ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಮ್ಲಜನಕ ಸಿಲಿಂಡರ್‌ನಲ್ಲೇ ಅಡಗಿದೆಯಾ ಬ್ಲ್ಯಾಕ್‌ ಫಂಗಸ್?; ವೈದ್ಯರು ಬಿಚ್ಚಿಟ್ಟ ಆತಂಕಕಾರಿ ಮಾಹಿತಿ

|
Google Oneindia Kannada News

ನವದೆಹಲಿ, ಮೇ 24: ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಳ್ಳುತ್ತಿರುವ "ಬ್ಲ್ಯಾಕ್ ಫಂಗಸ್" ಸೋಂಕು, ಎರಡು ವಾರಗಳಿಂದೀಚೆ ದೇಶದ ವೈದ್ಯಕೀಯ ಕ್ಷೇತ್ರಕ್ಕೆ ಮತ್ತೊಂದು ಸವಾಲು ಒಡ್ಡಿದೆ. ಈ ಅಪರೂಪದ ಕಾಯಿಲೆ ಹೇಗೆ ಕೊರೊನಾ ಎರಡನೇ ಅಲೆಯಲ್ಲಿ ಇದ್ದಕ್ಕಿದ್ದಂತೆ ಹೆಚ್ಚಾಗಿದೆ? ಇದಕ್ಕೆ ಕಾರಣವೇನು? ಕೊರೊನಾದಿಂದ ಗುಣಮುಖರಾದವರಲ್ಲಿ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದೇಕೆ? ಹೀಗೆ ಹಲವು ಪ್ರಶ್ನೆಗಳಿಗೆ ತಜ್ಞರು ವಿಶ್ಲೇಷಣೆ ಮಾಡುತ್ತಿದ್ದಾರೆ.

ಸ್ಟೆರಾಯ್ಡ್‌ಗಳ ಮಿತಿ ಮೀರಿದ ಡೋಸ್, ರಕ್ತದಲ್ಲಿ ಅನಿಯಂತ್ರಿತ ಸಕ್ಕರೆ ಮಟ್ಟ ಹಾಗೂ ರೋಗನಿರೋಧಕ ಶಕ್ತಿ ಕಡಿಮೆ ಇರುವುದು ಈ ಬ್ಲ್ಯಾಕ್ ಫಂಗಸ್‌ಗೆ ಕಾರಣ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಆದರೆ ಈ ಸಮಸ್ಯೆಗೆ ಮತ್ತೂ ಒಂದು ಕಾರಣವಿರಬಹುದು ಎನ್ನಲಾಗುತ್ತಿದೆ. ಆಮ್ಲಜನಕ ಬೆಂಬಲಿತ ರೋಗಿಗಳಲ್ಲಿಯೇ ಈ ಸೋಂಕು ಕಾಣಿಸಿಕೊಳ್ಳುತ್ತಿರುವುದು ಅನುಮಾನಕ್ಕೂ ಕಾರಣವಾಗಿದ್ದು, ಇನ್ನೊಂದು ಹೊಸ ಅಂಶದ ಮೇಲೆ ಗಮನ ಹರಿಸಬೇಕಿದೆ ಎಂದಿದ್ದಾರೆ ವೈದ್ಯಾಧಿಕಾರಿಗಳು. ಆ ಹೊಸ ಅಂಶವೇನು? ಮುಂದೆ ಓದಿ...

 ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ ಬ್ಲ್ಯಾಕ್‌ ಫಂಗಸ್ ತಡೆಯಲು ಏನು ಮಾಡಬೇಕು; ಏಮ್ಸ್ ನಿರ್ದೇಶಕರ ಮೂರು ಬಹುಮುಖ್ಯ ಸಲಹೆ

ಆಮ್ಲಜನಕದ ಗುಣಮಟ್ಟಕ್ಕೂ ಬ್ಲ್ಯಾಕ್‌ ಫಂಗಸ್‌ಗೂ ಸಂಬಂಧವಿದೆಯೇ?

ಆಮ್ಲಜನಕದ ಗುಣಮಟ್ಟಕ್ಕೂ ಬ್ಲ್ಯಾಕ್‌ ಫಂಗಸ್‌ಗೂ ಸಂಬಂಧವಿದೆಯೇ?

ಹಲವು ರಾಜ್ಯಗಳಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಹಿನ್ನೆಲೆಯನ್ನು ತಜ್ಞರು ಪರಿಶೀಲಿಸುತ್ತಿದ್ದಾರೆ. ಆಮ್ಲಜನಕ ಬೆಂಬಲಿತವಾಗಿ ಚಿಕಿತ್ಸೆ ಪಡೆದು ಗುಣಮುಖರಾದ ವ್ಯಕ್ತಿಗಳಲ್ಲಿಯೇ ಈ ಸೋಂಕು ಕಂಡುಬರುತ್ತಿರುವುದು ಹೊಸ ಸಾಧ್ಯತೆಯತ್ತಲೂ ಎಚ್ಚರಿಕೆ ವಹಿಸುವಂತೆ ಮಾಡಿದೆ. ಆಸ್ಪತ್ರೆಗೆ ಸರಬರಾಜಾಗುತ್ತಿರುವ ಆಮ್ಲಜನಕದ ಗುಣಮಟ್ಟ ಇದಕ್ಕೆ ಕಾರಣವಿರಬಹುದೇ ಎಂಬ ಸಂಶಯ ವ್ಯಕ್ತಗೊಂಡಿದೆ. ಆಮ್ಲಜನಕದ ಗುಣಮಟ್ಟಕ್ಕೂ ಬ್ಲ್ಯಾಕ್‌ ಫಂಗಸ್‌ಗೂ ಒಂದಕ್ಕೊಂದು ಸಂಬಂಧವಿದೆಯೇ ಎಂಬ ಪ್ರಶ್ನೆ ಮೂಡಿದೆ.

 ಆಮ್ಲಜನಕ ಸರಬರಾಜಿಗೆ ಬಳಸುತ್ತಿರುವ ಸಿಲಿಂಡರ್ ಶುದ್ಧವಾಗಿದೆಯೇ?

ಆಮ್ಲಜನಕ ಸರಬರಾಜಿಗೆ ಬಳಸುತ್ತಿರುವ ಸಿಲಿಂಡರ್ ಶುದ್ಧವಾಗಿದೆಯೇ?

ಕೊರೊನಾ ಎರಡನೇ ಅಲೆಯಲ್ಲಿ ಭಾರತದಲ್ಲಿ ವೈದ್ಯಕೀಯ ಆಮ್ಲಜನಕದ ಕೊರತೆ ತೀವ್ರವಾಗಿ ಕಂಡುಬಂದಿತು. ದೇಶದಲ್ಲಿ ಆಮ್ಲಜನಕ ಉತ್ಪಾದನೆ ಹಿಂದೆಂದೂ ಕಂಡಿರದ ರೀತಿ ವೇಗ ಪಡೆಯಿತು. ಈ ತುರ್ತು ಸಮಯದಲ್ಲಿ ಕೈಗಾರಿಕಾ ಆಮ್ಲಜನಕವನ್ನೇ ವೈದ್ಯಕೀಯ ಉದ್ದೇಶಕ್ಕೆ ಬಳಸಿಕೊಳ್ಳಲು ಸೂಚಿಸಲಾಯಿತು. ಕೈಗಾರಿಕೆಗಳಲ್ಲಿ ಬಳಸಲಾಗುವ ಆಮ್ಲಜನಕ ಸಿಲಿಂಡರ್‌ಗಳನ್ನೇ ವೈದ್ಯಕೀಯ ಉದ್ದೇಶಕ್ಕೆ ಸರಬರಾಜು ಮಾಡಲಾಯಿತು. ಪಂಜಾಬ್ ನಂಥ ರಾಜ್ಯದಲ್ಲಿ ಕೈಗಾರಿಕಾ ಸಿಲಿಂಡರ್‌ಗಳನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸಲು ಪರಿಷ್ಕರಣೆ ಮಾಡಲಾಗಿತ್ತು. ಆದರೆ ಎಲ್ಲಾ ರಾಜ್ಯಗಳಲ್ಲಿಯೂ ಈ ಕೆಲಸ ಆಗಿಲ್ಲ.

ಬ್ಲ್ಯಾಕ್‌ ಫಂಗಸ್‌ ಸೋಂಕು ತಡೆಗೆ ಇಲ್ಲಿದೆ ದಂತವೈದ್ಯರ ಸರಳ ಸಲಹೆಬ್ಲ್ಯಾಕ್‌ ಫಂಗಸ್‌ ಸೋಂಕು ತಡೆಗೆ ಇಲ್ಲಿದೆ ದಂತವೈದ್ಯರ ಸರಳ ಸಲಹೆ

 ಕೈಗಾರಿಕಾ ಆಮ್ಲಜನಕ ಹೆಚ್ಚು ಶುದ್ಧ. ಆದರೆ...

ಕೈಗಾರಿಕಾ ಆಮ್ಲಜನಕ ಹೆಚ್ಚು ಶುದ್ಧ. ಆದರೆ...

ವೈದ್ಯಕೀಯ ಆಮ್ಲಜನಕಕ್ಕಿಂತ ಕೈಗಾರಿಕಾ ಆಮ್ಲಜನಕ 99.67% ಹೆಚ್ಚು ಶುದ್ಧ ಹೌದಾದರೂ ಸಾಮಾನ್ಯವಾಗಿ ಕೈಗಾರಿಕಾ ಆಮ್ಲಜನಕ ಸಿಲಿಂಡರ್ ಗಳು ವೈದ್ಯಕೀಯ ಆಮ್ಲಜನಕ ಸಿಲಿಂಡರ್‌ನಷ್ಟು ಗುಣಮಟ್ಟ ಕಾಯ್ದುಕೊಂಡಿಲ್ಲ. ಕೈಗಾರಿಕಾ ಆಮ್ಲಜನಕ ಸಿಲಿಂಡರ್‌ಗಳನ್ನು ಒರಟಾಗಿ ಬಳಸಲಾಗುತ್ತದೆ ಹಾಗೂ ಅಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದಿಲ್ಲ. ಜೊತೆಗೆ ಸಣ್ಣ ಪುಟ್ಟ ಸೋರಿಕೆಗಳು ಈ ಸಿಲಿಂಡರ್‌ಗಳಲ್ಲಿ ಸಾಮಾನ್ಯವಾಗಿರುತ್ತವೆ. ಕೈಗಾರಿಕಾ ಅನಿಲ ಸಿಲಿಂಡರ್‌ಗಳಲ್ಲಿ ದೂಳಿನ ಕಣಗಳು, ತೇವಾಂಶ ಇರುತ್ತದೆ. ಹೀಗಾಗಿ ಕೈಗಾರಿಕಾ ಸಿಲಿಂಡರ್‌ಗಳನ್ನು ವೈದ್ಯಕೀಯ ಬಳಕೆಗೆ ಬಳಸುವುದಿಲ್ಲ ಎಂದು ಅನಿಲ ಸರಬರಾಜು ಸಂಸ್ಥೆಯ ಮಾಲೀಕರೊಬ್ಬರು ತಿಳಿಸಿದರು.

 ಗುಣಮಟ್ಟವಿಲ್ಲದ ಕೈಗಾರಿಕಾ ಸಿಲಿಂಡರ್ ಬಳಕೆಯಿಂದ ತೊಂದರೆ?

ಗುಣಮಟ್ಟವಿಲ್ಲದ ಕೈಗಾರಿಕಾ ಸಿಲಿಂಡರ್ ಬಳಕೆಯಿಂದ ತೊಂದರೆ?

ಕೈಗಾರಿಕಾ ಆಮ್ಲಜನಕ ಸಿಲಿಂಡರ್‌ಗಳನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸುವಾಗ ಪರಿಷ್ಕರಣೆ ಮಾಡಬೇಕು. ಆದರೆ ಇದ್ದಕ್ಕಿದ್ದಂತೆ ದೇಶದಲ್ಲಿ ಆಮ್ಲಜನಕಕ್ಕೆ ಭಾರೀ ಬೇಡಿಕೆ ಉಂಟಾದ್ದರಿಂದ ಪರಿಷ್ಕರಣೆಗೆ ಸಮಯ ಹಾಗೂ ಹಣ ಸಿಗಲಿಲ್ಲ. ಆದರೆ ಕೈಗಾರಿಕಾ ಆಮ್ಲಜನಕ ಸಿಲಿಂಡರ್‌ಗಳು ಗುಣಮಟ್ಟದಲ್ಲಿಲ್ಲ ಎಂದರೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದೇ ಇರುತ್ತದಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.

"ಪರಿಷ್ಕರಣೆ ಮಾಡದೇ ಬಳಸಿದರೆ ಅಪಾಯ"

ಕೈಗಾರಿಕಾ ಆಮ್ಲಜನಕವನ್ನು ವೈದ್ಯಕೀಯ ಉದ್ದೇಶಕ್ಕೆ ಬಳಸುವಾಗ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಪಂಜಾಬ್‌ನ ಹಿರಿಯ ವೈದ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೈಗಾರಿಕಾ ಸಿಲಿಂಡರ್‌ಗಳನ್ನು ಶೇಖರಿಸುವ ರೀತಿ ಹಾಗೂ ಆ ಸಿಲಿಂಡರ್‌ಗಳಲ್ಲಿ ಸೋರಿಕೆ ಸಹಜವಾಗಿದ್ದು, ಇದು ವೈದ್ಯಕೀಯ ಬಳಕೆಗೆ ಯೋಗ್ಯವಲ್ಲ. ಇದನ್ನು ಶುದ್ಧ ಹಾಗೂ ಪರಿಷ್ಕರಣೆ ಮಾಡದೇ ಬಳಸುವುದು ಸರಿಯಲ್ಲ ಎಂದಿದ್ದಾರೆ. ಪರಿಷ್ಕರಣೆಯು ಪ್ಲಗ್ಗಿಂಗ್ ಹಾಗೂ ಲೀಕೇಜ್‌ಗಳನ್ನು ಒಳಗೊಂಡಿರುತ್ತದೆ. ಆದರೆ ಕೆಲವು ಕಡೆ ಪರಿಷ್ಕರಣೆ ಮಾಡದೇ ಕೈಗಾರಿಕಾ ಆಮ್ಲಜನಕ ಸಿಲಿಂಡರ್‌ಗಳನ್ನು ಬಳಸುತ್ತಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.

ಆಮ್ಲಜನಕ ಸಿಲಿಂಡರ್‌ಗಳಲ್ಲಿನ ತೇವಾಂಶವೂ ಬ್ಲ್ಯಾಕ್ ಫಂಗಸ್ ಸೃಷ್ಟಿಯಾಗಲು ಕಾರಣವಿರಬಹುದು. ಅದೂ ರೋಗನಿರೋಧಕ ಶಕ್ತಿ ಕಡಿಮೆ ಇದ್ದವರಲ್ಲಿ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದಿದ್ದಾರೆ.

English summary
Doctors looking at a new factor that could have made this black fungus rare disease common. The quality of Oxygen being supplied in the hospitals may be linked to black fungus, says doctors,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X