ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇರ್ಫಾನ್ ಖಾನ್ ಸಾವಿಗೆ ಕಾರಣವಾದ ಸೋಂಕು ಮತ್ತು ಅಪರೂಪದ ಕ್ಯಾನ್ಸರ್ ಬಗ್ಗೆ ನಿಮಗೆಷ್ಟು ಗೊತ್ತು?

|
Google Oneindia Kannada News

ಬಾಲಿವುಡ್ ನ ಪ್ರತಿಭಾವಂತ ನಟ ಇರ್ಫಾನ್ ಖಾನ್ ನಿನ್ನೆ (ಏಪ್ರಿಲ್ 29) ವಿಧಿವಶರಾದರು. ನ್ಯೂರೋಎಂಡೋಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದ ಇರ್ಫಾನ್ ಖಾನ್, ಕೊಲೊನ್ ಇನ್ಫೆಕ್ಷನ್ ನಿಂದ ಮೃತಪಟ್ಟರು.

'ಹಾಸಿಲ್', 'ದಿ ನೇಮ್ ಸೇಕ್', 'ಲೈಫ್ ಇನ್ ಎ ಮೆಟ್ರೋ', 'ಪಾನ್ ಸಿಂಗ್ ತೋಮರ್', 'ದಿ ಲಂಚ್ ಬಾಕ್ಸ್' ಸೇರಿದಂತೆ ಹಲವು ಸಿನಿಮಾಗಳಲ್ಲಿ ಅದ್ಭುತ ಅಭಿನಯ ನೀಡಿದ್ದ ಇರ್ಫಾನ್ ಖಾನ್ ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಒಂದು ವರ್ಷ ಯು.ಕೆ ನಲ್ಲೂ ಚಿಕಿತ್ಸೆ ಪಡೆದಿದ್ದರು. ಆದರೆ, ದುರಾದೃಷ್ಟವಶಾತ್ ಇರ್ಫಾನ್ ಖಾನ್ ಸಾವನ್ನು ಜಯಿಸಲೇ ಇಲ್ಲ.

ಇರ್ಫಾನ್ ಖಾನ್ ಅವರನ್ನು ಇಂಚಿಂಚೂ ನರಳುವ ಹಾಗೆ ಮಾಡಿದ್ದ ನ್ಯೂರೋಎಂಡೋಕ್ರೈನ್ ಟ್ಯೂಮರ್ ಮತ್ತು ಕೊಲೊನ್ ಇನ್ಫೆಕ್ಷನ್ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ. ಓದಿರಿ...

ನ್ಯೂರೋಎಂಡೋಕ್ರೈನ್ ಟ್ಯೂಮರ್ ಎಂದರೇನು?

ನ್ಯೂರೋಎಂಡೋಕ್ರೈನ್ ಟ್ಯೂಮರ್ ಎಂದರೇನು?

ನ್ಯೂರೋಎಂಡೋಕ್ರೈನ್ ಟ್ಯೂಮರ್ ಎನ್ನುವುದು ಅಪರೂಪದ ಕ್ಯಾನ್ಸರ್ ಮಾದರಿಯಾಗಿದ್ದು, ಅದು ದೇಹದ ವಿಶೇಷ ಕೋಶಗಳು ಅಂದ್ರೆ ನ್ಯೂರಲ್ ಮತ್ತು ಹಾರ್ಮೋನ್ ಉತ್ಪಾದಿಸುವ ಕೋಶಗಳ ಮೇಲೆ ಪ್ರಭಾವ ಬೀರುತ್ತದೆ. ಶ್ವಾಸಕೋಶ, ಪಿತ್ತಕೋಶ, ಕರುಳು ಮತ್ತು ಗುದನಾಳದಲ್ಲಿ ನ್ಯೂರೋಎಂಡೋಕ್ರೈನ್ ಟ್ಯೂಮರ್ ಗಳು ಪತ್ತೆಯಾಗುತ್ತವೆ.

ನ್ಯೂರೋಎಂಡೋಕ್ರೈನ್ ಟ್ಯೂಮರ್ ನಿಂದ ಉಂಟಾಗುವ ಸಮಸ್ಯೆ

ನ್ಯೂರೋಎಂಡೋಕ್ರೈನ್ ಟ್ಯೂಮರ್ ನಿಂದ ಉಂಟಾಗುವ ಸಮಸ್ಯೆ

* ನ್ಯೂರೋಎಂಡೋಕ್ರೈನ್ ಟ್ಯೂಮರ್ ಗಳು ಎಲ್ಲಿವೆ ಮತ್ತು ಅವು ಹೇಗೆ ಕಾಣುತ್ತವೆ ಎಂಬುದರ ಆಧಾರದ ಮೇಲೆ ಅವುಗಳನ್ನು ವರ್ಗೀಕರಿಸಬಹುದಾಗಿದೆ. ಫಂಕ್ಷನಲ್ ಎಂಡೋಕ್ರೈನ್ ಟ್ಯೂಮರ್ ಗಳಿಂದ ದೇಹದ ಹಾರ್ಮೋನ್ ಗಳಲ್ಲಿ ಅಡಚಣೆ ಉಂಟಾಗುತ್ತದೆ. ನಾನ್-ಫಂಕ್ಷನಲ್ ನ್ಯೂರೋಎಂಡೋಕ್ರೈನ್ ಟ್ಯೂಮರ್ ಗಳಿಂದ ದೇಹದಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ. ಇದೇ ಕಾರಣದಿಂದಲೇ ಟ್ಯೂಮರ್ ಇದ್ದರೂ ಹಲವು ಪ್ರಕರಣಗಳಲ್ಲಿ ತಡವಾಗಿ ಬೆಳಕಿಗೆ ಬರುತ್ತದೆ.


* 60 ವರ್ಷ ಮೇಲ್ಪಟ್ಟವರಿಗೆ ನ್ಯೂರೋಎಂಡೋಕ್ರೈನ್ ಟ್ಯೂಮರ್ ಗಳು ಸಾಮಾನ್ಯ. ನ್ಯೂರೋಎಂಡೋಕ್ರೈನ್ ಟ್ಯೂಮರ್ ಗಳಿದ್ದವರಲ್ಲಿ ಗ್ಯಾಸ್ಟ್ರೋ ಇನ್ಟೆಸ್ಟೈನಲ್ ಟ್ರ್ಯಾಕ್ಟ್ ನಲ್ಲಿ ಸೋಂಕು ಸಂಭವಿಸುವ ಸಾಧ್ಯತೆ ಹೆಚ್ಚು.

ಲಕ್ಷಣಗಳು

ಲಕ್ಷಣಗಳು

* ಆಲಸ್ಯ, ತೂಕ ಇಳಿಕೆ, ಟ್ಯೂಮರ್ ಇರುವ ಕಡೆ ನೋವು, ಚರ್ಮದ ಒಳಗೆ ಗಂಟಿನ ಅನುಭವ, ವಾಂತಿ

* ಹೊಟ್ಟೆ ನೋವು, ಉಸಿರಾಟದಲ್ಲಿ ಸಮಸ್ಯೆ

* ಹೈ ಬ್ಲಡ್ ಶುಗರ್, ಅಲರ್ಜಿ, ಡಯೇರಿಯಾ


ಬಯಾಪ್ಸಿ, ರಕ್ತ ಮತ್ತು ಮೂತ್ರ ಪರೀಕ್ಷೆ ಮೂಲಕ ನ್ಯೂರೋಎಂಡೋಕ್ರೈನ್ ಟ್ಯೂಮರ್ ಗಳನ್ನು ಪತ್ತೆಹಚ್ಚಬಹುದು.


ಶಸ್ತ್ರಚಿಕಿತ್ಸೆ ಮೂಲಕ ಟ್ಯೂಮರ್ ಗಳನ್ನು ಹೊರ ತೆಗೆಯಬಹುದು. ಆದರೆ, ಅದೊಂದೇ ಶಾಶ್ವತ ಪರಿಹಾರವಲ್ಲ.

ಕೊಲೊನ್ ಇನ್ಫೆಕ್ಷನ್ ಎಂದರೇನು?

ಕೊಲೊನ್ ಇನ್ಫೆಕ್ಷನ್ ಎಂದರೇನು?

ಕೊಲೊನ್ ಅಥವಾ ದೊಡ್ಡ ಕರುಳಿನ ಒಳಪದರದಲ್ಲಿ ಉರಿಯೂತ ಸಂಭವಿಸುವುದೇ ಕೊಲೈಟಿಸ್ ಅಥವಾ ಕೊಲೊನ್ ಇನ್ಫೆಕ್ಷನ್. ವೈರಾಣು ಅಥವಾ ಬ್ಯಾಕ್ಟೀರಿಯಾ ಕೊಲೊನ್ ಇನ್ಫೆಕ್ಷನ್ ಗೆ ಕಾರಣವಾಗಬಹುದು. ಕೆಲವು ಬಾರಿ ಶಸ್ತ್ರಚಿಕಿತ್ಸೆ ಅಥವಾ ಕ್ಯಾನ್ಸರ್ ನಿಂದ ಉಂಟಾಗುವ ತೊಂದರೆಗಳಿಂದ ಕೊಲೊನ್ ಸೋಂಕು ಹುಟ್ಟಿಕೊಳ್ಳುತ್ತದೆ. ಕೀಮೋಥೆರಪಿಯ ನಂತರದಲ್ಲೂ ಕೊಲೊನ್ ಸೋಂಕು ಸಂಭವಿಸುವ ಸಾಧ್ಯತೆ ಹೆಚ್ಚು. ಇರ್ಫಾನ್ ಖಾನ್ ಗೆ ನ್ಯೂರೋಎಂಡೋಕ್ರೈನ್ ಟ್ಯೂಮರ್ ಇದ್ದು, 2018 ರಲ್ಲಿ ಕೀಮೋಥೆರಪಿಗೆ ಒಳಗಾಗಿದ್ದರು. ಬಳಿಕ ಅವರಲ್ಲಿ ಕೊಲೊನ್ ಇನ್ಫೆಕ್ಷನ್ ಕಾಣಿಸಿಕೊಂಡಿದೆ.

ಲಕ್ಷಣಗಳು

ಲಕ್ಷಣಗಳು

* ಅತಿಸಾರ ಭೇದಿ, ತೀವ್ರ ಹೊಟ್ಟೆ ನೋವು

* ಜ್ವರ, ವಾಂತಿ, ತೂಕ ಇಳಿಕೆ, ಸುಸ್ತು.

ಸಿಗ್ಮಿಯೋಡೋಸ್ಕೋಪಿ ಅಥವಾ ಕೊಲೊನೋಸ್ಕೋಪಿ ಮೂಲಕ ಕೊಲೊನ್ ಇನ್ಫೆಕ್ಷನ್ ಪತ್ತೆಹಚ್ಚಬಹುದು.

ಚಿಕಿತ್ಸೆ ಏನು?

ಚಿಕಿತ್ಸೆ ಏನು?

ಯಾವ ಕಾರಣದಿಂದ ಕೊಲೊನ್ ಇನ್ಫೆಕ್ಷನ್ ಕಾಣಿಸಿಕೊಂಡಿದೆ ಎಂಬುದನ್ನು ಪತ್ತೆ ಹಚ್ಚಿ ಸಂಬಂಧಿತ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯವಾಗಿ ಚಿಕಿತ್ಸೆಯ ರೂಪದಲ್ಲಿ anti-inflammatory drugs, immunosuppressant, anti-diarrheal medications, antibiotics ನೀಡಲಾಗುತ್ತದೆ.

English summary
Irrfan Khan passed away due to Colon Infection and Neuroendocrine Cancer. More details related to the disease are here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X