ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರಾನ್‌ ಅಣು ವಿಜ್ಞಾನಿ ಹತ್ಯೆಗೆ ಅತ್ಯಾಧುನಿಕ ರೋಬೋ ಬಳಕೆ!

|
Google Oneindia Kannada News

ಇರಾನ್‌ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆಗೆ ಉಪಗ್ರಹ ಆಧಾರಿತ ಮಷಿನ್ ಗನ್ ಬಳಸಲಾಗಿತ್ತು ಎಂದು ಇರಾನ್ ಅಧಿಕೃತವಾಗಿ ಈ ಹಿಂದೆ ಹೇಳಿಕೆ ನೀಡಿತ್ತು. ಈಗ ಇಸ್ರೇಲ್ ದೇಶದ ಗುಪ್ತಚರ ವಿಭಾಗ ಮೊಸ್ಸಾದ್ ನಿಂದಲೇ ವಿಜ್ಞಾನಿ ಮೊಹ್ಸೆನ್ ಹತ್ಯೆಯಾಗಿದ್ದು, ಹತ್ಯೆ ಮಾಡಲು ಅತ್ಯಾಧುನಿಕ ರಿಮೋಟ್ ಕಂಟ್ರೋಲ್ ರೋಬೋಟಿಕ್ ಸಾಧನಗಳನ್ನು ಬಳಸಲಾಗಿತ್ತು ಎಂಬ ವರದಿಗಳು ಬಂದಿವೆ. ಇಡೀ ವಿಶ್ವದ ಗಮನ ಸೆಳೆದಿದ್ದ ವಿಜ್ಞಾನಿ ಹತ್ಯೆ ಹಿಂದಿನ ಸಂಚು ಹಾಗೂ ಹತ್ಯೆ ಮಾಡಿದ ರೀತಿ ಇಂದಿಗೂ ಚರ್ಚೆಯಲ್ಲಿದೆ.

2020ರ ನವೆಂಬರ್ 27ರಂದು ಇರಾನ್ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರ್‌ನಲ್ಲಿ ತೆರಳುತ್ತಿದ್ದಾಗ ಹಂತಕರು ದಾಳಿ ನಡೆಸಿದ್ದರು. ಇರಾನ್‌ನ ಸೇನಾ ಪರಮಾಣು ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮೊಹ್ಸೆನ್‌ ಫಖ್ರಿಜಾದೆಹ್‌ ಕಾರನ್ನು ಅಡ್ಡಹಾಕಿ ಭೀಕರವಾಗಿ ಹತ್ಯೆ ಮಾಡಲಾಗಿತ್ತು. 3 ನಿಮಿಷಗಳ ಈ ದಾಳಿಗೆ ಸಂಬಂಧಿಸಿದಂತೆ ಯಾರನ್ನು ಬಂಧಿಸಲಾಗಿಲ್ಲ.

ಕೆಲ ಇರಾನ್ ಮಾಧ್ಯಮಗಳ ವರದಿ ಪ್ರಕಾರ ಇರಾನ್‌ ಅಣು ವಿಜ್ಞಾನಿ ಮೊಹ್ಸೆನ್‌ ಫಖ್ರಿಜಾದೆಹ್‌ ಹತ್ಯೆಯಲ್ಲಿ ಇಸ್ರೇಲ್ ಜೊತೆ ಅಮೆರಿಕ ಕೂಡ ಕೈಜೋಡಿಸಿದೆ ಎಂದು ನೇರ ಆರೋಪ ಮಾಡಲಾಗಿತ್ತು. ಆದರೆ ಇರಾನ್‌ನ ಈ ಎಲ್ಲಾ ಆರೋಪಗಳಿಗೂ ಬಲವಾದ ಸಾಕ್ಷ್ಯ ಇಲ್ಲಿ ತನಕ ಕಂಡು ಬಂದಿಲ್ಲ.

'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' ತಂತ್ರಜ್ಞಾನ ಬಳಕೆ

'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' ತಂತ್ರಜ್ಞಾನ ಬಳಕೆ

'ಆರ್ಟಿಫಿಷಿಯಲ್ ಇಂಟೆಲಿಜೆನ್ಸ್' ತಂತ್ರಜ್ಞಾನ ಬಳಸಿ ಮಷಿನ್ ಗನ್ ನಿಯಂತ್ರಿಸಿ ಹತ್ಯೆ ಮಾಡಲಾಗಿತ್ತು, ಉಪಗ್ರಹ ಬಳಕೆ ಕೂಡಾ ಸಾಧ್ಯತೆಯಿದೆ ಎಂದು ಇರಾನ್ ವಾದಿಸಿದೆ. ಇನ್ನು ಘಟನೆ ಸಂಬಂಧ ಇರಾನ್ ರೊಚ್ಚಿಗೆದ್ದಿದೆ. ಇದು ಇಸ್ರೇಲ್ ಕೃತ್ಯ ಎಂದು ಇರಾನ್ ಗಂಭೀರ ಆರೋಪ ಮಾಡಿದೆ. ಇರಾನ್‌ನ ಅಧ್ಯಕ್ಷ ಹಸನ್‌ ರೌಹಾನಿ ಬಹಿರಂಗವಾಗಿಯೇ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆಯನ್ನೂ ಮಾಡಿದ್ದರು ಫಖ್ರಿಜಾದೆಹ್‌ ಹತ್ಯೆಯಿಂದ ಇರಾನ್‌ನ ಪರಮಾಣು ಯೋಜನೆ ನಿಂತು ಹೋಗಲ್ಲ. ಆದರೆ ಈ ಕೊಲೆಯ ಹಿಂದೆ ಇರುವ ಶತ್ರುಗಳಿಗೆ ಸಮಯ ಬಂದಾಗ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದರು.

ಮೋಹ್ಸೆನ್ ಅವರು ಇರಾನ್‌ನ ಪ್ರಮುಖ ಅಣುವಿಜ್ಞಾನಿ

ಮೋಹ್ಸೆನ್ ಅವರು ಇರಾನ್‌ನ ಪ್ರಮುಖ ಅಣುವಿಜ್ಞಾನಿ

ಮೋಹ್ಸೆನ್ ಅವರು ಇರಾನ್‌ನ ಪ್ರಮುಖ ಅಣುವಿಜ್ಞಾನಿಗಳಲ್ಲಿ ಒಬ್ಬರಾಗಿದ್ದು, the Islamic Revolutionary Guard Corps(IRGC)ನ ಮುಖ್ಯ ಬ್ರಿಗೇಡಿಯರ್ ಕೂಡಾ ಆಗಿದ್ದರು. 2000ದ ಇಸವಿಯಲ್ಲಿ 'ಅಮದ್' ಎಂಬ ಪರಮಾಣು ಕಾರ್ಯಕ್ರಮವನ್ನು ನಡೆಸಿದ್ದರು. ಇರಾನ್ ಅಣ್ವಸ್ತ್ರ ಬೆಳವಣಿಗೆ ಸಾಧಿಸುವಲ್ಲಿ ಮೋಹ್ಸೆನ್ ಪ್ರಮುಖ ಪಾತ್ರ ವಹಿಸಿದ್ದರು. ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮದ ಪಿತಾಮಹ ಎಂದು ಮೋಹ್ಸೆನ್ ಅವರನ್ನು ಇರಾನ್‌ನ ಬದ್ಧವೈರಿ ಇಸ್ರೇಲ್‌ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬಣ್ಣಿಸಿದ್ದರು.

ವಿವಿಧ ರೀತಿಯ ತನಿಖಾ ವರದಿಗಳು ಪ್ರಕಟವಾಗಿವೆ

ವಿವಿಧ ರೀತಿಯ ತನಿಖಾ ವರದಿಗಳು ಪ್ರಕಟವಾಗಿವೆ

ವಿಶ್ವದೆಲ್ಲೆಡೆಯಿಂದ ಈ ಘಟನೆ ಬಗ್ಗೆ ವಿವಿಧ ರೀತಿಯ ತನಿಖಾ ವರದಿಗಳು ಪ್ರಕಟವಾಗಿವೆ. ಅನೇಕ ವರದಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ಉಲ್ಲೇಖಿಸಿವೆ. ಲಂಡನ್ ಮೂಲದ ಜ್ಯೂಯಿಷ್ ಕ್ರಾನಿಕಲ್ ವರದಿ ಪ್ರಕಾರ, ಹತ್ಯೆಗೆ ಬಳಸಲಾದ ಒಂದು ಟನ್‌ ರಿಮೋಟ್ ಕಂಟ್ರೋಲ್ ಗನ್ ಮುಂತಾದ ಸಾಧನವನ್ನು ಸುಮಾರು 8 ತಿಂಗಳು ಗಳ ಕಾಲ ಹಂತ ಹಂತವಾಗಿ ಇರಾನ್‌ಗೆ ಕಳ್ಳ ಮಾರ್ಗದಿಂದ ತರಲಾಗಿತ್ತು ಎನ್ನಲಾಗಿದೆ.

ಅತ್ಯಾಧುನಿಕ ರೊಬೊಟಿಕ್ ಸಾಧನ

ಅತ್ಯಾಧುನಿಕ ರೊಬೊಟಿಕ್ ಸಾಧನ

ರಿಮೋಟ್ ಕಂಟ್ರೋಲ್ ಆಧಾರಿತ ಅತ್ಯಾಧುನಿಕ ರೊಬೊಟಿಕ್ ಸಾಧನದ ಮೂಲಕ ಹತ್ಯೆ ಮಾಡಲಾಗಿದೆ ಎಂಬ ಅಂಶವನ್ನು ನ್ಯೂಯಾರ್ಕ್ ಟೈಮ್ಸ್‌ನ ರೊನೆನ ಬರ್ಗ್ಮನ್ ಹಾಗೂ ಫರ್ನಾಜ್ ಫಾಸಿಹಿ ಕೂಡಾ ಸಮ್ಮತಿಸಿ ವರದಿ ಮಾಡಿದ್ದಾರೆ. ಇರಾನ್ ನಿರ್ಮಿತ ಪಿಕಪ್ ಟ್ರಕ್ ಮಾಡೆಲ್ ನಿಸಾನ್ ಮೇಲೆ ನಿಗಾ ಇರಿಸಲಾಗಿತ್ತು. ಬೆಲ್ಜಿಯನ್ ನಿರ್ಮಿತ ಎಫ್ ಎನ್ ಮ್ಯಾಗ್ 7.62 ಎಂಎಂ ಮಷಿನ್ ಗನ್ ಬಚ್ಚಿಟ್ಟು ಟಾರ್ಪಲಿನ್ ಮುಚ್ಚಲಾಗಿತ್ತು ಇದೆಲ್ಲವೂ ಗುಪ್ತಚರ ಇಲಾಖೆ ನಿಗಾದಲ್ಲೇ ನಡೆದಿದೆ ಎಂದು ವರದಿ ಬಂದಿದೆ.

ಮಷಿನ್ ಗನ್ ಟ್ರಿಗರ್ ಎಳೆಯುವ ವೇಳೆಗೆ

ಮಷಿನ್ ಗನ್ ಟ್ರಿಗರ್ ಎಳೆಯುವ ವೇಳೆಗೆ

ಘಟನೆ ನಡೆದ ಸಂದರ್ಭದಲ್ಲಿ ಹಂತಕರು, ಮೊಸ್ಸಾದ್ ಸದಸ್ಯರು ಯಾರೂ ಹತ್ತಿರದಲ್ಲಿರಲಿಲ್ಲ. ಮಷಿನ್ ಗನ್ ಟ್ರಿಗರ್ ಎಳೆಯುವ ವೇಳೆಗೆ ಹಂತಕರ ತಂಡ ದೂರ ಪ್ರದೇಶಕ್ಕೆ ತೆರಳಿತ್ತು. ದೂರದಿಂದಲೇ ಇಲ್ಲವನ್ನು ನಿಯಂತ್ರಿಸುತಿದ್ದರು ವರದಿ ಬಂದಿದೆ. ಆದರೆ, ಹತ್ಯೆಗೆ ಬಳಸಲಾದ ಗನ್ ಹಾಗೂ ಸಾಧನವನ್ನು ಹತ್ಯೆ ಬಳಿಕ ನಾಶ ಪಡಿಸುವುದರಲ್ಲಿ ಹಂತಕರ ತಂಡ ಎಡವಿದೆ. ಅರ್ಧಂಬರ್ಧ ನಾಶವಾಗಿದ್ದ ಸಾಧನದ ಸುಳಿವು ಇರಾನ್ನಿಯರಿಗೆ ಸಿಕ್ಕಿದೆ. ಇದರಿಂದ ಹತ್ಯೆಯ ಸಂಚು ಬಯಲಿಗೆ ಬಂದಿದೆ ಎಂದು ಜೆರುಸಲೇಂ ಫೋಸ್ಟ್ ಕೂಡಾ ಸಹಮತಿ ವ್ಯಕ್ತಪಡಿಸಿ ವರದಿಯನ್ನು ದೃಢಪಡಿಸಿದೆ.

English summary
The Mossad, assassinated the lead military scientist Mohsen Fakhrizadeh behind Iran’s nuclear program using a remote-controlled robot, according to a new report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X