ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಂತಾರಾಷ್ಟ್ರೀಯ ಯುವ ದಿನ 2022: ಯುವ ಶಕ್ತಿ ವೈಭವ, ದಿನದ ಪರಿಕಲ್ಪನೆ, ಮಹತ್ವ ತಿಳಿಯಿರಿ

|
Google Oneindia Kannada News

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎನ್ನುತ್ತಾರೆ. ಇಂದಿನ ಯುವಕರೇ ನಾಳೆಯ ನಾಯಕರು. ಯುವ ಶಕ್ತಿ ಈ ದೇಶದ ಅತಿದೊಡ್ಡ ಆಸ್ತಿ. ಇದೆಲ್ಲವೂ ಹೌದು.

ದೇಶದ ಬೆಳವಣಿಗೆಯ ಬೆನ್ನೆಲುಬಾಗಿರುವುದು ಯುವ ಸಮುದಾಯ. ಯಾವ ದೇಶದಲ್ಲಿ ಯುವ ಸಮುದಾಯ ಹೆಚ್ಚು ಸಂಖ್ಯೆಯಲ್ಲಿರುತ್ತದೋ, ಆ ಸಮುದಾಯ ಹೆಚ್ಚು ಕ್ರಿಯಾಶೀಲವಾಗಿರುತ್ತದೋ ಆ ದೇಶ ಸಮೃದ್ಧವಾಗಿರುತ್ತದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ. ಅದೇ ಪವರ್ ಆಫ್ ಯೂಥ್.

World Elephant Day 2022: ಪ್ರವಾಸೋದ್ಯಮಕ್ಕಾಗಿ ಬಳಕೆ ಆದ 3837 ಆನೆಗಳ ದುಃಸ್ಥಿತಿ ತಿಳಿಯಿರಿWorld Elephant Day 2022: ಪ್ರವಾಸೋದ್ಯಮಕ್ಕಾಗಿ ಬಳಕೆ ಆದ 3837 ಆನೆಗಳ ದುಃಸ್ಥಿತಿ ತಿಳಿಯಿರಿ

ಅಂತೆಯೇ, ಯುವ ಸಮುದಾಯಕ್ಕೆ ಸಲಾಂ ಹೊಡೆಯಲಾದರೂ ಒಂದು ದಿನವಾಗಿ ಇಂದು ಆಗಸ್ಟ್ 12 ಇದೆ. ಪ್ರತೀ ವರ್ಷ ಈ ದಿನದಂದು ಇಂಟರ್ನ್ಯಾಷನಲ್ ಯೂತ್ ಡೇ ಅಥವಾ ಅಂತಾರಾಷ್ಟ್ರೀಯ ಯುವ ದಿನ ಆಗಿ ಆಚರಿಸಲಾಗುತ್ತದೆ.

ದೇಶದ ಬೆನ್ನೆಲುಬಾಗಿದ್ದರೂ ಯುವ ಸಮುದಾಯದ ಬಗ್ಗೆ ಕೆಲವೆಡೆ ದಿವ್ಯ ನಿರ್ಲಕ್ಷ್ಯ ಇದೆ. ರಾಜಕೀಯ ನಾಯಕರು ಯುವ ಜನರಿಗೆ ವಂಚನೆ ಎಸಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಯುವಸಮುದಾಯದ ದಾರಿ ತಪ್ಪಿಸುವ ಕೆಲಸವಾಗುತ್ತಿದೆ. ಇಂಥ ಹೊತ್ತಿನಲ್ಲಿ ಯುವ ಸಮುದಾಯದ ಬಗ್ಗೆ ಜಾಗೃತಿ ಮೂಡಿಸಲು ಅಂತಾರಾಷ್ಟ್ರೀಯ ಯುವ ದಿನವನ್ನು ಬಳಕೆ ಮಾಡಬಹುದಾಗಿದೆ.

Raksha Bandhan 2022 : ಅಣ್ಣನಿಗೆ ರಾಖಿ ಕಟ್ಟುವುದು ಯಾವಾಗ ? ರಕ್ಷಾಬಂಧನ ಶುಭ ಮುಹೂರ್ತ ಬಗ್ಗೆ ತಿಳಿಯಿರಿRaksha Bandhan 2022 : ಅಣ್ಣನಿಗೆ ರಾಖಿ ಕಟ್ಟುವುದು ಯಾವಾಗ ? ರಕ್ಷಾಬಂಧನ ಶುಭ ಮುಹೂರ್ತ ಬಗ್ಗೆ ತಿಳಿಯಿರಿ

ಯುವ ದಿನದ ಇತಿಹಾಸ

ಯುವ ದಿನದ ಇತಿಹಾಸ

1965ರಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆ ಯುವ ಸಮುದಾಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಯತ್ನಗಳನ್ನು ಹಾಕತೊಡಗಿತು. ಜನರ ಮಧ್ಯೆ ಶಾಂತಿ, ಗೌರವ ಮತ್ತು ಅರಿವಿನ ಮೌಲ್ಯಕ್ಕೆ ಒತ್ತು ಕೊಡುವ ಘೋಷಣೆಗೆ ಬೆಂಬಲ ಕೊಡಲಾಯಿತು. ಯುವ ಸಮುದಾಯಕ್ಕೆ ಸಂಬಂಧಿಸಿದ ವಿವಿಧ ದೇಶಗಳ ಸಚಿವರ ವಿಶ್ವ ಸಭೆಯಲ್ಲಿ ವ್ಯಕ್ತವಾದ ಶಿಫಾರಸುಗಳನ್ನು 1999, ಡಿಸೆಂಬರ್ 17ರಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಅದರಂತೆ ಅಂತಾರಾಷ್ಟ್ರೀಯ ಯುವ ದಿನವನ್ನು ನಿಗದಿ ಮಾಡಲಾಯಿತು.

2000, ಆಗಸ್ಟ್ 12ರಂದು ಇಂಟರ್ನ್ಯಾಷನಲ್ ಯೂತ್ ಡೇ ಅನ್ನು ಮೊದಲ ಬಾರಿಗೆ ಆಚರಿಸಲಾಯಿತು. ಆಗಿನಿಂದಲೂ ಪ್ರತೀ ವರ್ಷ ಜನಜಾಗೃತಿ ಮೂಡಿಲು ಈ ದಿನವನ್ನು ಬಳಸಿಕೊಳ್ಳಲಾಗುತ್ತಿದೆ.

ಯುವ ದಿನದ ಮಹತ್ವ

ಯುವ ದಿನದ ಮಹತ್ವ

ವಿಶ್ವಾದ್ಯಂತ ಸಕಾರಾತ್ಮಕ ಬದಲಾವಣೆ ತರುತ್ತಿರುವ ಯುವಕರ ಕಾರ್ಯಗಳನ್ನು ಗುರುತಿಸಿ ಮೆಚ್ಚುಗೆ ವ್ಯಕ್ತಪಡಿಸಲು ಈ ವೇದಿಕೆ ಇದೆ. ಸಾರ್ವಜನಿಕ ಜೀವನದ ಪ್ರವೇಶ, ಶಿಕ್ಷಣ, ಆರೋಗ್ಯ, ಉದ್ಯೋಗ, ಹಣಕಾಸು ಸೇವೆಗಳಲ್ಲಿ ಯುವಕರಿಗೆ ಸಂಪೂರ್ಣ ಅವಕಾಶ ಸಿಗುವಂತಾಗಬೇಕೆಂಬುದು ಇಂಟರ್ನ್ಯಾಷನಲ್ ಯೂತ್ ಡೇ ಧ್ಯೇಯ.

ಈ ವರ್ಷದ ಥೀಮ್

ಈ ವರ್ಷದ ಥೀಮ್

2022ರ ಇಂಟರ್ನ್ಯಾಷನಲ್ ಯೂತ್ ಡೇ ಪರಿಕಲ್ಪನೆ ವಿಭಿನ್ನವಾಗಿದೆ. "ಅಂತರ್ ತಲೆಮಾರು ಸಹಮತ' ತತ್ವ (Intergeneration Solidarity) ಹೊಂದಿದೆ. ಬೇರೆ ಬೇರೆ ತಲೆಮಾರುಗಳ ಮಧ್ಯೆ ಸಹಭಾಳ್ವೆ, ಎಲ್ಲಾ ವಯೋಮಾನದವರಿಗೂ ಸಮಾನವಾಗಿರುವ ಜಗತ್ತು ನಿರ್ಮಿಸುವ ಗುರಿ ಇದು.

ಎಲ್ಲಾ ತಲೆಮಾರಿನ ಜನರೂ ಕೂಡ ಅಜೆಂಡಾ 2030 ಗುರಿಯನ್ನು ತಲುಪಲು ಕೆಲಸ ಮಾಡಬೇಕು ಎಂಬುದು ಈ ವರ್ಷದ ಅಂತಾರಾಷ್ಟ್ರೀಯ ಯುವ ದಿನದ ವೇದಿಕೆಯ ಕರೆಯಾಗಿದೆ.

ಅಜೆಂಡಾ 2030 ಎಂಬದು ವಿಶ್ವಸಂಸ್ಥೆ ಸಾಮಾನ್ಯ ಸಭೆ ರೂಪಿಸಿದ ಗುರಿ. ನಮ್ಮ ಭೂಮಿಯನ್ನು ರಕ್ಷಿಸುವುದರ ಜೊತೆಗೆ ಬಡತನ, ಅಸಮಾನತೆ ಇತ್ಯಾದಿಯನ್ನು ನಿವಾರಿಸಲು ಒಂದು ನೀಲಿನಕ್ಷೆ ರೂಪಿಸಲಾಗಿದೆ. ಅದೇ ಅಜೆಂಡಾ ೨೦೨೦.

ವಿಶ್ ಮಾಡಿ

ವಿಶ್ ಮಾಡಿ

ಉದ್ಯೋಗ ಅರಸುವವರಾಗುವುದು ಬಿಟ್ಟು ಉದ್ಯೊಗ ಸೃಷ್ಟಿಕರ್ತರಾಗುವಂತೆ ಯುವಜನರನ್ನು ಅಣಿಗೊಳಿಸಬೇಕು- ಎಪಿಜೆ ಅಬ್ದುಲ್ ಕಲಾಂ

ಯುವಕನಾಗಿದ್ದಾಗ ನೋವು ತರುವ ಮತ್ತು ವರ್ಷಗಳ ಬಳಿಕ ಮಾಗಿದಾಗ ರುಚಿ ಕೊಡುವ ಏಕಾಂತದಲ್ಲಿ ನಾನು ಬದುಕುತ್ತೇನೆ - ಆಲ್ಬರ್ಟ್ ಐನ್‌ಸ್ಟೀನ್.

ಯುವ ಶಕ್ತಿಯು ಇಡೀ ವಿಶ್ವಕ್ಕೆ ಸಾಮಾನ್ಯ ಸಂಪತ್ತು. ಯುವ ಜನರು ನಮ್ಮ ಇತಿಹಾಸ, ನಮ್ಮ ವಾಸ್ತವ ಮತ್ತು ನಮ್ಮ ಭವಿಷ್ಯದ ಕನ್ನಡಿ. ಯುವ ಜನರ ಶಕ್ತಿ, ವಿಚಾರ, ಉತ್ಸಾಹ ಮತ್ತು ಧೈರ್ಯಕ್ಕೆ ನಮ್ಮ ಸಮಾಜದ ಬೇರೆ ಯಾವ ವರ್ಗವೂ ಸಾಟಿ ಅಲ್ಲ- ಕೈಲಾಶ್ ಸತ್ಯಾರ್ಥಿ.

(ಒನ್ಇಂಡಿಯಾ ಸುದ್ದಿ)

English summary
Youth are the most important part in any society and economy. International Youth Day 2022 is significant with its new theme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X