ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

8 ಶತಮಾನದ ಹಿಂದಿನ ದೇಗುಲದ ಇತಿಹಾಸ ಬಗೆದ ಕನ್ನಡತಿ

|
Google Oneindia Kannada News

12ನೇ ಶತಮಾನದ ಐತಿಹಾಸಿಕ ದೇಗುಲ, ದೇಗುಲದ ವೈಶಿಷ್ಟ್ಯವು ಯಾರ ಗಮನಕ್ಕೂ ಬಂದಿರಲಿಲ್ಲ. ಆದರೆ ಇದೀಗ ಕನ್ನಡತಿಯೊಬ್ಬರ ಪ್ರಯತ್ನದಿಂದ ಈ ದೇವಾಲಯವು ಯುನೆಸ್ಕೋ ವಿಶ್ವ ಪಾರಂಪರಿಕ ತಾಣ ಮಾನ್ಯತೆ ನೀಡಿದೆ.

ತೆಲಂಗಾಣದಲ್ಲಿರುವ 12ನೇ ಶತಮಾನದ ರಾಮಪ್ಪ ದೇಗುಲ ಇದೀಗ ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸೇರ್ಪಡೆಯಾಗಿದೆ.

ತೆಲಂಗಾಣದ ಮುಲುಗು ಜಿಲ್ಲೆಯಲ್ಲಿರುವ ಈ ರಾಮಪ್ಪ ಮಂದಿರ ಭಾರತದ ಶ್ರೇಷ್ಠ ಕರಕುಶಲತೆಗೆ ಹಿಡಿದ ಕನ್ನಡಿಯಾಗಿದೆ. ಈ ದೇವಾಯ ಸುಮಾರು 800 ವರ್ಷಗಳ ಹಿಂದೆ ನಿರ್ಮಾಣವಾಗಿದೆ.

ಯುನೆಸ್ಕೋ ಪಟ್ಟಿ ಸೇರಿದ ಕಾಕತೀಯ ರಾಮಪ್ಪ ದೇಗುಲ ನೋಡಿಯುನೆಸ್ಕೋ ಪಟ್ಟಿ ಸೇರಿದ ಕಾಕತೀಯ ರಾಮಪ್ಪ ದೇಗುಲ ನೋಡಿ

ರಷ್ಯಾ, ಓಮನ್, ಬ್ರೆಜಿಲ್, ಸೌದಿ ಅರೇಬಿಯಾ, ಈಜಿಪ್ಟ್, ಸ್ಪೇನ್, ಥೈಲ್ಯಾಂಡ್, ಹಂಗೇರಿ, ಇಥಿಯೋಪಿಯಾ, ಚೀನಾ ಮತ್ತು ಇತರ ಕೆಲವು ದೇಶಗಳು ರಾಮಪ್ಪ ದೇವಾಲಯವನ್ನು ಅತ್ಯುತ್ತಮ ಪರಂಪರೆಯ ತಾಣವೆಂದು ಅಧಿವೇಶನದಲ್ಲಿ ಬಣ್ಣಸಿದೆ. ಇದೇ ವೇಳೆ ತೆಲಂಗಾಣ ಅಧಿಕಾರಿಗಳು ಈ ದೇವಾಲಯವನ್ನು ಸಂರಕ್ಷಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಇಷ್ಟು ಪುರಾತನ ದೇವಸ್ಥಾನವಾದರೂ ಇಷ್ಟು ತಡವಾಗಿ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ್ದೇಕೆ, ಅದೆಷ್ಟೋ ಬಾರಿ ಅರ್ಜಿ ಸಲ್ಲಿಸಿದರೂ ತಿರಸ್ಕಾರಗೊಂಡಿದ್ದೇಕೆ, ಈಗ ಮಾನ್ಯತೆ ಸಿಗಲು ಕಾರಣವೇನು ಎಂಬುದಕ್ಕೆ ಕನ್ನಡತಿ ಹಾಗೂ ಇತಿಹಾಸ ತಜ್ಞೆ ಡಾ. ಚೂಡಾಮಣಿ ನಂದಗೋಪಾಲ್ ಉತ್ತರ ನೀಡಿದ್ದಾರೆ.

 ರಾಮಪ್ಪ ದೇವಸ್ಥಾನಕ್ಕೆ ವಿಶ್ವ ಮಾನ್ಯತೆ ಸಿಕ್ಕಿರಲಿಲ್ಲ ಯಾಕೆ?

ರಾಮಪ್ಪ ದೇವಸ್ಥಾನಕ್ಕೆ ವಿಶ್ವ ಮಾನ್ಯತೆ ಸಿಕ್ಕಿರಲಿಲ್ಲ ಯಾಕೆ?

ಹಲವು ಬಾರಿ ವಿಶ್ವಪಾರಂಪರಿಕ ತಾಣವಾಗಿ ರಾಮಪ್ಪ ದೇವಸ್ಥಾನವನ್ನು ಆಯ್ಕೆ ಮಾಡುವಂತೆ ಅರ್ಜಿ ಸಲ್ಲಿಸಿದ್ದರೂ ಕೂಡ ತಿರಸ್ಕೃತವಾಗುತ್ತಿತ್ತು. ಸಾಂಸ್ಕೃತಿಕ ಮೌಲ್ಯವನ್ನೇ ಪ್ರಸ್ತುತ ಪಡಿಸದಿದ್ದರೆ, ಸ್ಥಾಪಿಸದಿದ್ದರೆ ಹೇಗೆ ಈ ದೇವಾಲಯವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಗುರುತಿಸುವುದು ಎನ್ನುವ ಪ್ರಶ್ನೆ ಎದುರಾಗಿತ್ತು. ಹಾಗಾಗಿ ಯುನೆಸ್ಕೋ ಈ ದೇವಾಲಯವನ್ನು ವಿಶ್ಲೇಷಿಸುವಂತಹ ವ್ಯಕ್ತಿಯ ಹುಡುಕಾಟದಲ್ಲಿದ್ದರು. 2017ರಲ್ಲಿ ತೆಲಂಗಾಣ ಸರ್ಕಾರವು ಹೈದರಾಬಾದ್‌ನಲ್ಲಿ ಒಂದು ಕಾನ್ಫರೆನ್ಸ್ ಆಯೋಜಿಸಿತ್ತು. ಆ ಸಂದರ್ಭದಲ್ಲಿ ಯುನೆಸ್ಕೋ ಪ್ರಾಮುಖ್ಯತೆ ಏನು ಎಂಬುದರ ಬಗ್ಗೆ ಮಾತನಾಡಿದ್ದೆ, ಸೌತ್ ಇಂಡಿಯಾದಲ್ಲಿ ಕೇವಲ 4 ವಿಶ್ವ ಪಾರಂಪರಿಕ ತಾಣಗಳಿವೆ ಎಂಬುದರ ಬಗ್ಗೆ ಮಾತನಾಡಿದ್ದೆ, ಅದಾದ ಬಳಿಕ ರಾಮಪ್ಪ ದೇವಸ್ಥಾನ ಬಗ್ಗೆ ವಿಶ್ಲೇಷಣೆ ಮಾಡಲು ನಾನೇ ಸರಿಯಾದ ವ್ಯಕ್ತಿ ಎಂದು ಗುರುತಿಸಲಾಯಿತು ಎಂದು ಡಾ. ಚೂಡಾಮಣಿ ವಿವರಿಸಿದ್ದಾರೆ.

 ಸಾಂಸ್ಕೃತಿಕ ಪರಂಪರೆಯ ಎರಡು ಅಂಶಗಳು ಯಾವುವು?

ಸಾಂಸ್ಕೃತಿಕ ಪರಂಪರೆಯ ಎರಡು ಅಂಶಗಳು ಯಾವುವು?

ಸಾಂಸ್ಕೃತಿಕ ಪರಂಪರೆಯಲ್ಲಿ 2 ಅಂಶಗಳಿವೆ ಮೊದಲನೆಯದು ಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಹಾಗೂ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಎಂದು. ಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಎಂದರೆ ನಮಗೆ ವಾಸ್ತುಶಿಲ್ಪ, ಶಿಲ್ಪಕಲೆ, ಆ ಕಟ್ಟಡದ ಬೌತಿಕ ರಚನೆ, ಶಿಲಾಶಾಸನ ಇವೆಲ್ಲವೂ ಟ್ಯಾಂಜಿಬಲ್ ಅಂದರೆ ನೀವು ಅದನ್ನು ನೋಡಬಹುದು, ವಿಶ್ಲೇಷಣೆ ಮಾಡಬಹುದು ಅದರ ಬಗ್ಗೆ ಮಾತನಾಡಬಹುದು. ಇಂಟ್ಯಾಂಜಿಬಲ್ ಅಂದರೆ ಮೌಖಿಕ ಪರಂಪರೆ ಎಂದೇ ಹೇಳಬಹುದಾಗಿದೆ, ನಿತ್ಯ ಪೂಜೆ, ಎಲ್ಲಾ ಆಚರಣೆಗಳು, ರಾಮಪ್ಪ ಸ್ಮಾರಕವಲ್ಲ , ಜೀವಂತವಿರುವ ದೇವಸ್ಥಾನ ಆಂಧ್ರ ಹಾಗೂ ತೆಲಂಗಾಣದ ಬಹುತೇಕ ಮಂದಿ ಅಲ್ಲಿಗೆ ಬರುತ್ತಾರೆ. ಆದರೆ ಹಂಪಿಯಲ್ಲಿರುವ ವಿಠ್ಠಲ ದೇವಸ್ಥಾನದ ರೀತಿಯಲ್ಲ, ಅದು ವಾಸ್ತುಶಿಲ್ಪಕ್ಕೆ ಹೆಸರುವಾಸಿ, ಆದರೆ ದೇವರ ಯಾವುದೇ ಮೂರ್ತಿಗಳಿಲ್ಲ, ಪೂಜೆಗಳಿಲ್ಲ ಅದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಹಂಪಿಯ ವಿರೂಪಾಕ್ಷ ದೇವಾಲಯದಲ್ಲಿ ಪೂಜೆಗಳು ನಡೆಯುತ್ತವೆ, ಅಲ್ಲಿ ತನ್ನದೇ ಆತ ಆಚರಣೆಗಳಿವೆ, ನಿತ್ಯ ಪೂಜೆಗಳಿವೆ, ಮಾಸಿಕ, ರಥಯಾತ್ರೆ, ಪ್ರಮುಖ ಹಬ್ಬಗಳ ಆಚರಣೆ ಇರುತ್ತದೆ ಇವೆಲ್ಲವನ್ನೂ ಇಂಟ್ಯಾಂಜಿಬಲ್ ಹೆರಿಟೇಜ್ ಎಂದು ಕರೆಯಲಾಗುತ್ತದೆ ಎಂದು ಚೂಡಾಮಣಿ ಅವರು ಹೇಳಿದ್ದಾರೆ.

 ದೇವಸ್ಥಾನ ನಿರ್ಮಾಣಕ್ಕೆ ಕಾರಣವೇನು?

ದೇವಸ್ಥಾನ ನಿರ್ಮಾಣಕ್ಕೆ ಕಾರಣವೇನು?

ವಿಶ್ವ ಪಾರಂಪರಿಕ ತಾಣವಾಗಿರಲಿ ಯಾವುದೇ ಪ್ರಸಿದ್ಧ ಕಟ್ಟಡಗಳಿರಲಿ, ಯಾರೇ ಅದರ ಬಗ್ಗೆ ವಿಶ್ಲೇಷಣೆ ಮಾಡಹೊರಟರೂ ಕೇವಲ ದೇವಸ್ಥಾನ, ಸ್ಥಳದ ಮಹತ್ವವನ್ನು ಹೇಳುತ್ತಾರೇಯೇ ವಿನಃ ಆ ದೇವಸ್ಥಾನ ನಿರ್ಮಾಣ ಮಾಡಿದ್ದು ಏಕೆ ಎಂಬುದನ್ನು ತಿಳಿಯುವ ಗೋಜಿಗೆ ಯಾರೂ ಹೋಗುವುದಿಲ್ಲ. ದೇವಸ್ಥಾನವನ್ನು ಕೇವಲ ಕಲೆಯ ಸಲುವಾಗಿ ನಿರ್ಮಿಸಿದರೇ? ಇಲ್ಲ ಪೂಜಿಸುವ ಉದ್ದೇಶದಿಂದ ನಿರ್ಮಾಣ ಮಾಡಿರುವಂಥದ್ದು. ಆಗ ಅಲ್ಲಿ ಆಗಮ ಪದ್ಧತಿ ಬರುತ್ತದೆ. ಯಾವ ಆಗಮ ಪದ್ಧತಿಯಿಂದ ಅವರು ಅಲ್ಲಿ ಪೂಜೆ ಮಾಡುತ್ತಾರೆ. ಎಷ್ಟು ವರ್ಷಗಳಿಂದ ನಡೆಯುತ್ತಿದೆ, ಅಲ್ಲೇನಾದರೂ ಮಾರ್ಪಾಡು ಆಗಿದೆಯಾ? ಇದೆಲ್ಲದರ ಬಗ್ಗೆ ಸಾಕಷ್ಟು ಸಂಶೋಧನೆ ಮಾಡಿದ್ದೇನೆ. ಕೇಂದ್ರ ಸರ್ಕಾರದ ಪ್ರಾಜೆಕ್ಟ್ 'ಟೆಂಪಲ್ ಟ್ರೆಜರ್ಸ್' ಒಂದರಲ್ಲಿ ಕ್ರ್ಪಾಫ್ಟ್ಸ ಕೌನ್ಸಿಲ್ ಆಫ್ ಕರ್ನಾಟಕಕ್ಕೆ ಈ ಕುರಿತು ಹಲವು ಮಾಹಿತಿಯನ್ನು ಒದಗಿಸಿದ್ದೇನೆ ಎಂದರು.
-ರಿಚುವಲ್ ಯುಟೆನ್ಸಿಲ್ಸ್( ದೇವಸ್ಥಾನದಲ್ಲಿ ಬಳಕೆ ಮಾಡುವ ಪಾತ್ರೆಗಳು)
-ದೇವಸ್ಥಾನದ ಆಭರಣಗಳು
-ದೇವಸ್ಥಾನ ರಥಗಳು ಬಗ್ಗೆ ಬರೆದಿದ್ದೆ ಎಂದರು.

 ದೇವರಿಗೆ ಆಭರಣ ಏಕೆ ನೀಡುತ್ತಾರೆ?

ದೇವರಿಗೆ ಆಭರಣ ಏಕೆ ನೀಡುತ್ತಾರೆ?

ಕೇಂದ್ರ ಸರ್ಕಾರದ ಯೋಜನೆಯೊಂದರಲ್ಲಿ ಕೆಲಸ ಮಾಡುವಾಗ ಸಂಶೋಧನೆಯ ಮೇಲೆ ದೇವಸ್ಥಾನಕ್ಕೆ ತೆರಳಿದಾಗ ದೇವರ ಮೇಲಿನ ಒಡವೆಗಳನ್ನು ಮುಟ್ಟುವ ಅವಕಾಶ ದೊರಡಯುತ್ತಿತ್ತು. ಅದನ್ನು ನೆನಸಿಕೊಂಡರೇ ಈಗಲೂ ಮೈ ಎಲ್ಲಾ ರೋಮಾಂಚನವಾಗುತ್ತದೆ. ಹಾಗಾದರೆ ದೇವರಿಗೆ ಆಭರಣಗಳನ್ನು ಯಾಕೆ ಕೊಡುತ್ತಿದ್ದರು. ರಾಜರುಗಳ ಭಾವನೆ ಏನಿತ್ತು, ಮೇಲುಕೋಟೆ ದೇವಸ್ಥಾನದಲ್ಲಿ ಚೆಲುವನಾರಾಯಣನಿಗೆ ಎಂಥೆಂಥಾ ಆಭರಣಗಳನ್ನು ನೀಡಿದ್ದಾರೆ.
ಮುಮ್ಮುಡಿ ಕೃಷ್ಣರಾಜ ಒಡೆಯರ್, ಟಿಪ್ಪು ಸುಲ್ತಾನ್ ಕೂಡ ಕೊಟ್ಟಿದ್ದಾರೆ, ಯಾಕೆ ಕೊಡುತ್ತಿದ್ದರು ಇದನ್ನೆಲ್ಲಾ ಸುಮ್ಮನೆ ತಮ್ಮನ್ನು ತಾವು ತೋರಿಸಿಕೊಳ್ಳುವುದಕ್ಕಾ ಖಂಡಿತವಾಗಿಯೂ ಅಲ್ಲ, ಮುಮ್ಮಡಿ ಕೃಷ್ಣರಾಜ ಒಡೆಯರ್ ಅಂತೂ ಅವರು ದೇವರಿಗೆ ಪಾದುಕೆಯನ್ನು ಕೊಟ್ಟಿದ್ದಾರೆ ಅಲ್ಲಿ ಮಾತ್ರ ಅವರ ಹೆಸರು ಹಾಕಿದ್ದಾರೆ. ಬೇರೆ ಇನ್ನೆಲ್ಲೂ ಅವರು ಕೊಟ್ಟಿರುವುದಕ್ಕೆ ಹೆಸರಿಲ್ಲ, ದಾಖಲೆಗಳಿವೆ. ಆದರೆ ಪಾದುಕೆಯಲ್ಲಿ ಅವರ ಹೆಸರು ಬರೆದಿದೆ ನಾನು ಚಿರಸ್ಥಾಯಿಯಾಗಿ ಈ ಪಾದುಕೆಯಲ್ಲೇ ಇರುತ್ತೇನೆ ಎಂಬುದು ಮೂಲ ಉದ್ದೇಶವಾಗಿತ್ತು. ಎಂಥಾ ಉದಾತ್ತವಾದ ಮನಸ್ಸಾಗಿತ್ತು. ಇಂತಹ ಉದ್ದೇಶಗಳಿಗಾಗಿ ಅವರು ದೇವರಿಗೆ ಒಡವೆಗಳನ್ನು ನೀಡುತ್ತಿದ್ದರು.

 ರುದ್ರೇಶ್ವರ ದೇವಾಲಯ ಎಂಬುದು ನಿಜವಾದ ಹೆಸರು

ರುದ್ರೇಶ್ವರ ದೇವಾಲಯ ಎಂಬುದು ನಿಜವಾದ ಹೆಸರು

1213ರಲ್ಲಿ ರಾಮಪ್ಪ ದೇವಾಲಯವನ್ನು ರುದ್ರೇಶ್ವರ ದೇವಾಲಯ ಎಂದು ಕರೆಯುತ್ತಿದ್ದರು. ಆದರೆ ರಾಮಪ್ಪ ಎಂದು ಹೆಸರು ಹೇಗೆ ಬಂತು ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ದೇವಸ್ಥಾನದ ಪಕ್ಕದಲ್ಲೇ ರಾಮಪ್ಪ ಕೆರೆ ಇದೆ. ಆ ಕೆರೆಯನ್ನು ಆಗಿನ ಕಾಲದಲ್ಲಿ ನಿರ್ಮಿಸಿದವರು ರಾಮಪ್ಪ ಆಗಿರಬಹುದು, ಆ ಕೆರೆಯ ಹತ್ತಿರ ದೇವಾಲಯ ಇರುವ ಕಾರಣಕ್ಕೇ ಇದಕ್ಕೆ ರಾಮಪ್ಪ ದೇವಾಲಯ ಎಂದು ಹೆಸರು ಬಂದಿರಬಹುದು ಎಂದು ವಿವರಿಸಿದ್ದಾರೆ.

 ರಾಮಪ್ಪ ದೇವಾಲಯದ ವಿಶೇಷತೆ?

ರಾಮಪ್ಪ ದೇವಾಲಯದ ವಿಶೇಷತೆ?

ರಾಮಪ್ಪ ದೇವಾಲಯದಲ್ಲಿ ಶಿವನ ಪೂಜೆ ನಡೆಯುತ್ತದೆ. 12 ಮದನಿಕೆಗಳಿವೆ, ಬಹುತೇಕ ನೃತ್ಯ ಭಂಗಿಯಲ್ಲೇ ಇವೆ. ಬೇಲೂರಿನಲ್ಲಿ 42 ಮದನಿಕೆಗಳು ಅಥವಾ ಶಿಲಾಬಾಲಿಕೆಗಳಿವೆ. ಆದರೆ ಆಶ್ಚರ್ಯವೇನೆಂದರೆ ಈ ಮದನಿಕೆಗಳು 6 ಅಡಿಯಷ್ಟಿವೆ. ಸಾಮಾನ್ಯವಾಗಿ ಬೇರೆ ದೇಗುಲಗಳಲ್ಲಿ 3 ಅಡಿಗಳಷ್ಟಿರುತ್ತವೆ.

 ಶಿವ ಪಾರ್ವತಿಗೆ ಊರ ಜನರೇ ತಂದೆ ತಾಯಿ

ಶಿವ ಪಾರ್ವತಿಗೆ ಊರ ಜನರೇ ತಂದೆ ತಾಯಿ

ಮತ್ತೊಂದು ವಿಶೇಷತೆ ಎಂದರೆ ಗಿರಿಜಾ ಕಲ್ಯಾಣ, ಸಾಮಾನ್ಯವಾಗಿ ಎಲ್ಲಾ ದೇವಸ್ಥಾನದಲ್ಲಿಯೂ ಗಿರಿಜಾ ಕಲ್ಯಾಣ ಕಾರ್ಯಕ್ರಮ ಜರುಗುತ್ತದೆ. ಆದರೆ ಇದು ಕೇವಲ ಪೂಜೆ ಮಾತ್ರ ಸೀಮಿತವಾಗಿಲ್ಲ. ನಿಜವಾಗಿಯೂ ಮದುವೆ ಮನೆಯಂಥದ್ದೇ ವಾತಾವರಣ ದೇವಸ್ಥಾನದಲ್ಲಿರುತ್ತದೆ. ಶಿವನಿಗೆ, ಪಾರ್ವತಿಗೆ ಊರ ಜನರೇ ತಂದೆ ತಾಯಿಯಾಗಿ ಮದುವೆ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಧಾರೆ ಕಾರ್ಯಕ್ರಮ, ಭೋಜನ ಎಲ್ಲವೂ ಅಲ್ಲಿ ಇರಲಿದೆ. ಮದುವೆಗೆ ಬೇಕಾದ ಎಲ್ಲಾ ವಸ್ತುಗಳನ್ನು ಊರಿನ ಜನರೇ ಕೊಂಡು ತರುತ್ತಾರೆ. ಎಲ್ಲೂ ಕಾಣದ ವಿಶೇಷ ಗಿರಿಜಾ ಕಲ್ಯಾಣವನ್ನು ಇಲ್ಲಿ ನೋಡಬಹುದಾಗಿದೆ ಎಂದು ಮದುವೆ ಕಣ್ಮುಂದೆಯೇ ನಡೆಯುತ್ತಿರುವಂತೆ ಹೇಳುತ್ತಾರೆ ಚೂಡಾಮಣಿಯವರು.

 ರಾಜ್ಯ ಸರ್ಕಾರ ಇನ್ನೂ ಗುರುತಿಸಿಲ್ಲ

ರಾಜ್ಯ ಸರ್ಕಾರ ಇನ್ನೂ ಗುರುತಿಸಿಲ್ಲ

ಡಾ, ಚೂಡಾಮಣಿ ನಂದಗೋಪಾಲ್ ಅವರು, ಬೇಲೂರು, ಹಳೆಬೀಡು, ಹಂಪಿ ಸೇರಿದಂತೆ ರಾಜ್ಯದ ಸಾಕಷ್ಟು ದೇವಾಲಯಗಳ ಮೇಲೆ ಸಂಶೋಧನೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ರಾಜ್ಯ ಸರ್ಕಾರ ಅವರ ಕಾರ್ಯವನ್ನು ಗುರುತಿಸಿಲ್ಲ.
ದೇಶ, ವಿದೇಶಾದ್ಯಂತ ಎಲ್ಲೇ ತೆರಳಿದರೂ ಕರ್ನಾಟಕದ ದೇವಾಲಯಗಳ ವಿಶೇಷತೆ ಬಗ್ಗೆ ವಿವರಿಸಿದೇ ಅವರು ಬಂದಿದ್ದೇ ಇಲ್ಲ.
ರಾಮಪ್ಪ ದೇವಸ್ಥಾನ ಪುಸ್ತಕದ ಬರೆವಣಿಗೆಗಾಗಿ ತೆಲಂಗಾಣ ಸರ್ಕಾರ ಅವರನ್ನು ಗುರುತಿಸಿ ಅವರಿಗೆ ಗೌರವ ಸಲ್ಲಿಸಿದೆ. ಆದರೆ ಕರ್ನಾಟಕ ಸರ್ಕಾರದ ಕಣ್ಣಿಗೆ ಅವರ ಕೆಲಸ ಬೀಳದಿರುವುದು ಆಶ್ಚರ್ಯವೇ ಸರಿ.
ಆದರೆ ಎಲ್ಲೇ ಹೋದರು ಕರ್ನಾಟಕದವಳು, ಕನ್ನಡತಿ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ. ಸರ್ಕಾರ ಗುರುತಿಸದೇ ಹೋದರೂ ನನ್ನ ಕಾರ್ಯವನ್ನು ನಾನು ಮಾಡುತ್ತಲೇ ಇರುತ್ತೇನೆ ಎನ್ನುತ್ತಾರೆ ಡಾ. ಚೂಡಾಮಣಿ ನಂದಗೋಪಾಲ್.

English summary
Here is an Exclusive Interview with Dr. Choodamani Nandagopal on How Telangana's Ramappa temple made it to UNESCO’s World Heritage List. Read on.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X