ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಡಿ ಡಬ್ಬಲ್ಲಾ, ಕಾಸ್ಮೆಟಿಕ್ ಸರ್ಜರಿಯಾ?- ರಹಸ್ಯವಾಗಿಯೇ ಉಳಿದ ಪುಟಿನ್

|
Google Oneindia Kannada News

ಮಾಸ್ಕೋ, ಮೇ 7: ರಷ್ಯಾ ಉಕ್ರೇನ್ ಯುದ್ಧ ಆಲ್ ಔಟ್ ವಾರ್ ಆಗಿ ಮುಂದುವರಿಯುವ ಎಲ್ಲಾ ಸಾಧ್ಯತೆ ಇದೆ. ರಷ್ಯಾ ನಿಲ್ಲಿಸುತ್ತಿಲ್ಲ, ಉಕ್ರೇನ್ ಬಿಡುತ್ತಿಲ್ಲ ಎಂಬಂತಾಗಿದೆ. ಇದೇ ಹೊತ್ತಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಲ್ಪ ವಿರಾಮ ತೆಗೆದುಕೊಳ್ಳುತ್ತಿದ್ದಾರೆ. ಮಾಜಿ ಗುಪ್ತಚರ ದಳದ ಮುಖ್ಯಸ್ಥ ನಿಕೋಲಾಯ್ ಪಟ್ರುಶೆವ್ ತಾತ್ಕಾಲಿಕವಾಗಿ ರಷ್ಯಾದ ಚುಕ್ಕಾಣಿ ಹಿಡಿಯಲಿದ್ದಾರೆ.

ವ್ಲಾದಿಮಿರ್ ಪುಟಿನ್ ಸುತ್ತ ಬಹಳಷ್ಟು ಅನುಮಾನದ ಹುತ್ತಗಳು ಹುಟ್ಟಿಕೊಂಡಿವೆ. ಇಂಥ ಅನುಮಾನಗಳು ಬಹಳ ವರ್ಷಗಳಿಂದಲೂ ಹೊಗೆಯಾಡುತ್ತಿವೆ. ಪುಟಿನ್‌ಗೆ ಸ್ಕಿಜೋಫ್ರೇನಿಯಾ (Schizophrenia) ಎಂಬ ಮಾನಸಿಕ ಭ್ರಮೆ ರೀತಿಯ ಕಾಯಿಲೆ ಕಾಡುತ್ತಿದೆ ಎನ್ನಲಾಗುತ್ತಿದೆ. ಸರಕಾರದಲ್ಲಿ ತನ್ನ ವಿರುದ್ಧ ಯಾರಾದರೂ ಚಿತಾವಣೆ ನಡೆಸುತ್ತಿರಬಹುದು ಎಂಬ ಭ್ರಮೆಯಲ್ಲೇ ಅವರಿರುತ್ತಾರೆ ಎಂದು ರಷ್ಯಾದ ಮಾಜಿ ಗುಪ್ತಚರ ಅಧಿಕಾರಿಯೊಬ್ಬು ಹೇಳಿದರೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

 ಜಿಮ್ನಾಸ್ಟ್ ಆಟಗಾರ್ತಿ ಜೊತೆ ಪುಟಿನ್ ದಶಕದಿಂದ ಚಕ್ಕಂದ; ಈಗ ಇಯು ನಿಷೇಧ ಜಿಮ್ನಾಸ್ಟ್ ಆಟಗಾರ್ತಿ ಜೊತೆ ಪುಟಿನ್ ದಶಕದಿಂದ ಚಕ್ಕಂದ; ಈಗ ಇಯು ನಿಷೇಧ

ಪುಟಿನ್ ಎಷ್ಟರಮಟ್ಟಿಗೆ ಅನುಮಾನ ಪಿಶಾಚಿಯಾಗಿದ್ದಾರೆಂದರೆ ತಮ್ಮ ಆಪ್ತರ ಮೇಲೂ ಸಂಶಯ ಪಡುತ್ತಾರೆ, ರಷ್ಯಾದ ಭದ್ರತಾ ಸೇವೆಯಲ್ಲಿರುವ ಅಧಿಕಾರಿಗಳನ್ನ ದ್ರೋಹಿಗಳೆಂಬಂತೆಯೇ ಅನುಮಾನದಿಂದ ಕಾಣುತ್ತಾರಂತೆ.

Is Vladimir Putin suffering from schizophrenia? here are few rumours

ಪುಟಿನ್‌ಗೆ ಬಾಡಿ ಡಬಲ್:
ಮಾಧ್ಯಮಗಳೆದುರು ಅಥವಾ ವಿವಿಧ ದೇಶಗಳ ನಾಯಕರ ಜೊತೆ ಮಾತುಕತೆಯಲ್ಲಿ ಕಾಣಿಸಿಕೊಳ್ಳುವ ವ್ಲಾದಿಮಿರ್ ಪುಟಿನ್ ವಾಸ್ತವವಾಗಿ ನಕಲಿ ಪುಟಿನ್ ಅಂತೆ. ಅಂದರೆ ಸಾರ್ವಜನಿಕರೆದುರು ವ್ಲಾದಿಮಿರ್ ಪುಟಿನ್ ಅವರ ಬಾಡಿ ಡಬಲ್ ವ್ಯಕ್ತಿ ಕಾಣಿಸುತ್ತಾರೆ. ಎಂಟು ಮಂದಿ ಸೇನಾಧಿಕಾರಿಗಳನ್ನ ಉಚ್ಛಾಟಿಸಿದ್ದಕ್ಕೆ ರಷ್ಯಾದ ಇತರ ಮಿಲಿಟರಿ ಅಧಿಕಾರಿಗಳು ದೊಡ್ಡಮಟ್ಟದ ಸಂಚು ರೂಪಿಸುತ್ತಿರಬಹುದು ಎಂಬುದು ಪುಟಿನ್ ಅನುಮಾನ. ಹೀಗಾಗಿ, ಅವರು ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ತಮ್ಮ ಚಹರೆ ಇರುವ ವ್ಯಕ್ತಿಯನ್ನು ಬಾಡಿ ಡಬಲ್ ಅಗಿ ಬಳಸುತ್ತಿದ್ದಾರೆನ್ನಲಾಗುತ್ತಿದೆ.

ಪುಟಿನ್ ಸ್ಥಾನಕ್ಕೆ ಇನ್ನೊಬ್ಬರು; ಯಾರು ಈ ನಿಕೋಲಾಯ್ ಪಟ್ರುಶೆವ್?ಪುಟಿನ್ ಸ್ಥಾನಕ್ಕೆ ಇನ್ನೊಬ್ಬರು; ಯಾರು ಈ ನಿಕೋಲಾಯ್ ಪಟ್ರುಶೆವ್?

ಕ್ಯಾನ್ಸರ್ ಸರ್ಜರಿ:
ವ್ಲಾದಿಮಿರ್ ಪುಟಿನ್ ಅವರಿಗೆ ನಿಜವಾಗಿಯೂ ಕರುಳಿನ ಕ್ಯಾನ್ಸರ್ (Abdominal Cancer) ಇದೆ ಎನ್ನಲಾಗುತ್ತಿದೆ. ಈ ಕ್ಯಾನ್ಸರ್‌ನಿಂದಾಗಿ ಅವರ ಆರೋಗ್ಯದಲ್ಲಿ ಸಾಕಷ್ಟು ಏರುಪೇರಾಗುತ್ತಿದೆ. ಅದಕ್ಕಾಗಿ ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆ ನಡೆಸಬೇಕೆಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಸರ್ಜರಿ ಆದರೆ ಕೆಲ ದಿನಗಳ ಕಾಲ ಅವರು ನಿಶ್ಚಲರಾಗಿ ಉಳಿಯಬೇಕಾಗಬಹುದು. ಅದಕ್ಕಾಗಿ ತಾತ್ಕಾಲಿಕವಾಗಿ ರಷ್ಯಾವನ್ನು ಯುದ್ದದಲ್ಲಿ ಮುನ್ನಡೆಸಲು ಬೇರೊಬ್ಬರ ಕೈಗೆ ಅಧಿಕಾರ ಒಪ್ಪಿಸಲಿದ್ದಾರೆ ಎಂಬ ಮಾತು ಪ್ರಮುಖವಾಗಿ ಕೇಳಿಬರುತ್ತಿದೆ.

Is Vladimir Putin suffering from schizophrenia? here are few rumours

ಕಾಸ್ಮೆಟಿಕ್ ಸರ್ಜರಿ:
ಕೆಲವೊಂದಿಷ್ಟು ವರದಿಗಳ ಪ್ರಕಾರ, ವ್ಲಾದಿಮಿರ್ ಪುಟಿನ್ ಯಾವುದೋ ಕಾರಣಕ್ಕೆ ಕಾಸ್ಮೆಟಿಕ್ ಸರ್ಜರಿಗೆ ಒಳಪಟ್ಟಿದ್ದಾರೆ. ಇದರಿಂದ ಅವರ ಚಹರೆಯಲ್ಲಿ ತುಸು ಬದಲಾವಣೆ ಆಗಿದೆ. ಹೀಗಾಗಿ ಅವರು ತಾತ್ಕಾಲಿಕವಾಗಿ ಬಾಡಿ ಡಬಲ್ ಬಳಸುತ್ತಿದ್ದಾರೆ ಎಂದೂ ಹೇಳಲಾಗುತ್ತಿದೆ.

(ಒನ್ಇಂಡಿಯಾ ಸುದ್ದಿ)

English summary
Putin is all set for cancer surgery, and will be temporarily handing over his command to another top official..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X