ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಲಸಿಕೆ ಪಡೆದವರಲ್ಲಿ ಕಾಣಿಸಿಕೊಳ್ಳುತ್ತಾ ಅಡ್ಡಪರಿಣಾಮ?

|
Google Oneindia Kannada News

ನವದೆಹಲಿ, ಜನವರಿ.15: ಭಾರತಾದ್ಯಂತ ಕೊರೊನಾವೈರಸ್ ಸೋಂಕಿನ ಲಸಿಕೆ ವಿತರಣೆ ಅಭಿಯಾನ ಕ್ಷಣಗಣನೆ ಶುರುವಾಗಿದೆ. ಎರಡು ಭಾರತೀಯ ಕಂಪನಿಗಳು ಉತ್ಪಾದಿಸಿರುವ ಕೊವಿಡ್-19 ಲಸಿಕೆಗಳು ಈಗಾಗಲೇ ದಿಲ್ಲಿಯಿಂದ ಹಳ್ಳಿವರೆಗೂ ತಲುಪಿವೆ.

ದೇಶದಲ್ಲಿ ಜನವರಿ.16ರ ಬೆಳಗ್ಗೆ 10.30 ಗಂಟೆಗೆ ಕೊವಿಡ್-19 ಲಸಿಕೆ ವಿತರಣೆ ಕಾರ್ಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ 3 ಕೋಟಿ ವೈದ್ಯಕೀಯ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಜ.16ರಂದು ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ ಜ.16ರಂದು ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನಕ್ಕೆ ಚಾಲನೆ

ಮುಳುಗುವವನಿಗೆ ಹುಲ್ಲುಕಡ್ಡಿಯೇ ಆಸರೆ ಎಂಬ ಗಾದೆಮಾತಿದೆ. ಆದರೆ ಇದೀಗ ಸರ್ಕಾರವು ನೀಡುತ್ತಿರುವ ಕೊವಿಡ್-19 ಲಸಿಕೆಯು ಎಷ್ಟರ ಮಟ್ಟಿಗೆ ಸುರಕ್ಷಿತವಾಗಿದೆ. ಯಾವ ವಿಶ್ವಾಸದ ಮೇಲೆ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಪಡೆದುಕೊಂಡ ನಂತರದಲ್ಲಿ ಆರೋಗ್ಯ ಏರುಪೇರಾದಲ್ಲಿ ಯಾರು ಹೊಣೆ. ಹೀಗೆ ಹುಟ್ಟಿಕೊಳ್ಳುವ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

2 ಡೋಸ್ ಕೊವಿಡ್ ಲಸಿಕೆ ಮಧ್ಯೆ 14 ದಿನ ಅಂತರ

2 ಡೋಸ್ ಕೊವಿಡ್ ಲಸಿಕೆ ಮಧ್ಯೆ 14 ದಿನ ಅಂತರ

ಕೊರೊನಾವೈರಸ್ ಲಸಿಕೆ ನೀಡುವ ಪ್ರಕ್ರಿಯೆಯಲ್ಲಿ ಒಬ್ಬರಿಗೆ ಎರಡು ಡೋಸ್ ಲಸಿಕೆ ನೀಡಲಾಗುತ್ತದೆ. 28 ದಿನಗಳಲ್ಲಿ ಎರಡು ಬಾರಿ ಲಸಿಕೆ ನೀಡುವ ಪ್ರಕ್ರಿಯೆ ನಡೆಸಲಾಗುತ್ತದೆ. ಮೊದಲ ಲಸಿಕೆಯ ಡೋಸ್ ನೀಡಿದ ಎರಡು ವಾರಗಳಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸುವ ಪ್ರಮಾಣವನ್ನು ನೋಡಿಕೊಂಡು ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ.

ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮಗಳಿವೆಯೇ?

ಕೊರೊನಾ ಲಸಿಕೆಯಿಂದ ಅಡ್ಡ ಪರಿಣಾಮಗಳಿವೆಯೇ?

ಕೊವಿಡ್-19 ಲಸಿಕೆಯು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ. ಆದರೆ ಲಸಿಕೆ ನೀಡಿದ ವೇಳೆಯಲ್ಲಿ ಜ್ವರ, ನೋವು ಸೇರಿದಂತೆ ಇತ್ಯಾದಿ ಸಣ್ಣ ಪ್ರಮಾಣದ ಅಡ್ಡಪರಿಣಾಮಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಇರುತ್ತವೆ. ಯಾವುದೇ ಲಸಿಕೆ ಪಡೆದಾಗಲೂ ಕೂಡಾ ಇಂಥ ಪರಿಣಾಮಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿರುತ್ತದೆ.

ಕೊವಿಡ್ ಲಸಿಕೆ ಪಡೆದವರಿಗೆ ಅಪಾಯ ಕಡಿಮೆ

ಕೊವಿಡ್ ಲಸಿಕೆ ಪಡೆದವರಿಗೆ ಅಪಾಯ ಕಡಿಮೆ

ಒಬ್ಬ ವ್ಯಕ್ತಿಯು ಕೊರೊನಾವೈರಸ್ ರೋಗದ ವಿರುದ್ಧ ಲಸಿಕೆ ಪಡೆದಾಗ, ಅವರಿಗೆ ಸೋಂಕಿನ ಅಪಾಯವೂ ಕಡಿಮೆಯಾಗುತ್ತದೆ. ಆದ್ದರಿಂದ ಅವರಿಂದ ವೈರಸ್ ಅಥವಾ ಬ್ಯಾಕ್ಟೀರಿಯಾ ಇತರರಿಗೆ ಹರಡುವ ಅಪಾಯವು ತೀರಾ ವಿರಳವಾಗಿರುತ್ತದೆ.

ಲಸಿಕೆಗಳ ಸುರಕ್ಷತೆ ಪರಿಶೀಲನೆ ನಂತರವೇ ಅನುಮೋದನೆ

ಲಸಿಕೆಗಳ ಸುರಕ್ಷತೆ ಪರಿಶೀಲನೆ ನಂತರವೇ ಅನುಮೋದನೆ

ದೇಶದ ನಿಯಂತ್ರಕ ಸಂಸ್ಥೆಗಳು ಕೊರೊನಾ ಲಸಿಕೆಯ ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಬಗ್ಗೆ ದೃಢಪಡಿಸಿದ ನಂತರವಷ್ಟೇ ಅನುಮೋದನೆ ನೀಡಲಾಗಿರುತ್ತದೆ. ಭಾರತದಲ್ಲಿ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನೇತೃತ್ವದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಲಸಿಕೆಗೆ ಅನುಮೋದನೆ ನೀಡುವ ನಿರ್ಧಾರವನ್ನು ತೆಗೆದುಕೊಳ್ಳಲಿದೆ. ಲಸಿಕೆ ಬೆಳವಣಿಗೆ ವಿಜ್ಞಾನವು ಲಸಿಕೆ ಸ್ವೀಕರಿಸುವವರ ದೇಹದಲ್ಲಿ ರೋಗವನ್ನು ಉಂಟು ಮಾಡುವುದಿಲ್ಲ. ಅನುಮೋದಿತ ಲಸಿಕೆಯು ಸ್ವೀಕರಿಸುವವರಲ್ಲಿ ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಹೇಳುವ ಯಾವುದೇ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದೆ.

English summary
Is There Any Side Effects After Taking Covid-19 Vaccine?. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X