ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಸಿಕೆ ಪಡೆದ ನಂತರ ಜ್ವರ ಬರುವುದು ಸಹಜವೇ? ಜ್ವರ ಇಲ್ಲದಿದ್ದರೆ ಏನರ್ಥ?

|
Google Oneindia Kannada News

ನವದೆಹಲಿ, ಜೂನ್ 14: ಕೊರೊನಾ ಸೋಂಕಿನ ತಡೆಗೆ ಲಸಿಕೆಗಳನ್ನು ನೀಡಲಾಗುತ್ತಿದ್ದು, ಲಸಿಕೆ ಪಡೆದುಕೊಂಡ ಕೆಲವರಲ್ಲಿ ತಲೆ ನೋವು, ಸುಸ್ತು, ಕೈ ಊತ, ಜ್ವರ, ತಲೆ ಸುತ್ತು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಈ ಪರಿಣಾಮಗಳು ಕಂಡುಬಂದರೆ, ಲಸಿಕೆಯ ಪ್ರತಿಕ್ರಿಯೆ ದೇಹದಲ್ಲಿ ಆರಂಭವಾಗಿದೆ, ರೋಗನಿರೋಧಕ ಶಕ್ತಿಯನ್ನು ದೇಹಕ್ಕೆ ಲಸಿಕೆ ಒದಗಿಸಲು ಆರಂಭಿಸಿದೆ ಎಂದರ್ಥ ಎನ್ನುತ್ತಾರೆ ತಜ್ಞರು.

ಆದರೆ ಕೆಲವರಲ್ಲಿ ಲಸಿಕೆ ಪಡೆದ ನಂತರ ಈ ಯಾವುದೇ ಪರಿಣಾಮಗಳು ಗೋಚರಿಸುತ್ತಿಲ್ಲ. ಸುಸ್ತು, ಜ್ವರ ಯಾವುದೂ ಕಂಡುಬರುತ್ತಿಲ್ಲ. ಹಾಗಾದರೆ ಇದರರ್ಥ ಏನು? ಯಾವುದೇ ಲಕ್ಷಣ ಗೋಚರಿಸದವಲ್ಲಿ ಲಸಿಕೆ ಕೆಲಸ ಮಾಡುತ್ತಿಲ್ಲವೇ? ಇಂಥ ಅನುಮಾನ ಮೂಡುವುದು ಸಹಜ. ಈ ಕುರಿತು ವಿಶ್ಲೇಷಣೆಯೊಂದು ಇಲ್ಲಿದೆ. ಮುಂದೆ ಓದಿ...

 ಲಸಿಕೆ ಪಡೆದ ನಂತರ

ಲಸಿಕೆ ಪಡೆದ ನಂತರ "ಜ್ವರ" ಕಾಣಿಸಿಕೊಂಡಿಲ್ಲವೆಂದರೆ?

ಲಸಿಕೆ ಪಡೆದುಕೊಂಡ ನಂತರ ಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ ಕೆಲವರಲ್ಲಿ ಯಾವುದೇ ಬದಲಾವಣೆ ಕಂಡುಬರುವುದಿಲ್ಲ. ಹೀಗಾದರೆ ಲಸಿಕೆ ಪರಿಣಾಮ ಬೀರುತ್ತಿಲ್ಲ ಎಂದರ್ಥವೇ? ಇದಕ್ಕೆ "ಹೆಲ್ತ್‌ಲೈನ್" ವರದಿ ಉತ್ತರ ನೀಡಿದೆ. "ನೀವು ಲಸಿಕೆ ಪಡೆದುಕೊಂಡ ನಂತರ ಏನೂ ಪರಿಣಾಮ ಗೋಚರಿಸುತ್ತಿಲ್ಲ ಎಂದರೆ, ನಿಮ್ಮ ದೇಹ ಇನ್ನೂ ಉತ್ತಮ ರಕ್ಷಣಾತ್ಮಕ ರೋಗನಿರೋಧಕ ಪ್ರತಿಕ್ರಿಯೆ ಹೊಂದಿರುವ ಸಾಧ್ಯತೆಗಳಿವೆ," ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಕ್ಕಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರದ ಮೊದಲ ಕ್ರಮವೇನು?ಮಕ್ಕಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೇಂದ್ರದ ಮೊದಲ ಕ್ರಮವೇನು?

 50% ಮಂದಿಯಲ್ಲಿ ಪರಿಣಾಮ ಕಾಣುವುದಿಲ್ಲ

50% ಮಂದಿಯಲ್ಲಿ ಪರಿಣಾಮ ಕಾಣುವುದಿಲ್ಲ

ಲಸಿಕೆ ಪಡೆದ ನಂತರದ ಪರಿಣಾಮಗಳ ಕುರಿತು ಫೈಜರ್ ಕಂಪನಿ ಕೆಲವು ಪ್ರಯೋಗಗಳನ್ನು ನಡೆಸಿದ್ದು, ಪ್ರಯೋಗದಲ್ಲಿ, ಲಸಿಕೆ ಪಡೆದ 50% ಮಂದಿಯಲ್ಲಿ ಯಾವುದೇ ಪರಿಣಾಮ ಗೋಚರಿಸಿಲ್ಲ. ಇದೇ ಸಂದರ್ಭ, ಅವರಲ್ಲಿ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದೂ ಕಂಡುಬಂದಿದೆ. "ಪ್ರತಿ ಹತ್ತು ಮಂದಿಯಲ್ಲಿ ಒಬ್ಬರಿಗೆ ಲಸಿಕೆ ಪಡೆದ ನಂತರ ಪರಿಣಾಮ ಉಂಟಾಗಬಹುದು. ಆದರೆ ಲಸಿಕೆ ಪಡೆದವರ ಪೈಕಿ 95% ಮಂದಿಗೆ ಸೋಂಕಿನಿಂದ ರಕ್ಷಣೆ ಖಾತ್ರಿ," ಎಂದು ಮಾಡೆರ್ನಾ ಸಂಸ್ಥೆ ತನ್ನ ಪ್ರಯೋಗದಲ್ಲಿ ಕಂಡುಕೊಂಡಿರುವುದಾಗಿ ತಿಳಿಸಿದೆ.

 ಲಸಿಕೆ ಪಡೆದವರಲ್ಲಿ ವ್ಯತ್ಯಾಸ ಕಂಡುಬರುವುದೇಕೆ?

ಲಸಿಕೆ ಪಡೆದವರಲ್ಲಿ ವ್ಯತ್ಯಾಸ ಕಂಡುಬರುವುದೇಕೆ?

"ಹೆಲ್ತ್‌ಲೈನ್" ಸಂಶೋಧನಾ ವರದಿ ಪ್ರಕಾರ ರೋಗನಿರೋಧಕ ಶಕ್ತಿ ಒಬ್ಬೊಬ್ಬರಲ್ಲಿ ಒಂದೊಂದು ವಿಧವಾಗಿ ವರ್ತಿಸುತ್ತದೆ. ಹೀಗಾಗಿ ಕೆಲವರಲ್ಲಿ ಲಸಿಕೆ ಪಡೆದ ನಂತರ ದೈಹಿಕ ವ್ಯತ್ಯಾಸಗಳು ಕಂಡುಬರುತ್ತವೆ. ಆರೋಗ್ಯ, ವಯಸ್ಸು, ಲಿಂಗ, ಈ ಮುನ್ನವೇ ದೇಹದಲ್ಲಿದ್ದ ರೋಗನಿರೋಧಕ ಶಕ್ತಿ, ವಂಶವಾಹಿ, ಪೌಷ್ಟಿಕಾಂಶ, ಪರಿಸರ ಹಾಗೂ ತೆಗೆದುಕೊಳ್ಳುವ ಔಷಧಿಗಳು ಇವೆಲ್ಲವೂ ಲಸಿಕೆಗೆ ಜನರು ವಿಭಿನ್ನವಾಗಿ ಪ್ರತಿಕ್ರಿಯಿಸುವಂತೆ ಮಾಡುವ ಅಂಶಗಳು ಎಂದು ವರದಿ ಹೇಳಿದೆ.

ಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲಸರ್ಕಾರದ ಮಾರ್ಗಸೂಚಿ: ಕೊರೊನಾ ರೋಗಿಗಳು ಈ ಔಷಧಿಗಳನ್ನು ತೆಗೆದುಕೊಳ್ಳುವಂತಿಲ್ಲ

 ಲಸಿಕೆ ಪಡೆದ ನಂತರ ಜ್ವರ ಏಕೆ ಬರುತ್ತದೆ?

ಲಸಿಕೆ ಪಡೆದ ನಂತರ ಜ್ವರ ಏಕೆ ಬರುತ್ತದೆ?

ಈ ಮುನ್ನ ಕೊರೊನಾ ಸೋಂಕಿಗೆ ತುತ್ತಾಗಿ ಗುಣಮುಖರಾದವರು ಲಸಿಕೆ ತೆಗೆದುಕೊಂಡರೆ ಅವರಲ್ಲಿ ರೋಗನಿರೋಧಕ ಶಕ್ತಿ ಇನ್ನಷ್ಟು ಹೆಚ್ಚುತ್ತದೆ. ಹೀಗಾಗಿ ಲಸಿಕೆ ಪರಿಣಾಮ ಇನ್ನಷ್ಟು ಹೆಚ್ಚಿರುತ್ತದೆ ಎಂದು ಈ ಸಂಶೋಧನೆ ತಿಳಿಸಿದೆ.

ಬಹುಪಾಲು ಕೊರೊನಾ ಲಸಿಕೆಗಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಳಕ್ಕೆ ಸ್ಪೈಕ್ ಪ್ರೋಟೀನ್ ಬಳಸಲಾಗುತ್ತದೆ. ಈ ಪ್ರೊಟೀನ್‌ಗೆ ದೇಹವು ಪ್ರತಿಕ್ರಿಯಿಸಿ ತಕ್ಷಣವೇ ಪ್ರತಿಕ್ರಿಯೆ ನೀಡುತ್ತದೆ. ಮೊದಲು ಉರಿಯೂತದಿಂದ ಆರಂಭಗೊಳ್ಳುತ್ತದೆ. ನಂತರ ಜ್ವರ ಹಾಗೂ ನೋವು ಉಂಟಾಗುತ್ತದೆ. ಈ ಮುನ್ನವೇ ದೇಹದಲ್ಲಿದ್ದ ರೋಗನಿರೋಧಕ ಶಕ್ತಿಯೊಂದಿಗೆ ಲಸಿಕೆಯೂ ಸೇರಿ ಪರಿಣಾಮ ಉಂಟಾಗುತ್ತದೆ ಎಂದು ವರದಿ ವಿವರಣೆ ನೀಡಿದೆ.

 ಪ್ರತಿಕಾಯಗಳ ಉತ್ಪತ್ತಿಯ ಪರಿಣಾಮವಿದು...

ಪ್ರತಿಕಾಯಗಳ ಉತ್ಪತ್ತಿಯ ಪರಿಣಾಮವಿದು...

ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ದೀರ್ಘಕಾಲ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗುವಂತೆ ಮಾಡುವುದು ಲಸಿಕೆ ಉದ್ದೇಶ. ಇದನ್ನೇ ಪ್ರತಿರಕ್ಷೆ ಎನ್ನುವುದು. ಲಸಿಕೆಯಲ್ಲಿನ ರೋಗನಿರೋಧಕ ಅಂಶವು ಈ ಮುನ್ನವೇ ದೇಹದಲ್ಲಿದ್ದ ರೋಗನಿರೋಧಕ ಶಕ್ತಿಯೊಂದಿಗೆ ಸೇರಿ "ಟಿ ಸೆಲ್" ಹಾಗೂ ಪ್ರತಿಕಾಯಗಳ ಉತ್ಪತ್ತಿಗೆ ಕಾರಣವಾಗುತ್ತವೆ. ಇದು ಯಾವುದೇ ಸೋಂಕಿನ ವಿರುದ್ಧ ಹೋರಾಡಲು ಸಹಕಾರಿಯಾಗುತ್ತದೆ. ದೇಹದೊಳಗೆ ಈ ಮುನ್ನ ಇದ್ದ ರೋಗನಿರೋಧಕ ಶಕ್ತಿ ಹಾಗೂ ಲಸಿಕೆ ನೀಡಿದ ನಂತರ ಉತ್ಪತ್ತಿಯಾಗುವ ರೋಗನಿರೋಧಕ ಶಕ್ತಿ ಒಟ್ಟಿಗೆ ಸೇರಿ ಜ್ವರ ಕಾಣಿಸಿಕೊಳ್ಳಬಹುದು. ಕೆಲವರಲ್ಲಿ ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿದ್ದರೂ ಪರಿಣಾಮ ಕಾಣುವುದಿಲ್ಲವಷ್ಟೆ. ಹಾಗೆಂದು ಅವರಲ್ಲಿ ರೋಗನಿರೋಧ ಶಕ್ತಿ ಉತ್ಪತ್ತಿಯಾಗಿಲ್ಲ ಎಂದರ್ಥವಲ್ಲ ಎಂದು ವರದಿ ವಿಶ್ಲೇಷಿಸಿದೆ.

 ವ್ಯಕ್ತಿಯ ದೈಹಿಕ ಸ್ಥಿತಿಗತಿ ಮೇಲೆ ಅವಲಂಬಿತ

ವ್ಯಕ್ತಿಯ ದೈಹಿಕ ಸ್ಥಿತಿಗತಿ ಮೇಲೆ ಅವಲಂಬಿತ

ವ್ಯಕ್ತಿಯ ದೈಹಿಕ ಸ್ಥಿತಿಗತಿ, ಆರೋಗ್ಯದ ಮೇಲೆ ಲಸಿಕೆ ಪರಿಣಾಮ ಅವಲಂಬಿತವಾಗಿರುತ್ತದೆ. ಆದರೆ ಪರಿಣಾಮ ಕಂಡುಬರಲಿ, ಇಲ್ಲದಿರಲಿ, ಲಸಿಕೆ ಪಡೆದವರಲ್ಲಿ ರೋಗನಿರೋಧಕ ಉತ್ಪತ್ತಿಯಾಗಿ ಸೋಂಕಿನ ವಿರುದ್ಧ ರಕ್ಷಣೆ ಸಿಗುತ್ತದೆ ಎಂಬುದು ಖಾತ್ರಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

English summary
After taking corona vaccine many people experienced side effects. But many people have not experienced any side effects at all, does that the vaccine is not working pdroperly? Here is answer
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X