ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಲ್ವಾಮಾ ದಾಳಿಕೋರನಿಗೆ ರೊಟ್ಟಿ ತಟ್ಟಿ ಕೊಟ್ಟಿದ್ದಾಕೆ ಇವಳು!

|
Google Oneindia Kannada News

ಶ್ರೀನಗರ, ಆ. 27: ಪುಲ್ವಾಮಾ ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 8 ತಿಂಗಳ ಬಳಿಕ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. 5000 ಪುಟಗಳ ಮೂಲ ದೋಷಾರೋಪಣ ಪಟ್ಟಿ ಜೊತೆಗೆ ಡಿಜಿಟಲ್ ಸಾಕ್ಷಿಗಳು ಸೇರಿಸಿದರೆ 13, 500 ಕ್ಕೂ ಅಧಿಕ ಪುಟದ ಮಾಹಿತಿ ಅಡಕವಾಗಿದೆ ಎಂದು ಅಧಿಕೃತ ಮೂಲಗಳೇ ಹೇಳಿವೆ. ಉಗ್ರರ ಸಂಚು, ಕಾರ್ಯ ವಿಧಾನ ಸೇರಿದಂತೆ ಉಗ್ರರಿಗೆ ನೆರವಾದವರ ಪಟ್ಟಿಯೂ ಇದರಲ್ಲಿದೆ. ಈ ಪೈಕಿ ಪ್ರಮುಖವಾದ ಹೆಸರು ಇಶ್ನಾ ಜಾನ್. ದೋಷಾರೋಪಣ ಪಟ್ಟಿಯಲ್ಲಿರುವ ಏಕೈಕ ಭಯೋತ್ಪಾದಕಿ.

Recommended Video

ಟೀಕೆಗಳಿಗೆ ಉತ್ತರ ನೀಡುವ ಅವಕಾಶ ಕಳೆದುಕೊಂಡಿತೇ Congress‌? | Oneindia Kannada

ಹಾಗೇ ನೋಡಿದರೆ ಎನ್ಐಎ ಚಾರ್ಜ್ ಶೀಟಿಗೆ ಇದು ಇತ್ತೀಚೆಗೆ ಸೇರ್ಪಡೆಗೊಂಡ ಹೆಸರಲ್ಲ. ಪ್ರಕರಣದ ಪ್ರಮುಖ ಉಗ್ರರಿಗೆ ಊಟ, ವಸತಿ, ಆಹಾರ ವ್ಯವಸ್ಥೆ ಒದಗಿಸಿ ಎಲ್ಲವನ್ನು ನಿಭಾಯಿಸಿದ್ದಳು ಈಕೆ. ಆಕೆ ಇನ್ನೂ 23 ವರ್ಷ ವಯಸ್ಸು. ಆದರೆ, ಭಯೋತ್ಪಾದಕರ ನಿಕಟ ಸಂಪರ್ಕ ಹೊಂದಿದ್ದವಳು. ಇಶ್ನಾ ಜಾನ್ ಹಾಗೂ ಆಕೆ ತಂದೆಯನ್ನು ಮಾರ್ಚ್ ತಿಂಗಳಿನಲ್ಲೇ ಎನ್ಐಎ ವಶಕ್ಕೆ ಪಡೆದುಕೊಂಡಿತ್ತು.

ಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎಪುಲ್ವಾಮಾ ದಾಳಿ ಪ್ರಕರಣ: ಚಾರ್ಜ್ ಶೀಟ್ ಸಲ್ಲಿಸಿದ ಎನ್ಐಎ

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮೊಹಮ್ಮದ್ ಉಮರ್ ಫಾರೂಕ್ ಜೊತೆ ಸಂಪರ್ಕದಲ್ಲಿದ್ದ ಇಶ್ನಾ ಹಾಗೂ ಫಾರೂಕ್ ನಡುವೆ ನಡೆದ ಸಂಭಾಷಣೆ, ಸಂದೇಶಗಳು ಕೂಡಾ ಎನ್ಐಎ ದೋಷರೋಪಣ ಪಟ್ಟಿ, ಸಾಕ್ಷಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ಫಾರೂಕ್ ನನ್ನು ಭಾರತದ ಭದ್ರತಾ ಪಡೆಗಳು ಮಾರ್ಚ್ ತಿಂಗಳಿನಲ್ಲಿ ಬಲಿ ಪಡೆದುಕೊಂಡಿವೆ.

ಶ್ರೀನಗರ-ಆವಂತಿಪೋರ್ ಹೆದ್ದಾರಿಯಲ್ಲಿ ದುರ್ಘಟನೆ

ಶ್ರೀನಗರ-ಆವಂತಿಪೋರ್ ಹೆದ್ದಾರಿಯಲ್ಲಿ ದುರ್ಘಟನೆ

ಫೆಬ್ರವರಿ 14ರಂದು ಶ್ರೀನಗರ-ಆವಂತಿಪೋರ್ ಹೆದ್ದಾರಿಯಲ್ಲಿ ಸಿಆರ್ ಪಿಎಫ್ ಯೋಧರು ಬರುತ್ತಿದ್ದ ವಾಹನದ ಮೇಲೆ ಕಾರು ನುಗ್ಗಿಸಿ ಸ್ಫೋಟಕ ನಡೆಸಲು ಬೇಕಾದ ಯೋಜನೆ, ಸಾಮಾಗ್ರಿ, ಸಲಕರಣೆಗಳನ್ನು ಮುದಾಸಿರ್ ಒದಗಿಸಿದ್ದ. ಮುದಾಸಿರ್ ನಿರ್ದೇಶನದಂತೆ ಆದಿಲ್ ಅಹ್ಮದ್ ದರ್ ಅಂದು ಸ್ಫೋಟಕಗಳನ್ನು ಹೊಂದಿದ್ದ ಮಾರುತಿ ಎಕೋ ಕಾರನ್ನು ಸಿಆರ್ ಪಿಎಫ್ ಬಸ್ ನತ್ತ ನುಗ್ಗಿಸಿ ಸ್ಫೋಟಿಸಿದ್ದ. ಈ ದುರ್ಘಟನೆಯಲ್ಲಿ 40ಕ್ಕೂ ಅಧಿಕ ಸಿಆರ್ ಪಿಎಫ್ ಯೋಧರು ಹುತಾತ್ಮರಾದರು ಎಂದು ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.

ಇಶ್ನಾ ಜಾನ್ ತಂದೆ ತಾರೀಖ್ ಪಿರ್

ಇಶ್ನಾ ಜಾನ್ ತಂದೆ ತಾರೀಖ್ ಪಿರ್

ಇಶ್ನಾ ಜಾನ್ ತಂದೆ ತಾರೀಖ್ ಪಿರ್ ಕೂಡಾ ಫಾರೂಕ್ ಜೊತೆ ಸಂಪರ್ಕದಲ್ಲಿದ್ದ. ಪುಲ್ವಾಮಾ ದಾಳಿ ನಡೆಸಲು ಉಗ್ರರಿಗೆ ಅಫ್ಘಾನಿಸ್ತಾನದ ತಾಲಿಬಾನಿ ಉಗ್ರರು ತರಬೇತಿ ಹೊಂದಿದ ಕ್ಯಾಂಪ್ ಗಳಲ್ಲೇ ತರಬೇತಿ ನೀಡಲಾಗಿತ್ತು. 2018 ಹಾಗೂ 2019ರಲ್ಲಿ ಉಗ್ರರ ಅಡಗುತಾಣವನ್ನಾಗಿ ತಾರೀಖ್ ಪಿರ್ ಮನೆಯನ್ನು ಫಾರೂಕ್ ಹಾಗೂ ಇನ್ನಿತರ ಉಗ್ರರು ಬಳಸಿಕೊಳ್ಳುತ್ತಿದ್ದರು. ಉಗ್ರರಾದ ಉಮರ್ ಫಾರೂಕ್, ಸಮೀರ್ ದರ್, ಅದಿಲ್ ಆಹ್ಮದ್ ದರ್ ಗೆ ಪುಲ್ವಾಮಾ ದಾಳಿಗೆ ಬೇಕಾದ ಮೂಲ ವಸ್ತು, ಸಾಮಾಗ್ರಿ, ಆಹಾರ, ನೆಲೆ ಎಲ್ಲವನ್ನು ತಂದೆ ಮಗಳು ತಾರೀಖ್ ಹಾಗೂ ಇಶ್ನಾ ಇಬ್ಬರು ಒದಗಿಸಿದ್ದರು ಎಂದು ಎನ್ಐಎ ಹೇಳಿದೆ.

ಮರಣಶಯ್ಯೆಯಲ್ಲಿ ಮೌಲನಾ, ಮಸೂದ್ ಅಜರ್ -ಪತ್ರಕರ್ತನಿಂದ ಉಗ್ರನಾದ ತನಕಮರಣಶಯ್ಯೆಯಲ್ಲಿ ಮೌಲನಾ, ಮಸೂದ್ ಅಜರ್ -ಪತ್ರಕರ್ತನಿಂದ ಉಗ್ರನಾದ ತನಕ

ಸ್ಥಿತಿ ಗತಿ ಬಗ್ಗೆ ಫಾರೂಕ್ ಗೆ ಮಾಹಿತಿ ಸಿಗುತ್ತಿತ್ತು

ಸ್ಥಿತಿ ಗತಿ ಬಗ್ಗೆ ಫಾರೂಕ್ ಗೆ ಮಾಹಿತಿ ಸಿಗುತ್ತಿತ್ತು

ಫೆಬ್ರವರಿ 6, 2019ರಂದು ದಾಳಿ ಮಾಡಲು ಮೊದಲು ಸಂಚು ರೂಪಿಸಲಾಗಿತ್ತು. ಆದರೆ, ಹೆದ್ದಾರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಿಮಪಾತವಾಗಿದ್ದರಿಂದ ಸಾಧ್ಯವಾಗಿರಲಿಲ್ಲ. ರಸ್ತೆ ಕಾಮಗಾರಿ ಬಗ್ಗೆ ಫಾರೂಕ್ ಗೆ ಶಕೀರ್ ಬಷೀರ್ ನಿರಂತರವಾಗಿ ಮಾಹಿತಿ ನೀಡುತ್ತಿದ್ದ. ಸ್ಫೋಟಕಗಳನ್ನು ಬಷೀರ್ ಮನೆಯಲ್ಲೇ ಇರಿಸಲಾಗಿತ್ತು. ನಂತರ ಸೂಸೈಡ್ ಬಾಂಬರ್ ಆದಿಲ್ ಅಹ್ಮದ್ ದರ್ ಬಳಸಿಕೊಂಡು ದಾಳಿ ನಡೆಸಲಾಯಿತು. ಎಕೋ ಕಾರನ್ನು ಚಲಾಯಿಸಿದ ಅಹ್ಮದ್ ನೇರವಾಗಿ ಹೆಚ್ಚು ಯೋಧರಿದ್ದ ವಾಹನಕ್ಕೆ ಗುದ್ದಿದ್ದ.

Exclusive : ಪುಲ್ವಾಮಾದ ಸದ್ಯದ ಸ್ಥಿತಿಯ ಬಗ್ಗೆ ರವಿ ಬೆಳಗೆರೆ ಸಂದರ್ಶನExclusive : ಪುಲ್ವಾಮಾದ ಸದ್ಯದ ಸ್ಥಿತಿಯ ಬಗ್ಗೆ ರವಿ ಬೆಳಗೆರೆ ಸಂದರ್ಶನ

ಭಾರಿ ಪ್ರಮಾಣದ ಸ್ಫೋಟಕಗಳ ಅಕ್ರಮ ಸಾಗಾಟ

ಭಾರಿ ಪ್ರಮಾಣದ ಸ್ಫೋಟಕಗಳ ಅಕ್ರಮ ಸಾಗಾಟ

ಪುಲ್ವಾಮಾ ದಾಳಿಗೆ ಉಗ್ರ ಜೈಷ್ ಎ ಮೊಹಮ್ಮದ್ ಸಂಘಟನೆ 200ಕೆಜಿ ಸ್ಫೋಟಕ ವಸ್ತುಗಳನ್ನು ಬಳಸಲಾಗಿದ್ದು, ಅದರಲಿ 35 ಕೆಜಿ ಆರ್ ಡಿಎಕ್ಸ್ ಇತ್ತು. ಆರ್ ಡಿಎಕ್ಸ್ ಪೂರೈಕೆ ಪಾಕಿಸ್ತಾನದಿಂದ ಆಗಿದೆ, ಇದಕ್ಕೆ ಪೂರಕವಾದ ವಿಡಿಯೋ ಸಾಕ್ಷ್ಯ ಇದೆ, ಗಡಿಯಲ್ಲಿ ಅಕ್ರಮವಾಗಿ ನುಸುಳುವಿಕೆಯಾಗಿದೆ. ನೈಟ್ರೋ ಗ್ಲಿಸರಿನ್ ಹಾಗೂ ಅಮೊನಿಯಂ ನೈಟ್ರೇಟ್ ಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲೇ ಖರೀದಿಸಲಾಗಿದೆ ಎಂದು ಎನ್ಐಎ ಹೇಳಿದೆ.

ದೇಶದಲ್ಲಿ 39 ವರ್ಷಗಳಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗಳ ಮಾಹಿತಿ...ದೇಶದಲ್ಲಿ 39 ವರ್ಷಗಳಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗಳ ಮಾಹಿತಿ...

English summary
The National Investigation Agency has arrested a father daughter duo. The NIA has identified the lady as Ishna Jan, 23. The NIA alleges that the house that belongs to her father Tariq Ahmed Shah was used by the suicide bomber, Adil Ahmed Dar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X