ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಟ್ಟೆ ಸಸ್ಯಾಹಾರಿಯೇ? ಅಥವಾ ಮಾಂಸಾಹಾರಿಯೇ? ವೈಜ್ಞಾನಿಕ ಉತ್ತರ ಇಲ್ಲಿದೆ

|
Google Oneindia Kannada News

ಮೊಟ್ಟೆ ಸಸ್ಯಾಹಾರವೋ ಮಾಂಸಾಹಾರವೋ ಎಂಬ ಚರ್ಚೆ ಬಹಳ ದಿನಗಳಿಂದ ನಡೆಯುತ್ತಿದೆ. ಜನರು ಬೇರೆ ಬೇರೆ ವಾದಗಳಿಂದ ತಮ್ಮ ಮಾತನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಕೆಲವರು ಕೋಳಿ ಮೊಟ್ಟೆ ಇಡುತ್ತದೆ, ಹಾಗಾಗಿ ಇದು ಮಾಂಸಾಹಾರ ಎಂದು ಹೇಳುತ್ತಾರೆ. ಆದರೆ ಕೆಲವರು ಪ್ರಾಣಿಗಳು ಹಾಲು ಕೊಡುತ್ತವೆ ಎಂದ ಮಾತ್ರಕ್ಕೆ ಹಾಲನ್ನು ಮಾಂಸಾಹಾರ ಎನ್ನಲಾಗುವುದಿಲ್ಲ. ಹಾಗೇ ಕೋಳಿ ಮೊಟ್ಟೆ ಕೂಡ ಮಾಂಸಾಹಾರವಲ್ಲ ಎಂದು ವಾದ ಮಾಡುತ್ತಾರೆ. ಹಾಗಾದರೆ ಕೋಳಿ ಮೊಟ್ಟೆ ಮಾಂಸಾಹಾರಿಯೇ? ಅಂದರೆ ಹಾಲು ಸಸ್ಯಾಹಾರವಾದರೆ ಮೊಟ್ಟೆ ಏನು? ಈ ಚರ್ಚೆಯು ಕೊನೆಗೊಳ್ಳುವುದಿಲ್ಲ, ಆದರೆ ವಿಜ್ಞಾನಿಗಳು ಈ ಚರ್ಚೆಗೆ ಉತ್ತರವನ್ನು ಕಂಡುಕೊಂಡಿದ್ದಾರೆ.

ಮೊಟ್ಟೆಯಲ್ಲಿ ಇರುವಂತಹ ಪ್ರಮುಖ ವಿಟಮಿನ್ ಗಳು ಮತ್ತು ಖನಿಜಾಂಶಗಳು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿವೆ. ಹೀಗಾಗಿ ದಿನಕ್ಕೊಂದು ಮೊಟ್ಟೆಗಳನ್ನು ಸೇವಿಸಲು ವೈದ್ಯರು ಸಲಹೆಯನ್ನು ನೀಡುತ್ತಾರೆ. ಇದು ಮೂಳೆ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ. ಇದು ಅಂಗಾಂಶಗಳನ್ನು ಉತ್ತೇಜಿಸುವುದು ಮತ್ತು ಮೆದುಳಿನ ಕ್ರಿಯೆ ಸುಧಾರಣೆಯನ್ನು ಮಾಡುವುದು. ಸಣ್ಣ ಮಕ್ಕಳಿಗೆ ಮೊಟ್ಟೆ ನೀಡಿದರೆ ಅವರಿಗೆ ಮೆದುಳಿನ ಬೆಳವಣಿಗೆಗೆ ಬೇಕಾಗುವಂತಹ ಪ್ರಮುಖ ಪೋಷಕಾಂಶಗಳು ಇದರಿಂದ ಸಿಗುತ್ತವೆ. ಹೀಗೆ ಅನೇಕ ಪ್ರಯೋಜನಗಳನ್ನು ಹೊಂದಿರುವ ಮೊಟ್ಟೆಯನ್ನು ಸೇವಿಸಲು ಹಲವರು ಹಿಂದೇಟು ಹಾಕುತ್ತಾರೆ. ಯಾಕೆಂದರೆ ಇದು ಮಾಂಸಾಹಾರ ಎನ್ನುವುದು ಕೆಲವರ ನಂಬಿಕೆ. ಇದಕ್ಕೆ ವೈಜ್ಞಾನಿಕ ಉತ್ತರ ಇಲ್ಲಿದೆ.

ಚರ್ಚೆಗೆ ಅಂತ್ಯ ಹಾಡಿದ ವಿಜ್ಞಾನಿಗಳು

ಚರ್ಚೆಗೆ ಅಂತ್ಯ ಹಾಡಿದ ವಿಜ್ಞಾನಿಗಳು

ಮೊಟ್ಟೆ ವೆಜ್ ಅಥವಾ ನಾನ್ ವೆಜ್ ಅನ್ನುವ ಪ್ರತಿಯೊಂದು ಚರ್ಚೆಗೆ ಅಂತ್ಯ ಹಾಡಲಾಗಿದೆ. ಏಕೆಂದರೆ ವಿಜ್ಞಾನಿಗಳು ಅದಕ್ಕೆ ವೈಜ್ಞಾನಿಕ ಉತ್ತರವನ್ನು ಕಂಡುಕೊಂಡಿದ್ದಾರೆ. ಕೋಳಿಯಿಂದ ಹೊರಬರುವ ಮೊಟ್ಟೆಗಳನ್ನು ಮಾಂಸಾಹಾರಿ ಎಂದು ಭಾವಿಸಿ ಹೆಚ್ಚಿನ ಜನರು ಮೊಟ್ಟೆಗಳನ್ನು ತಿನ್ನುವುದಿಲ್ಲ. ಈ ಬಗ್ಗೆ ವಿಜ್ಞಾನಿಗಳು ವಿವರವಾದ ಮಾಹಿತಿ ನೀಡಿದ್ದಾರೆ. ಮೊಟ್ಟೆಯಲ್ಲಿ 3 ಪದರಗಳಿವೆ, ಅದರಲ್ಲಿ ಮೇಲಿನ ಪದರವು ಸಿಪ್ಪೆ, ಎರಡನೇ ಬಿಳಿ ಭಾಗವು ಅಲ್ಬುಮೆನ್ ಮತ್ತು ಮೂರನೆಯದು ಮೊಟ್ಟೆಯ ಹಳದಿ ಲೋಳೆ ಎಂದು ಅವರು ಹೇಳಿದರು. ಬಿಳಿ ಭಾಗವು ಪ್ರೋಟೀನ್ ಮಾತ್ರ ಎಂದು ಸಂಶೋಧನೆ ಕಂಡುಹಿಡಿದಿದೆ. ಇದು ಯಾವುದೇ ಪ್ರಾಣಿ ಪದಾರ್ಥವನ್ನು ಹೊಂದಿರುವುದಿಲ್ಲ. ಅಂದರೆ, ಮೊಟ್ಟೆಯ ಬಿಳಿ ಭಾಗವು ಸಂಪೂರ್ಣವಾಗಿ ಸಸ್ಯಾಹಾರಿಯಾಗಿದೆ.

ಫಲವತ್ತಾದ ಮೊಟ್ಟೆಗಳು ಮಾಂಸಹಾರಿ

ಫಲವತ್ತಾದ ಮೊಟ್ಟೆಗಳು ಮಾಂಸಹಾರಿ

ಪ್ರೋಟೀನ್ ಜೊತೆಗೆ, ಮೊಟ್ಟೆಯ ಹಳದಿ ಲೋಳೆಯು ಕೊಲೆಸ್ಟ್ರಾಲ್ ಮತ್ತು ಕೊಬ್ಬನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಮೊಟ್ಟೆಗಳು ಫಲವತ್ತಾಗದ ಮೊಟ್ಟೆಗಳು ಅಂದರೆ ಕೋಳಿಗೆ 6 ತಿಂಗಳ ವಯಸ್ಸಾದಾಗ, ಅದು ಮೊಟ್ಟೆಗಳನ್ನು ಇಡಲು ಪ್ರಾರಂಭಿಸುತ್ತದೆ. ಫಲವತ್ತಾಗದ ಮೊಟ್ಟೆಯು ಎಂದಿಗೂ ಮರಿಗಳನ್ನು ಉತ್ಪಾದಿಸುವುದಿಲ್ಲ. ಅಂದರೆ ಮೊಟ್ಟೆಯಲ್ಲಿ ಮರಿಯ ಭಾಗವಿಲ್ಲ ಅಂದರೆ ಅಂಹತ ಮೊಟ್ಟೆ ಮಾಂಸಾಹಾರ ಅಲ್ಲ ಸಸ್ಯಾಹಾರಿಯಾಗಿದೆ.

ಸುಲಭ ಉಪಾಯ ಇಲ್ಲಿದೆ

ಸುಲಭ ಉಪಾಯ ಇಲ್ಲಿದೆ

ಈಗ ಮಾರುಕಟ್ಟೆಯಲ್ಲಿ ಸಿಗುವ ಮೊಟ್ಟೆಗಳು ಸಸ್ಯಾಹಾರಿಗಳಾಗಿದ್ದರೆ ಮಾಂಸಾಹಾರಿ ಮೊಟ್ಟೆಗಳನ್ನು ಗುರುತಿಸುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಕೋಳಿಯೊಂದಿಗೆ ಸಂಪರ್ಕಕ್ಕೆ ಬರುವ ಮೊಟ್ಟೆಗಳನ್ನು ಫಲವತ್ತಾದ ಮೊಟ್ಟೆಗಳು ಎಂದು ಕರೆಯಲಾಗುತ್ತದೆ. ಈ ಮೊಟ್ಟೆಗಳು ಗ್ಯಾಮೆಟ್ ಕೋಶಗಳನ್ನು ಹೊಂದಿರುತ್ತವೆ, ಇದು ಅವುಗಳನ್ನು ಮಾಂಸಾಹಾರಿ ಮಾಡುತ್ತದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ಮೊಟ್ಟೆಗಳನ್ನು ಹೇಗೆ ಗುರುತಿಸುವುದು ತುಂಬಾ ಸುಲಭ ಎಂದು ಹೇಳಲಾಗುತ್ತದೆ. ಮೊಟ್ಟೆಗಳ ಅಡಿಯಲ್ಲಿ ಬಲ್ಬ್ ಅನ್ನು ಬೆಳಗಿಸಿ. ಬೆಳಕು ಹಾದು ಹೋಗುವ ಮೊಟ್ಟೆಗಳು ಅವು ಬೆಣೆ ಮೊಟ್ಟೆಗಳು ಅಂದರೆ ಸಸ್ಯಹಾರಿ ಮೊಟ್ಟೆಗಳು ಮತ್ತು ಬೆಳಕು ಸಿಗದವುಗಳು, ಅಂದರೆ ಅವು ಗ್ಯಾಮೆಟ್ ಮೊಟ್ಟೆಗಳು ಅಂದರೆ ಮಾಂಸಾಹಾರಿಗಳು ಎಂದು ಕಂಡುಕೊಳ್ಳಬಹುದು. ಆದರೆ ಮಾರುಕಟ್ಟೆಯಲ್ಲಿ ಸಿಗುವ ಹೆಚ್ಚು ಮೊಟ್ಟೆಗಳು ಫಲವತ್ತಾಗದ ಮೊಟ್ಟೆಗಳು ಅಂದರೆ ಸಸ್ಯಹಾರಿ ಮೊಟ್ಟೆಗಳು ಎಂದು ವಿಜ್ಞಾನಿಗಳು ಹೇಳುತ್ತಾರೆ.

ಕೂದಲು ಮತ್ತು ಚರ್ಮದ ಆರೋಗ್ಯ ಒಳ್ಳೆಯದು

ಕೂದಲು ಮತ್ತು ಚರ್ಮದ ಆರೋಗ್ಯ ಒಳ್ಳೆಯದು

ಮೊಟ್ಟೆ ಅತ್ಯಂತ ಆರೋಗ್ಯಕರ ಮತ್ತು ಪೌಷ್ಟಿಕ ಆಹಾರಗಳಲ್ಲಿ ಒಂದಾಗಿದೆ. ಸುಮಾರು 90ಪ್ರತಿಶತದಷ್ಟು ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಒಂದು ಮೊಟ್ಟೆಯ ಸೇವನೆಯಿಂದ ದೇಹಕ್ಕೆ ಸಿಗುತ್ತದೆ. ಮೊಟ್ಟೆಯ ಬಿಳಿಭಾಗ ಇತರ ಆಹಾರಕ್ಕೆ ಹೋಲಿಸಿದರೆ ಅರ್ಧದಷ್ಟು ಪ್ರೋಟೀನ್‌ ಹೊಂದಿರುತ್ತೆ. ಹಾಗಾಗಿ ಆರೋಗ್ಯಕರ ದಿನಚರಿಗೆ ಮೊಟ್ಟೆಯನ್ನು ನಮ್ಮ ಡಯಟ್‌ನಲ್ಲಿ ಸೇರಿಸಿದರೆ ಒಳ್ಳೆಯದು ಎನ್ನುತ್ತಾರೆ ವೈದ್ಯರು. ಮೊಟ್ಟೆ ಸಾಮಾನ್ಯವಾಗಿ ದೇಹದ ಶಕ್ತಿಯ ಮಟ್ಟವನ್ನು ಹೆಚ್ಚಿಸುವ ಪ್ರೋಟೀನ್‌ ಮತ್ತು ಖನಿಜಾಂಶಗಳನ್ನು ಒದಗಿಸುತ್ತದೆ. ಮೊಟ್ಟೆ ಶಾಖವನ್ನು ಉತ್ಪಾದಿಸುವ ಗುಣವನ್ನು ಹೊಂದಿರುತ್ತದೆ.

ದೇಹದಲ್ಲಿ ನಿಶ್ಯಕ್ತಿ ಅಥವಾ ದೇಹದ ತೂಕ ಕಡಿಮೆ ಇದ್ದರೆ, ಕ್ಯಾಲ್ಸಿಯಂ ಕೊರತೆ ಇದ್ದರೆ ದಿನಕ್ಕೊಂದಾದರೂ ಮೊಟ್ಟೆ ತಿನ್ನಿ ಎಂದು ಹೇಳುತ್ತಾರೆ. ಯಾಕೆಂದರೆ ಮೊಟ್ಟೆಯಲ್ಲಿ ಮೂಳೆಗಳನ್ನು ಬಲಪಡಿಸಲು ಅಗತ್ಯವಾದ ವಿಟಮಿನ್‌ ಎ ಮತ್ತು ವಿಟಮಿನ್‌ ಡಿ ಸಮೃದ್ಧವಾಗಿರುತ್ತದೆ. ಇದರ ಜೊತೆಗೆ ಫಾಸ್ಪರಸ್‌, ಸತು, ಅಯೋಡಿನ್‌, ಅಗತ್ಯ ಕೊಬ್ಬಿನಾಮ್ಲಗಳು, ಕಬ್ಬಿಣಾಂಶವಿರುತ್ತದೆ. ಇದು ನಮ್ಮ ದೇಹಕ್ಕೆ ಬೇಕಾಗುವ ಅಗತ್ಯ ಶಕ್ತಿಯನ್ನು ಹೆಚ್ಚಿಸುತ್ತದೆ. ಮೊಟ್ಟೆಯ ಸೇವನೆ ಕೂದಲು ಮತ್ತು ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಯಾಕೆಂದರೆ ಇದಲ್ಲಿರುವ ಸಲ್ಫರ್‌, ಅಮೈನೋ ಆಮ್ಲ, ವಿಟಮಿನ್‌ ಮತ್ತು ಖನಿಜಾಂಶಗಳು ಆರೋಗ್ಯಕರ ಬೆಳವಣಿಗೆಗೆ ಸಹಕಾರಿ.

Recommended Video

ಮೊಣಕಾಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಅಖ್ತರ್ ! | Oneindia Kannada

English summary
Egg Veg or Non Veg? Scientists have found an answer to this debate. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X