ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

IRCTC: ರದ್ದುಗೊಳಿಸಿದ ರೈಲುಗಳ ಮಾಹಿತಿ ಪರಿಶೀಲನೆ ಹೇಗೆ?

|
Google Oneindia Kannada News

ನವದೆಹಲಿ, ಮಾರ್ಚ್ 23: ಭಾರತೀಯ ರೈಲ್ವೆ 240 ರೈಲುಗಳನ್ನು ರದ್ದುಗೊಳಿಸಿದೆ. ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೇಗೆ ಪರಿಶೀಲಿಸುವುದು ಇಲ್ಲಿ ಹಂತ-ಹಂತದ ಮಾರ್ಗದರ್ಶಿ ಇದೆ.

ಕಾರ್ಯಾಚರಣೆ ಮತ್ತು ನಿರ್ವಹಣೆ ಕಾರಣಗಳಿಂದಾಗಿ ಭಾರತೀಯ ರೈಲ್ವೇ ಮಂಗಳವಾರ 240 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಿದೆ. ರೈಲ್ವೆಯ ಅಧಿಸೂಚನೆಯ ಪ್ರಕಾರ, ಹೊರಡಬೇಕಿದ್ದ 211 ರೈಲುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ ಮತ್ತು 29 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ. ಏತನ್ಮಧ್ಯೆ, ಮಂಗಳವಾರದ 14 ರೈಲುಗಳ ವೇಳಾಪಟ್ಟಿಯನ್ನು ಮರುಹೊಂದಿಸಲಾಗಿದೆ ಅಥವಾ ರೈಲ್ವೆ ಇಲಾಖೆಯು ಮಾರ್ಗ ಬದಲಿಸಿದೆ.

ದೆಹಲಿ, ಮಹಾರಾಷ್ಟ್ರ, ಗುಜರಾತ್ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಜಾರ್ಖಂಡ್, ಕರ್ನಾಟಕ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರಪ್ರದೇಶ, ಒಡಿಶಾ, ಪಂಜಾಬ್, ಅಸ್ಸಾಂ ಮತ್ತು ಬಿಹಾರದಲ್ಲಿ ರದ್ದಾದ ರೈಲುಗಳು ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ರೈಲು ಪ್ರಯಾಣಿಕರು ಗಮನಿಸಬೇಕು.

IRCTC Update: How to check the full list of cancelled trains

ಮಾರ್ಚ್ 22 ರಂದು ಸಂಪೂರ್ಣ ರದ್ದಾದ ರೈಲುಗಳ ಸಂಪೂರ್ಣ ಪಟ್ಟಿ(ರೈಲುಗಳ ಸಂಖ್ಯೆ)

ರದ್ದಾದ ರೈಲುಗಳ ಸಂಪೂರ್ಣ ಪಟ್ಟಿಯನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಹಂತ-ಹಂತದ ವಿಧಾನ

ಹಂತ 1: https://enquiry.indianrail.gov.in/mntes/ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ
ಹಂತ 2: ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ ರೈಲುಗಳನ್ನು ಆಯ್ಕೆಮಾಡಿ Exceptional Info ಬಟನ್ ಒತ್ತಿ.
ಹಂತ 3: ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 4: ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು ಸಂಪೂರ್ಣವಾಗಿ ಅಥವಾ ಭಾಗಶಃ ಆಯ್ಕೆಯನ್ನು ಆಯ್ಕೆಮಾಡಿ.

IRCTC Update: How to check the full list of cancelled trains

ಉದಾಹರಣೆಗೆ: ವೆಬ್ ಸೈಟ್ ಭೇಟಿ ನಂತರ ಟ್ರೈನ್ ನಂಬರ್ ಅಥವಾ ಹೆಸರು ಸಲ್ಲಿಸಿ (10101) ರತ್ನಗಿರಿ-ಮಡಗಾಂವ್
* ಜರ್ನಿ ನಿಲ್ದಾಣ ಆಯ್ಕೆ ಮಾಡಿಕೊಳ್ಳಿ (ಸಾವಂತ್ ವಾಡಿ ರೋಡ್)
* ನಿಮ್ಮ ಆಯ್ಕೆಯ ದಿನಾಂಕದಂದು ಟ್ರೈನ್ ರದ್ದಾಗಿರುವ ಬಗ್ಗೆ Train Exceptional Info ಬಟನ್ ಮೂಲಕ ತಿಳಿಯುತ್ತದೆ.
* ಮತ್ತೊಮ್ಮೆ Train Exceptional Info ಬಟನ್ ಒತ್ತಿದರೆ. ಈ ತಿಂಗಳಲ್ಲಿ ಯಾವಾಗೆಲ್ಲ ಟ್ರೈನ್ ರದ್ದಾಗಿದೆ ಎಂಬುದರ ಪೂರ್ಣ ವಿವರ ಸಿಗಲಿದೆ.

ಹೆಚ್ಚಿನ ಮಾಹಿತಿಗಾಗಿ, ರದ್ದಾದ ರೈಲುಗಳ ನಿಜವಾದ ಆಗಮನ-ನಿರ್ಗಮನದ ವಿವರಗಳನ್ನು ಪಡೆಯಲು enquiry.indianrail.gov.in/mntes ಅಥವಾ NTES ಅಪ್ಲಿಕೇಶನ್‌ಗೆ ಭೇಟಿ ನೀಡುವಂತೆ ಪ್ರಯಾಣಿಕರನ್ನು ರೈಲ್ವೆ ಅಧಿಕಾರಿಗಳು ಕೋರಿದ್ದಾರೆ.

English summary
IRCTC Update: Indian Railways Cancels 240 Trains on Tuesday. How to check the full list of cancelled trains Here’s a step-by-step guide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X