೊತ್ತು.

ಮಲೆನಾಡಿನಲ್ಲಿ ದಾಳಿ ಬಗ್ಗೆ ಹೇಗಿದೆ ಟಾಕ್

ಮಲೆನಾಡಿನಲ್ಲಿ ದಾಳಿ ಬಗ್ಗೆ ಹೇಗಿದೆ ಟಾಕ್

ಸಿದ್ದಾರ್ಥ ಅವರ ತಂದೆ ಗಂಗಯ್ಯ ಹೆಗ್ಗಡೆ ಹಾಗೂ ತಾಯಿ ವಾಸಂತಿ ವಾಸವಿರುವ ಚೇತನಹಳ್ಳಿ ಎಸ್ಟೇಟ್ ಹಾಗೂ ಅವರು ನಿರ್ಗತಿಕ, ಆರ್ಥಿಕವಾಗಿ ಹಿಂದುಳಿದ ಯುವತಿಯರಿಗಾಗಿ ನಡೆಸುತ್ತಿರುವ ಶಾಲೆ, ಕಾಲೇಜುಗಳಲ್ಲಿ ಐಟಿ ರೇಡ್ ಬಗ್ಗೆ ಆತಂಕ ಮೂಡಿದ್ದು ನಿಜ. ಆದರೆ, 25 ಸಾವಿರಕ್ಕೂ ಅಧಿಕ ಕಾಫಿ ತೋಟದಲ್ಲಿನ ಕೆಲಸಗಾರರಿಗೆ ಈ ದಾಳಿಯಿಂದ ಈ ಕುಟುಂಬದ ಗೌರವಕ್ಕೇನು ಧಕ್ಕೆಯಾಗಲ್ಲ, ಅವರ ಗಳಿಕೆ ಬಗ್ಗೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಅನೇಕ ಕುಟುಂಬಗಳ ಜೀವನೋಪಾಯಕ್ಕೆ ದಾರಿಯಾದವರು ಎಂಬ ನಂಬಿಕೆ, ಸತ್ಯ ಅವರಲ್ಲಿ ದೃಢವಾಗಿದೆ.

ಕಾಫಿ ಡೇ ಮೇಲೆ ದಾಳಿಗೆ ಕಾರಣ?

ಕಾಫಿ ಡೇ ಮೇಲೆ ದಾಳಿಗೆ ಕಾರಣ?

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕು ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಸರಕಾರಿ ಜಮೀನನ್ನು ಸಿದ್ಧಾರ್ಥ ಒತ್ತುವರಿ ಮಾಡಿದ್ದಾರೆ. ಅರಣ್ಯ ಭೂಮಿ ಒತ್ತುವರಿ ಸರಿಪಡಿಸಿ ಎಂದು ಜನಸಂಗ್ರಾಮ ಪರಿಷತ್ ಅಥವಾ ಸಮಾಜ ಪರಿವರ್ತನಾ ಸಮುದಾಯದ ಕಾರ್ಯಕರ್ತ ಎಸ್.ಆರ್.ಹಿರೇಮಠ ಆರೋಪಿಸುತ್ತಲೇ ಬಂದಿದ್ದಾರೆ. ಈ ಬಗ್ಗೆ ಕಪ್ಪು ಹಣದ ವಿರುದ್ಧ ತನಿಖೆ ನಡೆಸುವ ವಿಶೇಷ ತನಿಖಾ ತಂಡ(ಎಸ್ ಐಟಿ)ಗೆ ದೂರು ನೀಡಿದ್ದರು. ಹಿರೇಮಠ ಅವರು ದೂರಿನಲ್ಲಿ ಉಲ್ಲೇಖಿಸಿದ್ದ ಸಂಸ್ಥೆಗಳ ಮೇಲೆ ಐಟಿ ದಾಳಿ ನಡೆಸಲಾಗಿ 650 ಕೋಟಿ ರು ಗೂ ಅಧಿಕ ಬೇನಾಮಿ ಹೆಸರಿನ ಆಸ್ತಿ ಪತ್ತೆಯಾಗಿದೆ. ಮುಂದೇನಾಯ್ತು? ಎಸ್ ಐಟಿ ಅಧಿಕಾರಿಗಳಿಗೆ ಗೊತ್ತು.

ಒಂದು ಪೈಸೆ ಅಕ್ರಮ ಕೂಡಾ ಕಷ್ಟಸಾಧ್ಯ

ಒಂದು ಪೈಸೆ ಅಕ್ರಮ ಕೂಡಾ ಕಷ್ಟಸಾಧ್ಯ

ವಿಜಿ ಸಿದ್ದಾರ್ಥ ಅವರ ಹೆಸರಿನಲ್ಲಿ ಒಂದು ಪೈಸೆ ಅಕ್ರಮ ಕೂಡಾ ಕಷ್ಟಸಾಧ್ಯ. ಷೇರುಪೇಟೆಯಲ್ಲಿ ಕಾಫಿ ಡೇ, ಮೈಂಡ್ ಟ್ರೀ ಸೇರಿದಂತೆ ಅವರ ಒಡೆತನದ ಸಂಸ್ಥೆಗಳಿರುವುದರಿಂದ ಎಲ್ಲಾ ಆರ್ಥಿಕ ವ್ಯವಹಾರಗಳ ವಿವರಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಸುಳ್ಳು ದಾಖಲೆ ಒದಗಿಸಿದರೆ ಷೇರುಪೇಟೆಯಲ್ಲಿ ನಷ್ಟ ಎದುರಿಸಬೇಕಾಗುತ್ತದೆ. ಆದರೆ, ಬೇರೆಯವರ ಹೆಸರಿನಲ್ಲಿ ತಮ್ಮ ಆಸ್ತಿಯನ್ನು ಹಂಚಿ ಉಳಿಸಿಕೊಂಡಿದ್ದರೆ ಪರೋಕ್ಷವಾಗಿ ಸಿದ್ದಾರ್ಥ ಅವರು ಆರೋಪಿಯಾಗಬೇಕಾಗುತ್ತದೆ. ಆದರೆ, ಇದಕ್ಕೆ ಸೂಕ್ತ ಪುರಾವೆ ಬೇಕಾಗುತ್ತದೆ.

ಸಾರ್ವಜನಿಕ ತಿಳುವಳಿಕೆ

ಸಾರ್ವಜನಿಕ ತಿಳುವಳಿಕೆ

ಸಿದ್ದಾರ್ಥ ಅವರ ಆಸ್ತಿ ಪಾಸ್ತಿ ಉಳಿಸಲಿಕ್ಕೆಂದೇ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರು ಬಿಜೆಪಿ ಸೇರಿದ್ದು ಎಂಬ ಮಾತು ಕೇಳಿ ಬಂದಿದೆ. ಕಾಂಗ್ರೆಸ್ಸಿನ ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ಮಾಡಿದ ನಂತರ ಬಿಜೆಪಿಯ ಎಸ್ಸೆಂ ಕೃಷ್ಣ ಅವರ ಅಳಿಯ ಸಿದ್ದಾರ್ಥ ಅವರ ಕಚೇರಿ ಮೇಲೆ ದಾಳಿ ನಡೆಸಿ ಅಲ್ಲಿಗೆ ಅಲ್ಲಿಗೆ ಸರಿ ಮಾಡಲಾಗಿದೆ. ಇದರಿಂದ ಬಂಧನ, ಜಪ್ತಿ,ತನಿಖೆ ಯಾವುದು ಆಗೋದಿಲ್ಲ ಎಂಬುದು ಜನ ಸಾಮಾನ್ಯರ ಅಂಬೋಣ.

ಕಾಫಿ ಡೇ ಮೇಲೆ ಎಲ್ಲೆಲ್ಲಿ ದಾಳಿ

ಕಾಫಿ ಡೇ ಮೇಲೆ ಎಲ್ಲೆಲ್ಲಿ ದಾಳಿ

ಬೆಂಗಳೂರಿನಲ್ಲಿರುವ ಕಾಫಿ ಡೇ ಮುಖ್ಯ ಕಚೇರಿ ಸೇರಿದಂತೆ ಚಿಕ್ಕಮಗಳೂರು, ಚೆನ್ನೈ, ಹಾಸನ, ಮುಂಬೈಗಳಲ್ಲಿರುವ ಕಾಫಿ ಡೇ ಸಂಸ್ಥೆಯ ಎಲ್ಲಾ ಕಚೇರಿಗಳ ಮೇಲೆ ಹಾಗೂ ಬೆಂಗಳೂರಿನಲ್ಲಿರುವ ಸಿದ್ದಾರ್ಥ್ ಅವರ ನಿವಾಸ ಸೇರಿದಂತೆ 25ಕ್ಕೂ ಅಧಿಕ ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿತ್ತು. ಸಿದ್ದಾರ್ಥ್ ಹಾಗೂ ಅವರ ಸಂಬಂಧಿಗಳಾದ ನಿತಿನ್ ಬಾಗ್‌ ಮನೆ, ರಾಜಾ ಬಾಗ್‌ ಮನೆ, ನಾಗವೇಣಿ ಹಾಗೂ ಗುರುಚರಣ್‌ ಎಂಬುವವರ ಹೆಸರುಗಳನ್ನು ಉಲ್ಲೇಖಿಸಿ ದೂರು ಸಲ್ಲಿಸಲಾಗಿದೆ.

ದೂರಿನಲ್ಲಿ ದಾಖಲಾಗಿರುವ ಕಂಪನಿಗಳು

ದೂರಿನಲ್ಲಿ ದಾಖಲಾಗಿರುವ ಕಂಪನಿಗಳು

1. ಗ್ಲೋಬಲ್ ಟೆಕ್ನಾಲಜಿ ವೆಂಚರ್ಸ್
2. ಮೈಂಡ್ ಟ್ರೀ ಕನ್ಸಲ್ಟಿಂಗ್
3. ಕ್ಷೇಮಾ ಟೆಕ್ನಾಲಜೀಸ್
4. ಶಮಾ ಸಾಫ್ಟ್ ವೇರ್
5. ಆರ್ ಸಿಸಿ (ಸಿಮೆಂಟ್ ಕಂಪನಿ)
6. ಟಾಂಗ್ಲಿನ್ ಎಸ್ಟೇಟ್ಸ್
7. ಸೆರಾಯ್ ರೆಸಾರ್ಟ್ಸ್, ಚಿಕ್ಕಮಗಳೂರು ಹಾಗೂ ಬಂಡೀಪುರ
8. ಅಂಬರ್ ವ್ಯಾಲಿ ಸ್ಕೂಲ್
9. ಟೆರಾ ಫರ್ಮಾ ಬಯೋಟೆಕ್ನಾಲಜೀಸ್ ಲಿಮಿಟೆಡ್, ಚೆನ್ನೈ, ಸಿಂಗಪುರ
10. ಬಾಗ್ಮನೆ ಡೆವಲಪರ್ಸ್ ಹಾಗೂ ಸಮೂಹ ಸಂಸ್ಥೆ

ಸಿದ್ದಾರ್ಥ ಅವರಿಗೆ ಸಂಬಂಧಿಸಿದ ಸಂಸ್ಥೆಗಳು

ಸಿದ್ದಾರ್ಥ ಅವರಿಗೆ ಸಂಬಂಧಿಸಿದ ಸಂಸ್ಥೆಗಳು

11. ಬಾಗ್ಮನೆ ವೆಂಚರ್ಸ್
12. ಡಾಫ್ಕೋ ಫರ್ನೀಚರ್ಸ್
13. ಹೈ ಟೆಕ್ ಹಾಸ್ಪಿಟಲ್
14. ಆಲ್ಫ್ ಗ್ರಾನೈಟ್ಸ್
15. ಬಾಗ್ಮನೆ ಟೆಕ್ನಾಲಜಿ ಪಾರ್ಕ್
16. ಗೊರಿ ಇನ್ಫ್ರಾ ಸ್ಟಕ್ಚರ್ಸ್ ಪ್ರೈ ಲಿಮಿಟೆಡ್
17. ಸಿಕಾಲ್ ಲಾಜಿಸಿಕ್ಟ್
18. ಕನ್ವ ಇಂಡಸ್ಟ್ರೀಸ್
19. ಕಾವೇರಿ ವೈನ್ ಯಾರ್ಡ್ಸ್ ಪೈ ಲಿಮಿಟೆಡ್
20. ಯುಎಂಆರ್ ಐಟಿ ಎಕ್ಸ್ ಪೋರ್ಟ್ಸ್ ಅಂಡ್ ಇನ್ವೆಸ್ಟೆಂಟ್ಸ್ ಪ್ರೈ ಲಿಮೆಟೆಡ್.
21. ವೇ2ವೆಲ್ತ್
ಚಿತ್ರದಲ್ಲಿ: ಸಾಮಾಜಿಕ ಕಾರ್ಯಕರ್ತ ಎಸ್. ಆರ್ ಹಿರೇಮಠ.

English summary
The IT raids on properties connected to VG Siddhartha son-in-law of former union minister SM Krishna, says there is concealing income that tune to Rs. 650 crore. Here is overview about the whole scenario
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X