ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವ ವ್ಯವಸ್ಥೆ ಅಪೇಕ್ಷೆಯಂತೆ ಕಾರ್ಯನಿರ್ವಹಿಸುತ್ತಿದೆಯೇ?

By ಶ್ರೀನಿವಾಸ್ ಅಲವಿಲ್ಲಿ
|
Google Oneindia Kannada News

ಪ್ರಜಾಪ್ರಭುತ್ವವೆಂದರೆ ನಾಗರಿಕರ ಕೈಯಲ್ಲಿರುವ ಅಧಿಕಾರ. ಎಲ್ಲರ ಬಳಿಯೂ ರಾಜಕೀಯ ಶಕ್ತಿಯಿರದ ಕಾರಣ, ನಾವು ಜನಪ್ರತಿನಿಧಿತ್ವ ವ್ಯವಸ್ಥೆಯನ್ನು ಅವಲಂಬಿಸಿದ್ದೇವೆ. ನಾವು ನಮಗೋಸ್ಕರವೇ ಸಿದ್ಧಪಡಿಸಿರುವ ಸಂವಿಧಾನವು, ರಾಜಕೀಯ ಅಧಿಕಾರವನ್ನು, ಚುನಾಯಿತ ವ್ಯಕ್ತಿಗಳಿಗೆ ನಿರ್ಧಿಷ್ಟ ಸಮಯಕ್ಕನುಸಾರವಾಗಿ ನೀಡುತ್ತದೆ.

ಅವರು ಹಿತವೆನಿಸದಿದ್ದರೆ, ರಾಜಕೀಯ ಆಡಳಿತದ ಅಧಿಕಾರದ ಗುದ್ದುಗೆಯನ್ನು ಬೇರೆಯವರಿಗೆ ವರ್ಗಾಯಿಸುವ ಶಕ್ತಿ ನಾಗರಿಕರ ಕೈಯಲ್ಲಿದೆ. ನಮ್ಮ ಪ್ರಜಾಪ್ರಭುತ್ವ ಎಷ್ಟು ಪರಿಣಾಮಕಾರಿಯಾಗಿದೆ? ಎಂದು ಪರಾಮರ್ಶಿಸಲು ನಾವು ವಿವಿಧ ತರಹದ ಮೂಲಭೂತ ಅಂಶಗಳನ್ನು ವಿಶ್ಲೇಷಿಸಿ ನೋಡಬೇಕಾಗಿದೆ.

 ಭಾರತ, ಅಮೆರಿಕದಂಥ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಿದೆ; ಬ್ಲಿಂಕನ್ ಭಾರತ, ಅಮೆರಿಕದಂಥ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ನಿಲ್ಲಬೇಕಿದೆ; ಬ್ಲಿಂಕನ್

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳು: ತಾಂತ್ರಿಕ ದೃಷ್ಟಿಕೋನದ ಪ್ರಕಾರ ವಿಶ್ಲೇಷಿಸಿದಾಗ ನಮ್ಮಲ್ಲಿ ಚುನಾವಣೆಗಳು ಮುಕ್ತವಾಗಿ ನಡೆಯುತ್ತವೆ. ನಮ್ಮ ನೆರೆಹೊರೆಯ ದೇಶಗಳಿಗೆ ಹೋಲಿಸಿದರೆ, ನಮ್ಮ ಚುನಾವಣಾ ವ್ಯವಸ್ಥೆ ಉತ್ತಮವಾಗಿದೆ.

ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ; ದೇಶವ್ಯಾಪಿ ಚಳವಳಿಗೆ ತಯಾರಿ ಕೃಷಿ ಉಳಿಸಿ- ಪ್ರಜಾಪ್ರಭುತ್ವ ಉಳಿಸಿ; ದೇಶವ್ಯಾಪಿ ಚಳವಳಿಗೆ ತಯಾರಿ

voting

ಆದರೆ, ಅವು ಯಾವಾಗಲೂ ಮುಕ್ತ ಅಥವಾ ನ್ಯಾಯಯುತವಾಗಿರುವುದಿಲ್ಲ. ಚುನಾವಣೆಗಳು ತೀವ್ರ ಪೈಪೋಟಿಯಿಂದ ಕೂಡಿದ್ದು, ಕೇವಲ ಮತ ಗಳಿಸಲು ಮತ್ತು ಹೇಗಾದರೂ ಮಾಡಿ ಅಧಿಕಾರ ಪಡೆಯಲು ಸಮಾಜದಲ್ಲಿ ಒಡಕು ಮೂಡಿಸಲು ರಾಜಕೀಯ ಪಕ್ಷಗಳು ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಈ ವಿಷಯದಲ್ಲಿ 4/10 ನನ್ನ ರೇಟಿಂಗ್ ಆಗಿರುತ್ತದೆ.

ಆಕ್ಸಿಜನ್ ಕೊಡಿ ಅಂತಾ ಕೋರ್ಟ್ ಹೇಳಬೇಕಾಯ್ತಲ್ಲಾ; ಇದು ಪ್ರಜಾಪ್ರಭುತ್ವ ರಾಷ್ಟ್ರವೇ? ಆಕ್ಸಿಜನ್ ಕೊಡಿ ಅಂತಾ ಕೋರ್ಟ್ ಹೇಳಬೇಕಾಯ್ತಲ್ಲಾ; ಇದು ಪ್ರಜಾಪ್ರಭುತ್ವ ರಾಷ್ಟ್ರವೇ?

ಶಾಂತಿಯುತ ಅಧಿಕಾರ ವರ್ಗಾವಣೆ: ಭಾರತದಲ್ಲಿ ನಡೆಯುವ ಅಧಿಕಾರ ವರ್ಗಾವಣೆಯ ಬಗ್ಗೆ ನಾವು ಹೆಮ್ಮೆಪಡಬೇಕು. ಚರ್ಚಿಲ್ ಸೇರಿದಂತೆ ಅನೇಕ ಪಾಶ್ಚಿಮಾತ್ಯ ರಾಜಕೀಯ ಪಂಡಿತರು, ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ಸ್ವಯಂ ಆಡಳಿತದ ಸಾಮರ್ಥ್ಯವನ್ನು ಅಲ್ಲಗಳೆದಿದ್ದರು. ಈ ವಿಷಯದಲ್ಲಿ ನಾವು 10/10 ಅಂಕಗಳನ್ನು ಪಡೆಯಬೇಕು.

ಶಾಸಕಾಂಗ ಮತ್ತು ಕಾರ್ಯಾಂಗದ ಮಧ್ಯೆ ಅಧಿಕಾರಗಳ ಪ್ರತ್ಯೇಕತೆ: ನಮ್ಮ ಕಾರ್ಯಾಂಗ ಮತ್ತು ಶಾಸಕಾಂಗದ ನಡುವೆ ಪ್ರತ್ಯೇಕತೆಯ ರೇಖೆ ಕೆಲವೊಮ್ಮೆ ಮಸುಕಾಗಿರುತ್ತವೆ. ಇದಕ್ಕಾಗಿ ನಾನು 7/10 ಅಂಕಗಳನ್ನು ನೀಡುತ್ತೇನೆ.

ನಿಜ ಅಂಶವೆಂದರೆ, ಇಂದಿನ ಶಾಸಕಾಂಗವು ಇಪ್ಪತ್ತು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಅವಲೋಕಿಸಿದಾಗ, ಇಂದು ಸಾಕಷ್ಟು ದುರ್ಬಲವಾಗಿದೆ. ನಮ್ಮ ಶಾಸಕರು ಮತ್ತು ಸಂಸದರು, ಸದನವನ್ನು ಅಡ್ಡಿಪಡಿಸುವುದರ ಹೊರತು ಮತ್ತು ಸ್ಥಳೀಯ ಮಟ್ಟದ ನಾಗರಿಕರ ಕುಂದುಕೊರತೆಗಳನ್ನು ಆಲಿಸುವುದರ ಹೊರತಾಗಿ, ಸುವ್ಯವಸ್ಥಿತ ಆಡಳಿತದ ನೀತಿಗಳ ರಚನೆಯ ಪ್ರಕ್ರಿಯೆಯಲ್ಲಿ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿಲ್ಲ.

ನಮ್ಮ ದೇಶದ ನ್ಯಾಯಾಂಗವು ಬಹುಮಟ್ಟಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಂವಿಧಾನವನ್ನು ತಕ್ಕಮಟ್ಟಿಗೆ ರಕ್ಷಿಸುವ ಕಾರ್ಯನಿರ್ವಹಿಸುತ್ತಿದೆ. ಆದರೆ ಸಂಪನ್ಮೂಲಗಳ ಕೊರತೆಯು ನ್ಯಾಯಾಂಗವನ್ನು ದುರ್ಬಲಗೊಳಿಸಿದೆ.

elections

ಹೊಣೆಗಾರಿಕೆ: ಭಾರತದಲ್ಲಿ ಹೊಣೆಗಾರಿಕೆ ಜವಾಬ್ದಾರಿಯುತವಾಗಿ ಹೊರುವವರು ಯಾರು?. ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುವ ಪ್ರಬುದ್ಧ ಪ್ರಜಾಪ್ರಭುತ್ವವನ್ನು ಅಳೆಯಲು ಚುನಾವಣೆಗಳು ಮುಖ್ಯ ಮಾಪಕವಾಗಿದೆ.

ಆದರೆ ನಮ್ಮ ಚುನಾವಣೆಗಳು ಸರ್ಕಾರದ ಕಾರ್ಯಕ್ಷಮತೆಯನ್ನು ಸೂಚಿಸುವುದರ ಬದಲಾಗಿ ಯಾವ ಪಕ್ಷ ಹೆಚ್ಚು ಪರಿಣಾಮಕಾರಿಯಾಗಿ, ಉತ್ತಮ ವಾಕ್ಚಾತುರ್ಯ, ಆಮಿಷಗಳು ಅಥವಾ ಭಯ ಮೂಡಿಸುವುದರ ಮೂಲಕ ಮತದಾರರನ್ನು ಮೆಚ್ಚಿಸುವ ಕ್ಷಮತೆಯ ಮೇಲೆ ಅವಲಂಬಿತ ಮಾಪಕವಾಗಿ, ದುರದೃಷ್ಟವಶಾತ್ ಬದಲಾಗಿವೆ.

ಈಗ ನಾವು ಉತ್ತರದಾಯಿತ್ವವನ್ನು ಕೇಳುವ ಇತರ ಮಾರ್ಗಗಳನ್ನು ಹುಡುಕಬೇಕಾಗಿದೆ. ಚುನಾವಣೆಗಳು ಇನ್ನೂ ಸಹ ಜನರ ಬಯಕೆಯ ಸೂಚಕವಾಗಿದ್ದರೂ, ಇತ್ತೀಚಿಗೆ ಅವುಗಳು ಸರ್ಕಾರದ ಕಾರ್ಯಕ್ಷಮತೆಯ ಬದಲಿಗೆ ನಿರ್ದಿಷ್ಟ ವ್ಯಕ್ತಿತ್ವ ಮತ್ತು ನಿರ್ದಿಷ್ಟ ಪಕ್ಷಗಳ ಮೇಲೆ ಅವಲಂಬಿಸಿವೆ. ಇದಕ್ಕೆ 5/10 ನನ್ನ ರೇಟಿಂಗ್ ಆಗಿದೆ.

ಜನರ ಸಹಭಾಗಿತ್ವ: ಈ ವಿಷಯದಲ್ಲಿ ನಾವು 7/10 ಅಂಕಗಳನ್ನು ಗಳಿಸಿದರೂ, ನಾವು ಸಾಗಬೇಕಿರುವ ಮಾರ್ಗ ಇನ್ನೂ ಬಹಳವಿದೆ. ಅಧಿಕಾರದಲ್ಲಿರುವವರಿಗೆ ಸಾಮಾನ್ಯ ನಾಗರಿಕರು ಕಾರ್ಯನಿರ್ವಹಣೆಯ ಪ್ರಮುಖ ವಿಷಯಗಳಲ್ಲಿ ಭಾಗಿಯಾಗುವುದು ಇಷ್ಟವಾಗುವುದಿಲ್ಲ.

ಅವರ ಪ್ರಕಾರ ನಾವು (ಸಾಮಾನ್ಯ ನಾಗರಿಕರು) ಮತ ಚಲಾಯಿಸಿ ಎಲ್ಲಾ ವಿಷಯಗಳನ್ನು ಮರೆತುಬಿಡಬೇಕು. ನಾಗರಿಕರ ಭಾಗವಹಿಸುವಿಕೆಯಿಂದ ಸ್ಥಳೀಯ ಆಡಳಿತವನ್ನು ಸುಧಾರಿಸಬಹುದಾದ ನಗರಗಳಲ್ಲಿ ಇದು ವಿಶೇಷವಾಗಿ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನಮ್ಮ ಸ್ಥಳೀಯ ಆಡಳಿತ ಸಂಸ್ಥೆಗಳಾದ ವಾರ್ಡ್ ಸಮಿತಿಗಳು, ಪ್ರದೇಶ ಸಭೆಗಳು ಮತ್ತು ಗ್ರಾಮ ಸಭೆಗಳು ಕುರಿತು ಸಂವಿಧಾನ ತಿದ್ದುಪಡಿಗಳನ್ನು ಮಾಡಿದ 30 ವರ್ಷಗಳ ಸುಧೀರ್ಘ ಅವಧಿಯ ನಂತರವೂ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ.

ಮಾಧ್ಯಮ ವೃಂದ: ವಿವಿಧ ವಿಚಾರಧಾರೆಗಳ ದೃಷ್ಟಿಕೋನಗಳು ಮತ್ತು ಆರೋಗ್ಯಕರ ಚರ್ಚೆಯನ್ನು ನಡೆಸುವ ನಮ್ಮ ಮಾಧ್ಯಮ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ, ಇದೇ ಮಾಧ್ಯಮದವರು ಎಲ್ಲೋ ರಾಜಕೀಯ ಹಿಡಿತದಲ್ಲಿದ್ದು ಕೆಲಸ ಮಾಡುತ್ತಿವೆ.

ಮಾಧ್ಯಮದ ಮುಖ್ಯ ಕರ್ತವ್ಯ ಆಡಳಿತ ನಡೆಸುತ್ತಿರುವ ಪಕ್ಷವನ್ನು ತರಾಟೆಗೆ ತೆಗೆದುಕೊಂಡು, ಅವರಿಂದ ಜವಾಬ್ದಾರಿಯುತ ಉತ್ತರದಾಯಿತ್ವವನ್ನು ಕೇಳುವುದು. ಆದರೆ ಈಗೀಗ ಎಲ್ಲ ಮಾಧ್ಯಮಗಳು ಸರ್ಕಾರದ ನಿಯಂತ್ರಣದಲ್ಲಿರುವ ದೂರದರ್ಶನವಾಗಿ ಬದಲಾಗಿವೆ. ನಮ್ಮಲಿರುವ ಮಾಧ್ಯಮಗಳ ಸಂಖ್ಯೆಗಳ ಗರಿಷ್ಠತೆಗೆ ಮೌಲ್ಯಂಕನಗಳು 10/10 ದೊರೆತರೆ, ಅವುಗಳ ಗುಣಮಟ್ಟಕ್ಕೆ ಕೇವಲ 5/10 ಸಿಗುತ್ತದೆ.

ಪ್ರಾತಿನಿಧ್ಯ: ನಾವು ಸಾಂಕೇತಿಕ ಪ್ರಾತಿನಿಧ್ಯವನ್ನು ಹೊಂದಿದ್ದೇವೆ, ಆದರೆ ಸಮಾಜದ ಎಲ್ಲಾ ವರ್ಗಗಳು ನಿಜವಾದ ಪ್ರಾತಿನಿಧ್ಯವನ್ನು ಇನ್ನೂ ಹೊಂದಿಲ್ಲ. ನಮ್ಮ ಜನಸಂಖ್ಯೆಯಲ್ಲಿ ಶೇಕಡಾ 50 ರಷ್ಟು ಮಹಿಳೆಯರಿದ್ದಾರೆ. ಆದರೆ, ಅವರ ಧ್ವನಿಯು, ನೀತಿ ರಚನೆಯ ಸಮಯದಲ್ಲಿ ಕೇಳಿಸುವುದೇ ಇಲ್ಲ. ರಾಜಕೀಯ ಪಕ್ಷಗಳು ಮಹಿಳೆಯರನ್ನು ಕೇವಲ ಮತದಾರರಂತೆ ನೋಡುತ್ತವೆಯೇ ಹೊರತು ತಮ್ಮ ಪಕ್ಷಗಳ ಸದಸ್ಯರಂತೆ ಮತ್ತು ನಾಯಕರಂತೆ ಕಾಣುವುದಿಲ್ಲ.

ಇದು ಬದಲಾಗುವವರೆಗೆ, ನ್ಯಾಯಯುತ ಪ್ರಾತಿನಿಧ್ಯ ಇರಲು ಸಾಧ್ಯವಿಲ್ಲ. ಅನೇಕ ದೇಶಗಳು ರಾಜಕೀಯ ಪಕ್ಷಗಳಲ್ಲಿ/ ಕಚೇರಿಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ನೀಡುವ ಕಾನೂನು ರೂಪಿಸಿವೆ. ಆದರೆ, ನಮ್ಮ ಅಸ್ತಿತ್ವದಲ್ಲಿರುವ ರಾಜಕೀಯ ಪಕ್ಷಗಳಲ್ಲಿನ ಆಳವಾದ ಪುರುಷ ಪ್ರಧಾನ ನೀತಿಯು ಅಂತಹ ಸುಧಾರಣೆಯನ್ನು ಬಲಿಷ್ಠವಾಗಿ ನಿರ್ಬಂಧಿಸಿದೆ. ಇದಕ್ಕೆ 3/10 ನನ್ನ ರೇಟಿಂಗ್ ಆಗಿದೆ.

ಪ್ರಜಾಪ್ರಭುತ್ವ ಮತ್ತು ನಮ್ಮ ಸಂಬಂಧ ಅನ್ಯೋನ್ಯವಾಗಿದ್ದರೂ, ನೈಜ ಬೆಳವಣಿಗೆಗೆ ಇನ್ನೂ ಹೆಚ್ಚು ಸ್ಥಳಾವಕಾಶವಿದೆ. ಈ ವ್ಯವಸ್ಥೆಯಲ್ಲಿ ಧೃಡತೆಗೆ ಮಾನ್ಯತೆಯಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಶಕ್ತಿ, ಅಧಿಕಾರ ಎಲ್ಲವೂ ನಾಗರಿಕರ ಬಳಿಯಿದೆ.

ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದಿಂದ ಕೂಡಿದ ಮಾನವ ಅಭಿವೃದ್ಧಿಯ ಆಧಾರದ ಮೇಲೆ ಇನ್ನೂ ಹೆಚ್ಚಿನ ನಾಗರಿಕರು ಮತ ಚಲಾಯಿಸಿದಾಗ ಮಾತ್ರ ರಾಜಕೀಯ ಪಕ್ಷಗಳು ಎಚ್ಚರಗೊಳ್ಳುತ್ತವೆ ಮತ್ತು ತಮ್ಮ ಕಾರ್ಯನಿರ್ವಹಿಸುವ ಬಗೆಯನ್ನು ಸರಿಪಡಿಸುತ್ತವೆ. ಅಂದಾಗ ಮಾತ್ರ ಪ್ರಜಾಪ್ರಭುತ್ವ ನಿಜವಾದ ಅರ್ಥದಲ್ಲಿ ಪ್ರಜೆಗಳೇ ವ್ಯವಸ್ಥೆಯಲ್ಲಿ ನಿಜವಾದ ಪ್ರಭುಗಳು ಎಂಬ ಅರ್ಥವನ್ನು ಸೂಚಿಸುತ್ತದೆ, ನೀವೂ ಈ ವಿಚಾರ ಧಾರೆಗೆ ಸಹಮತಿಸುತ್ತಿರಲ್ಲವೇ.

ಬರಹ; ಶ್ರೀನಿವಾಸ್ ಅಲವಿಲ್ಲಿ, ರಾಷ್ಟ್ರೀಯ ಮುಖ್ಯಸ್ಥರು, ನಾಗರಿಕರ ಸಹಭಾಗಿತ್ವ ವಿಭಾಗ, ಜನಾಗ್ರಹ ಸೆಂಟರ್ ಫಾರ್ ಸಿಟಿ ಝನ್ ಶಿಪ್ ಆಂಡ್ ಡೆಮಾಕ್ರಸಿ

English summary
Democracy provides an environment that respects human rights and fundamental freedoms. In this time democracy working as people expectations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X