ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂದರ್ಶನ: ಕನ್ನಡ ಲಿಪಿಗಳ ರಾಣಿ, ಜೀವಂತ ಭಾಷೆ: ಎಸ್.ಜಿ ಸಿದ್ದರಾಮಯ್ಯ

|
Google Oneindia Kannada News

ಕನ್ನಡ ಭಾಷೆ ಇತಿಹಾಸ, ಅಸ್ಮಿತೆ, ಹೆಮ್ಮೆ, ಬೆಳವಣಿಗೆ, ಭಾಷೆ ಬಗ್ಗೆ ಜನರಿಗಿರುವ ಕೀಳರಿಮೆ, ದ್ರಾವಿಡ ಭಾಷೆಗಳ ಶಕ್ತಿ, ಭಾಷೆಯ ಬಗ್ಗೆ ಕಳಕಳಿ ಎಲ್ಲದರ ಬಗ್ಗೆ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಕವಿ, ಸಾಹಿತಿ, ಪ್ರೊ ಎಸ್. ಜಿ ಸಿದ್ದರಾಮಯ್ಯ ಅವರು ಮಾತನಾಡಿದ್ದಾರೆ.

ಗೂಗಲ್ ಸರ್ಚ್ ತೋರಿದ ಪ್ರಮಾದಕ್ಕೆ ಕನ್ನಡಿಗರು ಸ್ಪಂದಿಸಿರುವ ರೀತಿಯನ್ನು ಗಮನಿಸಿದ್ದಾರೆ. ಕನ್ನಡಿಗರಲ್ಲಿ ಭಾಷೆ ಬಗ್ಗೆ ಕಿಚ್ಚು ಇನ್ನೂ ಹೆಚ್ಚಾಗಬೇಕಾದರೆ, ಭಾಷೆಯ ಬಗ್ಗೆ ಅರಿವು ಮೂಡಬೇಕು ಎಂದಿದ್ದಾರೆ. ಒನ್ಇಂಡಿಯಾ ತಮಿಳು ವೆಬ್‌ಪೋರ್ಟಲ್‌ಗಾಗಿ ನೀಡಿದ ಸಂದರ್ಶನದ ಕನ್ನಡ ಆವೃತ್ತಿ ಇಲ್ಲಿ ಯಥಾವತ್ತಾಗಿ ನೀಡಲಾಗಿದೆ.

ಕನ್ನಡಕ್ಕೆ 2500 ವರ್ಷಗಳಷ್ಟು ಸುದೀರ್ಘವಾದ ಇತಿಹಾಸವಿದೆ. ಇದು ನಿಜರೂಪದ ವರ್ಣಮಾಲೆಯಿಂದ ಹಿಡಿದು ಒಂದು ತಾತ್ವಿಕ ಜೀವನ ದರ್ಶನ ಪರಂಪರೆಯನ್ನು ಒಳಗೊಂಡ ಅಸ್ಮಿತೆಯ ಇತಿಹಾಸ.

ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!ಕನ್ನಡ ಒಂದು ಅದ್ಭುತ ಭಾಷೆ ಎಂಬುದಕ್ಕೆ ಇಲ್ಲಿವೆ ನೋಡಿ 10 ಸಾಕ್ಷಿ!

 ಕನ್ನಡ ಒಂದು ಜೀವಂತ ಭಾಷೆ:

ಕನ್ನಡ ಒಂದು ಜೀವಂತ ಭಾಷೆ:

ಇಂಥ ಭಾಷೆಯ ಬೆಳವಣಿಗೆ ಎಷ್ಟಾಗಿದೆ ಎಂದರೆ 8 ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಜೊತೆಗೆ ಅಷ್ಟೇ ಅರ್ಹರಾದ ಸಮಕಾಲೀನ ಸಾಹಿತಿಗಳನ್ನು ಒಳಗೊಂಡ ಭಾಷೆ ಇದು. ಈ ಭಾಷೆಯ ವಿಶೇಷ ಏನೆಂದರೆ, ಇದು ಒಂದು ಜೀವಂತ ಭಾಷೆ, ಇದಕ್ಕೆ ಎಲ್ಲಾ ಜೀವಂತ ಭಾಷೆಗಳಿಗೆ ಇರುವ ಸಾಮರ್ಥ್ಯದ ಜೊತೆಗೆ ಅನನ್ಯವಾದ ಬೇರೆ ಕೆಲವು ಅಂಶಗಳಿವೆ. ಆ ಅಂಶಗಳೆಂದರೆ, ಇದಕ್ಕೆ ಲಿಪಿಗೆ ಸಂಬಂಧಪಟ್ಟಂತೆ, ಅರ್ಥಾತ್ ವರ್ಣಮಾಲೆಗೆ ಸಂಬಂಧಪಟ್ಟಂತೆ, 52 ಅಕ್ಷರಗಳನ್ನೊಂಡ ಈ ವರ್ಣಮಾಲೆ ಈಗ ಜಗತ್ತಿನಲ್ಲಿರುವ ಯಾವುದೇ ಭಾಷೆಗಳ ಉಚ್ಚಾರಕ್ಕೆ ಒಂದು ಕಿಂಚಿತ್ತು ಊನವಾಗದಂತೆ ಆ ಭಾಷೆಯಲ್ಲಿ ಹಿಡಿದಿಡಬಹುದು. ಉಚ್ಚಾರಕ್ಕೂ ಲಿಪಿಗೂ ವ್ಯತ್ಯಾಸ ಇರುವುದಿಲ್ಲ. ಆ ದೃಷ್ಟಿಯಿಂದ ಕನ್ನಡ ವರ್ಣಮಾಲೆ ಕೂಡಾ ಸಂಸ್ಕೃತ ವರ್ಣಮಾಲೆಯಿಂದ ಅಕ್ಷರಗಳನ್ನು ಎರವಲು ಪಡೆದುಕೊಂಡರೂ ಕೂಡಾ ಅವುಗಳನ್ನು ಸಮಕಾಲೀನ ಸಂದರ್ಭದಲ್ಲಿ ಹೆಚ್ಚು ಸಮರ್ಥವಾಗಿ ಬಳಸುತ್ತಿರುವಂಥ ಭಾಷೆಯಾಗಿದೆ.

ಉದಾಹರಣೆಗೆ ಹೇಳುವುದಾದರೆ, ಕನ್ನಡದ ಸೋದರಿ ಭಾಷೆಗಳು ದಕ್ಷಿಣದ ಇತರೆ ಭಾಷೆಗಳಿಗೆ ಈ ಸೌಲಭ್ಯ ಇಲ್ಲ. ತಮಿಳಿನಲ್ಲಿ ಸ, ಶ, ಷ ಇಲ್ಲ ಒಂದೇ ಸ, ಸಂಕರ(ಶಂಕರ), ಕನ್ನಡದಲ್ಲಿ ಅಲ್ಪಪ್ರಾಣ, ಮಹಾಪ್ರಾಣ ಇದೆ. ಆದರೆ, ಇತ್ತೀಚೆಗೆ ಕೆಲವು ವೈಯಾಕರಣಿಗಳು ಬೇಡ ನಮ್ಮಲ್ಲಿ ಮಹಾಪ್ರಾಣ ಇಲ್ಲ ಅಂತಾ ಹೇಳುತ್ತಾರೆ. ಆದರೆ, ಒಂದು ಜೀವಂತ ಭಾಷೆಯಾದ ಕನ್ನಡ ಯಾವೊಬ್ಬ ವೈಯಾಕರಣಿಯನ್ನು ಕೇಳಿ ಬೆಳೆಯುವುದಲ್ಲ. ಅದು ಜನ ಸಾಮಾನ್ಯರ ಮನ್ನಣೆ ಪಡೆದ ರೀತಿಯಲ್ಲಿ ಬೆಳೆವಣಿಗೆಯಾಗುವಂತದ್ದು, ಜಗತ್ತಿನಲ್ಲಿ ಈಗ ಪ್ರಖ್ಯಾತವಾಗಿರುವ ಇಂಗ್ಲೀಷ್ ಭಾಷೆಗೆ ಈ ಸೌಲಭ್ಯ ಇಲ್ಲ, ವೈಜ್ಞಾನಿಕ ದೃಷ್ಟಿ ಇಲ್ಲ. ಉದಾಹರಣೆಗೆ ಅದರ ಬರವಣಿಗೆಗೆ ಒಂದು ರೀತಿ ಉಚ್ಚಾರಣೆಯೇ ಒಂದು ರೀತಿ
walk- l silent ಆಗುತ್ತೆ. ಆ ಕಾರಣದಿಂದಲೇ ನಾನು ಹೇಳಿದ್ದು, ಯಾವುದೇ ಭಾಷೆಗೆ ಈ ಸೌಲಭ್ಯ ಇದೆಯೋ ಗೊತ್ತಿಲ್ಲ, ಆದರೆ, ವೈಜ್ಞಾನಿಕವಾಗಿ ಇಷ್ಟು ಸಮರ್ಥವಾಗಿ ಅನ್ಯಭಾಷೆಗಳನ್ನು ಹಿಡಿದಿಟ್ಟುಕೊಂಡು ಮೂಲ ಸ್ವರೂಪ ಉಳಿಸಿಕೊಂಡ ಭಾಷೆ ಇದು.

ಉದಾಹರಣೆಗೆ ಭಾಷಾಶಾಸ್ತ್ರದಲ್ಲಿ ಘರ್ಷಧ್ವನಿ ಅಂತಾ ಬರುತ್ತದೆ, ಫ, ಝ, ಫಾಗ್, ಕನ್ನಡದಲ್ಲಿ ಘರ್ಷಧ್ವನಿ ಇಲ್ಲ, ಆದರೆ, ಅನ್ಯಭಾಷೆಯ ಘರ್ಷಧ್ವನಿಯನ್ನು ಕನ್ನಡದಲ್ಲಿ ಹಿಡಿಯಬಹುದು ಎನ್ನುವುದಕ್ಕೆ ಫ ಮತ್ತು ಝ ಉದಾಹರಣೆ, ಫಲ, ಕಾಫಿ(ಕೆಳಗೆ ಎರಡು ಚುಕ್ಕಿ) ಫಿಲಾಸಫಿ ಇದನ್ನು ಕಂಡುಕೊಂಡಂಥ, ಹಲವು ಭಾಷೆ ಬಲ್ಲಂತ ವಿನೋಬಾ ಭಾವೆ ಅವರು ಕನ್ನಡವನ್ನು ಲಿಪಿಗಳ ರಾಣಿ ಅಂತಾ ಹೇಳಿದ್ರು.

ಬಡಗ ಕನ್ನಡಿಗರನ್ನು ಕನ್ನಡಿಗರೇ ಮರೆತಿರುವ ದುರಂತ ಕಥೆಬಡಗ ಕನ್ನಡಿಗರನ್ನು ಕನ್ನಡಿಗರೇ ಮರೆತಿರುವ ದುರಂತ ಕಥೆ

 ಕನ್ನಡ ಭಾಷೆಯ ಅಸ್ಮಿತೆ ಗೊತ್ತಿಲ್ಲ

ಕನ್ನಡ ಭಾಷೆಯ ಅಸ್ಮಿತೆ ಗೊತ್ತಿಲ್ಲ

ಕನ್ನಡಿಗರಿಗೆ ಕನ್ನಡ ಭಾಷೆಯ ಅಸ್ಮಿತೆ ಗೊತ್ತಿಲ್ಲ, ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಇಟ್ಟುಕೊಂಡ ಕನ್ನಡಿಗರೇ ಇದ್ದಾರೆ. ಹಾಗಾಗಿ, ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಬಿಟ್ಟು ಇಂಗ್ಲೀಷ್ ಭಾಷೆಯ ಮಾಧ್ಯಮದಲ್ಲಿ ಕಲಿಸುತ್ತಾರೆ. ಹಿಂದಿ, ಜರ್ಮನ್, ಫ್ರೆಂಚ್ ಭಾಷೆಯಲ್ಲಿ ಓದಿಸುತ್ತಾರೆ. ಕನ್ನಡದ ಬಗ್ಗೆ ಅವರಿಗಿರುವ ಅಜ್ಞಾನ ಇದಕ್ಕೆ ಕಾರಣ, ಕನ್ನಡಿಗರಷ್ಟು ಭಾಷಾ ನಿರಭಿಮಾನಿಗಳು ಯಾರೂ ಇಲ್ಲ. ಕನ್ನಡವನ್ನು ಬೆಳೆಸುತ್ತಿರುವುದು ಮನೆ ಮಾತು ತುಳುವಾಗಿರುವವರು ಹೆಚ್ಚು. ಆದರೆ, ಒಳನಾಡಿನ ಕನ್ನಡಿಗರಲ್ಲಿ ಈ ಅಭಿಮಾನ ಇಲ್ಲ, ಇನ್ನು ಕೆಲವು ಆವೇಶಭರಿತ ಕನ್ನಡ ಹೋರಾಟಗಾರರು, ತಮಿಳರನ್ನು ಅಂದಾಭಿಮಾನಿಗಳು ಅಂತಾ ಕರೀತಾರೆ. ಅದು ಶುದ್ಧಾಂಗ ತಪ್ಪು.

ಏಕೆಂದರೆ ಅವರ ಭಾಷೆಯ ಅಸ್ಮಿತೆ ಅದು ಸ್ವಾಭಿಮಾನದ ಅಸ್ಮಿತೆ, ಆ ದೃಷ್ಟಿಯಿಂದಲೇ ಇವತ್ತು ಕೂಡಾ ದ್ವಿಭಾಷಾ ನೀತಿಯನ್ನು ಅವರು ಒಪ್ಪಿಕೊಂಡಿರುವುದು. ಇವರಿಗೆ ನಿರಭಿಮಾನ ಇದ್ದುದರಿಂದ ಇವತ್ತು ತ್ರಿಭಾಷಾ ನೀತಿ ಒಪ್ಪಿಕೊಂಡು ಕನ್ನಡ ನಾಶಕ್ಕೆ ಕಾರಣರಾಗುತ್ತಿದ್ದಾರೆ. ಕನ್ನಡ ನಾಶಕ್ಕೆ ಅನ್ಯರು ಕಾರಣರಲ್ಲ, ಕನ್ನಡಿಗರೇ ಕಾರಣ.

ತ್ರಿಭಾಷಾ ನೀತಿ ಬೇಕಿಲ್ಲ, ದ್ವಿಭಾಷಾ ನೀತಿಯೇ ಬೇಕಿರುವುದು, ಮೊದಲಿನಿಂದಲೂ ಕೂಡಾ ಗತವೈಭವವನ್ನು ಹೇಳಿಕೊಂಡು ಬರುತ್ತಾರೆ. ಒಳಹೊಕ್ಕು ನೋಡಿದರೆ, ಕನ್ನಡದ ಪ್ರಜ್ಞೆ ಬಗ್ಗೆ ತಿಳುವಳಿಕೆ ಇಲ್ಲ, ಐತ್ವ, ಏತ್ವ ಕಾಗುಣಿತಗಳಿವೆಯಲ್ಲ, ಅರತು ಎಂದರೆ ಬತ್ತಿ ಹೋದಾ ಅಂತಾ, ಅರಿತು ಅಂದರೆ ತಿಳುವಳಿಕೆ, ಒಂದಕ್ಷರ ಒಳಗೆ ಒಂದು ಇಳಿಕೆ ಅರ್ಥ ವ್ಯತ್ಯಾಸ ತರುತ್ತದೆ. ಕರ, ಕೆರ ಹೀಗೆ ಸಾವಿರಾರು ಉದಾಹರಣೆ ಕೊಡಬಹುದು.

 ಭಾಷೆ ಒಂದು ಸಾಧನ

ಭಾಷೆ ಒಂದು ಸಾಧನ

ಉಚ್ಚಾರ ಸೂಕ್ಷ್ಮತೆಯೊಳಗೆ ಜ್ಞಾನ ಪ್ರಜ್ಞೆ ಇದ್ದಾಗ ಮಾತ್ರ ಬರುತ್ತದೆ. ನಮ್ಮ ಪೂರ್ವಿಕರಿಗೆ ಇಂಥ ಜ್ಞಾನ ಪ್ರಜ್ಞೆ ಇತ್ತು. ಅದು ನಮಗೆ ವರ್ಣಮಾಲೆಯಲ್ಲಿ ಗೊತ್ತಾಗುತ್ತದೆ. ಜಗತ್ತಿನ ಎಲ್ಲಾ ಭಾಷೆಯನ್ನು ಒಳಗೊಳ್ಳಬಲ್ಲ ಶಕ್ತಿ ಇದ್ದರೂ ಕನ್ನಡಿಗರು ಕೀಳರಿಮೆಯಿಂದ ಕಾಣುತ್ತಿರುವುದರಿಂದ ಬೆಳವಣಿಗೆ ಕಾಣುತ್ತಿಲ್ಲ. ಅದರಲ್ಲೂ ಶಿಕ್ಷಿತ ಕನ್ನಡಿಗರು ಮಾರಕವಾಗುತ್ತಿದ್ದಾರೆ. ಅವರಿಗೆ ಇಂಗ್ಲೀಷ್ ಅಂದರೆ ಇಂಟಲೆಕ್ಚಿಯಲ್ ಭಾಷೆ ಎಂಬ ಭ್ರಮೆ ಇದೆ.

ಭಾಷೆ ಒಂದು ಸಾಧನ. ಅದನ್ನು ಜನ ಹೇಗೆ ಬಳಸುತ್ತಾರೆ ಎಂಬುದರ ಮೇಲೆ ಅದರ ಶಕ್ತಿ ವ್ಯಕ್ತವಾಗುತ್ತಾ ಹೋಗುತ್ತದೆ. ಸಮಕಾಲೀನ ಕನ್ನಡಿಗರು ಭಾಷೆಯ ಬಗ್ಗೆಯ ಕೀಳರಿಮೆಯಿಂದಲೇ ನಾಶಕ್ಕೆ ಕಾರಣರಾಗಿದ್ದಾರೆ ತಮಿಳರು ನಮಗೆ ಮಾದರಿ, ಭಾಷಾಭಿಮಾನ, ಭಾಷೆಯ ಬೆಳವಣಿಗೆ ಬಗ್ಗೆ ಮಾದರಿಯಾಗಬೇಕಿದೆ.

ಪ್ರತಿಯೊಂದೂ ಕನ್ನಡದಲ್ಲೇ ಸಿಗಲಿ - ಆನಂದ್ ಜಿಪ್ರತಿಯೊಂದೂ ಕನ್ನಡದಲ್ಲೇ ಸಿಗಲಿ - ಆನಂದ್ ಜಿ

 ದ್ರಾವಿಡ ಭಾಷೆಗಳ ಸಮೂಹ

ದ್ರಾವಿಡ ಭಾಷೆಗಳ ಸಮೂಹ

ದ್ರಾವಿಡ ಭಾಷೆ 22 ಭಾಷೆಗಳನ್ನು ಒಳಗೊಂಡಿದೆ. ಸದ್ಯಕ್ಕೆ ಪಂಚ ದ್ರಾವಿಡ ಭಾಷೆಗಳು ಉಳಿದಿವೆ. ಇತ್ತೀಚೆಗೆ ಬ್ರಹೂಯಿ ಎಂಬ ಭಾಷೆ ನಶಿಸಿದೆ. ಅದನ್ನು ಎಲ್ಲಿ ಆಡುತ್ತಿದ್ದರು ಎಂದು ಹುಡುಕಿದರೆ ಮುಂಬೈನಲ್ಲಿ ಒಬ್ಬನನ್ನು ಗುರುತಿಸಿದ್ದಾರೆ. ಅರೆ ಭಾಷೆ, ತುಳು, ಗೊಂಡಿ, ಗೌಡ, ಕೊಂಕಣಿ ಎಲ್ಲವೂ ಉಪ ಭಾಷೆಗಳಾಗಿ ಬೆಳೆದಿವೆ. ಎಲ್ಲಾ ಭಾಷೆಗಳಿಗೂ ಸಂಸ್ಕೃತವೇ ಮೂಲ ಎಂದು ಎಲ್ಲರೂ ತಿಳಿದಿದ್ದರು ಅದು ಸುಳ್ಳು. ಕಾಲ್ಡ್ವಿನ್ ಎಂಬ ಭಾಷಾ ತಜ್ಞ ಹೇಳುವ ತನಕ ಎಲ್ಲರೂ ಹೀಗೆ ತಿಳಿದಿದ್ದರು ಸಂಸ್ಕೃತಗಿಂತಲೂ ಪ್ರಾಕೃತ ಹಳೆಯದು. ಪ್ರಾಕೃತದಿಂದ ಸಂಸ್ಕೃತ ಹುಟ್ಟಿದೆಯೇ ಹೊರತೂ ಸಂಸ್ಕೃತದಿಂದ ಪ್ರಾಕೃತ ಹುಟ್ಟಿಲ್ಲ. ಪ್ರಕೃತಿ ಮುಂಚೆ ಸಂಸ್ಕೃತಿ ನಂತರ, ಸಂಸ್ಕೃತಿ ಇಂಡೋ ಆರ್ಯನ್ ಪ್ರಕಾರವಾಗಿದ್ದರೆ. ಮಿಕ್ಕಿದ್ದು ದ್ರಾವಿಡನ್ ಮೂಲವಾಗಿದೆ. ಇಂಡೋ ಆರ್ಯನ್ ಹೊರಗಿನಿಂದ ಬಂದಿದ್ದು, ದ್ರಾವಿಡ ಭಾಷೆ ಇಲ್ಲೇ ಹುಟ್ಟಿ ಬೆಳೆದಿದ್ದು.

ಕನ್ನಡ ಭಾಷೆ ಮೂಲ
ಶೆಟ್ಟರ್ ಅವರ ಪ್ರಕಾರವಾಗಿ ಒಂದು ಭಾಷೆ ಹಲವು ಭಾಷೆಗಳಾಗಿ ಬೆಳೆದಿದೆ. ಭಾಷೆಯನ್ನಾಡುವ ಜನ ದೂರಾದಂತೆ ಅನ್ಯಭಾಷೆಗಳ ಪ್ರಭಾವದಿಂದ ವ್ಯತ್ಯಯ ಉಂಟಾಗಿದೆ. ಮೂಲ ದ್ರಾವಿಡವನ್ನು ಉಳಿಸಿಕೊಂಡಿದ್ದು ತಮಿಳು, ಸಂಸ್ಕೃತದ ಪ್ರಭಾವಕ್ಕೆ ಕನ್ನಡ, ಮಲಯಾಳಂ, ತೆಲುಗು ಒಳಗಾಗಿವೆ. ಮಲಯಾಳಂ, ತೆಲುಗು ಹೆಚ್ಚು ಪ್ರಭಾವಕ್ಕೆ ಒಳಗಾಗಿದೆ. ಹರಿವ ನೀರಿನಂತೆ ಬೇರೆ ಭಾಷೆಯನ್ನು ಸೇರಿಸಿಕೊಂಡು ಬೆಳೆಯಬೇಕು. ಸುಮಾರು ಎಂಬುದು ಫ್ರೆಂಚ್ ಶಬ್ದ ಈಗ ಕನ್ನಡ ಪದವೇ ಆಗಿದೆ. ಇವತ್ತು ಅಚ್ಚ ಕನ್ನಡ ಪದ 19% ಇಲ್ಲ, ಅಚ್ಚ ಇಂಗ್ಲೀಷ್ 25% ಮೇಲೆ ಇಲ್ಲ, ಫ್ಲೆಕ್ಸಿಬಲಿಟಿ ಮುಖ್ಯ.

ಅಕ್ಷರ ಮೂಲ
ಹಲ್ಮಿಡಿಗಿಂತಲೂ ಪೂರ್ವ ಶಾಸನದಲ್ಲಿ ಮೊದಲ ಅಕ್ಷರ ಸಿಕ್ಕಿದೆ ಅಂತಾ ವಾದವಿದೆ. ಗ್ರೀಕ್‌ನಲ್ಲಿ ಕನ್ನಡ ಶಬ್ದಗಳಿವೆ ''ಇಸಿಲ'' ಎಂಬ ಕನ್ನಡ ಪದದ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಸೂರ್ಯ, ಚಂದ್ರ ನಮ್ಮ ಶಬ್ದವಲ್ಲ, ಸೂರ್ಯನಿಗೆ ಕನ್ನಡ ಪದ ಅರ್ಕ, ನಕ್ಷತ್ರಕ್ಕೆ ಕನ್ನಡ ಪದ ಅರಿಳ್, ಚಂದ್ರನಿಗೆ ತೆರೆ, ಅನ್ನಕ್ಕೆ ಕೂಳ್, ಈ ಯಾವ ಶಬ್ದಗಳು ಈಗ ಬಳಕೆಯಲ್ಲಿಲ್ಲ. ಆದರೆ, ತಮಿಳು ಪೂರ್ವ ಪದಗಳನ್ನು ಉಳಿಸಿಕೊಂಡು ಬಂದಿದ್ದಾರೆ.

ಬೇರೆ ಭಾಷೆ ಮಿಶ್ರಣ
ಸಂಸ್ಕೃತಿ ನಾಗರೀಕತೆ ಬೆಳೆದಂತೆ ಭಾಷೆಯೂ ವಿಕಾಸವಾಗುತ್ತದೆ. ಜ್ಞಾನ ನಿಂತ ನೀರಲ್ಲ, ವಿಜ್ಞಾನ ನಮ್ಮ ಪರಿಭಾಷೆಗೆ ಬರಬೇಕಾದಾಗ ವ್ಯತ್ಯಾಸಗಳನ್ನು ಗಮನಿಸಬಹುದು. ಪೊಲೀಸ್ ಪದಕ್ಕೆ ಆರಕ್ಷಕ ಎಂದು ಬಳಸಿದರು, ಆರಕ್ಷಕ ಕನ್ನಡ ಪದನಾ? ಅಲ್ಲ, ಹೀಗಾಗಿ, ಪೊಲೀಸ್ ಶಬ್ದ ಹಾಗೆ ಬಳಸುವುದು ಮುಖ್ಯ. ಹೀಗಾಗಿ, ಜನ ಬಳಕೆಯಲ್ಲಿ ಯಾವುದು ಇರುತ್ತದೆ ಅದು ಉಳಿಯುತ್ತದೆ. ಇಂಜಿನಿಯರ್ ಪದಕ್ಕೆ ಅಭಿಯಂತರ ಎಂದರೆ ಯಾರಿಗೂ ತಿಳಿಯಲ್ಲ. ಭಾಷಾ ಪಂಡಿತರು ಏನೇನೋ ತುರುಕಿದರು ಜನ ಸಾಮಾನ್ಯರು ಎಷ್ಟರ ಮಟ್ಟಿಗೆ ಸೂಕ್ಷ್ಮವಾಗಿ ಬೆಳೆಸುತ್ತಾರೋ ಅದು ಉಳಿಯುತ್ತದೆ. ಜರ್ಮನ್ ದೇಶದಲ್ಲಿ ಜರ್ಮನಿಯಲ್ಲೇ ಎಲ್ಲವನ್ನು ಬೋಧಿಸಲು ಸಾಧ್ಯವಾಗಿದೆ.

2500 ವರ್ಷ
ಸಂಗಂ ತಮಿಳಿಗಂ ಎಂದು ಎಸ್ ಎಸ್ ಶೆಟ್ಟರ್ ಅವರು ಅದರಲ್ಲಿ ಸಾಕ್ಷಿ ಕೊಟ್ಟಿದ್ದಾರೆ. ತಮಿಳುಗೂ ಭಾಷೆಗೂ ವ್ಯತ್ಯಾಸವೆಂದರೆ ಅಲ್ಲಿ ತಿರುಕ್ಕುರುಳ್ ಇದೆ. ಆದರೆ, ನಮ್ಮಲ್ಲಿ ರಾಮಾಯಣ, ಮಹಾಭಾರತ ಕಥನವನ್ನು ಮೂಲ ಎನ್ನುತ್ತಾರೆ. ಪಂಪ ಕಟ್ಟಿದ್ದು ವೈದಿಕಗಿಂತ ಭಿನ್ನವಾಗಿದೆ. ಜನಪದಕ್ಕೆ ಪರಂಪರೆ ಇದೆ ಹೊರತೂ ಹಿಸ್ಟರಿ ಇಲ್ಲ, ಹೀಗಾಗಿ, ದಿನಾಂಕ, ಕಾಲಮಾನ ನಿರ್ದಿಷ್ಟವಾಗಿ ಗುರುತಿಸುವುದು ಕಷ್ಟವಾಗಿದೆ.

English summary
Interview with Kannada Development Authority former Chairman Prof. SG Siddaramaiah on Kannada language history, development, pride and what is needed to be done.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X