ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವವೈವಿಧ್ಯವನ ಭಾಗ 8; "ಜ್ಞಾನಭಾರತಿ ಆವರಣದ ವನ ಕಡಿಯದಂತೆ ಸರ್ಕಾರ ಸುಗ್ರೀವಾಜ್ಞೆ ತರಲಿ"

|
Google Oneindia Kannada News

ಇತ್ತೀಚೆಗೆ ಬೆಂಗಳೂರು ವಿ.ವಿ. ಜ್ಞಾನಭಾರತಿ ಆವರಣದ ಜೀವ ವೈವಿಧ್ಯವನ ಪ್ರದೇಶದಲ್ಲಿ ಮೂರು ಸಂಸ್ಥೆಗಳಿಗಾಗಿ ಸುಮಾರು 32 ಎಕರೆ ಜಾಗವನ್ನು ಸರ್ಕಾರ ಬೋಗ್ಯಕ್ಕೆ ನೀಡಿತ್ತು. ಈ ಕುರಿತು ವಿವಾದ ಸೃಷ್ಟಿಯಾಗಿ ಮಾಧ್ಯಮಗಳಲ್ಲಿ ಜೀವ ವೈವಿಧ್ಯವನ ನಾಶ ಮಾಡಬಾರದು, ಇಲ್ಲಿನ ಪರಿಸರವನ್ನು ಉಳಿಸಿಕೊಳ್ಳಬೇಕೆಂದು ಅನೇಕ ಬಾರಿ ಸುದ್ದಿಯಾಯಿತು.

ಸರ್ಕಾರ ಆದೇಶ ಹಿಂಪಡೆಯಲು ಒತ್ತಾಯಿಸಿ ಖ್ಯಾತ ಪರಿಸರ ತಜ್ಞರಾದ ಯಲ್ಲಪ್ಪರೆಡ್ಡಿ ತಮಗೆ ನೀಡಿದ್ದ ಗೌರವ ಡಾಕ್ಟರೇಟ್ ಹಿಂದಿರುಗಿಸಿ ತಮ್ಮ ಪ್ರತಿರೋಧವನ್ನು ಪ್ರಕಟಿಸಿದ್ದರು. ಜೈವಿಕ ವನದ ವಿಶೇಷಾಧಿಕಾರಿ ರೇಣುಕಾ ಪ್ರಸಾದ್ ವನ ಉಳಿಸಿಕೊಳ್ಳಲು ಪಣ ತೊಟ್ಟಿದ್ದರು. ಆ ನಂತರ ಮೂರೂ ಸಂಸ್ಥೆಗಳಿಗೆ 30 ವರ್ಷಗಳ ಕಾಲ ನೀಡಿದ್ದ ಲೀಸ್ ಅಗ್ರಿಮೆಂಟ್ ಗಳಲ್ಲಿ ಬಯೋ ಪಾರ್ಕ್ ಗೆ ಯಾವುದೇ ಹಾನಿ ಮಾಡಬಾರದೆಂಬ ಷರತ್ತು ವಿಧಿಸಲಾಗಿತ್ತು.

ಜೀವವೈವಿಧ್ಯ ವನ ಭಾಗ 7: ಜ್ಞಾನಭಾರತಿಯ ಜೈವಿಕ ವನ ಏಕೆ ಉಳಿಯಬೇಕು?: ಹೆಬ್ಳೀಕರ್ insights…ಜೀವವೈವಿಧ್ಯ ವನ ಭಾಗ 7: ಜ್ಞಾನಭಾರತಿಯ ಜೈವಿಕ ವನ ಏಕೆ ಉಳಿಯಬೇಕು?: ಹೆಬ್ಳೀಕರ್ insights…

ಇದೀಗ ವಿ.ವಿ ಭೂಮಿಯನ್ನು ಕಟ್ಟಡಗಳಿಗಾಗಿ ನೀಡಬಾರದೆಂಬ ಕೂಗೂ ಕೇಳಿಬರುತ್ತಿದೆ. ಈ ಕುರಿತು ಎ.ಎನ್. ಯಲ್ಲಪ್ಪರೆಡ್ಡಿ ಹಾಗೂ ಪ್ರೊ. ರೇಣುಕಾ ಪ್ರಸಾದ್ ಅವರ ಜಂಟಿ ಸಂದರ್ಶನ ಇಲ್ಲಿದೆ...

 1. ಬೆಂಗಳೂರು ವಿ.ವಿ.ಯಲ್ಲಿ ವಿವಿಧ ಸಂಸ್ಥೆಗಳಿಗೆ ಭೂಮಿ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಸಂಸ್ಥೆಗಳಿಗೆ ಭೂಮಿ ಕೊಡಲಾಗಿದೆ. ಈಗೇಕೆ ಅದರ ಬಗ್ಗೆ ತಕರಾರು?

1. ಬೆಂಗಳೂರು ವಿ.ವಿ.ಯಲ್ಲಿ ವಿವಿಧ ಸಂಸ್ಥೆಗಳಿಗೆ ಭೂಮಿ ನೀಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಅನೇಕ ಸಂಸ್ಥೆಗಳಿಗೆ ಭೂಮಿ ಕೊಡಲಾಗಿದೆ. ಈಗೇಕೆ ಅದರ ಬಗ್ಗೆ ತಕರಾರು?

ಹಿಂದೆ ಭೂಮಿ ನೀಡಿದಾಗ ಬರಡಾದ ಭೂಮಿಯಾಗಿತ್ತು. ಬಟಾಬಯಲಾಗಿತ್ತು. ಮೂಲೆಗಳಲ್ಲಿ ಜಾಗ ನೀಡಲಾಗಿತ್ತು. ವಿ.ಕೆ.ಆರ್.ವಿ ರಾವ್ ಅವರ ನೇತೃತ್ವದಲ್ಲಿ ಸ್ಥಾಪಿಸಲಾದ ISECಗೆ ಭೂಮಿ ನೀಡಿದರು. ಅದೊಂದು ಪ್ರೀಮಿಯರ್ ಇನ್ ಸ್ಟಿಟ್ಯೂಟ್. ಅನೇಕ ಅಧ್ಯಯನಗಳಿಗೆ ವಿ.ವಿಯೊಂದಿಗೆ ಪೂರಕವಾಗಿ ವಿನಿಮಯ ಕಾರ್ಯಕ್ರಮಗಳಾಗುತ್ತಿತ್ತು. ಮಾಧವ ಮೆನನ್ ಅವರ ಮುತುವರ್ಜಿಯಿಂದ NLSIU ಸಂಸ್ಥೆ ಬಂತು. ಜ್ಞಾನ ಶಾಖೆಗಳ ವಿಸ್ತಾರವಾಯಿತು. ಅದೇ ರೀತಿ ಮೇರು ಸಂಶೋಧನಾ ಕೇಂದ್ರಗಳು ಬಂದವು. ಅಂತರ ರಾಷ್ಟ್ರೀಯ ಮಟ್ಟದ ಸಂಸ್ಥೆಗಳು ವಿ.ವಿಯಲ್ಲಿದ್ದರೆ ವಿಶ್ವವಿದ್ಯಾಲಯಕ್ಕೂ ಜ್ಞಾನ ವಿನಿಮಯ ಹಾಗೂ ಘನತೆ ತರುವಂಥ ಕೆಲಸವಾಗುತ್ತಿತ್ತು. ಸಾವಿರಾರು ಐಎಎಸ್, ಕೆಎಎಸ್ ವಿದ್ಯಾರ್ಥಿಗಳಿಗೆ, ನ್ಯಾಯಾಧೀಶರಿಗೆ ತರಬೇತಿ ನೀಡುವ ಕೇಂದ್ರವಾಗಿ NLSIU ಕೆಲಸ ಮಾಡಿದೆ.
ಇದೆಲ್ಲಾ ಸಾಧನೆಯನ್ನು ಗಣನೆಗೆ ತೆಗೆದುಕೊಳ್ಳದೆ ಹಿಂದೆಯೂ ಭೂಮಿ ನೀಡಿತ್ತು. ಈಗೇಕೆ ತಕರಾರು ಎನ್ನುವವರಿಗೆ ಏನು ಹೇಳಬೇಕೋ ತಿಳಿಯದು. AMDಯಿಂದ ಭೂವಿಜ್ಞಾನ ವಿಭಾಗಕ್ಕೆ ಸಾಕಷ್ಟು ಪ್ರಯೋಗಾಲಯದ ಸವಲತ್ತು ಸಿಗುತ್ತಿದ್ದದ್ದು ಸ್ಮರಿಸಬಹುದು.

ಜೀವವೈವಿಧ್ಯವನ ಭಾಗ 6: ಜೀವವೈವಿಧ್ಯವನ ರಕ್ಷಣೆಗೆ ಸಿಂಡಿಕೇಟ್ ಸದಸ್ಯ ಡಾ.ಗೋವಿಂದರಾಜು ತಾಕೀತುಜೀವವೈವಿಧ್ಯವನ ಭಾಗ 6: ಜೀವವೈವಿಧ್ಯವನ ರಕ್ಷಣೆಗೆ ಸಿಂಡಿಕೇಟ್ ಸದಸ್ಯ ಡಾ.ಗೋವಿಂದರಾಜು ತಾಕೀತು

"ಮಹತ್ವದ ಜಾಗದಲ್ಲಿ ಬೇರೆ ಸಂಸ್ಥೆಗಳಿಗೆ ಜಾಗ ಕೊಡುವುದು ತಪ್ಪು"

ತದನಂತರ ಕೆಲವು ಉಪಕುಲಪತಿಗಳು ತಮ್ಮ ಸ್ವಾರ್ಥಕ್ಕಾಗಿ ಕೆಲವು ಸಂಸ್ಥೆಗಳಿಗೆ ಭೂಮಿ ನೀಡುವ ಭೌದ್ಧಿಕ ದಾರಿದ್ರ್ಯ ಬೆಳೆಸಿಕೊಂಡರು. ಆದರೆ ಇದೀಗ ಬೆಂಗಳೂರು ವಿ.ವಿಯಲ್ಲಿರುವುದು ಬರಡು ಭೂಮಿಯಲ್ಲ. ಇಲ್ಲಿ ಜೀವವೈವಿಧ್ಯವನವಿದೆ. ಪಶ್ಚಿಮ ಘಟ್ಟಗಳಲ್ಲಿರುವ ಬಹು ಸೂಕ್ಷ್ಮ ಜೀವವೈವಿಧ್ಯವನ್ನು ಇಲ್ಲಿ ಬೆಳೆಸುವಲ್ಲಿ ನಮ್ಮ ವಿದ್ಯಾರ್ಥಿಗಳು, ಸಾರ್ವಜನಿಕರು ಯಶಸ್ವಿಯಾಗಿದ್ದಾರೆ. ಇದೊಂದು ಅಧ್ಯಯನ ಯೋಗ್ಯ ಬಯಲು ಪ್ರಯೋಗಾಲಯವಾಗಿದೆ. ಸುಮಾರು 44 ವಿವಿಧ ವಿಭಾಗ/ಶಾಖೆಗಳ ವಿದ್ಯಾರ್ಥಿಗಳಿಗೆ ಅಧ್ಯಯನ ಯೋಗ್ಯ ವಸ್ತು ವಿಷಯಗಳು ಜೀವವೈವಿಧ್ಯವನದ ಅಂಗಳದಲ್ಲಿ ತಲೆಯೆತ್ತಿ ನಿಂತಿವೆ. ಇದನ್ನು NAAC ಕೊಂಡಾಡಿರುವುದಲ್ಲದೆ ವಿವಿಗೆ ನೀಡಿರುವ ಪ್ರಶಂಸೆಯಲ್ಲಿ ಇದು ಮೊದಲನೆಯದು ಎಂದು ಹೇಳಿಕೊಳ್ಳಲು ಎಲ್ಲರೂ ಹೆಮ್ಮೆ ಪಡಬೇಕು.
ಹಾಗಾಗಿ ಇಂಥ ಮಹತ್ವದ ಜಾಗದಲ್ಲಿ ಬೇರೆ ಯಾವುದೇ ಸಂಸ್ಥೆಗಳಿಗೆ ಜಾಗ ಕೊಡುವುದು ಅಕ್ಷಮ್ಯ ತಪ್ಪು ಮತ್ತು ಮುಂದಿನ ಪೀಳಿಗೆ ನಮ್ಮನ್ನು ಕ್ಷಮಿಸಲಾರದ ಅಪರಾಧವೆಂದೇ ನಮ್ಮ ತಿಳಿವಳಿಕೆಯಾಗಿದೆ.

 2. ವಿವಿಯ ಆವರಣದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಗಿಡಮರಗಳಿವೆ ಎಂದು ನೀವೇ ಹೇಳುತ್ತಿದ್ದೀರಿ. ಇದೀಗ ವಿವಿಧ ಸಂಸ್ಥೆಗಳಿಗೆ ನೀಡಲಾಗಿರುವ ಜಾಗದ ಅಲ್ಪ ಪ್ರಮಾಣದಲ್ಲಿ ಮಾತ್ರ ಕಟ್ಟಡಗಳು ಬರುತ್ತವೆ. ಅಲ್ಲಿ ಮಾತ್ರ ಗಿಡಮರಗಳು ಹೋದಾವು.. ಇದರಿಂದ ಏನು ತೊಂದರೆ?

2. ವಿವಿಯ ಆವರಣದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಗಿಡಮರಗಳಿವೆ ಎಂದು ನೀವೇ ಹೇಳುತ್ತಿದ್ದೀರಿ. ಇದೀಗ ವಿವಿಧ ಸಂಸ್ಥೆಗಳಿಗೆ ನೀಡಲಾಗಿರುವ ಜಾಗದ ಅಲ್ಪ ಪ್ರಮಾಣದಲ್ಲಿ ಮಾತ್ರ ಕಟ್ಟಡಗಳು ಬರುತ್ತವೆ. ಅಲ್ಲಿ ಮಾತ್ರ ಗಿಡಮರಗಳು ಹೋದಾವು.. ಇದರಿಂದ ಏನು ತೊಂದರೆ?

ಟ್ರಾಪಿಕಲ್ ಫಾರೆಸ್ಟರಿ ನೀತಿ ಪ್ರಕಾರ (1980) ಪ್ಲೇಟೋ ಜಾಗದಲ್ಲಿ ಶೇಕಡಾ 33ರಷ್ಟು ಸ್ವಾಭಾವಿಕ ಅರಣ್ಯವಿರಬೇಕು. ಹಳ್ಳ ಕೊಳ್ಳ ಇರುವ ಪ್ರದೇಶದಲ್ಲಿ 66 % ಇರಬೇಕು. ಎಕಲಾಜಿಕಲಿ ಸೂಕ್ಷ್ಮ ಪ್ರದೇಶಗಳ ಬಗ್ಗೆ ನಮಗೆ ತಿಳಿದಿರಬೇಕು. ವಿವಿಯ ಆವರಣ ಅರ್ಕಾವತಿ ನದಿ ಕ್ಯಾಚ್ಮೆಂಟ್ ಏರಿಯಾ ಆಗಿದ್ದು ಇಲ್ಲಿ ವೃಷಭಾವತಿ ನದಿ ಹರಿಯುತ್ತದೆ. ಹಿಂದೆ ಇದು ಕೂಡಾ ಶುಭ್ರವಾಗಿತ್ತು. ನಾನೇ ನೀರು ಕುಡಿದಿದ್ದೇನೆ. ಈಗ ಅದು ಉಪಯೋಗಕ್ಕೆ ಬಾರದ ಸ್ಥಿತಿಗೆ ತಲುಪಿದೆ. ಅಂತರ್ಜಲ ಕೂಡ ಕೊಳಕಾಗುವ ಸನ್ನಿವೇಶ ಎದುರಾಗಿದೆ. ಸಾವಿರ ಅಡಿ ಕೊರೆದರೂ ನೀರು ಸಿಗದ ಸ್ಥಿತಿ ಇಲ್ಲಿಯೂ ಇತ್ತು. ಈಗ ಚೆಕ್ ಡ್ಯಾಂ, ಕಲ್ಯಾಣಿ, ಒಡ್ಡುಗಳು, ಅರಣ್ಯ ಎಲ್ಲವೂ ಆದ ಮೇಲೆ ಅಂತರ್ಜಲ ಮಟ್ಟ ಮೇಲಕ್ಕೆ ಬಂದಿರುವುದು ಅಧ್ಯಯನಗಳಿಂದ ದೃಢಪಟ್ಟಿದೆ. ಕಲ್ಯಾಣಿ ಅತಿ ಹೆಚ್ಚು ಅಂತರ್ಜಲ ಶೇಖರಣೆ ಆಗಲು ಪೂರಕವಾಗಿದೆ. ಹಲವಾರು ಸಂಶೋಧನೆಗಳು ಇಲ್ಲಿ ನಡೆದಿರುವುದಲ್ಲದೆ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ತರುವಂಥ ಅಧ್ಯಯನಗಳಿಗೂ ಜೈವಿಕ ವನ ಆಶ್ರಯ ಒದಗಿಸಿದೆ.

ಜೀವವೈವಿಧ್ಯ ವನ ಭಾಗ 5: ಯೋಗ ವಿ.ವಿ ಸ್ಥಾಪನೆ; ಉಸಿರುಗಟ್ಟಿಸಿ ಉಸಿರಾಡುವುದನ್ನು ಹೇಳಿಕೊಟ್ಟಂತೆಜೀವವೈವಿಧ್ಯ ವನ ಭಾಗ 5: ಯೋಗ ವಿ.ವಿ ಸ್ಥಾಪನೆ; ಉಸಿರುಗಟ್ಟಿಸಿ ಉಸಿರಾಡುವುದನ್ನು ಹೇಳಿಕೊಟ್ಟಂತೆ

"I feel sad for this total ignorance"

ದುರಂತವೆಂದರೆ ಈ ಎಲ್ಲಾ ಸಂಶೋಧನೆಗಳು ಹಾಗೂ ಅಧ್ಯಯನ ಯೋಗ್ಯ ವಿಷಯಗಳು ವಿವಿ ಆಡಳಿತ ಮಂಡಳಿ ಹಾಗೂ ಸರ್ಕಾರಕ್ಕೆ ತಿಳಿದಿಲ್ಲ. ಶಾಲಾ ಮಕ್ಕಳು ಕಾಲೇಜು ವಿದ್ಯಾರ್ಥಿಗಳಿಗೆ ಇದೊಂದು ಅಧ್ಯಯನ ಯೋಗ್ಯ ಜಾಗ.
ಪ್ರಪಂಚದ ಅತಿ ಪುರಾತನ ಶಿಲೆ ಮತ್ತು ಮಣ್ಣು ಹೊಂದಿರುವ, ನಶಿಸದೆ ಉಳಿದಿರುವ ಈ ಜಾಗ ಇರುವುದೇ ನಮ್ಮ ಸುದೈವ. ಇಲ್ಲಿ ಜಿಯೋ ಪಾರ್ಕ್ ನಿರ್ಮಾಣವಾಗಿದೆ. ಈ ಎಲ್ಲಾ ವಿಶೇಷಣಗಳಿಗೆ ವಿವಿಯ ಆಡಳಿತ ಮಂಡಳಿ ಕಾಲಕಾಲಕ್ಕೆ ಸಾಕ್ಷಿಯಾಗಿಯೇ ಬಂದಿದೆ. ಆದಾಗ್ಯೂ ಈಗಿನ ಕುಲಪತಿಗಳು ಜೀವವೈವಿಧ್ಯವನದ ಜಾಗವನ್ನು ಕಟ್ಟಡಗಳ ನಿರ್ಮಾಣಕ್ಕೆ ಕೊಟ್ಟಿರುವುದು ಸರಿಯಲ್ಲ. I feel sad for his total ignorance.

 3.ಇದೀಗ ವಿವಿಧ ಸಂಸ್ಥೆಗಳಿಗೆ ನಿಗದಿ ಮಾಡಿರುವ ಜಾಗದಲ್ಲಿ ಎಷ್ಟು ಪ್ರಮಾಣದ ಗಿಡಮರಗಳಿವೆ? ಅವುಗಳನ್ನು ಕಡಿದರೆ ಆಗುವ ತೊಂದರೆ ಏನು?

3.ಇದೀಗ ವಿವಿಧ ಸಂಸ್ಥೆಗಳಿಗೆ ನಿಗದಿ ಮಾಡಿರುವ ಜಾಗದಲ್ಲಿ ಎಷ್ಟು ಪ್ರಮಾಣದ ಗಿಡಮರಗಳಿವೆ? ಅವುಗಳನ್ನು ಕಡಿದರೆ ಆಗುವ ತೊಂದರೆ ಏನು?

ಈಗ ನೀಡಿರುವ ಜಾಗ ತಪೋವನಗಳಾಗಿ ಕಂಗೊಳಿಸುತ್ತಿದ್ದು, ಬೆಂಗಳೂರಿನ ಎಲ್ಲ ವಿದ್ಯಾ ಸಂಸ್ಥೆಗಳಿಗೂ ಇದೊಂದು ಪವಿತ್ರ ಕ್ಷೇತ್ರವಾಗಿದೆ. ಸ್ಥಳೀಯ ಅರಣ್ಯಾಧಿಕಾರಿಗಳು ಪರಿವೀಕ್ಷಿಸಿ ಇಲ್ಲಿ ಜೀವವೈವಿಧ್ಯವನ ಹಾಗೂ ಅರಣ್ಯ ನಿರ್ಮಾಣಗೊಂಡಿರುವುದನ್ನು ದೃಢೀಕರಿಸಿದ್ದಾರೆ. ಈ ಪ್ರದೇಶದಲ್ಲಿ ವಿವಿಧ ಸಂಸ್ಥೆಗಳಿಗೆ ಭೂಮಿ ನೀಡಿರುವ ಹಿನ್ನೆಲೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿದ್ದು, ಅರಣ್ಯ ಇಲಾಖೆ ಸಮೀಕ್ಷೆ ನಡೆಸಿ ಅರಣ್ಯ ಹಾಗೂ ಜೈವಿಕ ವನದ ಇರುವಿಕೆಯನ್ನು ಸ್ಪಷ್ಟವಾಗಿ ದೃಢೀಕರಿಸಿರುವುದು ಶ್ಲಾಘನೀಯ ಕೆಲಸ.
ಕಾನೂನು ಬಾಹಿರವಾಗಿ ಅರಣ್ಯನಾಶ ಮಾಡಿ ಪವಿತ್ರ ಜೈವಿಕ ಸಂಪತ್ತನ್ನು ಉದಾ, ರಕ್ತಚಂಚನ, ಶ್ರೀಗಂಧ, ಮತ್ತಿ, ತ್ರಿಫಲ ಮುಂತಾದ ಅತ್ಯಂತ ಮಹತ್ವದ ವೃಕ್ಷ ಸಂಪತ್ತು ಈಗ ತಾನೆ ಬೀಜೋತ್ಪತ್ತಿ ಮಾಡುತ್ತಾ ಸ್ವಾಭಾವಿಕ ಅರಣ್ಯ ಸೃಷ್ಟಿಯಾಗುತ್ತಿರುವ ಸಂದರ್ಭದಲ್ಲಿ ಇವುಗಳಿಗೆ ಕೊಡಲಿ ಪೆಟ್ಟು ನೀಡುತ್ತಿರುವುದು ಅಕ್ಷಮ್ಯ. ಇಲ್ಲಿ ಪ್ರತಿ ಗಿಡಮರ ಬಳ್ಳಿಗಳ ನಡುವೆ ಸ್ವಾಭಾವಿಕ ಹೊಕ್ಕಳು ಬಳ್ಳಿ ಸಂಬಂಧ ಏರ್ಪಟ್ಟಿದೆ.

 4. “ಜೀವವೈವಿಧ್ಯವನವನ್ನು ಬಾಧಿಸತಕ್ಕದ್ದಲ್ಲ” ಎಂಬ ಷರತ್ತಿನೊಂದಿಗೆ ಈ ಸಂಸ್ಥೆಗಳಿಗೆ ಭೂಮಿ ನೀಡಿರುವ ಸರ್ಕಾರದ ನಿಲುವಿನಲ್ಲಿ ದ್ವಂದ್ವ ಇಲ್ಲವೇ?

4. “ಜೀವವೈವಿಧ್ಯವನವನ್ನು ಬಾಧಿಸತಕ್ಕದ್ದಲ್ಲ” ಎಂಬ ಷರತ್ತಿನೊಂದಿಗೆ ಈ ಸಂಸ್ಥೆಗಳಿಗೆ ಭೂಮಿ ನೀಡಿರುವ ಸರ್ಕಾರದ ನಿಲುವಿನಲ್ಲಿ ದ್ವಂದ್ವ ಇಲ್ಲವೇ?

ಜೀವವೈವಿಧ್ಯದಿಂದ ತುಂಬಿ ತುಳುಕಾಡುತ್ತಿರುವ ಜ್ಞಾನಭಾರತಿ ಆವರಣ ಇನ್ನೂ ಹೆಚ್ಚು ಬೆಳೆಯುತ್ತಿರುತ್ತದೆ. ಹಲವು ಕ್ಷೇತ್ರಗಳಿಂದ ಹಲವು ವಿಶೇಷ ಗಿಡಗಳನ್ನು ಆರಿಸಿ ತಂದು ಅನೇಕ ವನಗಳನ್ನು ನಿರ್ಮಿಸಲಾಗಿದೆ. ನಿತ್ಯಹರಿದ್ವರ್ಣ ಒಂದು ಕಡೆಯಾದರೆ, ಇನ್ನೊಂದೆಡೆ ತ್ರಿಫಲ ವನವಿದೆ. ಗಂಧವೊಂದು ಕಡೆಯಾದರೆ ಬಿದಿರೊಂದು ಕಡೆ. ಗುಳಿಮಾವು ಇಲ್ಲಿದ್ದೇನೆಂದರೆ ಗಮ್ಮಘಟ್ಟ ನಾ ಇಲ್ಲಿ ಎಂದು ಕೈ ಬೀಸಿ ಕರೆಯುತ್ತದೆ. ಈ ರೀತಿಯಾಗಿ ಸಾವಿರಾರು ಜಾತಿಯ ಮರಗಿಡಗಳ ವೈಭವವಿಲ್ಲಿದೆ.
ಇಂಥ ಹಲವು ಜಾತಿಯ ಮರಗಳ ಕಾಡಿನಲ್ಲಿ ಯಾವುದನ್ನೂ ಕಳೆದುಕೊಳ್ಳುವ ಯೋಚನೆಯೇ ಬರಬಾರದು. ಇವೆಲ್ಲವೂ ಸೇರಿ "ಇದೊಂದು ತಪೋವನ" ಆಗಿದೆ.

 ವನದ ಯಾವ ಭಾಗವೂ ಊನವಾಗಬಾರದು

ವನದ ಯಾವ ಭಾಗವೂ ಊನವಾಗಬಾರದು

ಈ ವನವೊಂದು ಶರೀರದಂತೆ ಬೆಳೆದಿದೆ. ಶರೀರದ ಯಾವ ಭಾಗವೂ ಊನವಾಗಬಾರದು. ಈ ಅಂಶವನ್ನು ರಾಜ್ಯ ಸರ್ಕಾರ ಗಮನಿಸಿ ವನದ ಯಾವುದೇ ಭಾಗ ಹಾನಿಯಾಗಬಾರದೆಂಬ ಷರತ್ತು ವಿಧಿಸಿರುವುದನ್ನು ಇಲ್ಲಿ ಗಮನಿಸಿದರೆ ಇದರ ಮಹತ್ವದ ಅರಿವು ಪ್ರಭುತ್ವಕ್ಕಿದೆ ಎಂದಾಯ್ತು.
ವನದ ಮಹತ್ವ ಹೀಗಿರುವಾಗ ವಿ.ವಿ.ಯ ಮಟ್ಟದಲ್ಲೇ ಈ ಭೂಮಿಯನ್ನು ನೀಡಲು ಸಾಧ್ಯವಿಲ್ಲವೆಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬಹುದಿತ್ತು. ಆದರೂ ವಿ.ವಿ ಭೂಮಿ ನೀಡಲು ಮುಂದಾಗಿದೆ. ಈಗಲೂ ಕಾಲ ಮಿಂಚಿಲ್ಲ. ಎಲ್ಲಾ ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಈಗಲೂ ಜೀವವೈವಿಧ್ಯವನನ್ನು ಉಳಿಸಿಕೊಳ್ಳಲು ವಿ.ವಿ ಮುಂದಾಗಿ ಸಾರ್ವಜನಿಕರಿಗೆ ಉಪಕರಿಸಬಹುದಾಗಿದೆ.

 5. ಈಗಿರುವ ಜೀವವೈವಿಧ್ಯ ವನ ಸೃಷ್ಟಿಸಲು ಎಷ್ಟು ಕಾಲ ತೆಗೆದುಕೊಂಡಿದೆ ಮತ್ತು ಅದಕ್ಕೆ ತಗುಲಿದ ಮಾನವ ಶ್ರಮ, ಹಣ ಎಷ್ಟೆಂದು ಅಂದಾಜು ಮಾಡುತ್ತೀರಿ?

5. ಈಗಿರುವ ಜೀವವೈವಿಧ್ಯ ವನ ಸೃಷ್ಟಿಸಲು ಎಷ್ಟು ಕಾಲ ತೆಗೆದುಕೊಂಡಿದೆ ಮತ್ತು ಅದಕ್ಕೆ ತಗುಲಿದ ಮಾನವ ಶ್ರಮ, ಹಣ ಎಷ್ಟೆಂದು ಅಂದಾಜು ಮಾಡುತ್ತೀರಿ?

ಮೊದಲ ಚೆಕ್ ಡ್ಯಾಂ/ sub surface dyke ಕಾರ್ಯ ಪ್ರಾರಂಭವಾಗಿದ್ದು 1999ರಲ್ಲಿ. ಕಟ್ಟೆಯಲ್ಲಿ ನೀರು ಕಂಡ ಮೇಲೆ ಅರಣ್ಯ ನಿರ್ಮಾಣ ಕಾರ್ಯ ಆರಂಭಿಸಿದ್ದು 2000 ದಲ್ಲಿ. ರಾ.ಸೇ.ಯೋ ಸ್ವಯಂ ಸೇವಕರು, ಅರಣ್ಯ ಇಲಾಖೆ, ಭೂ ವಿಜ್ಞಾನದ ವಿಭಾಗ, ಸಿವಿಲ್ ಇಂಜಿನಿಯರಿಂಗ್ ವಿಭಾಗ ಮುಂತಾದ ವಿಭಾಗಗಳ ಆಸಕ್ತ ಸಿಬ್ಬಂದಿಯಿಂದ ಇಂದು bio and hydro park ಆಗಿ ಬೆಳೆದು ನಿಂತಿದೆ. CGWB ಯಿಂದ ಸುಮಾರು 43 ಲಕ್ಷ ರೂಪಾಯಿಗಳು ಮತ್ತು ಅರಣ್ಯ ಇಲಾಖೆಯಿಂದ ಸುಮಾರು 63 ಲಕ್ಷ ರೂಪಾಯಿಗಳು bio-park ಮೊದಲ ಹಂತದ ನಿರ್ಮಾಣಕ್ಕೆ ಖರ್ಚಾಗಿದೆ. ತದನಂತರ 120ಕ್ಕೂ ಹೆಚ್ಚು ದಾನಿಗಳಿಂದ 14 ಸ್ಥಳಗಳಲ್ಲಿ bio-park ನಿರ್ಮಾಣಗೊಂಡಿದೆ. ಇದನ್ನು ನಿರ್ಮಿಸುವ ಇಚ್ಛಾಶಕ್ತಿ, ಹರಿದು ಬಂದ ನೆರವು ಹಾಗೂ ಅದರ ಫಲ ಲೆಕ್ಕಾಚಾರಕ್ಕೆ ಸಿಗದ ವಿಷಯವಾಗಿದೆ. ಈಗ ಜೈವಿಕ ವನ ನೀಡುತ್ತಿರುವ ಆಮ್ಲಜನಕ, ಅಂತರ್ಜಲ ಮರುಪೂರಣ, ತಪೋವನದ ಸಾಕ್ಷಾತ್ಕಾರ, ಲಕ್ಷಾಂತರ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಟ್ರೆಕ್ಕಿಂಗ್ ಗಣಿತಕ್ಕೆ ಮಿಗಿಲಾದ ವಿಷಯವಾಗಿದೆ.
ಹೈಕೋರ್ಟ್ ನಿರ್ದೇಶನದಂತೆ Geo-Park ಕೂಡ ಇಲ್ಲಿ ನಿರ್ಮಾಣಗೊಂಡಿದ್ದು ಸಮಾಜದ ಸುದೈವವೇ ಸರಿ.

 6. ಇದೀಗ ಸರ್ಕಾರ ಹಾಗೂ ವಿವಿ ಏನು ಮಾಡಬೇಕು?

6. ಇದೀಗ ಸರ್ಕಾರ ಹಾಗೂ ವಿವಿ ಏನು ಮಾಡಬೇಕು?

ಶೈಕ್ಷಣಿಕೆ ಕ್ಷೇತ್ರದಲ್ಲಿ ಒಂದು "ತಪೋವನ" ಇರುವುದು ವಿ.ವಿಯ ಹೆಗ್ಗಳಿಕೆ. ಹಿಂದೆ NAAC ಅಧ್ಯಕ್ಷರು ವೀಕ್ಷಣೆಗೆ ಬಂದಾಗ bio-geo-hydro ಬಗ್ಗೆ ಪ್ರಸ್ತಾಪಿಸಿ ದೇಶದ ಏಕೈಕ ಪುಣ್ಯಕ್ಷೇತ್ರವೆಂದು ಉದ್ಘೋಷಿಸಿದ್ದರು. ಎರಡು ದಿನ ಇಲ್ಲಿಯೇ ತಂಗಿದ್ದು ಹೋಗಲು ನನಗೆ ಅವಕಾಶ ಕೊಡಿ ಎಂದು ಹೇಳಿದ್ದು ಉತ್ರ್ಪೇಕ್ಷೆಯಲ್ಲ.
ಕಾಂಕ್ರೀಟ್ ಕಾಡಾಗಿರುವ ಬೆಂಗಳೂರಿನಲ್ಲಿ ಇದು ಸಾಂತ್ವನ ನೀಡುವ ಕ್ಷೇತ್ರವೆಂದು ವಿಶೇಷ ಸ್ಥಾನಮಾನ ನೀಡಿ ಸರ್ಕಾರ ಕಟ್ಟಡ ನಿರ್ಮಾಣವನ್ನು ನಿಷೇಧಿಸಬೇಕು. ತೀರ ಅವಶ್ಯವೆಂದರೆ vertical ಗ್ರೋತ್ ಗೆ ಪ್ರೋತ್ಸಾಹಿಸುವ ಸುಗ್ರೀವಾಜ್ಞೆ ಹೊರಡಿಸಿದರೆ ಮುಂದಿನ ಪೀಳಿಗೆ ನಮಗೆ ಋಣಿಯಾಗಿರುತ್ತದೆ. ಇಲ್ಲವಾದರೆ ಕ್ಷಮಿಸಲಾರದ ತಪ್ಪು ಮಾಡಿದಂತಾಗುತ್ತದೆ.
ಉಳಿಸಿ.. ಬೆಳೆಸಿ... ಬಳಸಿ...

English summary
Recently government has allocated about 32 acres of bangalore university land for three organizations in the Biodiversity Area. This has caused many controversies over the issue of sustainability of the environment. Here is joint interview of Renowned environmentalist A.N. Yellappa reddy and Pro. Renuka Prasad,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X