ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶೇಷ: ಮಹಿಳೆಯರು ಯಾವಾಗಲೂ ಸಮಾಜದ ಶಕ್ತಿ

By ದಿವ್ಯಶ್ರೀ. ವಿ, ಬೆಂಗಳೂರು
|
Google Oneindia Kannada News

ಪ್ರತಿವರ್ಷ ಮಾರ್ಚ್‌ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನವೆಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ಮೂಲಕ ಮಹಿಳೆಯರಿಗೆ ಗೌರವ ಸಲ್ಲಿಸಲಾಗುತ್ತದೆ. ಇಂಥದ್ದೊಂದು ದಿನ ಮೊದಲ ಬಾರಿಗೆ ಪ್ರಚಲಿತಕ್ಕೆ ಬಂದಿದ್ದು ನ್ಯೂಯಾರ್ಕ್‌ನಲ್ಲಿ. 1909, ಫೆಬ್ರವರಿ 28 ರಂದು ಅಲ್ಲಿ ಮೊದಲ ಬಾರಿಗೆ ಮಹಿಳಾ ದಿನವನ್ನು ಆಚರಿಸಲಾಯಿತು.

ಎರಡು ವರ್ಷದ ಬಳಿಕ ಜರ್ಮನ್‌ನ ಸಾಮಾಜಿಕ ಕಾರ್ಯಕರ್ತೆಯೊಬ್ಬರು ತಮ್ಮ ದೇಶದಲ್ಲೂ ಈ ದಿನವನ್ನು ಆಚರಿಸಲು ಶುರು ಮಾಡಿದರು. ಹೀಗೆ ಕೆಲವೇ ಕೆಲವು ರಾಷ್ಟ್ರಗಳಿಗೆ ಸೀಮಿತವಾಗಿದ್ದ ಈ ದಿನಕ್ಕೆ 1977 ರಲ್ಲಿ ವಿಶ್ವಸಂಸ್ಥೆ ಅಧಿಕೃತ ಅನುಮೋದನೆ ನೀಡಿ ಮಾರ್ಚ್‌ 8 ಅನ್ನು ಅಂತಾರಾಷ್ಟ್ರೀಯ ದಿನವನ್ನಾಗಿ ಆಚರಿಸುವಂತೆ ಘೋಷಿಸಿತು.

ಹೆಮ್ಮೆಯ ಭಾರತೀಯರು ನಾವು ಯಾವಾಗಲೂ ಮಹಿಳೆಯರು ಒಂದು ಶಕ್ತಿ ಎಂದು ನಂಬುತ್ತೇವೆ ಹೌದು ನಿಸ್ಸಂದೇಹವಾಗಿ ನಮ್ಮ ಮಾತೃ ಭೂಮಿ ಅಥವಾ ಭಾರತ್ ಮಾತಾ ಎಂದು ಕರೆಯಲ್ಪಡುವ ನಮ್ಮ ದೇಶ ದೇವತೆಯಾಗಿ ಪ್ರತಿನಿಧಿಸುತ್ತದೆ. ಈ ನಮ್ಮ ದೇಶದಲ್ಲಿ ಮಹಿಳೆಯರಿಗೆ ದೊಡ್ಡ ಗೌರವವಿದೆ ಆದರೆ ಅನೇಕ ಮಹಿಳೆಯರು ಕೆಲವು ಕ್ರೂರ ಪುರುಷರ ಕೈಯಿಂದ ಹೆಚ್ಚು ಬಳಲುತ್ತಿದ್ದಾರೆ.

International Womens Day 2021: Strength of Indian women

ಭಾರತದಲ್ಲಿ, ಮಹಿಳೆಯರ ಸುರಕ್ಷತೆ ಇಂದು ಹೆಚ್ಚು ಅಗತ್ಯವಾಗಿದೆ, ಇತ್ತೀಚಿನ ದಿನಗಳಲ್ಲಿ ಭಾರತವು ಮಹಿಳೆಯರಿಗೆ ಸುರಕ್ಷಿತವಲ್ಲದ ದೇಶಗಳಲ್ಲಿ ಒಂದಾಗಿದೆ ಎನ್ನುವುದು ಬಹಳ ಬೇಸರದ ವಿಷಯ. ದಿನದಿಂದ ದಿನಕ್ಕೆ ಈ ವಿಷಯದ ಕುರಿತಾದ ಹೆಚ್ಚಾಗಿ ಆಲೋಚನೆ ಮಾಡಿ ಕ್ರಮ ಕೈಗೊಳ್ಳ ಬೇಕು. ಹೆಣ್ಣಿಗೆ ದ್ರೋಹ ಮಾಡುವವರನ್ನು ಶಿಕ್ಷಿಸಲು ಮೂಲಭೂತ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರಬೇಕು ಇದರಿಂದ ಸಮಾಜದಲ್ಲಿ ಜಾಗೃತಿ ಮತ್ತು ಸುರಕ್ಷತೆ ಉಂಟುಮಾಡುತ್ತದೆ.

ಕೌಟುಂಬಿಕ ಹಿಂಸಾಚಾರವು ಮಹಿಳೆಯರು ಎದುರಿಸುತ್ತಿರುವ ನಿರ್ಣಾಯಕ ವಿಷಯವಾಗಿದೆ. ಇನ್ನು ಅನೇಕ ಮಹಿಳೆಯರು ಮುಂದೆ ಬಂದು ಈ ವಿಷಯಗಳ ಬಗ್ಗೆ ಧ್ವನಿ ಎತ್ತಲು ಆಸಕ್ತಿ ಹೊಂದಿದ್ದಾರೆ ಹಾಗೂ ಅನೇಕ ಮಹಿಳೆಯರು ಇದರ ಬಗ್ಗೆ ಎಲ್ಲೆಡೆ ಜಾಗೃತಿ ಮತ್ತು ಹೋರಾಟ ನಡೆಸುತ್ತಿದ್ದಾರೆ, ಈ ಸಮಾಜದ ಬಗ್ಗೆ ಮಹಿಳೆಯರ ಪರಿಸ್ಥಿತಿ ಮತ್ತು ಅವರ ಮೌಲ್ಯಗಳನ್ನು ಜನರು ಅರ್ಥಮಾಡಿಕೊಳ್ಳಬೇಕು.

ಹಾಗಾದರೆ ಈ ಎಲ್ಲ ಬಿಕ್ಕಟ್ಟುಗಳಿಗೆ ಪರಿಹಾರ ಇದೆ ಎಂದು ಭಾವಿಸುತ್ತೀರಾ? ಈ ಎಲ್ಲದರಿಂದ ಮಹಿಳೆಯರು ಹೊರಬರಬಹುದು ಮತ್ತು ಹೆಣ್ಣು ಹಿಂಸಾಚಾರ ಮುಕ್ತವಾಗಿ ಬದುಕಬಹುದು ಎಂದು ನೀವು ಭಾವಿಸುತ್ತೀರಾ? ಇದಕ್ಕೆ ಉತ್ತರ ಹೌದು, ಇದೆಲ್ಲವೂ ಸಾಧ್ಯ ಯಾವಾಗ ಎಂದರೆ...

ಹಿಂಸೆ ಇಂದ ಬಳಲುತ್ತಿರುವ ಹೆಣ್ಣು ಮತ್ತು ಅವಳ ಜೊತೆಗೆ ಸರ್ಕಾರವು, ಇಬ್ಬರೂ ಒಟ್ಟಿಗೆ ಸೇರಿ ಈ ಎಲ್ಲಾ ಆಕ್ರಮಣಗಳ ವಿರುದ್ಧ ಹೋರಾಡಲು ಇಬ್ಬರೂ ಒಟ್ಟಾಗಿ ನಿಂತು ಅಪರಾಧಿಗೆ ಕಠಿಣ ಕಾನೂನು ರೂಪಿಸಿದರೆ ಮಾತ್ರ ಇದೆಲ್ಲವೂ ಸಾಧ್ಯ ಮತ್ತು ಇದೆಲ್ಲದರ ಜೊತೆಗೆ ಹೆಣ್ಣು ಮಗುವಿಗೆ ತನ್ನ ಸ್ವತಂತ್ರ ಜೀವನವನ್ನು ರಚಿಸಲು ಪೋಷಕರು ಅವಕಾಶ ನೀಡಬೇಕು, ಪೋಷಕರಿಂದ ನೈತಿಕ ಬೆಂಬಲ ಸಿಗಬೇಕು ಆಗ ಮಾತ್ರ ಒಂದು ಹೆಣ್ಣು ಧೈರ್ಯವಾಗಿ ಎಲ್ಲವನ್ನೂ ಎದುರಿಸಲು ಸಾಧ್ಯ.

ಹಾಗೂ ಮುಖ್ಯವಾಗಿ ನಮ್ಮ ಈ ಸಮಾಜವು ಮಹಿಳೆಯರನ್ನು ನೋಡುವ ದೃಷ್ಟಿಕೋನವನ್ನು ಬದಲಿಸಬೇಕು, ಮಹಿಳೆಯರ ಮೌಲ್ಯಗಳನ್ನು ಮತ್ತು ಈ ಭೂಮಿಯಲ್ಲಿ ಅವಳ ಸ್ಥಾನವನ್ನು ಸಮಾಜವು ತಿಳಿದುಕೊಳ್ಳಬೇಕು, ಮಹಿಳೆಯರು ಧೈರ್ಯಶಾಲಿ ಎಂದು ನಿರ್ಧರಿಸ ಬೇಕು. ಸಮಾಜವು ಮಹಿಳೆಯರ ಶಕ್ತಿಯನ್ನು ಮತ್ತು ಅವಳ ಮೌಲ್ಯವನ್ನು ಅರಿತುಕೊಳ್ಳಲಿ, ಅದು ಪ್ರತಿಯೊಬ್ಬರ ಮನೆಯಿಂದಲೇ ಪ್ರಾರಂಭವಾಗಬೇಕು, ಹಿರಿಯರು ತಮ್ಮ ಮಕ್ಕಳಿಗೆ ಮಹಿಳೆಯರನ್ನು ಹೇಗೆ ಗೌರವಿಸಬೇಕು ಎಂಬುದನ್ನು ಕಲಿಸಬೇಕು.

ಆಗ ಮಾತ್ರ ಮಹಿಳಾ ಕ್ರಾಂತಿ ಪ್ರಾರಂಭವಾಗುತ್ತದೆ. ಆಗ ಮಾತ್ರ ಈ ತಾಯಿಯ ಭೂಮಿಯಲ್ಲಿ ಮಹಿಳೆಯರು ವಾಸಿಸಲು ಯೋಗ್ಯ. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ , ನಮ್ಮ ನಾಡಿನ ದೊರೆಯಾದ ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ, ಇಂತಹ ಧೀರ ವನಿತೆಯರು ಇದ್ದಂತಹ ಈ ನಾಡು ಮಹಿಳೆಯರಿಗೆ ಸ್ಥೈರ್ಯ, ಧೈರ್ಯಕ್ಕೆ ಸರಿಸಾಟಿಯಿಲ್ಲದ ಈ ನಾಡು ನಮ್ಮ ಭಾರತ. ಮಹಿಳೆಯರು ಧೈರ್ಯದಿಂದ ಧ್ವನಿ ಎತ್ತಲು ಅವಳು ಧೈರ್ಯ ಮಾಡಬೇಕು ಮತ್ತು ಅದು ಅವಳ ರಕ್ಷಣೆಯು ಹೌದು.

ಭಾರತ ದೇಶ ಮಹಿಳೆಯರಿಗೆ ರಕ್ಷಾ ಕವಚವಾಗಿ ಬೇಕೆ ವಿನಃ ಇತರ ಕೆಲವು ಕ್ರೂರ ವ್ಯಕ್ತಿಗಳಿಂದ ಅಪಾಯಕಾರಿ. ಆದಷ್ಟು ಬೇಗ ನಮ್ಮ ಕಾನೂನು ಹೆಣ್ಣು ಮಕ್ಕಳಿಗೆ ಹಿಂಸೆ ಕೊಡುವ ವ್ಯಕ್ತಿಗಳನ್ನು ಮುಕ್ತಗೊಳಿಸಬೇಕು. ತ್ಯಾಗಮಹಿ ಹೆಣ್ಣನ್ನು ಎಲ್ಲರೂ ಗೌರವಿಸಬೇಕು ಮಹಿಳೆಯರನ್ನು ಸುರಕ್ಷ ಗೊಳಿಸುವುದು ಪ್ರತಿಯೊಬ್ಬರ ಕರ್ತವ್ಯ. ಹೆಣ್ಣು ಪ್ರೀತಿಗೆ ಮನಸೋಲುತ್ತಾಳೆ, ಆ ಪ್ರೀತಿಗೆ ತನ್ನ ಸರ್ವಸ್ವ ಕೊಡುತ್ತಾಳೆ ಆ ಪ್ರೀತಿಯನ್ನು ಅರಿಯುವ ಮನಸ್ಸಿರಬೇಕು ಅಷ್ಟೇ.

English summary
International Womens Day 2021: Divyashri R in this article highlighted the Strength of India on Women in all fields and focus on safety.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X