ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೋದ ಮಂಗಳಯಾನಕ್ಕೆ ನಾಲ್ಕರ ಹರೆಯದ ಸಂಭ್ರಮ: ಕಣ್ಮನ ಸೆಳೆಯುವ ಚಿತ್ರಗಳು

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 26: ಇಸ್ರೋದ ಮಹತ್ವಾಕಾಂಕ್ಷೆಯ ಮಂಗಳಯಾನ ಯೋಜನೆಗೆ ಸೋಮವಾರ ನಾಲ್ಕು ವರ್ಷ ತುಂಬಿದೆ.

ಮಾರ್ಸ್ ಆರ್ಬಿಟರ್ (ಮಂಗಳಯಾನ) ನೌಕೆಯನ್ನು 2013ರ ನವೆಂಬರ್ 5ರಂದು ಉಡಾವಣೆ ಮಾಡಲಾಗಿತ್ತು. ಈ ನೌಕೆ, 2014ರ ಸೆಪ್ಟೆಂಬರ್ 24ರಂದು ಕೆಂಪು ಗ್ರಹದ ಅಂಗಳವನ್ನು ಸೇರಿತ್ತು.

ಮಂಗಳಯಾನಕ್ಕೆ ನಾಲ್ಕು ವರ್ಷ ತುಂಬಿರುವ ವಿಚಾರವನ್ನು ಇಸ್ರೋದ ಮಾರ್ಸ್ ಆರ್ಬಿಟರ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಕಕ್ಷೆಗೆ ಸೇರಿದಾಗಿನಿಂದಲೂ 980ಕ್ಕೂ ಅಧಿಕ ಫೋಟೊಗಳನ್ನು ಈ ನೌಕೆ ಭೂಮಿಗೆ ರವಾನಿಸಿದೆ. ಮಂಗಳ ಗ್ರಹದ ಕುರಿತ ಅಧ್ಯಯನಕ್ಕೆ ಪರೂಕವಾದ ಅನೇಕ ಮಹತ್ವ ಮಾಹಿತಿಗಳನ್ನು ಇದು ಒದಗಿಸಿದೆ.

ಆರು ತಿಂಗಳ ಕಾಲಾವಧಿಯ ಬಳಿಕ ಈ ಉಪಗ್ರಹ ನೌಕೆ ನಿಷ್ಕ್ರಿಯವಾಗಲಿದೆ ಎಂದು ಇಸ್ರೋ ಭಾವಿಸಿತ್ತು. ಆದರೆ, ಮಂಗಳಗ್ರಹದಲ್ಲಿ ಈ ನೌಕೆ ನಾಲ್ಕು ವರ್ಷ ಬದುಕಿದೆ. ಮಂಗಳಯಾನ ರವಾನಿಸಿರುವ ಚಿತ್ರಗಳು ಬಲು ಅಪರೂಪದ್ದು.

ಜಗತ್ತಿನ ಬೇರೆ ನೌಕೆಗಳು ಸೆರೆಹಿಡಿಯದ ವಿಶಿಷ್ಟ ಚಿತ್ರಗಳನ್ನು ಅದು ಕ್ಲಿಕ್ಕಿಸಿದೆ. ಕೆಂಪು ಗ್ರಹದ ಮೇಲ್ಮೈ ಎಷ್ಟು ಮನಮೋಹಕವಾಗಿದೆ ಎನ್ನುವುದನ್ನು ಈ ಚಿತ್ರಗಳೇ ವಿವರಿಸುತ್ತಿವೆ. ಅದು ಭೂಮಿಗೆ ಕಳುಹಿಸಿರುವ ಚಿತ್ರಗಳಲ್ಲಿ ಕಣ್ಮನ ಸೆಳೆಯುವ ಕೆಲವು ಚಿತ್ರಗಳು ಇಲ್ಲಿವೆ. (ಚಿತ್ರ ಕೃಪೆ: ಇಸ್ರೋ)

ನಾಲ್ಕು ವರ್ಷವಾಯ್ತು

'ನಾನು ಇಲ್ಲಿ ಸುತ್ತಾಡುತ್ತಾ ನಾಲ್ಕು ವರ್ಷವಾಯಿತು. ನಿಮ್ಮೆಲ್ಲರ ಪ್ರೀತಿ ಮತ್ತು ಪ್ರೋತ್ಸಾಹಕ್ಕಾಗಿ ಧನ್ಯವಾದಗಳು' ಎಂದು ಟ್ವೀಟ್ ಮಾಡಲಾಗಿದೆ.

ಆರು ತಿಂಗಳ ಅವಧಿ!

ಆರು ತಿಂಗಳ ಅವಧಿ!

ಮಂಗಳ ಗ್ರಹದ ಕುರಿತು ಅಧ್ಯಯನ ನಡೆಸುವ ಭಾರತದ ಮೊದಲ ಯೋಜನೆಯಾದ ಮಂಗಳಯಾನ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನು ಆರು ತಿಂಗಳ ಜೀವಿತಾವಧಿ ಇರುವಂತೆ ವಿನ್ಯಾಸಗೊಳಿಸಿದ್ದರೂ ಈಗಲೂ ದತ್ತಾಂಶಗಳನ್ನು ಸಂಗ್ರಹಿಸಿ ಭೂಮಿಗೆ ರವಾನಿಸುತ್ತಿದೆ.

ಬ್ಲ್ಯಾಕ್ ಔಟ್ಸ್ ಚಿತ್ರ

2015ರ ಜೂನ್ 8ರಿಂದ 22ರ ವರೆಗೂ ಭೂಮಿ ಮತ್ತು ಮಂಗಳ ಗ್ರಹದ ಮಧ್ಯೆ ಬರುವ ಸೂರ್ಯ, ಉಪಗ್ರಹಗಳ ಸಂವಹನವನ್ನು ಕಡಿತಗೊಳಿಸಿತ್ತು. ಇದನ್ನು ಬಾಹ್ಯಾಕಾಶ ವಿಜ್ಞಾನ ಭಾಷೆಯಲ್ಲಿ (ಬ್ಲ್ಯಾಕ್ ಔಟ್) ಎಂದು ಕರೆಯಲಾಗುತ್ತದೆ. ಅದರಿಂದ ಹೊರ ಬಂದ ಬಳಿಕ ಮಂಗಳಯಾನದ ಕ್ಯಾಮೆರಾ ಸೆರೆಹಿಡಿದ ಚಿತ್ರವಿದು.

980ಕ್ಕೂ ಅಧಿಕ ಚಿತ್ರ

980ಕ್ಕೂ ಅಧಿಕ ಚಿತ್ರ

ಎಂಸಿಸಿಯು 980ಕ್ಕೂ ಅಧಿಕ ಚಿತ್ರಗಳನ್ನು ಕ್ಲಿಕ್ಕಿಸಿದೆ. ಕೆಂಪು ಗ್ರಹದ ಸುತ್ತ 1 ಈ ನೌಕೆ ಸಾವಿರಕ್ಕೂ ಹೆಚ್ಚು ಬಾರಿ ಸುತ್ತಿದೆ. ಮಂಗಳದ ಪೂರ್ಣ ಪ್ರಮಾಣದ ಚಿತ್ರವನ್ನು ಒಂದೇ ಚೌಕಟ್ಟಿನೊಳಗೆ ಸೆರೆಹಿಡಿದ ಮೊದಲ ಕೃತಕ ಮಂಗಳ ಉಪಗ್ರಹ ಇದಾಗಿದೆ. ಅಲ್ಲದೆ, ಮಂಗಳ ಗ್ರಹದ ಎರಡು ಚಂದ್ರಗಳಲ್ಲಿ ಒಂದಾದ ಡೀಮೊಸ್‌ನ ಚಿತ್ರವನ್ನು ತೆಗೆದ ಏಕೈಕ ಉಪಗ್ರಹ ಕೂಡ ಹೌದು.

ಟಿರ್ಹೆನಸ್ ಮಾನ್ಸ್

ಮಂಗಳ ಗ್ರಹದಲ್ಲಿ ಎಷ್ಟೋ ವರ್ಷಗಳ ಹಿಂದೆ ಇದ್ದ ಪುರಾತನ ಟಿರ್ಹೆನಸ್ ಮಾನ್ಸ್ ಅಗ್ನಿಪರ್ವತ ಮತ್ತು ಅದರಿಂದ ಸೃಷ್ಟಿಯಾದ ಕುಳಿ, ಕಾಲುವೆಗಳ ಚಿತ್ರವಿದು.

ಕಣಿವೆ ಚಿತ್ರ

ಮಂಗಳ ಗ್ರಹದಲ್ಲಿ ಇರುವ ಅತಿ ದೊಡ್ಡ ಕಣಿವೆ ವ್ಯಾಲ್ಲಿಸ್ ಮರೈನರಿಸ್ ಚಿತ್ರವನ್ನು ಮಂಗಳಯಾನ ನೌಕೆ 2015ರ ಮಾರ್ಚ್‌ನಲ್ಲಿ ರವಾನಿಸಿತ್ತು.

ಒಲಿಂಪಸ್ ಮಾನ್ಸ್

ಒಲಿಂಪಸ್ ಮಾನ್ಸ್

ಸೌರವ್ಯೂಹದ ಅತಿ ಎತ್ತರದ ಅಗ್ನಿಪರ್ವತ ಒಲಿಂಪಸ್ ಮಾನ್ಸ್ ಸೇರಿದಂತೆ ಈ ನೌಕೆ ಅನೇಕ ಚಿತ್ರಗಳನ್ನು ರವಾನಿಸಿದೆ. 21 ಕಿಲೋ ಮೀಟರ್‌ನಷ್ಟು ಎತ್ತರ ಇರುವ ಈ ಪರ್ವತದ ಚಿತ್ರವನ್ನು ಮಾರ್ಸ್ ಕಲರ್ ಕ್ಯಾಮೆರಾ (ಎಂಸಿಸಿ) ಮೂಲಕ ಸೆರೆಹಿಡಿದಿದ್ದ ಮಂಗಳಯಾನ, ಈ ವರ್ಷದ ಮಾರ್ಚ್ 18ರಂದು ಅದನ್ನು ಕಳುಹಿಸಿತ್ತು.

ಕೆಂಪು ಗ್ರಹ

ಕೆಂಪು ಗ್ರಹ

ಕೆಂಪು ಗ್ರಹ ಮಂಗಳನ ಹೊಳೆಯುವ ಅಂದದ ಚಿತ್ರ. ನಾಸಾದ ಉಪಗ್ರಹಗಳು ಸೇರಿದಂತೆ ಅನೇಕ ಉಪಗ್ರಹಗಳು ಸೆರೆಹಿಡಿಯಲು ಸಾಧ್ಯವಾಗದ ಕೋನದಲ್ಲಿ ಮಂಗಳದ ಚಿತ್ರವನ್ನು ಮಂಗಳಯಾನ ಕ್ಲಿಕ್ಕಿಸಿದೆ. ಅವುಗಳಲ್ಲಿ ಇದೂ ಒಂದು.

English summary
ISRO's Manyalyaan (Mars Orbiter) Mission successfully completed 4 years at Mars orbit on September 24, 2018, after launched on November 5, 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X