• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

58 ಸಾವಿರ ಕೋಟಿಯ ರಫೇಲ್ ಡೀಲ್ ಎಂದರೇನು? ಏನಿದು ವಿವಾದ?

|

ಭಾರತದ ರಕ್ಷಣಾ ಇಲಾಖೆಯ ಇತಿಹಾಸದಲ್ಲೇ ಅತಿ ದೊಡ್ಡ ವ್ಯವಹಾರವಾದ ರಫೇಲ್ ಖರೀದಿಯು ಚರ್ಚೆಯ- ವಿವಾದದ ಉತ್ತುಂಗದಲ್ಲಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯದ ದೊಡ್ಡ ಮಟ್ಟದ ಹಗ್ಗಜಗ್ಗಾಟಕ್ಕೂ ಇದು ಕಾರಣವಾಗಿದೆ. 2007ರಲ್ಲೇ ಅಂದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಈ ಖರೀದಿ ಪ್ರಸ್ತಾವ ಆದರೂ ಎಲ್ಲವೂ ಅಂತಿಮಗೊಂಡಿದ್ದು 2016ರಲ್ಲಿ.

ರಫೇಲ್ ಫೈಟರ್ ಜೆಟ್ ವಿಮಾನಗಳಿಗಾಗಿ ಭಾರತೀಯ ವಾಯು ಸೇನೆಯು ದಶಕಕ್ಕೂ ಹೆಚ್ಚು ಕಾಲದಿಂದ ಕಾಯುತ್ತಿದೆ. ಈ ಮಧ್ಯೆ ಭಾರತ ಮತ್ತು ಫ್ರಾನ್ಸ್ ನಲ್ಲಿ ಸರಕಾರಗಳು ಬದಲಾಗಿವೆ. ಅದೇ ರೀತಿ ಖರೀದಿ ಒಪ್ಪಂದದ ನಿಬಂಧನೆಗಳು ಕೂಡ ಬದಲಾಗಿವೆ. ಈಗ ಆರೋಪಿಸುತ್ತಿರುವಂತೆ ಖರೀದಿ ಮೊತ್ತ ಕೂಡ ಬದಲಾವಣೆ ಆಗಿದೆ.

ರಫೆಲ್ ಹಗರಣ ಆರೋಪ: ರಾಹುಲ್ ಗಾಂಧಿಗೆ ಮುಖಭಂಗ

ಅಂದಹಾಗೆ, ರಫೇಲ್ ವ್ಯವಹಾರದ ನಿಬಂಧನೆಗಳೇನು? ಈ ಜೆಟ್ ವಿಮಾನಗಳ ಖರೀದಿಯಲ್ಲಿ ಈ ಪರಿಯ ವಿಳಂಬ ಆಗುವುದಕ್ಕೆ ಕಾರಣ ಏನು? ಈ ಖರೀದಿ ವ್ಯವಹಾರಕ್ಕಾಗಿ ಭಾರತ ಎಷ್ಟು ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ? ಇತ್ಯಾದಿ ಪ್ರಶ್ನೆಗಳು ಹಾಗೇ ಉಳಿದಿವೆ. ಈಗಂತೂ ಈ ಖರೀದಿ ವ್ಯವಹಾರದ ಸುತ್ತ ದೊಡ್ಡ ಮಟ್ಟದ ಹೊಯ್-ಕೈ ನಡೆದಿದೆ.

2015ರ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ

2015ರ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ

ಫ್ರೆಂಚ್ ನಿರ್ಮಿತ 36 ರಫೇಲ್ ಫೈಟರ್ ಜೆಟ್ ಗಳನ್ನು ಡಿಅಸಾಲ್ಟ್ ನಿಂದ ಭಾರತವು ಖರೀದಿಸುತ್ತದೆ ಎಂದು 2015ರ ಏಪ್ರಿಲ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದರು. 2012ನೇ ಇಸವಿಯಲ್ಲೇ ರಫೇಲ್ ವಿಮಾನವನ್ನು ಖರೀದಿ ಮಾಡಬೇಕು ಎಂದು ಆಯ್ಕೆ ಮಾಡಲಾಗಿತ್ತು. ಆ ವೇಳೆಗೆ ಯುಎಸ್ ಎ, ಯುರೋಪ್ ಹಾಗೂ ರಷ್ಯಾದ ಪ್ರಸ್ತಾವವಗಳನ್ನು ಪಕ್ಕಕ್ಕೆ ಸರಿಸಿ, ರಫೇಲ್ ಯುದ್ಧ ವಿಮಾನ ಖರೀದಿಗೆ ನಿರ್ಧರಿಸಲಾಗಿತ್ತು. ಏಕೆಂದರೆ ಭಾರತದ ವಾಯುಸೇನೆಯಲ್ಲಿದ್ದ ಯುದ್ಧ ವಿಮಾನಗಳು ಹಳೆಯದಾಗಿದ್ದವು. ಹಾಗೆ ನೋಡಿದರೆ ಫ್ರಾನ್ಸ್ ನ ಡಿಅಸಾಲ್ಟ್ ನಿಂದ ಭಾರತ ಖರೀದಿಸಬೇಕು ಅಂದುಕೊಂಡಿದ್ದು 18 ಜೆಟ್ ಮಾತ್ರ. ಉಳಿದ 108 ವಿಮಾನವನ್ನು ಬೆಂಗಳೂರಿನಲ್ಲಿರುವ ಎಚ್ ಎಎಲ್ ನಲ್ಲೇ ನಿರ್ಮಿಸಲು ತೀರ್ಮಾನಿಸಲಾಗಿತ್ತು.

126 ರಫೇಲ್ ನಿಂದ ಮೂವತ್ತಾರಕ್ಕೆ ಇಳಿಕೆ

126 ರಫೇಲ್ ನಿಂದ ಮೂವತ್ತಾರಕ್ಕೆ ಇಳಿಕೆ

ಆದರೆ, ಮೋದಿ ನೇತೃತ್ವದ ಸರಕಾರವು ದುಬಾರಿ ಆಗುತ್ತದೆ ಎಂಬ ಕಾರಣಕ್ಕೆ ಅದಕ್ಕೂ ಮುಂಚೆ ಯುಪಿಎ ಮಾಡಿಕೊಂಡಿದ್ದ 126 ರಫೇಲ್ ಖರೀದಿ ಒಪ್ಪಂದ ತೀರ್ಮಾನದಿಂದ ಹಿಂದೆ ಸರಿಯಿತು. ಹೀಗೆ ಖರೀದಿ ಮಾಡಬೇಕು ಅಂತಿದ್ದ ಜೆಟ್ ನ ಸಂಖ್ಯೆಯು ಕಡಿಮೆಯಾಯಿತು. ಆದರೆ ಭಾರತೀಯ ವಾಯು ಸೇನೆಗೆ ತುರ್ತಾಗಿ ಖರೀದಿ ಮಾಡಲೇಬೇಕಿತ್ತು ಅನ್ನೋ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮಧ್ಯ ಪ್ರವೇಶಿಸಿ, ಹಾರಾಟಕ್ಕೆ ಸಿದ್ಧವಾದ ಮೂವತ್ತಾರು ವಿಮಾನವನ್ನು ಖರೀದಿಸಲು ನಿರ್ಧಾರ ಮಾಡಲಾಯಿತು. ಅದಕ್ಕೂ ಮುನ್ನ ಡಿಅಸಾಲ್ಟ್ ನಿಂದ ತಂತ್ರಜ್ಞಾನ ಪಡೆದು, ಭಾರತದಲ್ಲೇ ವಿಮಾನ ನಿರ್ಮಿಸುವ ಆಲೋಚನೆ ಕೈ ಬಿಡಲಾಯಿತು.

ಕಾಂಗ್ರೆಸ್ ನಿಂದ ಬಿಜೆಪಿ ಮೇಲೆ ಆರೋಪ

ಕಾಂಗ್ರೆಸ್ ನಿಂದ ಬಿಜೆಪಿ ಮೇಲೆ ಆರೋಪ

ಯಾವಾಗ ಈ ಒಪ್ಪಂದದ ಘೋಷಣೆ ಆಯಿತೋ, ಆಗ ಕಾಂಗ್ರೆಸ್ ನಿಂದ ಬಿಜೆಪಿ ಮೇಲೆ ದೊಡ್ಡ ಮಟ್ಟದ ಆರೋಪ ಕೇಳಿಬಂತು. ಸಾವಿರಾರು ಕೋಟಿ ರುಪಾಯಿ ಮೌಲ್ಯದ ಖರೀದಿ ವ್ಯವಹಾರದಲ್ಲಿ ಪಾರದರ್ಶಕತೆ ಇಲ್ಲ. 'ಮೇಕ್ ಇನ್ ಇಂಡಿಯಾ'ದ ದೊಡ್ಡ ವೈಫಲ್ಯ ಎನ್ನಲಾಯಿತು. 2016ರ ಜನವರಿಯಲ್ಲಿ ಭಾರತವು 36 ರಫೇಲ್ ಖರೀದಿಗೆ ಫ್ರಾನ್ಸ್ ಜತೆ ಒಪ್ಪಂದ ಮಾಡಿಕೊಂಡು, ಖಾತ್ರಿಪಡಿಸಿತು. ಆ ಒಪ್ಪಂದದ ಪ್ರಕಾರ ಡಿಅಸಾಲ್ಟ್ ಮತ್ತು ಆದರ ಮುಖ್ಯ ಪಾಲುದಾರರಾದ ಸಫ್ರಾನ್ (ಎಂಜಿನ್ ತಯಾರಕರು), ಥೇಲ್ಸ್ (ಎಲೆಕ್ಟ್ರಾನಿಕ್ ಸಿಸ್ಟಮ್ ತಯಾರಕರು) ಕೆಲವು ತಂತ್ರಜ್ಞಾನವನ್ನು ಡಿಆರ್ ಡಿಒ ಮತ್ತು ಕೆಲ ಖಾಸಗಿ ಕಂಪೆನಿಗಳು ಹಾಗೂ ಎಚ್ ಎಎಲ್ ಜತೆಗೆ ಹಂಚಿಕೊಳ್ಳುವ ಬಗ್ಗೆ ಒಪ್ಪಂದದಲ್ಲಿ ಸೇರಿಸಲಾಯಿತು.

ಏನಿದು ರಫೇಲ್ ಜೆಟ್ಸ್?

ಏನಿದು ರಫೇಲ್ ಜೆಟ್ಸ್?

ರಫೇಲ್ ಜೆಟ್ಸ್ ಅಂದರೆ ಫ್ರಾನ್ಸ್ ನ ಡಿಅಸಾಲ್ಟ್ ಏವಿಯೇಷನ್ ಸಂಸ್ಥೆಯು ರೂಪಿಸುವ ಎರಡು ಎಂಜಿನ್ ನ ಮೀಡಿಯಂ ಮಲ್ಟಿ- ರೋಲ್ ಕಂಬ್ಯಾಟ್ ಏರ್ ಕ್ರಾಫ್ಟ್. ಈ ಜೆಟ್ ಗಳಿಗೆ ವಿಶೇಷ ಗುಣಗಳಿವೆ. ಅಂದರೆ ವಾಯು ದಾಳಿಯ ಎಲ್ಲ ಸಾಧ್ಯತೆಗಳಿಗೂ ಇವುಗಳಿಂದ ಉಪಯೋಗಗಳಿವೆ. ವಾಯು ದಾಳಿ, ಆಕಾಶದಿಂದ ಭೂಮಿ ಮೇಲೆ ದಾಳಿ ಮತ್ತು ಅಣ್ವಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಜೆಟ್ ಇದು. ಮತ್ತು ಇದರಲ್ಲಿನ ಎಲೆಕ್ಟ್ರಾನಿಕ್ ವ್ಯವಸ್ಥೆಯು ರಾಡಾರ್ ಅನ್ನು ಕಣ್ತಪ್ಪಿಸುವ ಸಾಮರ್ಥ್ಯ ಕೂಡ ಹೊಂದಿದೆ. ಖರೀದಿ ಬಗ್ಗೆ ಪ್ರಸ್ತಾವ ಸಲ್ಲಿಸಿ, ಒಂದೂವರೆ ವರ್ಷದ ನಂತರ 2016ರ ಸೆಪ್ಟೆಂಬರ್ ನಲ್ಲಿ ಮೋದಿ ಅವರು ಪ್ಯಾರಿಸ್ ಗೆ ಭೇಟಿ ನೀಡಿದ ವೇಳೆ ಒಪ್ಪಂದಕ್ಕೆ ಸಹಿ ಹಾಕಿದರು.

58,000 ಕೋಟಿ ರುಪಾಯಿಯ ವ್ಯವಹಾರ

58,000 ಕೋಟಿ ರುಪಾಯಿಯ ವ್ಯವಹಾರ

ಭಾರತ- ಫ್ರಾನ್ಸ್ ಮಧ್ಯದ ಈ ಒಪ್ಪಂದವನ್ನು 'ರಫೇಲ್ ಒಪ್ಪಂದ' ಎಂದು ಕರೆಯಲಾಯಿತು. 58,000 ಕೋಟಿ ರುಪಾಯಿಯ ವ್ಯವಹಾರ ಅದಾಗಿತ್ತು. ರಫೇಲ್ ಎರಡು ಎಂಜಿನ್ ನ 36 ವಿಮಾನಕ್ಕೆ 15 ಪರ್ಸೆಂಟ್ ಮೊತ್ತವನ್ನು ಮುಂಗಡವಾಗಿ ಪಾವತಿಸಲಾಯಿತು. ಒಪ್ಪಂದದ ಪ್ರಕಾರ ಭಾರತವು ರಫೇಲ್ ಜತೆಗೆ ಜಗತ್ತಿನಲ್ಲೇ ಅತ್ಯಾಧುನಿಕವಾದ ಶಸ್ತ್ರಾಸ್ತ್ರ ಪಡೆಯಲಿದೆ. ಮತ್ತು ಆ ಒಪ್ಪಂದದ ಭಾಗವಾಗಿ 58,000 ಕೋಟಿ ರುಪಾಯಿ ಒಟ್ಟು ಮೊತ್ತದ ಶೇಕಡಾ ಮೂವತ್ತರಷ್ಟನ್ನು ಭಾರತೀಯ ಮಿಲಿಟರಿ- ಏರೋನಾಟಿಕ್ಸ್ ಸಂಬಂಧಿಸಿದ ಸಂಶೋಧನೆಗಳಿಗೆ ಮತ್ತು ಶೇ ಇಪ್ಪತ್ತರಷ್ಟನ್ನು ರಫೇಲ್ ಬಿಡಿ ಭಾಗಗಳ ಸ್ಥಳೀಯ ಉತ್ಪಾದನೆಗೆ ಫ್ರಾನ್ಸ್ ಸರಕಾರ ಹೂಡಿಕೆ ಮಾಡಲಿದೆ.

ಅನಿಲ್ ಅಂಬಾನಿ ನೇತೃತ್ವದ ಕಂಪೆನಿ ಮೇಲೆ ಆರೋಪ

ಅನಿಲ್ ಅಂಬಾನಿ ನೇತೃತ್ವದ ಕಂಪೆನಿ ಮೇಲೆ ಆರೋಪ

2016ರ ನವೆಂಬರ್ ನಲ್ಲಿ ರಫೇಲ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ತಿಕ್ಕಾಟ ಶುರುವಾಯಿತು. ತೆರಿಗೆದಾರರ ಸಾವಿರಾರು ಕೋಟಿ ರುಪಾಯಿ ಈ ವ್ಯವಹಾರದಲ್ಲಿ ಪೋಲಾಗುತ್ತಿದೆ. ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಡಿಫೆನ್ಸ್ ಲಿಮಿಟೆಡ್ ವಾಮಮಾರ್ಗದಿಂದ ಫ್ರೆಂಚ್ ಸಂಸ್ಥೆಯ ಭಾರತದ ಪಾಲುದಾರ ಕಂಪೆನಿ ಆಗಿದೆ ಎಂದು ಆರೋಪಿಸಲಾಯಿತು. ಯುಪಿಎ ಸರಕಾರದ ಅವಧಿಯಲ್ಲಿ ಫ್ರಾನ್ಸ್ ಜತೆ ಮಾಡಿಕೊಂಡಿದ್ದ ಮೊತ್ತಕ್ಕಿಂತ ಬಿಜೆಪಿಯು ಮೂರು ಪಟ್ಟು ಹೆಚ್ಚು ಪಾವತಿಸುತ್ತಿದೆ ಎಂದು ಆರೋಪ ಕೇಳಿಬಂತು. ಆದರೆ ಹೊಸ ಒಪ್ಪಂದವು ಪಾರದರ್ಶಕವಾಗಿದೆ. ಈಗಿನ ಒಪ್ಪಂದದಲ್ಲಿ ಹಿಂದಿನದ್ದಕ್ಕಿಂತ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ಅವುಗಳ ಲಾಜಿಸ್ಟಿಕ್ ನೆರವು ಒಳಗೊಂಡಿದೆ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಡಿಅಸಾಲ್ಟ್ ಜತೆ ನಮ್ಮ ಒಪ್ಪಂದ ಹಳೆಯದು. ಅದರಲ್ಲಿ ಕೇಂದ್ರ ಸರಕಾರದ ಯಾವ ಪಾತ್ರವೂ ಇಲ್ಲ ಎಂದು ರಿಲಯನ್ಸ್ ಹೇಳಿಕೊಂಡಿತು.

ರಕ್ಷಣಾ ವ್ಯವಹಾರದ ಒಪ್ಪಂದ ಬಹಿರಂಗ ಪಡಿಸುವಂತಿಲ್ಲ

ರಕ್ಷಣಾ ವ್ಯವಹಾರದ ಒಪ್ಪಂದ ಬಹಿರಂಗ ಪಡಿಸುವಂತಿಲ್ಲ

ಆದರೆ, ಕಾಂಗ್ರೆಸ್ ನಿಂದ ಕೇಂದ್ರ ಸರಕಾರದ ಮೇಲೆ ದಾಳಿ ಮುಂದುವರಿಯಿತು. ರಫೇಲ್ ವ್ಯವಹಾರದ ಬಗ್ಗೆ ಸರಕಾರವು ಮಾಹಿತಿ ನೀಡುತ್ತಿಲ್ಲ. ಇಡೀ ವ್ಯವಹಾರದಲ್ಲಿ ಗೊಂದಲಗಳಿವೆ ಎಂಬ ಆರೋಪ ಮಾಡಿತು. ಇದಕ್ಕೆ ಉತ್ತರಿಸಿದ ರಕ್ಷಣಾ ಸಚಿವೆ, ಫ್ರಾನ್ಸ್ ಜತೆಗೆ ಮಾಡಿಕೊಂಡಿರುವ ರಕ್ಷಣಾ ವ್ಯವಹಾರದ ಒಪ್ಪಂದ ಬಹಿರಂಗ ಪಡಿಸುವ ಹಾಗಿಲ್ಲ. ರಾಷ್ಟ್ರದ ರಕ್ಷಣಾ ದೃಷ್ಟಿಯಿಂದ ರಫೇಲ್ ವ್ಯವಹಾರದ ಒಪ್ಪಂದ ಎಷ್ಟು ಮೊತ್ತಕ್ಕೆ ಆಗಿದೆ ಎಂಬುದನ್ನು ಬಹಿರಂಗ ಪಡಿಸುವಂತಿಲ್ಲ. ಯಾವುದೇ ಸರಕಾರವಾದರೂ ರಕ್ಷಣಾ ವಲಯದ ಯಾವ ಮಾಹಿತಿಯನ್ನೂ ತಿಳಿಸುವಂತಿಲ್ಲ ಎಂದರು. ಅಂದಹಾಗೆ ರಫೇಲ್ ಜೆಟ್ ಗಳು ಭಾರತದ ವಾಯು ಸೇನೆಗೆ 2019ರ ಸೆಪ್ಟೆಂಬರ್ ನಿಂದ ಸೇರ್ಪಡೆಯಾಗಲು ಆರಂಭವಾಗುತ್ತವೆ.

English summary
In September 2016, India signed an inter-governmental agreement with France, dubbed as 'Rafale deal', in which India bought 36 off-the-shelf Dassault Rafale twin-engine fighters for a price estimated to be Rs. 58,000 crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X