• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಐಎನ್ಎಕ್ಸ್ ಮೀಡಿಯಾ ಕೇಸ್: ಪಿ ಚಿದಂಬರಂ ಭ್ರಷ್ಟಾಚಾರದ ಹೆಜ್ಜೆಗಳು

|

ಕೇಂದ್ರದ ಮಾಜಿ ವಿತ್ತ ಸಚಿವ, ಕಾಂಗ್ರೆಸ್ ನಾಯಕ ಪಿ ಚಿದಂಬರಂಗೆ ಐಎನ್ಎಕ್ಸ್ ಮೀಡಿಯಾ ಹಗರಣದಲ್ಲಿ ಈಗ ಬಂಧನ ಭೀತಿ ಶುರುವಾಗಿದೆ. ಏರ್ ಸೆಲ್ ಮ್ಯಾಕ್ಸಿಸ್ ಪ್ರಕರಣ, ವಿಮಾನ ಖರೀದಿ ಅವ್ಯವಹಾರದಲ್ಲಿಕೂಡಾ ಸಿಲುಕಿದ್ದಾರೆ. ಬುಧವಾರ(ಆಗಸ್ಟ್ 21, 2019) ರಾತ್ರಿ ಚಿದಂಬರಂ ಅವರನ್ನು ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ.

ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಬಂಧಿಸದಂತೆ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ಈ ಹಿಂದೆ ದೆಹಲಿ ಕೋರ್ಟ್ ಸೂಚಿಸಿತ್ತು. ಆದರೆ, ಈಗ ಮನಿಲಾಂಡ್ರಿಂಗ್ ಹಾಗೂ ಭ್ರಷ್ಟಾಚಾರ ಕೇಸಿಗೆ ಸಂಬಂಧಿಸಿದಂತೆ ಚಿದಂಬರಂ ಅರ್ಜಿಯನ್ನು ವಜಾಗೊಳಿಸಿ ಮಂಗಳವಾರ(ಆಗಸ್ಟ್ 20) ದೆಹಲಿ ಹೈಕೋರ್ಟ್ ಜಸ್ಟೀಸ್ ಸುನೀಲ್ ಗೌರ್ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದಾರೆ.

   ಕೆ ಎಂ ಎಫ್ ಚುನಾವಣೆ ಹಿನ್ನೆಲೆ ಬಿ ಎಸ್ ವೈ ನಿರ್ಧಾರದ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ಎಚ್ ದ್ ರೇವಣ್ಣ |

   ಪಿ. ಚಿದಂಬರಂ ಬಂಧನ: ಬುಧವಾರ ಇಡೀ ದಿನ ನಡೆದ ಹೈಡ್ರಾಮ

   ಏನಿದು ಪ್ರಕರಣ?: ಯುಪಿಎ 1 ಅಧಿಕಾರದಲ್ಲಿದ್ದಾಗ ವಿತ್ತ ಸಚಿವರಾಗಿದ್ದ ಪಿ ಚಿದಂಬರಂ ಅವರು 2007ರಲ್ಲಿ ಐಎನ್ಎಕ್ಸ್ ಮೀಡಿಯಾ ಸಂಸ್ಥೆಗೆ ಸುಮಾರು 305 ಕೋಟಿ ರುಗಳನ್ನು ವಿದೇಶದಿಂದ ಹೂಡಿಕೆ ರೂಪದಲ್ಲಿ ಪಡೆಯಲು ಅನುಮತಿ ದೊರಕಿಸಿಕೊಟ್ಟಿದ್ದರು.

   2007ರಲ್ಲಿ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (Foreign Investment Promotion Board)ಯಿಂದ 4.62 ಕೋಟಿ ರುಪಾಯಿ ಹೂಡಿಕೆ ಮಾಡಲು ಅನುಮೋದನೆ ಸಿಕ್ಕಿತ್ತು. ಆದರೆ ಮಾರಿಷಸ್ ನ ಎರಡು ಕಂಪನಿಗಳಿಂದ ಪೀಟರ್ ಮತ್ತು ಇಂದ್ರಾಣಿ ಒಡೆತನದ ಕಂಪನಿ ಐಎನ್ಎಕ್ಸ್ ಮೀಡಿಯಾ ಪಡೆದದ್ದು 305 ಕೋಟಿ ರುಪಾಯಿಗಳು. ಇದರ ವಿರುದ್ಧ ಕಂದಾಯ ಇಲಾಖೆ ವಿಚಾರಣೆಗೆ ಆದೇಶಿಸಿತ್ತು. ಈ ವಿಚಾರಣೆಯನ್ನು ತಪ್ಪಿಸಲು ಕಾರ್ತಿ ಅವರು ತಮ್ಮ ಕಂಪನಿಯ ಮೂಲಕ ಐಎನ್ಎಕ್ಸ್ ಮೀಡಿಯಾ ಕಂಪನಿಯಿಂದ 10 ಲಕ್ಷ ರುಪಾಯಿ ಕಮಿಷನ್ ಪಡೆದಿದ್ದರು.

   ವ್ಯಕ್ತಿಚಿತ್ರ: ಯಾರು ಈ ಪಳನಿಯಪ್ಪನ್ ಚಿದಂಬರಂ?

   ಆಗಸ್ಟ್ 21: ಜೋರ್ ಭಾಗ್ ನಿವಾಸದಲ್ಲಿದ್ದ ಪಿ ಚಿದಂಬರಂ ಅವರನ್ನು ವಶಕ್ಕೆ ಪಡೆದ ಸಿಬಿಐ, ದೆಹಲಿ ಪೊಲೀಸ್ ಕಾರಿನಲ್ಲಿ ಸಿಬಿಐ ಮುಖ್ಯ ಕಚೇರಿಗೆ ಕರೆದೊಯ್ದಿದ್ದಾರೆ.

   * ಲುಕೌಟ್ ನೋಟಿಸ್ ಪಡೆದ ಬಳಿಕ 27 ಗಂಟೆಗಳ ನಂತರ ಪಿ ಚಿದಂಬರಂ ಪ್ರತ್ಯಕ್ಷ. ಎಐಸಿಸಿ ಮುಖ್ಯ ಕಚೇರಿಯಲ್ಲಿ ಕಪಿಲ್ ಸಿಬಾಲ್, ಅಭಿಷೇಕ್ ಮನು ಸಿಂಘ್ವಿ ಜತೆ ಕುಳಿತು ಸುದ್ದಿಗೋಷ್ಠಿ

   ಆಗಸ್ಟ್ 20, 2019: ಮನಿಲಾಂಡ್ರಿಂಗ್ ಹಾಗೂ ಭ್ರಷ್ಟಾಚಾರ ಕೇಸಿಗೆ ಸಂಬಂಧಿಸಿದಂತೆ ಚಿದಂಬರಂ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೂಳಿಸಿದ ದೆಹಲಿ ಹೈಕೋರ್ಟ್

   **

   ಜುಲೈ 25: ಚಿದಂಬರಂ ಹಾಗೂ ಕಾರ್ತಿ ಬಂಧಿಸದಂತೆ ತನಿಖಾ ಸಂಸ್ಥೆಗಳಿಗೆ ಕೋರ್ಟ್ ಸೂಚನೆ.

   ಜುಲೈ 23: ದೆಹಲಿ ಹೈಕೋರ್ತಿನಲ್ಲಿ ಜಾರಿ ನಿರ್ದೇಶನಾಲಯದ ತನಿಖೆಯಿಂದ ಬಂಧನ ಭೀತಿ, ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಚಿದಂಬರಂ.

   ಮೇ 31: ಚಿದಂಬರಂ ಹಾಗೂ ಕಾರ್ತಿ ಬಂಧಿಸದಂತೆ ತನಿಖಾ ಸಂಸ್ಥೆಗಳಿಗೆ ಸೂಚಿಸಿ ದೆಹಲಿ ಹೈಕೋರ್ಟಿನಿಂದ ಮಧ್ಯಂತರ ಆದೇಶ.

   ಮಾರ್ಚ್ 23: ಐಎನ್ಎಕ್ಸ್ ಮೀಡಿಯಾ ಕೇಸಿನಲ್ಲಿ ಕಾರ್ತಿ ಚಿದಂಬರಂಗೆ ದೆಹಲಿ ಕೋರ್ಟಿನಿಂದ ಜಾಮೀನು.

   ಮಾರ್ಚ್ 16: ಕಾರ್ತಿ ಚಿದಂಬರಂ ಜಾಮೀನು ಅರ್ಜಿ ವಿಚಾರಣೆ ಮುಗಿಸಿ, ತೀರ್ಪು ಕಾಯ್ದಿರಿಸಿದ ದೆಹಲಿ ವಿಶೇಷ ನ್ಯಾಯಾಲಯ.

   ಮಾರ್ಚ್ 06: ಮೂರು ದಿನಗಳ ಸಿಬಿಐ ಕಸ್ಟಡಿಗೆ ಕಾರ್ತಿ ಚಿದಂಬರಂ, ಮಾರ್ಚ್ 09ಕ್ಕೆ ವಿಚಾರಣೆ ಮುಂದೂಡಿದ ದೆಹಲಿ ವಿಶೇಷ ನ್ಯಾಯಾಲಯ.

   ಮಾರ್ಚ್ 05: ಮನಿ ಲಾಂಡ್ರಿಂಗ್ ಕೇಸಿನಲ್ಲಿ ಜಾರಿ ನಿರ್ದೇಶನಾಲಯ ನೀಡಿದ್ದ ಸಮನ್ಸ್ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ ಕಾರ್ತಿ.

   ಮಾರ್ಚ್ 01: ಐದು ದಿನಗಳ ಕಾಲ ಸಿಬಿಐ ವಶಕ್ಕೆ ಕಾರ್ತಿ.

   ಫೆಬ್ರವರಿ 28,2018: ಚೆನ್ನೈ ವಿಮಾನ ನಿಲ್ದಾಣದಲ್ಲಿ ಕಾರ್ತಿ ಬಂಧನ, ದೆಹಲಿಗೆ ಕರೆ ತಂದ ಸಿಬಿಐ.

   2017:

   ಡಿಸೆಂಬರ್ 08: ಏರ್ ಸೆಲ್ ಮ್ಯಾಕ್ಸಿಗ್ ಒಪ್ಪಂದ ಹಗರಣದಲ್ಲಿ ಸಿಬಿಐ ನೀಡಿರುವ ಸಮನ್ಸ್ ರದ್ದುಕೋರಿ ಸಿಬಿಐಗೆ ಕಾರ್ತಿ ಅರ್ಜಿ.ಅಕ್ಟೋಬರ್ 09: ಮಗಳ ಮದುವೆಗಾಗಿ ಯುನೈಟೆಡ್ ಕಿಂಗ್ಡಮ್ ಗೆ ತೆರಳಲು ಕೋರ್ಟಿನಿಂದ ಅನುಮತಿ. ಬ್ಯಾಂಕಿಗೆ ತೆರಳದಂತೆ ನಿರ್ಬಂಧ.

   ಸೆಪ್ಟೆಂಬರ್ 22: ಕಾರ್ತಿ ವಿದೇಶಕ್ಕೆ ಹಾರಲು ಅನುಮತಿ ನಿರಾಕರಿಸಿದ ಸುಪ್ರೀಂಕೋರ್ಟ್.

   ಸೆಪ್ಟೆಂಬರ್ 11: ವಿದೇಶದಲ್ಲಿ ಕಾರ್ತಿ ಹೂಡಿಕೆ ಮಾಡಿರುವ ಆಸ್ತಿ ವಿವರದ ಬಗ್ಗೆ ಸುಪ್ರೀಂಕೋರ್ಟಿಗೆ ಮಾಹಿತಿ ನೀಡಿದ ಸಿಬಿಐ.

   ಆಗಸ್ಟ್ 18: ಆಗಸ್ಟ್ 23ರಂದು ಸಿಬಿಐ ಮುಂದೆ ವಿಚಾರಣೆ ಹಾಜಾರಾಗುವಂತೆ ಸುಪ್ರೀಂಕೋರ್ಟ್ ಸೂಚನೆ.

   ಆಗಸ್ಟ್ 14: ಹೈಕೋರ್ಟ್ ಆದೇಶ ರದ್ದುಪಡಿಸಿ, ಮತ್ತೆ ಲುಕ್ ಔಟ್ ನೋಟಿಸ್ ಜಾರಿ.

   ಆಗಸ್ಟ್ 10: ಲುಕ್ ಔಟ್ ನೋಟಿಸ್ ಗೆ ತಡೆ ನೀಡಿದ ಮದ್ರಾಸ್ ಹೈಕೋರ್ಟ್.

   ಜೂನ್ 16,2017: Foreigner Regional Registration Officer (FRRO) ಗೃಹ ಸಚಿವಾಲಯ, ವಿದೇಶಾಂಗ ಸಚಿವಾಲಯ ಎಲ್ಲದರಿಂದ ಕಾರ್ತಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿ

   ಮೇ 2017: ಈ ಕುರಿತಂತೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಆರ್ಥಿಕ ಅವ್ಯವಹಾರದ ಆರೋಪದ ಮೇಲೆ ಚಿದಂಬರಂ ವಿರುದ್ಧ ಸಿಬಿಐ ಎಫ್ಐಆರ್ ಹಾಕಿ, ದೋಷರೋಪಣ ಪಟ್ಟಿ ಸಿದ್ಧಪಡಿಸಿತ್ತು.

   English summary
   INX Media Case: Here's A Timeline Of Events That Led To P Chidambaram's Corruption Case involving Rs 305 Cr.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X