ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

7 ವರ್ಷ ಜೈಲಿನಲ್ಲಿದ್ದ ಕನ್ನಡಿಗ IPS ಅಧಿಕಾರಿ ಈಗ ಭ್ರಷ್ಟ ಅಧಿಕಾರಿಗಳ ಪಾಲಿಗೆ ಕಂಟಕ

|
Google Oneindia Kannada News

ಬೆಂಗಳೂರು, ಜೂನ್ 25:ಸೋಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ 7 ವರ್ಷ ಜೈಲುವಾಸ ಅನುಭವಿಸಿದ್ದ ಕರ್ನಾಟಕ ಮೂಲದ ಐಪಿಎಸ್ ಅಧಿಕಾರಿ ಎಂ.ಎನ್.ದಿನೇಶ್ ಅವರು 6 ತಿಂಗಳುಗಳಲ್ಲಿ ಲಂಚ ಸ್ವೀಕರಿಸಿದ ಭ್ರಷ್ಟ ಅಧಿಕಾರಿಗಳನ್ನು ಕಂಬಿಗಳ ಹಿಂದಿಟ್ಟಿದ್ದಾರೆ.

ವೀರಪ್ಪನ್‌ಗೆ ನಿದ್ದೆಗೆಡಿಸಿದ್ದ ಕೆಂಪಯ್ಯ ಅವರ ಅಳಿಯನಾಗಿರುವ ದಿನೇಶ್ ಗುಜರಾತ್‌ನಲ್ಲಿ ಈ ಎನ್‌ಕೌಂಟರ್ ಮೂಲಕ ದೇಶಾದ್ಯಂತ ಸುದ್ದಿ ಮಾಡಿದ್ದರು. ರಾಜಕೀಯ ಮೇಲಾಟದಿಂದ ತನ್ನ ಅಮೂಲ್ಯ 7 ವರ್ಷದ ಪೊಲೀಸ್ ಸೇವೆಯನ್ನು ಕಳೆದುಕೊಂಡಿದ್ದ ದಿನೇಶ್ ಇದೀಗ ಭ್ರಷ್ಟರಿಗೆ ನಡುಕ ಹುಟ್ಟಿಸುತ್ತಿದ್ದಾರೆ.

ಎಂಎನ್ ದಿನೇಶ್ ಅವರು 2014ರ ಮೇ 7 ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು. ಐಪಿಎಸ್ ಅಧಿಕಾರಿ ದಿನೇಶ್ ಅವರು ಕಳೆದ 6 ತಿಂಗಳಲ್ಲಿ 12 ಭ್ರಷ್ಟ ಅಧಿಕಾರಿಗಳನ್ನು ಜೈಲಿಗಟ್ಟಿದ್ದಾರೆ.

ಕೇಸು ಸಿಬಿಐನದ್ದಾಗಿದ್ದರಿಂದ ಈ ಏಳು ವರ್ಷಗಳಲ್ಲಿ ಬೆರಳೆಣಿಕೆ ಸಂದರ್ಭದಗಳಲ್ಲಿ ಮಾತ್ರ ಅವರು ತಮ್ಮವರನ್ನು ಕಂಡು ಮಾತನಾಡಿಸುವಂತಾಗಿತ್ತು.

ದಿನೇಶ್ ಅವರು ಲಂಚಕೋರರ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಅವರು 'ಒನ್‌ಇಂಡಿಯಾ'ಗೆ ನೀಡಿರುವ ಸಂದರ್ಶನವನ್ನು ಸಂಕ್ಷಿಪ್ತವಾಗಿ ಇಲ್ಲಿ ವಿವರಿಸಲಾಗಿದೆ.ಮುಂದೆ ಓದಿ..

 ಪ್ರಕರಣದ ಹಿನ್ನೆಲೆ

ಪ್ರಕರಣದ ಹಿನ್ನೆಲೆ

ರಾಜಸ್ಥಾನದ ಉದಯಪುರದಲ್ಲಿ ಎಸ್ಪಿಯಾಗಿ ಕೆಲಸ ನಿರ್ವಹಿಸುವಾಗ ಅಲ್ಲಿ ಹಾತಿಪೋಲ್ ಠಾಣೆ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಕರೀಲಾಲ್ ಎಂಬಾತ ಕೊಲೆ ಪ್ರಕರಣದ ಬೆನ್ನುಹತ್ತಿದ್ದೇ ದಿನೇಶ್ ಅವರಿಗೆ ಮುಳುವಾಗಿತ್ತು. ಅದರ ಹಿಂದೆ ಸೊಹ್ರಾಬುದ್ದೀನ್ ಎಂಬ ಭೂಗತ ಪಾತಕಿ ಇದ್ದಾನೆಂದು ಪತ್ತೆಯಾಗಿದ್ದೇ ತಡ ಅವನ ಬೆನ್ನುಹತ್ತಿದ್ದರು ದಿನೇಶ್.

ಪಾತಕಿ ಸೊಹ್ರಾಬುದ್ದೀನ್ ರಾಜಸ್ಥಾನಕ್ಕೆ ಮಾತ್ರವಲ್ಲ. ಗುಜರಾತ್, ಮಹಾರಾಷ್ಟ್ರದ ಪೊಲೀಸರಿಗೂ ಬೇಕಾದವನಾಗಿದ್ದ. ಹಾಗಾಗಿ ಗುಜರಾತಿನ ಭಯೋತ್ಪಾದನಾ ನಿಗ್ರಹದಳದ ಡಿಜಿ ವಂಜಾರಾ, ರಾಜಕುಮಾರ್ ಪಾಂಡ್ಯನ್ ಅವರನ್ನು ಸಂಪರ್ಕಿಸಿದ್ದ ದಿನೇಶ್, ಸೊಹ್ರಾಬುದ್ದೀನನ್ನು ಹಿಡಿಯಲು ಯತ್ನಿಸಿದ್ದರು.ವಂಜಾರಾ ಮತ್ತು ಪಾಂಡ್ಯನ್ ಅವರುಗಳು ನೀಡಿದ್ದ ಹೆಚ್ಚಿನ ಮಾಹಿತಿಯನ್ನಾಧರಿಸಿ, ಸೊಹ್ರಾಬುದ್ದೀನನನ್ನು ಹಿಡಿಯಲು ಅಹಮದಾಬಾದಿಗೆ ಹೋಗಿದ್ದೇ ದಿನೇಶ್ ಈ ಪ್ರಕರಣದಲ್ಲಿ ಸಿಕ್ಕಿಕೊಳ್ಳಲು ಕಾರಣವಾಯಿತು.
 ರಾಜಸ್ಥಾನ ಎಸಿಬಿ ಸಹಾಯವಾಣಿ

ರಾಜಸ್ಥಾನ ಎಸಿಬಿ ಸಹಾಯವಾಣಿ

ರಾಜಸ್ಥಾನ ಎಸಿಬಿಯು ವರ್ಷಪೂರ್ತಿ ಲಂಚ ಪಡೆಯುವವರ ವಿರುದ್ಧ ದಾಳಿ ನಡೆಸುತ್ತಲೇ ಇದೆ, ಮಹಾನಿರ್ದೇಶಕ ಬಿಎಲ್ ಸೋನಿಯವರ ನಿರ್ದೇಶನದ ಮೇರೆಗೆ ನಮ್ಮ ತಂಡಗಳು ಪ್ರತಿ ದೂರನ್ನು ಗಂಭೀರವಾಗಿ ಪರಿಗಣಿಸುತ್ತಿದೆ ಎಂದು ದಿನೇಶ್ ಎಂಎನ್ ಅವರು 'ಒನ್‌ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಎಸಿಬಿ ಸಹಾಯವಾಣಿ ಸಂಖ್ಯೆ 1064 ಹಾಗೂ ವಾಟ್ಸಾಪ್ ನಂಬರ್‌ಗೆ ಕರೆ ಮಾಡಬಹುದು 9413502834 ಎಂದು ತಿಳಿಸಿದ್ದಾರೆ.

 ಐಎಎಸ್ ಇಂದರ್ ಸಿಂಗ್ ರಾವ್

ಐಎಎಸ್ ಇಂದರ್ ಸಿಂಗ್ ರಾವ್

2020ರ ಡಿಸೆಂಬರ್ 11 ರಂದು ಮಹಾವೀರ್, ರಾಜಸ್ಥಾನ ಬಾರನ್ ಜಿಲ್ಲೆಯ ಕಲೆಕ್ಟರ್ ಐಎಎಸ್ ಅಧಿಕಾರಿ ಇಂದರ್ ಸಿಂಗ್ ಅವರನ್ನು 40 ಲಕ್ಷ ರೂ. ಲಂಚ ಪಡೆಯುವಾಗ ಬಂಧಿಸಲಾಗಿತ್ತು, ಅವರು ಈಗ ಕೋಟ ಕೇಂದ್ರ ಕಾರಾಗೃಹದಲ್ಲಿದ್ದಾರೆ.

 ಐಪಿಎಸ್ ಮನೀಶ್ ಅಗರ್ವಾಲ್

ಐಪಿಎಸ್ ಮನೀಶ್ ಅಗರ್ವಾಲ್

ದಲಾಲ್ ಗೋಪಾಲ್ ಸಿಂಗ್ ಹಾಗೂ ಎಸ್‌ಪಿ ಮನೀಶ್ ಅಗರ್ವಾಲ್ ಮುಂಬೈ-ದೆಹಲಿ ಎಕ್ಸ್‌ಪ್ರೆಸ್ ವೇನಲ್ಲಿ 10 ಲಕ್ಷ ರೂ. ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು.

ಎಸಿಬಿ ಸವಾಯ್ ಮಾಧೋಪುರ್

ಎಸಿಬಿ ಸವಾಯ್ ಮಾಧೋಪುರ್

2020ರ ಡಿಸೆಂಬರ್ 11 ರಂದು 80 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ದಾಳಿ ನಡೆಸಿ ಅವರನ್ನು ಬಂಧಿಸಿತ್ತು.

 ಸಪಾತ್ ಖಾನ್ ಬಂಧನ

ಸಪಾತ್ ಖಾನ್ ಬಂಧನ

2021ರ ಜನವರಿ 8 ರಂದು ಎಸಿಬಿಯು ಸಪಾತ್ ಖಾನ್ ಡಿಎಸ್‌ಪಿ ಅಲ್ವರ್ ರೂರಲ್ ಹಾಗೂ ಕಾನ್ಸ್ಟೇಬಲ್ ಅಸ್ಲಮ್ ಅವರನ್ನು 3 ಲಕ್ಷ ರೂ. ಲಂಚ ಪಡೆಯುವಾಗ ರೆಡ್‌ಹ್ಯಾಂಡ್‌ ಆಗಿ ಬಂಧಿಸಿತ್ತು.

 ಆರ್‌ಪಿಎಸ್ ಕೈಲಾಶ್ ಚಂದ್ ಬಂಧನ

ಆರ್‌ಪಿಎಸ್ ಕೈಲಾಶ್ ಚಂದ್ ಬಂಧನ

ಆರ್‌ಪಿಎಸ್ ಕೈಲಾಶ ಚಂದ್ ಬೋರಾ ಅವರು ಅತ್ಯಾಚಾರ ಸಂತ್ರಸ್ತೆ ಬಳಿ ಸಹಾಯ ಮಾಡುವುದಾಗಿ ಸುಳ್ಳು ಭರವಸೆ ನೀಡಿ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದರು. ಆರ್‌ಪಿಎಸ್ ಕೈಲಾಶ್ ಬೋರಾ ಅವರು ವುಮೆನ್ ಅಟ್ರಾಸಿಟೀಸ್ ರಿಸರ್ಚ್ ಯುನಿಟ್‌ನ ಎಸಿಪಿಯಾಗಿ ನೇಮಕಗೊಂಡಿದ್ದರು.

 ಎಸ್‌ಡಿಎಂ ಪಿಂಕಿ ಮೀನಾ

ಎಸ್‌ಡಿಎಂ ಪಿಂಕಿ ಮೀನಾ

ಡೌಸಾ ಲಂಚ ಪ್ರಕರಣ 2021 ಇದರ ಬಗ್ಗೆ ಹೆಚ್ಚು ಚರ್ಚೆಗಳು ನಡೆದಿವೆ. ಪುಷ್ಕರ್ ಕುಮಾರ್ ಹಾಗೂ ಎಸ್‌ಡಿಎಂ ಪಿಂಕಿ 5 ಲಕ್ಷ ರೂ.ಲಂಚ ಪಡೆಯುವಾಗ ಬಂಧಿಸಲಾಗಿತ್ತು. ಪಿಂಕಿ ಮೀನಾ ಜಾಮೀನಿನ ಮೇಲೆ ಹೊರ ಬಂದ ಬಳಿಕ ಫೆಬ್ರವರಿ 16 ರಂದು ಮದುವೆಯಾಗಿದ್ದರು.

 ಆರ್ಎಎಸ್ ಸುನಿಲ್ ಕುಮಾರ್ ಬಂಧನ

ಆರ್ಎಎಸ್ ಸುನಿಲ್ ಕುಮಾರ್ ಬಂಧನ

2021ರ ಫೆಬ್ರವರಿ 6 ರಂದು ಎಸ್‌ಡಿಎಂ ಗುಧಮಾಲನಿ ಹಾಗೂ ಸುನಿಲ್ ಕುಮಾರ್ ಅವರ ಚಾಲಕ ದುರ್ಗಾರಾಮ್ ಅವರನ್ನು 10 ಸಾವಿರ ರೂ.ಲಂಚ ಪಡೆಯುವಾಗ ಬಂಧಿಸಲಾಗಿತ್ತು. ಸುನಿಲ್ ಕುಮಾರ್ ಅವರನ್ನು 2019ರಲ್ಲಿ ಆರ್‌ಎಎಸ್ ಅಧಿಕಾರಿಯಾಗಿ ನೇಮಿಸಲಾಗಿತ್ತು.

 ವೀರೇಂದ್ರ ಕುಮಾರ್ ಬಂಧನ

ವೀರೇಂದ್ರ ಕುಮಾರ್ ಬಂಧನ

2021ರ ಮಾರ್ಚ್ 8 ರಂದು ವೀರೇಂದ್ರ ಕುಮಾರ್, ಆರ್‌ಎಸ್ ಅಧಿಕಾರಿ ಜೆಸಿಟಿಎಸ್‌ಎಲ್ ಜೈಪುರ್, ನರೇಶ್ ಸಿಂಘಾಲ್,ಪರಸ್ ಟ್ರಾವೆಲ್ಸ್‌ ಹಾಗೂ ಮಹೇಶ್ ಕುಮಾರ್ ಗೋಯೆಲ್, ಅಕೌಂಟ್ಸ್ ಅಧಿಕಾರಿ ಅವರನ್ನು ಲಂಚ ಪಡೆಯುತ್ತಿರುವಾಗ ಬಂಧಿಸಲಾಗಿತ್ತು.

 ಆರ್‌ಎಎಸ್ ಬಿಎಲ್ ಮೆಹ್ರದಾ ಬಂಧನ

ಆರ್‌ಎಎಸ್ ಬಿಎಲ್ ಮೆಹ್ರದಾ ಬಂಧನ

2021ರ ಏಪ್ರಿಲ್ 11 ರಂದು ಅಜ್ಮರ್ ರೆವಿನ್ಯೂ ಬೋರ್ಡ್ , ಆರ್‌ಎಎಸ್ ಅಧಿಕಾರಿ ಬಿಎಲ್ ಮೆಹ್ರದಾ ಹಾಗೂ ಸುನಿಲ್ ಕುಮಾರ್ ಶರ್ಮಾ ಅವರನ್ನು ಲಂಚ ಪಡೆಯುತ್ತಿರುವ ಸಂದರ್ಭದಲ್ಲಿ ಬಂಧಿಸಲಾಯಿತು.

 ಆರ್‌ಎಎಸ್ ಸುನಿಲ್ ಜಿಂಗಾನಿಯಾ

ಆರ್‌ಎಎಸ್ ಸುನಿಲ್ ಜಿಂಗಾನಿಯಾ

ಜೂನ್ 14 ರಂದು ಆರ್‌ಎಎಸ್ ಸುನಿಲ್ ಜಿಂಗಾನಿಯಾ, ಲಸಾಡಿಯಾ ಸಬ್ ಡಿವಿಷನ್ , ಗಣಿ ಮಾಲೀಕರ ಬಳಿ ಲಕ್ಷಾಂತರ ರೂ. ಲಂಚ ಪಡೆಯುತ್ತಿರುವಾಗ ಬಂಧಿಸಲಾಯಿತು.

 ಎಂಎನ್ ದಿನೇಶ್ ಅವರ ಕುರಿತು ಮಾಹಿತಿ

ಎಂಎನ್ ದಿನೇಶ್ ಅವರ ಕುರಿತು ಮಾಹಿತಿ

ದಿನೇಶ್ ಎಂಎನ್ ಅವರು 1971ರ ಸೆಪ್ಟೆಂಬರ್ 6ರಂದು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ,ಮುನಗನಹಳ್ಳಿಯಲ್ಲಿ ಜನಿಸಿದರು.

ರಾಜಸ್ಥಾನ್ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದ ಕನ್ನಡಿಗ ದಿನೇಶ್ ಅವರು ಕರ್ತವ್ಯ ನಿರ್ವಹಿಸಿದ ಕಡೆಯಲ್ಲೆಲ್ಲಾ ಜನರ ಮೆಚ್ಚುಗೆ ಮತ್ತು ಪ್ರೀತಿ ಗಳಿಸಿದ್ದರು. ರಾಜಸ್ಥಾನದಾದ್ಯಂತ ಅವರ ಅಭಿಮಾನಿ ಪಡೆಯೇ ಹುಟ್ಟಿಕೊಂಡಿತ್ತು.

2007ರ ಏಪ್ರಿಲ್ 24ರಂದು ಬಂಧಿತರಾಗಿದ್ದ ದಿನೇಶ್ ಮೊದಲು ಗುಜರಾತ್‌ನ ಸಾಬರಮತಿ, ಆ ಬಳಿಕ ಮುಂಬೈನ ತಲೋಜಾ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದರು.

ಮುಳಬಾಗಿಲಿನವರಾದ ನಿವೃತ್ತ ತಹಸೀಲ್ದಾರ್ ವಿ. ನಾರಾಯಣಸ್ವಾಮಿ ಅವರ ಪುತ್ರ ಎಂ.ಎನ್. ದಿನೇಶ್ ಅವರು 1995ರಲ್ಲಿ ರಾಜಸ್ತಾನ್ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ಸೇವೆಗೆ ಸೇರಿದ್ದರು. ರಾಜಸ್ಥಾನದ ನಾನಾ ಕಡೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದ ದಿನೇಶ್ ಅವರು, ದುಷ್ಟಶಕ್ತಿಗಳನ್ನು ಮಟ್ಟ ಹಾಕಿ ಹೆಸರು ಮಾಡಿದ್ದರು.

1995ರಿಂದ 2007ರವರೆಗೆ ಕೆಲಸ ಮಾಡಿದ ಕಡೆಯಲ್ಲೆಲ್ಲಾ ಜನಪ್ರಿಯತೆ ಉತ್ತುಂಗಕ್ಕೆ ಏರಿದ್ದರು. ಅವರನ್ನು ವರ್ಗ ಮಾಡಿದಾಗೆಲ್ಲಾ ಇಡೀ ಜಿಲ್ಲೆಯಲ್ಲಿ ಮುಷ್ಕರ ನಡೆಯುತ್ತಿತ್ತು. ಜೈಪುರದಲ್ಲಿ ಎಎಸ್‌ಪಿಯಾಗಿದ್ದಾಗ ಅಲ್ಲಿನ ಟೂರಿಸ್ಟ್ ಮಾಫಿಯಾವನ್ನು ಬಗ್ಗು ಬಡಿದಿದ್ದರು. 2001ರಲ್ಲಿ ಚಂಬಲ್ ಕಣಿವೆ ಗಡಿ ಪ್ರದೇಶವಾದ ಕರೋಲಿಯಲ್ಲಿ ಕೆಲಸ ಮಾಡಿದ್ದ ಅವರು ಬಹುಕೋಟಿ ಬೆಲೆ ವಿಗ್ರಹ ಕಳ್ಳತನಕ್ಕೆ ಕುಖ್ಯಾತಿ ಪಡೆದಿದ್ದ ರಾಮಮಠ್ರಾದಲ್ಲಿ ಕಾರ್ಯಾಚರಣೆ ನಡೆಸಿ ಹೆಸರು ಮಾಡಿದ್ದರು.

ಕೋಮು ಗಲಭೆ, ಚುನಾವಣೆ ಗಲಭೆ, ಜಾತಿಕಲಹ ಹೀಗೆ ಏನೇ ನಡೆದರೂ ಅದನ್ನು ನಿಯಂತ್ರಿಸಲು ದಿನೇಶ್ ಅವರೇ ಸೂಕ್ತ ಎಂಬಷ್ಟರ ಮಟ್ಟಿಗೆ ಅವರು ಪ್ರಸಿದ್ಧಿಯಾಗಿದ್ದರು.
ಪ್ರವಾಸಿ ತಾಣ ಉದಯಪುರದಲ್ಲಿ ಎಸ್‌ಪಿಯಾಗಿ ಕೆಲಸ ನಿರ್ವಹಿಸುವಾಗ ಅಲ್ಲಿ ಹಾತಿಪೋಲ್ ಠಾಣೆ ವ್ಯಾಪ್ತಿಯಲ್ಲಿ ಮೂರು ತಿಂಗಳ ಹಿಂದೆ ನಡೆದಿದ್ದ ಕರೀಲಾಲ್ ಎಂಬಾತ ಕೊಲೆ ಪ್ರಕರಣದ ಬೆನ್ನುಹತ್ತಿದ್ದೇ ದಿನೇಶ್ ಅವರ ಸಾಧನೆಗೆ ಮುಳುವಾಯಿತು.

ಅದರ ಹಿಂದೆ ಸೊಹ್ರಾಬುದ್ದೀನ್ ಎಂಬ ಭೂಗತ ಪಾತಕಿ ಇದ್ದಾನೆಂದು ಪತ್ತೆಯಾಗಿದ್ದೇ ತಡ ಅವನ ಬೆನ್ನುಹತ್ತಿದ್ದರು ದಿನೇಶ್. ಸೊಹ್ರಾಬುದ್ದೀನ್ ಕೇವಲ ರಾಜಸ್ಥಾನಕ್ಕೆ ಮಾತ್ರವಲ್ಲ, ಗುಜರಾತ್, ಮಹಾರಾಷ್ಟ್ರದ ಪೊಲೀಸರಿಗೂ ಬೇಕಾದವನಾಗಿದ್ದ. ಇದನ್ನು ಆಧರಿಸಿ ಗುಜರಾತ್‌ನ ಭಯೋತ್ಪಾದನಾ ನಿಗ್ರಹದಳದ ಡಿ.ಜಿ. ವಂಜಾರಾ, ರಾಜಕುಮಾರ್ ಪಾಂಡ್ಯನ್ ಅವರನ್ನು ಸಂಪರ್ಕಿಸಿದ್ದ ದಿನೇಶ್ ಅವರು, ಸೊಹ್ರಾಬುದ್ದೀನ್ ಹಿಡಿಯಲು ಯತ್ನಿಸಿದ್ದರು.

ವಂಜಾರಾ, ಪಾಂಡ್ಯನ್ ಅವರಿಬ್ಬರು ನೀಡಿದ ಮಾಹಿತಿ ಆಧರಿಸಿ, ಸೊಹ್ರಾಬುದ್ದೀನ್‌ನನ್ನು ಹಿಡಿಯಲು ಅಹಮದಾಬಾದ್‌ಗೆ ಹೋಗಿದ್ದೇ ದಿನೇಶ್ ಅವರು ಈ ಮೊಕದ್ದಮೆಯಲ್ಲಿ ಸಿಕ್ಕಿಕೊಳ್ಳಲು ಕಾರಣವಾಯಿತು. ದಿನೇಶ್ ಭಾಗಿಯಾಗದೇ ಇದ್ದ ಎನ್‌ಕೌಂಟರ್ ಅವರ ತಲೆಗೂ ಸುತ್ತಿಕೊಂಡಿತ್ತು.

 ಜೈಲಿನಿಂದ ಬಂದ ಕೂಡಲೇ ಕೆಲಸ ಶುರು

ಜೈಲಿನಿಂದ ಬಂದ ಕೂಡಲೇ ಕೆಲಸ ಶುರು

ಜೈಲಿನಿಂದ ಬಿಡುಗಡೆಯಾಗಿ ಎಸಿಬಿಗೆ ಬಂದ ಕೂಡಲೇ ಭ್ರಷ್ಟ ಅಧಿಕಾರಿಗಳನ್ನು ಕಂಬಿಗಳ ಹಿಂದೆ ಕಳುಹಿಸುವ ಕೆಲಸ ಶುರು ಮಾಡಿದರು. 2014ರಲ್ಲಿ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡ ಕೆಲವು ದಿನಗಳ ಬಳಿಕ ರಾಜಸ್ಥಾನದ ಎಸಿಬಿಗೆ ಅವರನ್ನು ನೇಮಿಸಲಾಯಿತು.

English summary
IPS Officer Dinesh MN Told 'Oneindia' that this is the first time in the country that in just six months, any state agency of the government has sent bribery to one IAS, one IPS, seven RAS and three RPS to jail. Collector-SP and many RAS officers are still behind bars.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X