ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಹೋರಾಟ: ಒನ್ಇಂಡಿಯಾ ಜೊತೆ ಡಿಸಿಎಂ ಡಾ. ಅಶ್ವಥ್ ಸಂದರ್ಶನ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮೇ 4: "ಸರ್ಕಾರ ಹಾಗೂ ಸಾರ್ವಜನಿಕರಿಗೆ ಕೊವಿಡ್19 ಅತಿದೊಡ್ಡ ಸವಾಲಾಗಿದೆ. ಭಾರತ ಮೂರನೇ ಹಂತದ ಲಾಕ್ಡೌನ್ ಪ್ರವೇಶಿಸಿದೆ, ಸದ್ಯ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಈ ನಡುವೆ ಜನಜೀವನ ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಣೆ ಬಹುದೊಡ್ಡ ಸಮಸ್ಯೆಯಾಗಿ ಉಳಿದಿದೆ, ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳುವುದು ನಮ್ಮ ತಕ್ಷಣದ ಆದ್ಯತೆಯಾಗಿದೆ" ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥನಾರಾಯಣ ಅವರು ಒನ್ಇಂಡಿಯಾ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

Recommended Video

ಡಿ ಸಿ‌ ಎಂ ಅಶ್ವತ್ಥ್ ನಾರಾಯಣ ಅವರ ಜೊತೆ ಒನ್ ಇಂಡಿಯಾ ಸಂದರ್ಶನ | C.N Ashwath Narayan | Karnataka

ಲಾಕ್ಡೌನ್ ವಿಸ್ತರಣೆ ಈ ಸಮಯದ ಅಗತ್ಯವಾಗಿದ್ದು, ಒಂದು ವೇಳೆ ಒಮ್ಮೆಗೆ ಲಾಕ್ಡೌನ್ ತೆರವುಗೊಳಿಸಿದ್ದರೆ, ಲಾಕ್ಡೌನ್ ಮೂಲ ಉದ್ದೇಶಕ್ಕೆ ಸೋಲಾಗುತ್ತಿತ್ತು ಎಂದರು. ರಾಜ್ಯದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಆರ್ಥಿಕ ಪರಿಸ್ಥಿತಿ ಸುಧಾರಣೆ ಕುರಿತಂತೆ ಸರ್ಕಾರ ಸೂಕ್ತ ಯೋಜನೆಯನ್ನು ಹಾಕಿಕೊಂಡಿದೆ. ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗಳು ಜೊತೆ ಜೊತೆಯಲ್ಲೇ ಆಗಲಿವೆ. ಗ್ರಾಹಕರ ಬೇಡಿಕೆ ಹೆಚ್ಚಾದಂತೆ ಪೂರೈಕೆಯನ್ನು ಒದಗಿಸಿ, ಸಮತೋಲನ ಕಾಯ್ದುಕೊಳ್ಳಬಹುದು ಎಂದರು. ಉತ್ಪಾದನಾ ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ನೀಡುವ ಅಗತ್ಯವಿದೆ. ಚೀನಾದ ಮೇಲಿನ ಅವಲಂಬನೆಯನ್ನು ಶೇ 50ರಷ್ಟು ಕಡಿಮೆ ಮಾಡಿ ಸ್ಥಳೀಯರಿಗೆ ಹೆಚ್ಚಿನ ಅವಕಾಶ ನೀಡುವ ಕಾಲ ಬಂದಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.

ಕೊರೊನಾ ನಂತರದ ಬದುಕು ಅಭಿಯಾನದ ಲೇಖನಗಳು

Problems create opportunities, lets seize it: Dr. Ashwathnarayan on COVID-19 battle

ಕೈಗಾರಿಕೆಯಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಸ್ವಯಂ ಕಲಿಕೆ, ತಂತ್ರಜ್ಞಾನ ಬಳಕೆ, ಇ ಕ್ಲಾಸ್, ಇ ಲರ್ನಿಂಗ್ ಅಗತ್ಯದ ಬಗ್ಗೆ ಹೇಳಿದರು. ಐಟಿ ಕ್ಷೇತ್ರದಲ್ಲಿ ವರ್ಕ್ ಫ್ರಂ ಹೋಮ್ ಆಯ್ಕೆಯನ್ನು ಸರ್ಕಾರ ಪ್ರೋತ್ಸಾಹಿಸುತ್ತಿದೆ. ಈ ಕ್ಷೇತ್ರದ ಬೇಡಿಕೆ, ಸಮಸ್ಯೆಗಳಿಗೆ ಸರ್ಕಾರ ಸೂಕ್ತವಾಗಿ ಸ್ಪಂದಿಸುತ್ತಿದೆ, ಐಟಿ ಕ್ಷೇತ್ರದಲ್ಲಿನ ಉದ್ಯೋಗ ಕಡಿತ ಸರಿಯಲ್ಲ ಎಂದು ಹೇಳಿದರು. ಇಂಥ ನಿರ್ಣಾಯಕ ಹೋರಾಟದಲ್ಲಿ ಸಮರ್ಥ ನಾಯಕರೊಬ್ಬರ ಅಗತ್ಯವಿದ್ದು, ನಮ್ಮ ನಾಯಕರಾದ, ನರೇಂದ್ರ ಮೋದಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಈ ಹೋರಾಟದಲ್ಲಿ ಯಶಸ್ಸು ಗಳಿಸುತ್ತೇವೆ ಎಂಬ ನಂಬಿಕೆಯಿದೆ ಎಂದರು.

English summary
In this interview with OneIndia, the Deputy CM says that the extension of the lockdown was needed and if the entire system is opened up immediately then the entire purpose would be defeated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X